ಗೂಗಲ್‌ ಮ್ಯಾಪ್‌ನಲ್ಲಿ ಲೊಕೇಶನ್‌ ಹಿಸ್ಟರಿಯನ್ನು ಆಪ್‌ ಮಾಡುವುದು ಹೇಗೆ?

|

ಸರ್ಚ್‌ ಇಂಜಿನ್‌ ದೈತ್ಯ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಗೂಗಲ್‌ ಮ್ಯಾಪ್‌ ಸೇವೆ ಕೂಡ ಒಂದು. ಗೂಗಲ್‌ ಮ್ಯಾಪ್‌ ನಿಮಗೆ ಪರಿಚಯವಿಲ್ಲದ ಜಾಗದಲ್ಲು ನೀವು ತಲುಪಬೇಕಾದ ಸ್ಥಳ ತಲುಪುವುದಕ್ಕೆ ಸಹಾಯ ಮಾಡುವ ಅಪ್ಲಿಕೇಶನ್‌. ಗೂಗಲ್‌ ಮ್ಯಾಪ್‌ ಒಂದು ಇದ್ದರೆ ಸಾಕು ನೀವು ಎಲ್ಲಿಗೆ ಬೇಕಾದರೂ ಪ್ರಯಾಣ ಆರಂಭಿಸಬಹುದು. ಇಂದು ನಗರ ಪ್ರದೇಶಗಳಲ್ಲಿ ಗೂಗಲ್‌ ಮ್ಯಾಪ್‌ ಸಾಕಷ್ಟು ಜನರಿಗೆ ಸಹಾಯಕವಾಗಿದೆ. ಇನ್ನು ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಲೊಕೇಶನ್‌ ಹಿಸ್ಟರಿ ಕೂಡ ಸ್ಟೋರೇಜ್‌ ಆಗುತ್ತಲೇ ಇರುತ್ತದೆ.

ಗೂಗಲ್‌

ಹೌದು, ಗೂಗಲ್‌ ಮ್ಯಾಪ್‌ ಸಾಕಷ್ಟು ಉಪಯುಕ್ತವಾಗಿದೆ ನಿಜ. ಆದರೆ ಗೂಗಲ್‌ ಮ್ಯಾಪ್‌ ನಿಮ್ಮ ಒಕೇಶನ್‌ ಹಿಸ್ಟರಿಯನ್ನು ಸಂಗ್ರಹಿಸುತ್ತಲೇ ಇರುತ್ತದೆ. ಲೊಕೇಶನ್‌ ಹಿಸ್ಟರಿ ಆಯ್ಕೆಯೊಂದಿಗೆ ನೀವು ಹೋದಲ್ಲೆಲ್ಲಾ ಲೊಕೇಶನ್‌ ಡೇಟಾವನ್ನು ಸಂಗ್ರಹಿಸುತ್ತದೆ. ಅಲ್ಲದೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಗೂಗಲ್ ಮ್ಯಾಪ್‌ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿಲ್ಲದಿದ್ದರೂ ಸಹ ಇದು ಸಂಭವಿಸುತ್ತದೆ. ಆದರೂ ನಿಮ್ಮ ಲೊಕೇಶನ್‌ ಹಿಸ್ಟರಿಯನ್ನು ಆಪ್‌ ಮಾಡುವುದಕ್ಕೆ ಅವಕಾಶವಿದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ನಲ್ಲಿ ಲೊಕೇಶನ್‌ ಹಿಸ್ಟರಿಯನ್ನು ಆಪ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸರ್ಚ್ ಎಂಜಿನ್

ಸರ್ಚ್ ಎಂಜಿನ್ ದೈತ್ಯ ಗೂಗಲ್‌ನ ಹಲವು ಸೇವೆಗಳನ್ನು ನಾವು ಬಳಸುತ್ತಿದ್ದೆವೆ. ನೀವು ಗೂಗಲ್‌ನ ಯಾವುದೇ ಸೇವೆಯನ್ನು ಸಕ್ರಿಯಗೊಳಿಸಿದ ನಂತರ, ಗೂಗಲ್‌ ನಿಮ್ಮ ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಆದರಿಂದ ನೀವು ನಿಮ್ಮ ಲೊಕೇಶನ್‌ ಹಿಸ್ಟರಿಯನ್ನು ಗೂಗಲ್‌ನಲ್ಲಿ ಸ್ಟೋರ್‌ ಮಾಡಲು ಬಯಸದಿದ್ದರೆ, ನೀವು ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿಯೇ ಲೊಕೇಶನ್‌ ಹಿಸ್ಟರಿ ಆಫ್ ಮಾಡಬಹುದು. ಇದು ಖಾತೆ-ಮಟ್ಟದ ಸೆಟ್ಟಿಂಗ್ ಆಗಿರುವುದರಿಂದ, ಒಮ್ಮೆ ನಿಷ್ಕ್ರಿಯಗೊಳಿಸಿದರೆ, ಅದು ನಿಮ್ಮ ಖಾತೆಗೆ ಸಂಪರ್ಕಗೊಂಡಿರುವ ಯಾವುದೇ ಸಾಧನಗಳಿಂದ ಡೇಟಾವನ್ನು ಸಂಗ್ರಹಿಸುವುದಿಲ್ಲ. ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಲೊಕೇಶನ್‌ ಹಿಸ್ಟರಿಯನ್ನು ಆಪ್‌ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ

ಗೂಗಲ್‌ ಮ್ಯಾಪ್‌ನಲ್ಲಿ ಲೊಕೇಶನ್‌ ಹಿಸ್ಟರಿಯನ್ನು ಆಪ್‌ ಮಾಡುವುದು ಹೇಗೆ?

ಗೂಗಲ್‌ ಮ್ಯಾಪ್‌ನಲ್ಲಿ ಲೊಕೇಶನ್‌ ಹಿಸ್ಟರಿಯನ್ನು ಆಪ್‌ ಮಾಡುವುದು ಹೇಗೆ?

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್‌ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಅಪ್ಲಿಕೇಶನ್ ತೆರೆದಾಗ, ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.

ಹಂತ 3: Personal content settings pageನಲ್ಲಿ, "Location History is on" ಗೆ ಸ್ಕ್ರಾಲ್ ಮಾಡಿ ಮತ್ತು ಅದರ ಮೇಲೆ ಟ್ಯಾಪ್ ಮಾಡಿ.

ಹಂತ 4: ನಿಮ್ಮ ಗೂಗಲ್‌ ಖಾತೆಯಲ್ಲಿನ ಆಕ್ಟಿವಿಟಿ ಕಂಟ್ರೋಲ್‌ಗೆ ಗೂಗಲ್‌ ನಿಮ್ಮನ್ನು ಕರೆದೊಯ್ಯುತ್ತದೆ ಮತ್ತು ಅದನ್ನು ನಿಷ್ಕ್ರಿಯಗೊಳಿಸಲು ನೀವು ಲೊಕೇಶನ್‌ ಹಿಸ್ಟರಿಯನ್ನು ಟಾಗಲ್ ಮಾಡಬಹುದು.

ಟಾಗಲ್

ಒಮ್ಮೆ ನೀವು ಟಾಗಲ್ ಆಫ್ ಮಾಡಿದ ನಂತರ, ನಿಮ್ಮ ಖಾತೆಯಲ್ಲಿ ಲೊಕೇಶನ್‌ ಹಿಸ್ಟರಿಯನ್ನು ಆಪ್‌ ಮಾಡಲಾಗುತ್ತದೆ. ಒಂದು ವೇಳೆ ಲೊಕೇಶನ್‌ ಹಿಸ್ಟರಿಯನ್ನು ಆಪ್‌ ಮಾಡದೇ ಕೇವಲ ನಿಮ್ಮ ಲೊಕೇಶನ್‌ ಡೇಟಾ ಡಿಲೀಟ್‌ ಮಾಡುವುದಾದರೆ ಅದಕ್ಕೂ ಕೂಡ ಅವಕಾಶವಿದೆ. 3, 18, ಅಥವಾ 36 ತಿಂಗಳುಗಳಿಗಿಂತ ಹಳೆಯದಾದ ನಿಮ್ಮ ಲೊಕೇಶನ್‌ ಡೇಟಾವನ್ನು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಮಾಡುವ ಆಯ್ಕೆ ಕೂಡ ಇದೆ.

Most Read Articles
Best Mobiles in India

English summary
Google stores location data about everywhere you go with its location history option and this happens even when you have not installed the Google Maps app on your smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X