ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿವೆ. ಇಂದಿನ ಯುವ ಜನತೆ ಕೂಡ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ನಂತಹ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನ ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದಾರೆ. ಇನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳು ಕೂಡ ಬಳಕೆದಾರರಿಗೆ ಸಾಕಷ್ಟು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ಈ ಅಪ್ಲಿಕೇಶನ್‌ಗಳಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ ಅನ್ನೊ ಕುತೂಹಲ ಎಲ್ಲರಿಗೂ ಇದೆ. ಅದರಲ್ಲು ಕೆಲ ಬಳಕೆದಾರರಿಗೆ ಇದರ ಬಗ್ಗೆ ಗೊಂದಲ ಇದೆ.

ಸೊಶೀಯಲ್‌

ಹೌದು, ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ನಲ್ಲಿ ನಿಮ್ಮ ಆಯ್ಕೆಯ ಭಾಷೆಯನ್ನು ಆಯ್ಕೆ ಮಾಡಬಹುದಾಗಿದೆ. ಆದರೆ ಭಾಷೆಯನ್ನು ಆಯ್ಕೆ ಮಾಡುವುದಕ್ಕೆ ಲ್ಯಾಗ್ವೇಜ್‌ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ತುಂಬಾ ಸರಳವಾಗಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ನಲ್ಲಿ ಲ್ಯಾಗ್ವೇಜ್‌ ಚೇಂಜ್‌ ಮಾಡುವುದಕ್ಕೆ ಕೆಲವು ಹಂತಗಳನ್ನು ಅನುಸರಿಸಬೇಕು. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸುಲಭವಾಗಿ ನೀವು ಭಾಷೆಯನ್ನು ಬದಲಾಯಿಸಬಹುದಾಗಿದೆ. ಅದಕ್ಕೂ ಮೊದಲು ನಿವು ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಅನ್ನು ತೆರೆಯಬೇಕು. ನಿಮ್ಮ ಡಿವೈಸ್‌ ಲ್ಯಾಗ್ವೇಜ್‌ ಅನ್ನು ಫೇಸ್‌ಬುಕ್‌ ಆಯ್ಕೆ ಮಾಡಿಕೊಳ್ಳುತ್ತದೆ. ಇನ್ನು ಬಟನ್ಸ್‌, ನೊಟೀಫೀಕೇಷನ್ಸ್‌, most text ಮತ್ತು ಟೂಲ್‌ಟಿಪ್ಸ್‌ಗಳಂತಹ ವಿಷಯಗಳನ್ನು ಬೇರೆ ಭಾಷೆ ಮತ್ತು ಸ್ವರೂಪದಲ್ಲಿ ನೋಡಲು ನಿಮ್ಮ ಭಾಷೆ ಮತ್ತು ಲೋಕಲ್‌ ಸೆಟ್ಟಿಂಗ್‌ಗಳನ್ನು ನೀವು ಬದಲಾಯಿಸಬಹುದು. ಜೊತೆಗೆ ಫೇಸ್‌ಬುಕ್ ಕೇವಲ ಇಂಗ್ಲಿಷ್‌ನ ಹೊರತಾಗಿ ಬಹಳಷ್ಟು ಭಾಷೆಗಳಿಗೆ ಬೆಂಬಲವನ್ನು ನೀಡುತ್ತದೆ. ಇದರಲ್ಲಿ ಹಿಂದಿ, ಸ್ಪ್ಯಾನಿಷ್, ಜರ್ಮನ್, ಫ್ರೆಂಚ್, ಅರೇಬಿಕ್, ಮ್ಯಾಂಡರಿನ್ ಚೈನೀಸ್, ಪೋರ್ಚುಗೀಸ್ ಭಾಷೆಗಳು ಸಹ ಸೇರಿವೆ. ಅದರಲ್ಲೂ ಫೇಸ್‌ಬುಕ್‌ ಒಟ್ಟು ಭಾರತದ ಎಂಟು ಭಾಷೆಗಳನ್ನು ಬೆಂಬಲಿಸುತ್ತದೆ. ಇನ್ನು ಲ್ಯಾಗ್ವೇಜ್‌ ಸೆಟ್ಟಿಂಗ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿಯೋಣ ಬನ್ನಿರಿ.

ಫೇಸ್‌ಬುಕ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಫೇಸ್‌ಬುಕ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಹಂತ 1: ಫೇಸ್‌ಬುಕ್ ತೆರೆಯಿರಿ, ಮೇಲಿನ-ಬಲಭಾಗದಲ್ಲಿರುವ ಮೂರು-ಸಾಲಿನ ಬಟನ್‌ ಟ್ಯಾಪ್ ಮಾಡಿ.

ಹಂತ 2: ಸೆಟ್ಟಿಂಗ್ಸ್‌ ಮತ್ತು ಪ್ರೈವಸಿಗೆ ಹೋಗಿ.

ಹಂತ 3: ಲ್ಯಾಂಗ್ವೇಜ್‌ ಒತ್ತಿ ಮತ್ತು ನಿಮ್ಮ ಫೇಸ್‌ಬುಕ್ ಭಾಷೆಯನ್ನು ಆರಿಸಿ. ನಿಮ್ಮ ಭಾಷೆಯ ಆದ್ಯತೆಗೆ ಅನುಗುಣವಾಗಿ ಫೇಸ್‌ಬುಕ್ automatically ಪುಟವನ್ನು ರೀ ಲೋಡ್ ಮಾಡುತ್ತದೆ. ಈ ಮೂಲಕ ನಿಮ್ಮ ಆಯ್ಕೆಯ ಭಾಷೆಯನ್ನು ಚೇಂಜ್‌ ಮಾಡಬಹುದಾಗಿದೆ.

Instagram ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

Instagram ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಹಂತ 1: ಇನ್‌ಸ್ಟಾಗ್ರಾಮ್‌ ನಲ್ಲಿ ನಿಮ್ಮ ಪ್ರೊಫೈಲ್‌ಗೆ ಹೋಗಲು Instagram- user-ಪ್ರೊಫೈಲ್ ಅಥವಾ ಕೆಳಗಿನ ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.

ಹಂತ 2: ಮೇಲಿನ ಬಲಭಾಗದಲ್ಲಿ ಟ್ಯಾಪ್ ಮಾಡಿ, ನಂತರ Instagram- ಸೆಟ್ಟಿಂಗ್ಸ್‌- ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.

ಹಂತ 3: ನಂತರ ಅಕೌಂಟ್‌ ಅನ್ನು ಟ್ಯಾಪ್‌ ಮಾಡಿ. ಭಾಷೆ ವಿಭಾಗ ಕಾಣಿಸುತ್ತದೆ.

ಹಂತ 4: ಇದರಲ್ಲಿ ನೀವು ಬಳಸಲು ಬಯಸುವ ಭಾಷೆಯನ್ನು ಆರಿಸಿ.

ಈ ಮೇಲಿನ ಹಂತಗಳನ್ನ ಅನುಸರಿಸುವ ಮೂಲಕ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ನಲ್ಲಿ ಭಾಷೆಯನ್ನು ಬದಲಾಯಿಸಬಹುದಾಗಿದೆ.

Most Read Articles
Best Mobiles in India

English summary
Check out how you can easily change the language settings on popular social media apps like Facebook or Instagram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X