ಯುಟ್ಯೂಬ್‌ ಆಟೋಪ್ಲೇ ಅನ್ನು ಆಫ್ ಮಾಡುವುದು ಹೇಗೆ ಗೊತ್ತಾ?

|

ವೀಡಿಯೊ ಅಪ್ಲಿಕೇಶನ್ ಯೂಟ್ಯೂಬ್ ಹಲವು ಹೊಸ ಮಾದರಿಯ ಫೀಚರ್ಸ್‌ಗಳಳು ಪರಿಚಯಿಸಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳನ್ನೇ ಪರಿಚಯಿಸುತ್ತಾ ಬಂದಿದೆ. ಸದ್ಯ ಇತ್ತಿಚಿಗಷ್ಟೆ ಯುಟ್ಯೂಬ್‌ ಸೈಲೆಂಟ್‌ ಆಟೋಪ್ಲೇ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇನ್ನು ಈ ಹೊಸ ಫೀಚರ್ಸ್‌ ನಿಮ್ಮ ಖಾತೆಯ ಹಿಸ್ಟರಿಗೆ ವೀಡಿಯೊವನ್ನು ಸೇರಿಸುತ್ತದೆ, ಅಲ್ಲದೆ ಅದು ಬ್ಯಾಕ್‌ಗ್ರೌಂಡ್‌ ಆಟೋ ಪ್ಲೇ ಮಾಡಿದರೆ, ನಿಮ್ಮ ಫೀಡ್‌ನಲ್ಲಿ ಕಾಣಿಸಿಕೊಂಡಿರುವ ಇತರ ವೀಡಿಯೊಗಳ ಮೂಲಕ ನೀವು ಸ್ಕ್ರಾಲ್ ಮಾಡಿದಾಗ ಆಟೊಪ್ಲೇ ಸಹಾಯ ಮಾಡಲಿದೆ.

ಯುಟ್ಯೂಬ್‌

ಹೌದು, ಯುಟ್ಯೂಬ್‌ನಲ್ಲಿ ಸೈಲೆಂಟ್‌ ಆಟೋಪ್ಲೇ ಫೀಚರ್ಸ್‌ ಅನ್ನು ಪರಿಚಯಿಸಲಾಗಿದ್ದು, ಇದು ಯುಟ್ಯೂಬ್‌ ಹಿಸ್ಟರಿಯಲ್ಲಿರುವ ನಿಮ್ಮ ವೀಡಿಯೋಗಳನ್ನ ಬ್ಯಾಕ್‌ಗ್ರೌಂಡ್‌ನಲ್ಲಿ ಆಟೋ ಪ್ಲೇ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದು ಬಳಕೆದಾರರ ಅಭಿರುಚಿಗೆ ಅನುಗುಣವಾಗಿ ಒಂದೇ ರೀತಿಯ ವಿಷಯವನ್ನು ಕಂಡುಹಿಡಿಯಲು ಅವರಿಗೆ ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ನೀವು ಯುಟ್ಯೂಬ್‌ನಲ್ಲಿ ಕೇಳಿದ್ದನ್ನು ಆಧರಿಸಿ ಹೊಸ ಹಾಡುಗಳನ್ನು ಸೂಚಿಸಲು ಇದು ಸಹಾಯ ಮಾಡಲಿದೆ. ಅಷ್ಟಕ್ಕೂ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ತಿಳಿದುಕೊಳ್ಳೋಣ ಬನ್ನಿರಿ.

ಯುಟ್ಯೂಬ್‌

ಇನ್ನು ಯುಟ್ಯೂಬ್‌ನಲ್ಲಿ ನೀವು ಒಮ್ಮೆ ನೋಡಿದ ವೀಡಿಯೊವನ್ನು ನಿಮ್ಮ ಹಿಸ್ಟರಿ ವಿಭಾಗಕ್ಕೆ ಸೇರಿಸಿದ ನಂತರ, ಮತ್ತೇ ನೀವು ಅದೇ ವೀಡಿಯೊವನ್ನು ನೋಡಿದಾಗ ಅದು ಪ್ರಾರಂಭದಿಂದಲೇ ಪ್ಲೇ ಆಗುವುದಿಲ್ಲ. ಬದಲಾಗಿ, ಅದು ಸ್ವಯಂ ಪ್ಲೇ ನಿಲ್ಲಿಸಿದ ಭಾಗದಿಂದ ಎತ್ತಿಕೊಳ್ಳುತ್ತದೆ. ಹಾಗಾದ್ರೆ ಯುಟ್ಯೂಬ್‌ ಆಟೋಪ್ಲೇ ಅನ್ನಿ ಆಪ್‌ ಮಾಡುವುದು ಹೇಗ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

YouTube ಆಟೊಪ್ಲೇ ಅನ್ನು ಹೇಗೆ ಆಫ್ ಮಾಡುವುದು

YouTube ಆಟೊಪ್ಲೇ ಅನ್ನು ಹೇಗೆ ಆಫ್ ಮಾಡುವುದು

ನೀವು ಸೈಲೆಂಟ್‌ ಆಟೋಪ್ಲೇ ಫೀಚರ್ಸ್‌ ಅನ್ನು YouTube ನಿಂದ ನೀವು ಬಳಸಿಕೊಳ್ಳಲು ಇಷ್ಟವಿಲ್ಲದಿದ್ದರೆ, ಅದನ್ನು ನೀವು ಆಫ್ ಮಾಡಬಹುದು. ಅಷ್ಟಕ್ಕೂ ಯುಟ್ಯೂಬ್‌ನ ಹೋಮ್‌ ಮತ್ತು ಸಬ್‌ಸ್ಕ್ರಿಪ್ಶನ್‌ ಟ್ಯಾಬ್‌ಗಳಲ್ಲಿ ಸ್ವಯಂ ಪ್ಲೇ ಅನ್ನು ಹೇಗೆ ಆಫ್ ಮಾಡುವುದು ಅನ್ನೊದನ್ನ ಈ ಹಂತ ಹಂತವಾಗಿ ತಿಳಿಯೋಣ ಬನ್ನಿರಿ.

ಹಂತ 1: ಯುಟ್ಯೂಬ್‌ ಸೆಟ್ಟಿಂಗ್‌ಗಳನ್ನು ತೆರೆಯಿರಿ

ಹಂತ 1: ಯುಟ್ಯೂಬ್‌ ಸೆಟ್ಟಿಂಗ್‌ಗಳನ್ನು ತೆರೆಯಿರಿ

ಯುಟ್ಯೂಬ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ಮೇಲಿನ ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಐಕಾನ್‌ಗೆ ಹೋಗಿ. ಇದನ್ನು ಕ್ಲಿಕ್ ಮಾಡುವುದರಿಂದ ಸಬ್‌ ಮೆನುಗಳಿಂದ ತುಂಬಿದ ಹೊಸ ಪುಟವನ್ನು ತೆರೆಯಬೇಕು. ನಂತರ ಸೆಟ್ಟಿಂಗ್‌ಗಳ ಆಯ್ಕೆಗೆ ನ್ಯಾವಿಗೇಟ್ ಮಾಡಿರಿ.

ಹಂತ 2: ಸಾಮಾನ್ಯ ಟ್ಯಾಬ್ ತೆರೆಯಿರಿ

ಹಂತ 2: ಸಾಮಾನ್ಯ ಟ್ಯಾಬ್ ತೆರೆಯಿರಿ

ಇದೀಗ ಸೆಟ್ಟಿಂಗ್‌ಗಳ ಪುಟದ ಅಡಿಯಲ್ಲಿ, ಪೇಜ್‌ ಅನ್ನು ತೆರೆಯಿರಿ, ನಂತರ ಆಟೊಪ್ಲೇಗಾಗಿ ಮೀಸಲಾದ ಸಬ್‌-ಸೆಕ್ಷನ್‌ ಸೇರಿದಂತೆ ಹಲವು ಆಯ್ಕೆಗಳು ಕಾಣಲಿವೆ. ಆದರೂ ಇಲ್ಲಿ ನೀವು ಹುಡುಕುತ್ತಿರುವ ಟಾಗಲ್‌ಗಳನ್ನು ಇಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಬದಲಾಗಿ, ಅದರ ಮೇಲಿರುವ ಸಾಮಾನ್ಯ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ. ಅದರಲ್ಲಿ, "ಫೀಡ್‌ಗಳಲ್ಲಿ ಮ್ಯೂಟ್ ಪ್ಲೇಬ್ಯಾಕ್" ಆಯ್ಕೆಯನ್ನು ಹುಡುಕಿ. ನೀವು ಮೂರು ಆಯ್ಕೆಗಳನ್ನು ನೋಡಬೇಕು -ಆಲ್‌ವೇಸ್‌ ಆನ್, ವೈ-ಫೈ ಒನ್ಲಿ, ಮತ್ತು ಆಫ್. ಇದನ್ನ ಆಯ್ಕೆಮಾಡಿದರೆ ನಿಮ್ಮ ಕೆಲಸ ಮುಗಿಯಲಿದೆ.

ಆಟೋ ಪ್ಲೇ

ಇನ್ನು ಆಟೋ ಪ್ಲೇ ಮಾಡುವ ವಿಷಯಕ್ಕಾಗಿ ನೀವು ಮ್ಯೂಟ್ ಬಟನ್ ಅನ್ನು ಆನ್ ಮತ್ತು ಆಫ್ ಮಾಡಲು ಟಾಗಲ್ ಮಾಡದ ಕಾರಣ ಸೆಟ್ಟಿಂಗ್‌ನಲ್ಲಿ ಇದರ ಹೆಸರು ಕಾಣುವುದಿಲ್ಲ. ಬದಲಿಗೆ, ನೀವು ಫೀಚರ್ಸ್‌ ಅನ್ನು ಆಫ್ ಮಾಡುತ್ತಿದ್ದೀರಿ. ಆಟೋ-ಪ್ಲೇ ಮಾಡುವ ವೀಡಿಯೊಗಳು ನೀವು ಅವುಗಳ ಮೇಲೆ ಕ್ಲಿಕ್ ಮಾಡುವವರೆಗೆ ಮ್ಯೂಟ್‌ನಲ್ಲಿರುತ್ತವೆ.

Most Read Articles
Best Mobiles in India

English summary
While you cannot take the annoying YouTube AutoPlay feature away for good, you can certainly turn it off. Here is how to turn off autoplay on the home and subscription tabs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X