ಗೂಗಲ್ ಪೇನಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಪೇಮೆಂಟ್‌ ಸೇವೆ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ನೀವು ಎಲ್ಲಿಯೇ ಇದ್ದರೂ ನಿಮ್ಮವರಿಗೆ ಹಣದ ಅವಶ್ಯಕತೆ ಉಮಟಾದಾಗ ಕುಳಿತಲ್ಲಿಯೇ ಹಣವನ್ನು ಪಾವತಿಸಲು ಈ ಸೇವೆಗಳು ಸಾಕಷ್ಟು ಉಪಯುಕ್ತವಾಗಿವೆ. ಆನ್‌ಲೈನ್ ಬಿಲ್‌ಗಳನ್ನು ಪಾವತಿಸುವುದು, ವಸತಿ ಮತ್ತು ರೈಲು, ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಎಲ್ಲವೂ ಇವುಗಳಿಂದ ಸಾಧ್ಯವಾಗಿದೆ. ಸದ್ಯ ಡಿಜಿಟಲ್ ಪಾವತಿ ಅಥವಾ ಯುಪಿಐ ಅಪ್ಲಿಕೇಶನ್‌ಗಳ ಆಗಮನದಿಂದ ಇವೆಲ್ಲವೂ ಸಾಧ್ಯವಾಗಿದೆ. ಇನ್ನು ಗೂಗಲ್‌ ಪೇ, ಫೋನ್‌ ಪೇ ಮತ್ತು ಪೇಟಿಎಂ ಭಾರತದಲ್ಲಿ ಅತಿ ಹೆಚ್ಚು ಬಳಸುವ ಯುಪಿಐ ಅಪ್ಲಿಕೇಶ್‌ನಗಳಲ್ಲಿ ಒಂದಾಗಿವೆ.

ಗೂಗಲ್‌ ಪೇ

ಹೌದು, ಡಿಜಿಟಲ್‌ ಪೇಮೆಂಟ್‌ ಸೇವೆ ಸಾಕಷ್ಟು ಜನಪ್ರಿಯತೆಯನ್ನ ಹೊಂದಿದ್ದು, ಭಾರತದಲ್ಲಿ ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂ ಆಪ್‌ಗಳು ಜನರಿಗೆ ಡಿಜಿಟಲ್‌ ಪೇಮೆಂಟ್‌ ಮಾಡುವುದಕ್ಕೆ ಅವಕಾಶ ನೀಡಿವೆ. ಇವುಗಳಲ್ಲಿ ಗೂಗಲ್ ಪೇ ಅಪ್ಲಿಕೇಶನ್‌ ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಳ್ಳುತ್ತಿದೆ. ಹಾಗಾದ್ರೆ ಗೂಗಲ್‌ ಪೇ ಅಪ್ಲಿಕೇಶನ್‌ ನಲ್ಲಿ ಯುಪಿಐ ಪಿನ್ ಬದಲಾಯಿಸುವುದು, ಪಾಸ್‌ವರ್ಡ್ ಅನ್ನು ರಿ ಸೆಟ್‌ ಮಾಡುವುದಕ್ಕೆ, ಟ್ರಾನ್ಸಕ್ಷನ್‌ ಲಿಮಿಟ್‌ ಅನ್ನು ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ಹಂತಹಂತವಾಗಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್ ಪೇನಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

ಗೂಗಲ್ ಪೇನಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

ಹಂತ:1 ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ ಮತ್ತು ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿ ಇರುವ ನಿಮ್ಮ ಪ್ರೊಫೈಲ್ ಫೋಟೋ ಕ್ಲಿಕ್ ಮಾಡಿ.

ಹಂತ:2 ಈಗ ‘Bank Account' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಬದಲಾಯಿಸಲು ಬಯಸುವ ಯುಪಿಐ ಬ್ಯಾಂಕ್ ಅನ್ನು ಆಯ್ಕೆ ಮಾಡಿ.

ಹಂತ:3 ನೀವು ಎಡಿಟ್‌ ಮಾಡಲು ಬಯಸುವ ಬ್ಯಾಂಕ್ ಅನ್ನು ನೀವು ಆಯ್ಕೆ ಮಾಡಿದ ನಂತರ, ನಿಮಗೆ ‘Forgot UPI PIN' ಆಯ್ಕೆಯನ್ನು ಪಡೆಯಲಾಗುತ್ತದೆ.

ಹಂತ:4 ನಂತರ Forgot UPI PIN ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಒಟಿಪಿ ಆಗಿ ಕಳುಹಿಸಲಾಗುತ್ತದೆ. ನಂತರ ನಿಮಗೆ ಬಂದಿರುವ ಒಟಿಪಿಯನ್ನು ನೊಂದಾಯಿಸುವ ಮೂಲಕ ಗೂಗಲ್‌ ಪೇ ನಲ್ಲಿ ಯುಪಿಐ ಅನ್ನು ಬದಲಾಯಿಸಬಹುದಾಗಿದೆ.

ಗೂಗಲ್ ಪೇನಲ್ಲಿ Transaction Limits ಹೆಚ್ಚಿಸುವುದು ಹೇಗೆ?

ಗೂಗಲ್ ಪೇನಲ್ಲಿ Transaction Limits ಹೆಚ್ಚಿಸುವುದು ಹೇಗೆ?

Google ಪೇನಲ್ಲಿ Transaction Limits ಹೆಚ್ಚಸಬೇಕಾದರೆ ಗೂಗಲ್‌ ಸಾಮಾನ್ಯವಾಗಿ ಖಾತೆಯ ಎಲ್ಲಾ ಪಾವತಿ ಇತಿಹಾಸವನ್ನು ಪರಿಗಣಿಸಿ ಖಾತೆಯ ವಹಿವಾಟು ಮಿತಿಯನ್ನು ಹೆಚ್ಚಿಸುತ್ತದೆ. Transaction Limits ಹೆಚ್ಚಳಕ್ಕೆ ಸಂಬಂಧಿಸಿದಂತೆ ಅರ್ಹ ಬಳಕೆದಾರರಿಗೆ ಅಧಿಕೃತ ಮೇಲ್ ಮತ್ತು ಅಧಿಸೂಚನೆಯನ್ನು ಸಹ ಕಳುಹಿಸಲಾಗುತ್ತದೆ. ವಹಿವಾಟಿನ ಮಿತಿಯನ್ನು ಹೆಚ್ಚಿಸಲು ನೀವು ಬಯಸಿದರೆ, ನೀವು ಅದೇ ಇಮೇಲ್‌ನಲ್ಲಿ ಪ್ರತ್ಯುತ್ತರಿಸಬಹುದಾಗಿದೆ.

Google Pay Customer Care ಅನ್ನು ಸಂಪರ್ಕಿಸುವುದು ಹೇಗೆ?

Google Pay Customer Care ಅನ್ನು ಸಂಪರ್ಕಿಸುವುದು ಹೇಗೆ?

Google Pay Customer Care ಅನ್ನು ಗ್ರಾಹಕರು ಸಂಪರ್ಕಿಸಬೇಕಾದರೆ support pageಗೆ ಭೇಟಿ ನೀಡುವುದು. ಇದಕ್ಕಾಗಿ ನೀವು support page ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ support page ಎಡಭಾಗದಲ್ಲಿರುವ ‘ನಮ್ಮನ್ನು ಸಂಪರ್ಕಿಸಿ' ಆಯ್ಕೆಯನ್ನು ನೀವು ನೋಡುತ್ತೀರಿ. ನಿಮ್ಮ ಪ್ರಶ್ನೆಯನ್ನು ನೀವು ಒಮ್ಮೆ ನಮೂದಿಸಿದ ನಂತರ, ಬೆಂಬಲ ತಂಡದೊಂದಿಗೆ ಸಂಪರ್ಕ ಹೊಂದಲು ನಿಮಗೆ ಎರಡು ವಿಭಿನ್ನ ಆಯ್ಕೆಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ನೀವು ‘ಚಾಟ್' ಅಥವಾ ‘ಇಮೇಲ್' ಆಯ್ಕೆಯನ್ನು ಆಯ್ಕೆ ಮಾಡಬಹುದಾಗಿದೆ.

Most Read Articles
Best Mobiles in India

Read more about:
English summary
Google Pay: How To Change UPI Pin, Transaction Limit Per Day, Password Reset, Customer Care Details.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X