ಇನ್ಮುಂದೆ ಈ ನಗರದಲ್ಲಿ ವಾಹನಗಳನ್ನ ಪಾರ್ಕಿಂಗ್‌ ಮಾಡೋಕೆ ಪರದಾಡುವ ಅವಶ್ಯಕತೆಯಿಲ್ಲ!

|

ಪ್ರಸ್ತುತ ದಿನಗಳಲ್ಲಿ ದೇಶದ ಮಹಾನಗರಗಳಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುವುದೇ ಅತಿದೊಡ್ಡ ಸಮಸ್ಯೆಯಾಗಿದೆ. ಪಾರ್ಕಿಂಗ್‌ ವಿಚಾರದಲ್ಲಿ ಸಾಕಷ್ಟು ಭಾರಿ ದಂಡ ಕಟ್ಟುವವರು ಕೂಡ ಇದ್ದಾರೆ. ಇದೇ ಕಾರಣಕ್ಕೆ ಸೂಕ್ತ ಪಾರ್ಕಿಂಗ್‌ ಸ್ಥಳವನ್ನು ಹುಡುಕುವುದರಲ್ಲಿಯೇ ಸಮಯ ಕಳೆದಹೋಗುತ್ತದೆ. ಆದರೆ ಇನ್ಮುಂದೆ ದೆಹಲಿಯಲ್ಲಿ ಪಾರ್ಕಿಂಗ್‌ ಸ್ಥಳವನ್ನು ಹುಡುಕುತ್ತಾ ಸಮಯ ವ್ಯರ್ಥ ಮಾಡಬೇಕಿಲ್ಲ. ಏಕೆಂದರೆ ವಾಹನ ಪಾರ್ಕಿಂಗ್‌ ಮಾಡಲು ಸ್ಥಳ ಎಲ್ಲಿದೆ ಅನ್ನೊದನ್ನ ತಿಳಿಸುವುದಕ್ಕಾಗಿ ದೆಹಲಿಯ ಮೊದಲ ಪಾರ್ಕಿಂಗ್‌ ಆಪ್‌ ಮೈ ಪಾರ್ಕಿಂಗ್‌ ಅನ್ನು ಪರಿಚಯಿಸಲಾಗಿದೆ.

ಮೈ ಪಾರ್ಕಿಂಗ್

ಹೌದು, ದೆಹಲಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ದೆಹಲಿಯ ಮೊದಲ ಪಾರ್ಕಿಂಗ್ ಆಪ್ ಮೈ ಪಾರ್ಕಿಂಗ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ದಕ್ಷಿಣ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನ ಎಲ್ಲಾ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನಗಳಿಗೆ ಲಭ್ಯವಿರುವ ಪಾರ್ಕಿಂಗ್‌ ಸ್ಥಳದ ವಿರ ನೀಡಲಿದೆ. ವಾಹನಗಳ ಪಾರ್ಕಿಂಗ್‌ ಸಾಮರ್ಥ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಪಡೆಯಲು ಈ ಅಪ್ಲಿಕೇಶನ್ ಬಳಕೆದಾರರಿಗೆ ಅನುಮತಿಸಲಿದೆ. ಹಾಗಾದ್ರೆ ಮೈ ಪಾರ್ಕಿಂಗ್‌ ಆಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾರ್ಕಿಂಗ್‌

ಮಹಾನಗರಗಳಲ್ಲಿ ಟ್ರಾಫಿಕ್‌ ಸಮಸ್ಯೆ ಹೇಗೆ ತಲೆನೋವಾಗಿದೆಯೋ ಅದೇ ರೀತಿ ಪಾರ್ಕಿಂಗ್‌ ಸಮಸ್ಯೆ ಕೂಡ ದೊಡ್ಡ ಸಮಸ್ಯೆಯಾಗಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಮೈ ಪಾರ್ಕಿಂಗ್‌ ಅಪ್ಲಿಕೇಶನ್‌ ಅನ್ನು ಲಾಂಚ್‌ ಮಾಡಲಾಗಿದೆ. ಈ ಅಪ್ಲಿಕೇಶನ್ ಅನ್ನು ವಾಹನ್ ಆಪ್, ಫಾಸ್ಟ್ಯಾಗ್, ಇ-ಚಲನ್ ಮತ್ತು ಇತರ ಸರ್ಕಾರಿ ಸಂಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ. ಅಲ್ಲದೆ ಈ ಅಪ್ಲಿಕೇಶನ್‌ ನಿರ್ವಹಣೆಗಾಗಿ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ, BECIL ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ನ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ, ಇದರಲ್ಲಿ ಆಪ್ ಕ್ರಿಯೆಟ್‌ ಮತ್ತು ಅದರ ನಿರ್ವಹಣೆ ಒಳಗೊಂಡಿರುತ್ತದೆ.

ಅಪ್ಲಿಕೇಶನ್‌

ಈ ಅಪ್ಲಿಕೇಶನ್‌ ಮೂಲಕ ವಾಹನ ಚಲಾಯಿಸುವ ನಾಗರಿಕರು ಮನೆಯಿಂದ ಹೊರಡುವ ಎರಡು ಗಂಟೆಗಳ ಮೊದಲು ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಸ್ಥಳವನ್ನು ಬುಕ್‌ ಮಾಡಬಹುದು. ಅಷ್ಟೇ ಅಲ್ಲ ಪಾರ್ಕಿಂಗ್‌ ಬುಕಿಂಗ್ ಅನ್ನು ಮುಂದೂಡಲು ಬಯಸಿದರೆ, ಅದನ್ನು 15 ನಿಮಿಷಗಳ ಮೊದಲು ಮಾಡಬಹುದು. ಸದ್ಯ ಮೈ ಪಾರ್ಕಿಂಗ್ ಆಪ್ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ ಮೊಬೈಲ್ ಫೋನ್‌ಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ದೆಹಲಿಯಲ್ಲಿ ಈ ಅಪ್ಲಿಕೇಶನ್‌ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಮಹಾನಗರಗಳ ಪಾಲಿಕೆ ವಿಭಾಗಗಳಿಗೆ ವಿಸ್ತರಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಮೈ ಪಾರ್ಕಿಂಗ್‌ ಅಪ್ಲಿಕೇಶನ್ ವಿಶೇಷತೆ

ಮೈ ಪಾರ್ಕಿಂಗ್‌ ಅಪ್ಲಿಕೇಶನ್ ವಿಶೇಷತೆ

ಇನ್ನು ಈ ಅಪ್ಲಿಕೇಶನ್‌ ಮೊಬೈಲ್ ಆಧಾರಿತ ಆಪ್ ಆಗಿದೆ. ಈ ಅಪ್ಲಿಕೇಶನ್‌ ಮೂಲಕ ಆರು ಮಲ್ಟಿ-ಲೆವೆಲ್ ಪಾರ್ಕಿಂಗ್ ಸ್ಥಳಗಳು, ಎರಡು ಸ್ವಯಂಚಾಲಿತ ಪಾರ್ಕಿಂಗ್ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ನಿರ್ವಹಿಸುವ 145 ನೆಲ ಮಹಡಿಯ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್‌ ಸ್ಥಳವನ್ನು ಬುಕ್ಕಿಂಗ್‌ ಮಾಡಬಹುದು. ಇದರಲ್ಲಿ ನಾಗರಿಕರಿಗೆ ಸಹಾಯ ಮಾಡಲು, ಅಪ್ಲಿಕೇಶನ್‌ನ ಬಳಕೆಗೆ ಸಂಬಂಧಿಸಿದ ನಾಗರಿಕರ ಎಲ್ಲಾ ಪ್ರಶ್ನೆಗಳನ್ನು ಮತ್ತು ಸಮಸ್ಯೆಗಳನ್ನು ಪರಿಹರಿಸಲು BECIL ಗ್ರಾಹಕ ಸೇವಾ ಕೇಂದ್ರವನ್ನು ಕೂಡ ಸ್ಥಾಪಿಸಲು ಮುಂದಾಗಿದೆ.

ಪಾರ್ಕಿಂಗ್

ಇನ್ನು BECIL ಪಾರ್ಕಿಂಗ್ ಶುಲ್ಕವನ್ನು ಆಪ್ ಬಳಸುವ ನಾಗರಿಕರಿಂದ ಪಡೆಯಲಿದೆ. ಆನ್‌ಲೈನ್ ವಹಿವಾಟುಗಳ ಮೂಲಕ ಶುಲ್ಕವನ್ನು ವಿಧಿಸಲಿದೆ ಎಂದು ಹೇಲಲಾಗಿದೆ. ಇದಲ್ಲದೆ ಆಪ್ ತನ್ನ ಬಳಕೆದಾರರಿಗೆ ಕ್ಯೂಆರ್ ಕೋಡ್‌ಗಳ ಮೂಲಕ ಸ್ಲಾಟ್‌ಗಳನ್ನು ಆಯ್ಕೆ ಮಾಡಲು ಮತ್ತು ಸ್ಮಾರ್ಟ್ ಕಾರ್ಡ್‌ಗಳ ಮೂಲಕವೂ ಪಾರ್ಕಿಂಗ್‌ ಶುಲ್ಕಯ ಪಾವತಿಸಲು ಅನುಮತಿಸಲಿದೆ. ಈ ಆಪ್ ಕ್ಯಾಶ್‌ಲೆಸ್‌ ಮತ್ತು ಪೇಪರ್ ಲೆಸ್‌ ವಹಿವಾಟುಗಳನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಪ್ರಸ್ತುತ, ಪಾಲಿಕೆಯು ಪೇಪರ್ ಸ್ಲಿಪ್‌ಗಳನ್ನು ಪಾರ್ಕಿಂಗ್ ಟಿಕೆಟ್ ಆಗಿ ಬಳಸುತ್ತಿದೆ. ಮುಂದಿನ ದಿನಗಳಲ್ಲಿ ಇದೆಲ್ಲವೂ ಬದಲಾಗಲಿದೆ ಎಂದು ಸರ್ಕಾರ ಹೇಳಿದೆ.

ಪಾರ್ಕಿಂಗ್‌

ಇದಲ್ಲದೆ ಹೆಚ್ಚುವರಿಯಾಗಿ, ಮೈ ಪಾರ್ಕಿಂಗ್‌ ಅಪ್ಲಿಕೇಶನ್‌ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಮತ್ತು ಡಿಟಿಸಿ/ದೆಹಲಿ ಮೆಟ್ರೊದೊಂದಿಗೆ ಕಾರ್ಡ್ ಅನ್ನು ಸಂಯೋಜಿಸಲು ಒಂದು ಆಯ್ಕೆಯನ್ನು ನೀಡುತ್ತದೆ. ಇದು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ವ್ಯವಸ್ಥೆಯ ಸಹಾಯದಿಂದ ನಂಬರ್ ಪ್ಲೇಟ್‌ಗಳನ್ನು ಗುರುತಿಸುತ್ತದೆ. ಸದ್ಯ ಪಾರ್ಕಿಂಗ್‌ ಪ್ಲೇಸ್‌ಗಳನ್ನು ಬುಕ್‌ ಮಾಡಲು ಸಹಾಯ ಮಾಡುವ ಈ ಅಪ್ಲಿಕೇಶನ್‌ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಬಿರಲಿದೆ ಅನ್ನೊದನ್ನ ಕಾದುನೋಡಬೇಕಿದೆ.

Most Read Articles
Best Mobiles in India

English summary
Union Minister Anurag Thakur launched Delhi’s first-ever smart parking app dubbed My Parking.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X