ಗೂಗಲ್‌ ಮ್ಯಾಪ್‌ ಬಳಸಲು ತಿಳಿದಿರಲೇಬೇಕಾದ ಅಗತ್ಯ ಮಾಹಿತಿ!

|

ಪ್ರಸ್ತುತ ದಿನಗಳಲ್ಲಿ ನಿವು ಯಾವುದೋ ಹೊಸ ಸ್ಥಳಕ್ಕೆ ಹೋಗಬೇಕಾದರೆ ಮಾರ್ಗದ ಕುರಿತಾಗಿ ಯಾರನ್ನು ಏನು ಕೇಳುವ ಅಗತ್ಯವೇ ಇಲ್ಲ. ಏಕೆಂದರೇ 'ಗೂಗಲ್ ಮ್ಯಾಪ್‌' ಅತ್ಯುತ್ತಮ ಮಾರ್ಗದರ್ಶಿ ಆಗಿ ಕೆಲಸ ಮಾಡುತ್ತಿದೆ ಎಂದರೇ ತಪ್ಪಾಗಲಾರದು. ಪ್ರಸ್ತುತ ಗೂಗಲ್ ಮ್ಯಾಪ್‌ ಅಪ್ಲಿಕೇಶನ್ ಬಳಕೆದಾರರಿಗೆ ಅತೀ ಅಗತ್ಯವಾಗಿದ್ದು, ಸರಳ ದಾರಿಯನ್ನು ತಿಳಿಸುತ್ತದೆ. ಹಾಗೆಯೇ ಗೂಗಲ್ ಮ್ಯಾಪ್‌ನಲ್ಲಿರುವ ಕೆಲವು ವಿಶೇಷ ಫೀಚರ್‌ಗಳು ಬಳಕೆದಾರರ ಹಾದಿಯನ್ನು ಇನ್ನಷ್ಟು ಸುಗಮವಾಗಿಸುತ್ತವೆ. ಅಲ್ಲದೆ Google ಮ್ಯಾಪ್‌ ಬಳಸಿಕೊಂಡು ಪ್ರಯಾಣಿಸುವುದಾದರೆ ಸುಲಭವಾಗಿ ಸಂಚಾರ ಮಾಡಬಹುದಾಗಿದೆ.

ಗೂಗಲ್ ಮ್ಯಾಪ್

ಹೌದು, ಗೂಗಲ್ ಮ್ಯಾಪ್‌ ಮೂಲಕ ಪ್ರಯಾಣಿಸುವುದು ಇದೀಗ ಅತಿ ಸುಲಭವಾಗಿದೆ. ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಮ್ಯಾಪ್‌ ಪರಿಚಯಿಸುವ ಮೂಲಕ ಅಪರಿಚಿತ ಸ್ಥಳವನ್ನು ಯಾರ ಮಾರ್ಗದರ್ಶಿಯೂ ಇಲ್ಲದೆ ತಲುಪುವಂತೆ ಮಾಡುವ ಅವಕಾಶವನ್ನು ನೀಡಿದೆ. ಇನ್ನು ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆ ಮತ್ತು ಕೆಲಸದ ಸ್ಥಳದ destination ಅನ್ನು ಪ್ರತಿನಿತ್ಯ ಎಂಟ್ರಿ ಮಾಡುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಗೂಗಲ್ ಮ್ಯಾಪ್‌ ಸಹ ನಿಮ್ಮ ಮನೆ ಮತ್ತು ಕೆಲಸದ ಸ್ಥಳವನ್ನು ಅರ್ಥೈಸಿಕೊಂಡು ವೇಗದ ಮಾರ್ಗವನ್ನು ಶಾರ್ಟ್‌ಕಟ್‌ ಮೂಲಕ ತೋರಿಸುವ ಪ್ರಯತ್ನ ಮಾಡುತ್ತದೆ. ಈ ಮೂಲಕ ನಿಮ್ಮ ಪ್ರಯಾಣವನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ನಿಮ್ಮ ಮನೆ ಮತ್ತು ಕೆಲಸದ ಸ್ಥಳವನ್ನು ಸೇವ್‌ ಮಾಡಲು ನೀವು Google ಮ್ಯಾಪ್‌ಗಳಿಗೆ ಸೈನ್ ಇನ್ ಮಾಡಬೇಕಾಗುತ್ತದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.

Google ಮ್ಯಾಪ್‌ ಅನ್ನು ಪ್ರಾರಂಭಿಸುವುದು ಹೇಗೆ?

Google ಮ್ಯಾಪ್‌ ಅನ್ನು ಪ್ರಾರಂಭಿಸುವುದು ಹೇಗೆ?

ಹಂತ 1: Google ಮ್ಯಾಪ್‌ ಅಪ್ಲಿಕೇಶನ್ ತೆರೆಯಿರಿ.

ಹಂತ 2: ನಂತರ saved location ಅನ್ನು ಟ್ಯಾಪ್ ಮಾಡಿ. ಇದರಲ್ಲಿ "your lists" ಅನ್ನು ಟ್ಯಾಪ್ ಮಾಡಿ.

ಹಂತ 3: ನಿಮ್ಮ ಮನೆ ಅಥವಾ ಕೆಲಸದ ವಿಳಾಸವನ್ನು ನಮೂದಿಸಿ.

ಗೂಗಲ್

ಇದಲ್ಲದೆ ಗೂಗಲ್ ಮ್ಯಾಪ್‌ಗಳಲ್ಲಿ, ನೀವು ರೆಸ್ಟೋರೆಂಟ್‌ಗಳು, ಮಾಲ್‌ಗಳು, ಲೈವ್ ಮ್ಯೂಸಿಕ್‌ ಮತ್ತು ರಂಗಭೂಮಿ, ಬೀಚ್‌ಗಳು, ಮತ್ತು ನಗರದ ಪ್ರಮುಖ ಸ್ಥಳಗಳನ್ನು ಸಹ ಪರಿಶೀಲಿಸಬಹುದು. ನೀವು ಇಚ್ಚೀಸಿದ ಸ್ಥಳದ ವೆಬ್‌ಸೈಟ್ ಸರ್ಚ್‌ ಮಾಡಲು ಅಥವಾ ಸರ್ಚ್‌ ಮಾಡಿದ ಸ್ಥಳವನ್ನು ಸೇವ್‌ ಮಾಡಲು, ಶೇರ್‌ಮಾಡಲು ಐಫೋನ್‌ನಲ್ಲಿ 3D ಟಚ್ ಅನ್ನು ಸಹ ಬಳಸಬಹುದು. ಇನ್ನು 3D ಟಚ್ ಆನ್ ಮಾಡಲು, ಸೆಟ್ಟಿಂಗ್‌ಗ್ಸ್‌ Applications> General> Accessibility> 3D Touch> ಸ್ವಿಚ್ ಆನ್ ಆಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನಂತರ, ಮ್ಯಾಪ್‌ಅನ್ನು ತೆರೆಯಿರಿ ಮತ್ತು ಸ್ಥಳದಲ್ಲಿ ಹಾರ್ಡ್ ಪ್ರೆಸ್ ಮಾಡಿ. ನಂತರ ನಿಮ್ಮ ಫೋನ್‌ನಲ್ಲಿ ರೆಸ್ಟೋರೆಂಟ್‌ ಮತ್ತು ಇತರ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪಡೆಯುವುದು ಹೇಗೆ? ಅನ್ನೊದನ್ನ ಹಂತಹಂತವಾಗಿ ಇಲ್ಲಿ ತಿಳಿಯೋಣ ಬನ್ನಿರಿ.

ಮ್ಯಾಪ್

ಹಂತ 1: ನಿಮ್ಮ ಫೋನ್‌ನಲ್ಲಿ ಮ್ಯಾಪ್‌ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಸ್ಥಳಕ್ಕಾಗಿ ಹುಡುಕಿ ಅಥವಾ ಅದನ್ನು ಮ್ಯಾಪ್‌ನಲ್ಲಿ ಟ್ಯಾಪ್ ಮಾಡಿ. ನಂತರದ ಆಯ್ಕೆಗಳಲ್ಲಿ ನೀವು ರೆಸ್ಟೋರೆಂಟ್‌ಗಳು, ಪೆಟ್ರೋಲ್, ದಿನಸಿ ಮತ್ತು ಇತರ ವರ್ಗಗಳ ಲೇಬಲ್‌ಗಳನ್ನು ಕಾಣಬಹುದು.

ಹಂತ 3:ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಕೆಲವು ಉತ್ತಮ ಸ್ಥಳ, ಆಹಾರ ಮತ್ತು ಪಾನೀಯ ಮತ್ತು ಸಿಟಿ ಗೈಡ್‌ ಲೇಬಲ್‌ಗಳನ್ನು ಸರ್ಚ್‌ ಮಾಡಬಹುದಾಗಿದೆ.

ಗೂಗಲ್

ಇದಲ್ಲದೆ, ಗೂಗಲ್ ತನ್ನ ಮ್ಯಾಪ್‌ ಅಪ್ಲಿಕೇಶನ್‌ ನಲ್ಲಿ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ್ದು ಅದು ಡಿಸ್‌ಪ್ಲೇಯ ಮೇಲಿನ ಬಲ ಮೂಲೆಯಲ್ಲಿ ಲಭ್ಯವಿರಲಿದೆ. ಈ ಹೊಸ ಫೀಚರ್ಸ್‌ ‘COVID-19 ಮಾಹಿತಿ' ನೀಡಲಿದ್ದು. ಇದನ್ನು ಕ್ಲಿಕ್ ಮಾಡುವ ಮೂಲಕ ಲಭ್ಯವಿರುತ್ತದೆ. ಮ್ಯಾಪ್‌ನಲ್ಲಿ ಈ ಫೀಚರ್ಸ್‌ ಅನ್ನು ಬಳಸುವುದರಿಂದ, ಕಳೆದ ವಾರ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ COVID-19 ಪ್ರಕರಣಗಳಲ್ಲಿನ ಹೆಚ್ಚಳ ಅಥವಾ ಇಳಿಕೆಯ ಮಾದರಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ.

Most Read Articles
Best Mobiles in India

Read more about:
English summary
In order to get started, you should first save your home and work addresses. There is nothing that you can't find on Google Maps if you are new to a place.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X