ಸ್ಮಾರ್ಟ್‌ಫೋನ್ ಮೂಲಕವೇ ಮೂವಿ ಶೂಟ್‌ ಮಾಡಲು ನಿಮಗೆ ಬೇಕಾದ ಅತ್ಯಗತ್ಯ ಡಿವೈಸ್‌ಗಳು!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಕೇವಲ ಸಂಪರ್ಕ ಸಾಧನವಾಗಿ ಉಳಿದಿಲ್ಲ. ಒಂದು ಸ್ಮಾರ್ಟ್‌ಫೋನ್‌ ಹಲವು ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಸ್ಮಾರ್ಟ್‌ಫೋನ್‌ ಗಳಲ್ಲಿ ಬದಲಾದ ಕ್ಯಾಮೆರಾ ವಿನ್ಯಾಸ ಅತ್ಯುತ್ತಮ ವೀಡಿಯೋಗ್ರಫಿ, ಫೋಟೋಗ್ರಫಿ ಗೂ ಕೂಡ ಸೂಕ್ತವಾಗಿವೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಯುವಜನತೆ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಶಾರ್ಟ್‌ ಮೂವಿ, ವಿಡಿಯೋ ರೆಕಾರ್ಡ್‌ಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಪ್ರವಾಸದ ಕಥನಗಳನ್ನು ಸೆರೆಹಿಡಿಯುತ್ತಿದ್ದಾರೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಮೂಲಕವೇ ಮೂವಿ ಮೇಕಿಂಗ್‌ ಮಾಡಬಹುದಾಗಿದೆ. ಇದಕ್ಕಾಗಿ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಅಗತ್ಯವಿದೆ. ಇನ್ನು ನೀವು ಅತ್ಯುತ್ತಮ ಸ್ಮಾರ್ಟ್‌ಫೋನ್‌ ಬಳಸಿ ಮೂವಿ ಮೇಕಿಂಗ್‌ ಮಾಡುವುದಕ್ಕೆ ಹಲವು ಸಲಕರಣೆಗಳು ಕೂಡ ಅವಶ್ಯಕತೆ ಇದೆ. ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ವೀಡಿಯೋಗ್ರಫಿಗಾಗಿ ನಿಮ್ಮ ಸ್ವಂತ ಸೆಟಪ್ ಅನ್ನು ನಿರ್ಮಿಸುವುದಾದರೆ ನೀವು ಹೊಂದಿರಬೇಕಾದ ಅಗತ್ಯ ಸಲಕರಣೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗಿಂಬಾಲ್

ಗಿಂಬಾಲ್

ಸ್ಮಾರ್ಟ್‌ಫೋನ್‌ ಮೂಲಕ ಮೂವಿ ಮೇಕಿಂಗ್‌ ಮಾಡುವಾಗ ಗಿಂಬಾಲ್ ನಿಮಗೆ ಅತ್ಯಗತ್ಯವಾಗಿ ಬೇಕಾದ ಉಪಕರಣಗಳಲ್ಲಿ ಒಂದಾಗಿದೆ. ಇದು ನಿಮ್ಮ ಶಾಟ್‌ಗಳಲ್ಲಿ ಹೆಚ್ಚಿನ ಸ್ಥಿರತೆಯನ್ನು ಹೊಂದುವುದಕ್ಕೆ ಸಹಾಯ ಮಾಡಲಿದೆ. ಇದರಲ್ಲಿ 3-ಆಕ್ಸಿಸ್ ಗಿಂಬಾಲ್‌ಗಳು ಅತ್ಯುತ್ತಮ ಆಯ್ಕೆಯಾಗಿದ್ದು, ಕ್ಯಾಮೆರಾದ ಟಿಲ್ಟ್, ಪ್ಯಾನ್ ಮತ್ತು ರೋಲ್ ಅನ್ನು ಕಂಟ್ರೋಲ್‌ ಮಾಡುತ್ತವೆ. ಟಿಲ್ಟ್ ಸ್ಮಾರ್ಟ್‌ಫೋನ್‌ನ ಮೇಲಕ್ಕೆ ಮತ್ತು ಕೆಳಕ್ಕೆ ಚಲನೆಯನ್ನು ನಿಯಂತ್ರಿಸಿದರೆ, ಪ್ಯಾನ್ ಅಕ್ಕಪಕ್ಕದ ಚಲನೆಯನ್ನು ನಿಯಂತ್ರಿಸುತ್ತದೆ. ಅದರಲ್ಲೂ ಸ್ಮಾರ್ಟ್‌ಫೋನ್ ಗಿಂಬಾಲ್‌ಗಳು ಈಗ ಜಾಯ್‌ಸ್ಟಿಕ್ ಕಂಟ್ರೋಲ್‌, ಟೈಮ್-ಲ್ಯಾಪ್ಸ್ ಮತ್ತು ಹೈಪರ್-ಲ್ಯಾಪ್ಸ್ ಮೋಡ್‌ಗಳು, ಸಬ್ಜೆಕ್ಟ್ ಟ್ರ್ಯಾಕಿಂಗ್ ನಂತಹ ಹಲವು ಫೀಚರ್‌ಗಳನ್ನು ಒಳಗೊಂಡಿವೆ. ಇನ್ನು ಮಾರುಕಟ್ಟೆಯಲ್ಲಿ ಹಲವು ಆಯ್ಕೆಯ ಗಿಂಬಾಲ್‌ಗಳು ಲಭ್ಯವಿವೆ. ಇದರಲ್ಲಿ ಮೊಜಾ ಮಿನಿ ಎಸ್ ಉತ್ತಮ ಆಯ್ಕೆಯಾಗಿದೆ. ಪ್ರಸ್ತುತ ಅಮೆಜಾನ್ ನಲ್ಲಿ 4,899 ರೂ.ಬೆಲೆಯನ್ನು ಹೊಂದಿದೆ.

ಟ್ರೈಪಾಡ್

ಟ್ರೈಪಾಡ್

ಸ್ಮಾರ್ಟ್‌ಫೋನ್‌ ನಲ್ಲಿ ಅತ್ಯುತ್ತಮ ವೀಡಿಯೋ ಚಿತ್ರಿಕರಿಸಲು ಟ್ರೈಪಾಡ್‌ ಅಗತ್ಯ ಎನಿಸಿಲಿದೆ. ಯಾವುದೇ ದೃಶ್ಯವನ್ನು ಸಂಪೂರ್ಣವಾಗಿ ಸೆಟ್‌ ಮಾಡಲು, ಟೈಮ್‌ ಮೂವಿಂಗ್‌ ಶಾಟ್‌ ತೆಗೆದುಕೊಳ್ಳುವುದಕ್ಕೆ ಟ್ರೈಪಾಡ್‌ ಅಗತ್ಯವಿದೆ. ಟ್ರೈಪಾಡ್‌ ಮೂಲಕ ಯಾವುದೇ ಅಲುಗಾಟ ಇಲ್ಲದೆ ವೀಡಿಯೋ ಸೆರೆಹಿಡಿಯಬಹುದಾಗಿದೆ. ನಿಮ್ಮ ಕೈಯಲ್ಲಿ ಫೋನ್ ಹಿಡಿದು ವೀಡಿಯೋ ಸೆರೆ ಹಿಡಿಯುವುದಕ್ಕಿಂತ ಭಿನ್ನವಾಗಿ ವಿಡಿಯೋಗಳನ್ನು ಸೆರೆ ಹಿಡಿಯಬಹುದಾಗಿದೆ. ಇನ್ನು ನೀವು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಸ್ಮಾರ್ಟ್‌ಫೋನ್ ಟ್ರೈಪಾಡ್‌ಗಳು ಲಭ್ಯವಿವೆ. ಇವುಗಳಲ್ಲಿ ಡಿಜಿಟೆಕ್ ಡಿಟಿಆರ್ 260 ಜಿಟಿ ಗೊರಿಲ್ಲಾ ಟ್ರೈಪಾಡ್ ಉತ್ತಮ ಆಯ್ಕೆಯಾಗಿದೆ. ಇದು ಪ್ರಸ್ತುತ ಅಮೆಜಾನ್‌ನಲ್ಲಿ 299 ರೂ.ಬೆಲೆ ಹೊಂದಿದೆ.

ಮೈಕ್ರೊಫೋನ್‌ಗಳು

ಮೈಕ್ರೊಫೋನ್‌ಗಳು

ಸ್ಮಾರ್ಟ್‌ಫೋನ್‌ಗಳನ್ನು ಬಳಸಿಕೊಂಡು ಆಡಿಯೋ ರೆಕಾರ್ಡಿಂಗ್ ಮಾಡಲು ಲಾವಲಿಯರ್ ಮೈಕ್ರೊಫೋನ್‌ಗಳು ಮತ್ತು ಶಾಟ್‌ಗನ್ ಮೈಕ್ರೊಫೋನ್‌ಗಳು ಅಗತ್ಯವಾಗಿ ಬೇಕಾಗುತ್ತವೆ.ಅದರಲ್ಲೂ ಲ್ಯಾಪೆಲ್ ಮೈಕ್ ಎಂದು ಕರೆಯಲ್ಪಡುವ ಲಾವಲಿಯರ್ ಮೈಕ್ರೊಫೋನ್ ಗಳು ಪೋರ್ಟಬಲ್, ಕಾಂಪ್ಯಾಕ್ಟ್, ವೈರ್ಡ್ ಮೈಕ್ರೊಫೋನ್ ಗಳಾಗಿದ್ದು ಇವುಗಳನ್ನು ಚಲನಚಿತ್ರ ನಿರ್ಮಾಣ ಮತ್ತು ಪ್ರಸಾರದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಶಾಟ್ ಗನ್ ಮೈಕ್ರೊಫೋನ್‌ಗಳನ್ನು ದೂರದಿಂದ ಶಬ್ದವನ್ನು ಸೆರೆಹಿಡಿಯಲು ಶಾಟ್‌ಗನ್ ಮೈಕ್‌ಗಳನ್ನು ಬಳಸಲಾಗುತ್ತದೆ. ಸದ್ಯ ನೀವು ಖರೀದಿಸಬಹುದಾದ ಮೈಕ್ರೋಫೋನ್‌ಗಳಲ್ಲಿ ರೋಡ್ ಲಾವಲಿಯರ್ ಗೋ ಉತ್ತಮ ಆಯ್ಕೆಯಾಗಿದೆ. ಇದನ್ನು ಅಮೆಜಾನ್‌ನಲ್ಲಿ 5,999 ರೂಗಳಲ್ಲಿ ಖರೀದಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 3.5 ಎಂಎಂ ಜ್ಯಾಕ್ ಇಲ್ಲದಿದ್ದರೆ, ಇಂದು ಹೆಚ್ಚಿನ ಅತ್ಯಾಧುನಿಕ ಸಾಧನಗಳಂತೆಯೇ ಇದ್ದರೆ, ಈ ಮೈಕ್‌ಗಳು ನಿಮ್ಮ ಅಸ್ತಿತ್ವದಲ್ಲಿರುವ ಡಿವೈಸ್‌ನೊಂದಿಗೆ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಅಡಾಪ್ಟರುಗಳನ್ನು ಪಡೆಯಲು ನೀವು ಪರಿಗಣಿಸಬಹುದು.

Most Read Articles
Best Mobiles in India

Read more about:
English summary
first step towards building your own setup for smartphone videography.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X