Just In
- 6 hrs ago
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- 8 hrs ago
ಡಿಜಿಟಲ್ ಇಂಡಿಯಾಗಾಗಿ ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ!
- 9 hrs ago
ಭಾರತದಲ್ಲಿ ಬಹುನಿರೀಕ್ಷಿತ ಐಫೋನ್ 14 ಪ್ರೊ ಬೆಲೆ ಎಷ್ಟಿರಬಹುದು?..ಫೀಚರ್ಸ್ ಏನು?
- 11 hrs ago
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
Don't Miss
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Automobiles
ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಈ ಸೂಚನೆ ಪಾಲಿಸದಿದ್ದರೆ ನಿಮ್ಮ ಫೇಸ್ಬುಕ್ ಖಾತೆ ಲಾಕ್ಔಟ್ ಗ್ಯಾರಂಟಿ!
ಮೆಟಾ ಒಡೆತನದ ಫೇಸ್ಬುಕ್ ಸಾಮಾಜಿಕ ಜಾಲತಾಣ ದೈತ್ಯ ಎನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್ಗಳ ಮೂಲಕ ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಇನ್ನು ಕಾಲಕ್ಕೆ ಅನುಗುಣವಾಗಿ ಅಗತ್ಯ ಬದಲಾವಣೆಗಳನ್ನು ಕೂಡ ಮಾಡುತ್ತಾ ಬಂದಿದೆ. ಸದ್ಯ ಇದೀಗ ಫೇಸ್ಬುಕ್ ಪ್ರೊಟೆಕ್ಟ್ ಅನ್ನು ಸಕ್ರಿಯಗೊಳಿಸಿದ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ. ಫೇಸ್ಬುಕ್ನ ನಿಮ್ಮ ಖಾತೆಯಲ್ಲಿ ನೀವು ಇನ್ನೂ ಫೇಸ್ಬುಕ್ ಪ್ರೊಟೆಕ್ಟ್ ಅನ್ನು ಸಕ್ರಿಯಗೊಳಿಸದಿದ್ದರೆ ನಿಮ್ಮ ಖಾತೆಯಿಂದ ಲಾಕ್ಔಟ್ ಆಗುವ ಸಾದ್ಯತೆಯಿದೆ.

ಹೌದು, ಫೇಸ್ಬುಕ್ ಖಾತೆಗಳಲ್ಲಿ ಫೇಸ್ಬುಕ್ ಪ್ರೊಟೆಕ್ಟ್ ಬಳಸದ ಖಾತೆಗಳು ಲಾಕ್ಔಟ್ ಆಗಲಿದೆ ಎಂದು ಹೇಳಿದೆ. ಈ ತಿಂಗಳ ಆರಂಭದಿಂದಲೂ ಕೂಡ ಫೇಸ್ಬುಕ್ ತನ್ನ ಬಳಕೆದಾರರಿಗೆ ಮೇಲ್ ಕಳುಹಿಸುತ್ತಿದೆ. ನಿರ್ದಿಷ್ಟ ದಿನಾಂಕದೊಳಗೆ ತಮ್ಮ ಖಾತೆಗಳಲ್ಲಿ ಫೇಸ್ಬುಕ್ ಪ್ರೊಟೆಕ್ಟ್ ಅನ್ನು ಸಕ್ರಿಯಗೊಳಿಸುವಂತೆ ಹೇಳಿದೆ. ಅಲ್ಲದೆ 'ನಿಮ್ಮ ಖಾತೆಗೆ ಫೇಸ್ಬುಕ್ ರಕ್ಷಣೆಯಿಂದ ಸುಧಾರಿತ ಭದ್ರತೆಯ ಅಗತ್ಯವಿದೆ' ಎಂಬ ಶೀರ್ಷಿಕೆಯ ಇಮೇಲ್ ಕಳುಹಿಸಿದೆ. ಒಂದು ವೇಳೆ ನೀವು ಫೇಸ್ಬುಕ್ ಪ್ರೊಟೆಕ್ಟ್ ಸಕ್ರಿಯಗೊಳಿಸದಿದ್ದರೆ ನಿಮ್ಮ ಖಾತೆಗಳಿಂದ ಲಾಕ್ಔಟ್ ಆಗಬೇಕಾಗುತ್ತದೆ. ಹಾಗಾದ್ರೆ ಫೇಸ್ಬುಕ್ ಪ್ರೊಟೆಕ್ಟ್ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್ಬುಕ್ ಇತ್ತೀಚಿಗೆ ತನ್ನ ಬಳಕೆದಾರರಿಗೆ ಒಂದು ಇಮೇಲ್ ಕಳುಹಿಸಿದೆ. ಈ ಇ-ಮೇಲ್ ಸ್ಪ್ಯಾಮ್ ಮೇಲ್ನ ರೂಪದಲ್ಲಿರುವುದರಿಂದ ಹೆಚ್ಚಿನ ಜನ ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ ಇದು ಇಮೇಲ್ ಸ್ಪ್ಯಾಮ್ ಅಲ್ಲ, ಫೇಸ್ಬುಕ್ ತನ್ನ ಬಳಕೆದಾರರು ತಮ್ಮ ಖಾತೆಗಳಿಂದ ಲಾಕ್ ಔಟ್ ಆಗದಂತೆ ತಮ್ಮನ್ನು ರಕ್ಷಿಸಿಕೊಳ್ಳಲು ಸೂಚಿಸಿರುವ ಇಮೇಲ್ ಆಗಿದೆ. ಈಗಾಗಲೇ ಫೇಸ್ಬುಕ್ ನೀಡಿದ್ದ ಗಡುವು ಮುಗಿದಿದ್ದು, ಫೇಸ್ಬುಕ್ ಪ್ರೊಟೆಕ್ಟ್ ಅನ್ನು ಸಕ್ರಿಯಗೊಳಿಸದ ಜನರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಖಾತೆ ಪ್ರವೇಶಿಸಬೇಕಾದರೆ ಮುಂದೆ ಏನು ಮಾಡಬೇಕು ಎಂಬ ಸಂದೇಶಗಳನ್ನು ಪಡೆಯುತ್ತಿದ್ದಾರೆ.

ಮೆಟಾ ಕಂಪೆನಿ ಕಳೆದ ವರ್ಷ ಡಿಸೆಂಬರ್ನಲ್ಲಿ ಫೇಸ್ಬುಕ್ನಲ್ಲಿ ಬಳಕೆದಾರರು ತಮ್ಮ ಖಾತೆಗಳನ್ನು ಎರಡು-ಅಂಶ ದೃಢೀಕರಣದೊಂದಿಗೆ ರಕ್ಷಿಸುವುದು ಅಗತ್ಯವಿದೆ ಎಂದು ಘೋಷಣೆ ಮಾಡಿತ್ತು. ಆ ಸಮಯದಲ್ಲಿ, ತಮ್ಮ ಪ್ರೊಫೈಲ್ಗಳಲ್ಲಿ ಫೇಸ್ಬುಕ್ ಪ್ರೊಟೆಕ್ಟ್ ಫೀಚರ್ಸ್ ಅನ್ನು ಆನ್ ಮಾಡಲು ಹೇಳಿತ್ತು. ಆದರೆ ಹೆಚ್ಚಿನ ಜನರು ಇಂದಿಗೂ ಕೂಡ ಈ ಫೀಚರ್ಸ್ ಅನ್ನು ಬಳಸದಿರುವುದರಿಂದ ಹೆಚ್ಚಿನ ಖಾತೆಗಳು ಸೈಬರ್ ದಾಳಿಗಳಿಗೆ ಒಳಗಾಗುತ್ತಿವೆ. ಅದರಲ್ಲೂ ಆಯ್ದ ಪತ್ರಕರ್ತರು, ಮಾನವ ಹಕ್ಕು ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು ಮತ್ತು ಇತರ ಬಳಕೆದಾರರನ್ನು ಒಳಗೊಂಡಿರುವ ಖಾತೆಗಳು ಹ್ಯಾಕ್ ಆಗುವ ಸಾಧ್ಯತೆಯಿದೆ.

ನಿಮ್ಮ ಖಾತೆಯಲ್ಲಿ ಫೇಸ್ಬುಕ್ ಪ್ರೊಟೆಕ್ಟ್ ಆನ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ಫೇಸ್ಬುಕ್ನಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಕೆಳಮುಖ ಬಾಣದ ಗುರುತನ್ನು ಕ್ಲಿಕ್ ಮಾಡಿ.
ಹಂತ:2 ಸೆಟ್ಟಿಂಗ್ಸ್ ಮತ್ತು ಗೌಪ್ಯತೆ ಕ್ಲಿಕ್ ಮಾಡಿ, ನಂತರ ಸೆಟ್ಟಿಂಗ್ಸ್ಅನ್ನು ಕ್ಲಿಕ್ ಮಾಡಿ.
ಹಂತ:3 ಇದರಲ್ಲಿ ಭದ್ರತೆ ಮತ್ತು ಲಾಗಿನ್ ಅನ್ನು ಕ್ಲಿಕ್ ಮಾಡಿ.
ಹಂತ:4 ನಂತರ ಫೇಸ್ಬುಕ್ ಪ್ರೊಟೆಕ್ಟ್ ಆಯ್ಕೆ ಕಾಣಲಿದೆ. ಇಲ್ಲಿ ಸ್ಟಾರ್ಟ್ ಕ್ಲಿಕ್ ಮಾಡಿ.
ಹಂತ:5 ವೆಲ್ಕಮ್ ಸ್ಕ್ರೀನ್ನಲ್ಲಿ ನೆಕ್ಸ್ಟ್ ಕ್ಲಿಕ್ ಮಾಡಿ.
ಹಂತ:6 ನಂತರ ಫೇಸ್ಬುಕ್ ಪ್ರೊಟೆಕ್ಟ್ ಪ್ರಯೋಜನಗಳ ಪರದೆಯಲ್ಲಿ, ನೆಕ್ಸ್ಟ್ ಕ್ಲಿಕ್ ಮಾಡಿ.
ಹಂತ:7 ಇದೀಗ ಫೇಸ್ಬುಕ್ ನಿಮ್ಮ ಖಾತೆಯನ್ನು ಸಂಭಾವ್ಯ ದೋಷಗಳಿಗಾಗಿ ಸ್ಕ್ಯಾನ್ ಮಾಡುತ್ತದೆ. ಹಾಗೆಯೇ ನೀವು ಫೇಸ್ಬುಕ್ ಪ್ರೊಟೆಕ್ಟ್ ಆನ್ ಮಾಡಿದಾಗ ಏನು ಸರಿಪಡಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡುತ್ತದೆ.
ಹಂತ:8 ಈಗ ಫಿಕ್ಸ್ ಕ್ಲಿಕ್ ಮಾಡಿ ಮತ್ತು ಫೇಸ್ಬುಕ್ ಪ್ರೊಟೆಕ್ಟ್ ಆನ್ ಮಾಡುವುದನ್ನು ಪೂರ್ಣಗೊಳಿಸಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086