ಆಂಡ್ರಾಯ್ಡ್‌ನಲ್ಲಿ FMWhatsApp ಆವೃತ್ತಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

|

ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಿಗೆ ಮತ್ತು ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಲಭ್ಯವಿರುವ ಅತ್ಯಂತ ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ ಆಗಿದೆ. ಈ ಅಪ್ಲಿಕೇಶನ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ ಹೊಂದಿದ್ದು, ಪಠ್ಯ ಸಂದೇಶಗಳು, ಚಿತ್ರಗಳು, ವೀಡಿಯೊಗಳು ಮತ್ತು ಆಡಿಯೊ ಫೈಲ್‌ಗಳನ್ನು ಹಂಚಿಕೊಳ್ಳಲು ಸುರಕ್ಷಿತ ವೇದಿಕೆಯಾಗಿದೆ. ಈಗಾಗಲೇ ಹಲವು ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಲಾಗಿದೆ. ಆದರೆ ಇದು ಇನ್ನೂ ಕೂಡ ಹಸಿರು ಥೀಮ್ ಅನ್ನು ಹೊಂದಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ನೀವು ವಾಲ್‌ಪೇಪರ್ ಬದಲಾಯಿಸಬಹುದು, ಆದರೆ ವಾಟ್ಸಾಪ್‌ನ ಥೀಮ್ ಅನ್ನು ಬದಲಾಯಿಸಲಾಗುವುದಿಲ್ಲ. ಆದರೂ ವಾಟ್ಸಾಪ್‌ ಅಪ್ಲಿಕೇಶನ್‌ನ ಕೆಲವು ಮಾರ್ಪಡಿಸಿದ ಆವೃತ್ತಿಗಳು ಕೂಡ ಲಭ್ಯವಿದೆ. ಇವುಗಳನ್ನು ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ರನ್‌ ಮಾಡಬಹುದು. ಇವುಗಳಲ್ಲಿ FMWhatsApp ಅಪ್ಲಿಕೇಶನ್ ಕೂಡ ಒಂದಾಗಿದೆ. ಇದು ಹೊಸ ಥೀಮ್‌ಗಳಲ್ಲದೆ ಎಲ್ಲಾ ಸುರಕ್ಷತಾ ಫೀಚರ್ಸ್‌ಗಳನ್ನು ಹೊಂದಿದೆ. ಆದರೆ ನೀವು ಗೂಗಲ್ ಪ್ಲೇ ಸ್ಟೋರ್‌ಗೆ ಹೋದರೆ ಡೌನ್‌ಲೋಡ್ ಮಾಡಲು ಈ ಫೈಲ್ ಸಿಗುವುದಿಲ್ಲ. ಹಾಗಾದ್ರೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಬಹುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ FM ವಾಟ್ಸಾಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ FM ವಾಟ್ಸಾಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

FMWhatsApp ಅಪ್ಲಿಕೇಶನ್ ಅನ್ನು ಯಾವುದೇ ವೆಬ್ ಬ್ರೌಸರ್ ಮೂಲಕ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಅಷ್ಟಕ್ಕೂ FMWhatsApp ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಯೋಣ ಬನ್ನಿರಿ.

ಗೂಗಲ್

ಹಂತ 1: ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್ ಮತ್ತು ಒಪೇರಾದಂತಹ ಯಾವುದೇ ವೆಬ್ ಬ್ರೌಸರ್‌ಗೆ ಹೋಗಿ ಮತ್ತು FMWhatsApp ಅಪ್ಲಿಕೇಶನ್ APK ಡೌನ್‌ಲೋಡ್ ಅನ್ನು ಟೈಪ್ ಮಾಡಿ. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ನೀವು ಹಲವಾರು ಲಿಂಕ್‌ಗಳನ್ನು ಪಡೆಯುತ್ತೀರಿ.

ಹಂತ 2: ಸೆಟ್ಟಿಂಗ್ಸ್‌ ಮೆನುವಿನಿಂದ ನೀವು ‘Unknown Sources' ಟಾಗಲ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಹಂತ 3: ಈಗ, ಯಾವುದೇ ಲಿಂಕ್‌ಗಳಿಂದ APK ಫೈಲ್ ಡೌನ್‌ಲೋಡ್ ಮಾಡಿ.

ಹಂತ 4: ಸೆಟಪ್ ಫೈಲ್ ಡೌನ್‌ಲೋಡ್ ಆದ ನಂತರ, installation ಫೈಲ್ ಅನ್ನು ರನ್ ಮಾಡಿ.

ಹಂತ 5: installation ಕಂಪ್ಲಿಟ್‌ ಆದ ನಂತರ, ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ.

ಹಂತ 6: ಸೆಟಪ್ ಅನ್ನು ಪೂರ್ಣಗೊಳಿಸಲು ನೀವು ದೃಡೀಕರಿಸಬೇಕಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.

ಹಂತ 7: ಮೇಲೆ ತಿಳಿಸಿದ ಹಂತಗಳು ಪೂರ್ಣಗೊಂಡ ನಂತರ, FMWhatsApp ಅಪ್ಲಿಕೇಶನ್‌ ಅನ್ನು ಬಳಸಬಹುದಾಗಿದೆ.

FMWhatsApp ಬಳಸಲು ಸುರಕ್ಷಿತವೇ?

FMWhatsApp ಬಳಸಲು ಸುರಕ್ಷಿತವೇ?

FMWhatsApp ಅಪ್ಲಿಕೇಶನ್ ಮೂಲ ಆವೃತ್ತಿಯಂತೆಯೇ ಒಂದೇ ರೀತಿಯ ಫೀಚರ್ಸ್‌ಗಳನ್ನು ನೀಡುತ್ತದೆ. ಈ ಅಪ್ಲಿಕೇಶನ್ ಅನ್ನು ಫೌಡ್‌ಮಕ್ಕಾಡ್ ಅಭಿವೃದ್ಧಿಪಡಿಸಿದೆ. ಗ್ರೂಪ್‌ ಮೆಸೇಜ್‌ಗಳನ್ನು ಕಳುಹಿಸಲು, ಇಮೇಜ್‌ ಶೇರ್‌ ಮತ್ತು ಹೆಚ್ಚಿನವುಗಳಿಗೆ ಇದು ಕೆಲವು ಹೆಚ್ಚುವರಿ ಮಿತಿಗಳನ್ನು ನೀಡುತ್ತದೆ. ಇದು ಕೆಲವು ಹೆಚ್ಚುವರಿ ಪ್ರೈವಸಿ ಫೀಚರ್ ಅನ್ನು ಸಹ ಹೊಂದಿದೆ. ಆದ್ದರಿಂದ, ನೀವು ಇದನ್ನು ಕಸ್ಟಮೈಸ್ ಮಾಡಲು ಮಾತ್ರ ಬಳಸಲಾಗುವುದಿಲ್ಲ. ಆದರೆ ಹೆಚ್ಚುವರಿ ಫೀಚರ್ಸ್‌ಗಳನ್ನು ಬಳಸಿಕೊಳ್ಳಬಹುದು. ಅಲ್ಲದೆ, ಇದು ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಆಗಿರುವುದರಿಂದ, ನಿಮ್ಮ ಡಿವೈಸ್‌ಗೆ ಮಾಲ್‌ವೇರ್ ಮತ್ತು ವೈರಸ್‌ಗಳು ಸೋಂಕು ತಗಲುವ ಅಪಾಯವಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಅಂತಹ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ ನೀವು ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಬಳಸುವುದು ಉತ್ತಮವಾಗಿದೆ.

Most Read Articles
Best Mobiles in India

Read more about:
English summary
WhatsApp is the most popular instant messaging platform which are available for both Android and iOS smartphones and also for desktop and laptops.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X