ಗೂಗಲ್ ಸರ್ಚ್‌ನ‌ಲ್ಲಿ ಕಾಪಿ ರೈಟ್‌ ಹೊಂದಿಲ್ಲದ ಇಮೇಜ್‌ಗಳನ್ನು ಪಡೆಯುವುದು ಹೇಗೆ!

|

ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೋದೇ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌. ಇನ್ನು ಗೂಗಲ್‌ನಲ್ಲಿ ಯಾವುದೇ ರೀತಿಯ ಇಮೇಜ್‌ಗಳನ್ನ ಬೇಕಿದ್ದರೂ ನೀವು ಸರ್ಚ್‌ ಮಾಡಬಹುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆ ಇಮೇಜ್‌ಗಳನ್ನ ಬಳಸಿಕೊಳ್ಳಬಹುದು. ಆದರೆ ಗೂಗಲ್‌ನಲ್ಲಿ ಲಭ್ಯವಾಗುವ ಎಲ್ಲಾ ಇಮೇಜ್‌ಗಳನ್ನ ನೀವು ಬಳಸುವುದಕ್ಕೆ ಆಗುವುದಿಲ್ಲ. ಏಕೆಂದರೆ ಕೆಲವು ಇಮೇಜ್‌ಗಳು ಹಕ್ಕುಸ್ವಾಮ್ಯವನ್ನು ಹೊಂದಿದ್ದು, ಉಚಿತವಾಗಿ ನಿಮಗೆ ಲಭ್ಯವಾಗುವುದಿಲ್ಲ. ಹಣಕೊಟ್ಟ ಖರೀದಿಸಬಹುದಾದರೂ ಮೂಲ ಕ್ರೆಡಿಟ್‌ ನೀಡದೆ ಬಳಸಲು ಆಗುವುದಿಲ್ಲ. ಹಾಗಾದ್ರೆ ನೀವು ಉಚಿವಾಗಿ ಲಭ್ಯವಾಗುವ ಇಮೇಜ್‌ ಸರ್ಚ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿಯಬೇಕು.

ಗೂಗಲ್‌

ಹೌದು, ಗೂಗಲ್‌ನಲ್ಲಿ ಲಭ್ಯವಾಗುವ ಎಲ್ಲಾ ಇಮೇಜ್‌ಗಳು ಉಚಿತವಾಗಿರುವುದಿಲ್ಲ. ಕೆಲವು ಇಮೇಜ್‌ಗಳು ಮೂಲ ಕ್ರೆಡಿಟ್‌ ಹೊಂದಿರುತ್ತವೆ. ಇವುಗಳು ಹಕ್ಕುಸ್ವಾಮ್ಯ ಹೊಂದಿರುವುದರಿಂದ ನೀವು ಅವುಗಳಿಗೆ ಹಣಕೊಟ್ಟು ಖರೀದಿಸಬೇಕಾಗುತ್ತದೆ. ಆದರೆ ಇದು ನಿಮಗೆ ತಿಳಿಯದೆ ಬಳಸಿದರೆ ನೀವು ಹಕ್ಕುಸ್ವಾಮ್ಯ ಕಾನೂನುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಅಲ್ಲದೆ ನಿವು ಕ್ರಿಯೆಟ್‌ ಮಾಡುತ್ತಿರುವ ಸಬ್ಜೆಕ್ಟ್‌ ಅಥವಾ ಯಾವುದೇ ಪ್ರಾಜೆಕ್ಟ್‌ಗೆ ಸರಿ ಹೊಂದುವ ಸ್ಟಾಕ್ ಫೋಟೊಗಳು ಬೇಕಾದರೆ, ಸರಿಯಾದ ಚಿತ್ರವನ್ನು ಕಂಡುಹಿಡಿಯುವುದಕ್ಕೆ ಸಮಸ್ಯೆಯಾಗುತ್ತದೆ. ಇದೇ ಕಾರಣಕ್ಕೆ ಗೂಗಲ್‌ ತನ್ನ ಬಳಕೆದಾರರಿಗೆ ಉಚಿತವಾಗಿ ಲಭ್ಯವಾಗುವ ಇಮೇಜ್‌ಗಳನ್ನು ಸಹ ನೀಡುತ್ತದೆ. ಇದಕ್ಕಾಗಿ ಬಳಕೆದಾರರು ಯಾವ ಹಂತಗಳನ್ನು ಅನುಸರಿಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಗೂಗಲ್‌

ಗೂಗಲ್‌ನಲ್ಲಿ ಆಪ್ಡೇಟ್‌ ಮಾಡಲಾದ ಇಮೇಜ್‌ಗಳು, ಫ್ರೀ ಇಮೇಜ್‌ಗಳನ್ನು ಕಂಡುಹಿಡಿಯುವುದು ಸುಲಭ. ಅಲ್ಲದೆ ನೀವು ಬಳಸುವುದಕ್ಕೆ ಉಚಿತವಲ್ಲದ ಇಮೇಜ್‌ಗಳನ್ನು ಹುಡುಕಿದರೂ ಅದರ ಪರವಾನಗಿಯನ್ನು ಪಡೆಯಬಹುದು ನಂತರ ಅವುಗಳನ್ನು ಉಚಿತವಾಗಿ ಬಳಸಬಹುದು. ಇದನ್ನ ಹೇಗೆ ಪಡೆಯುವುದು ಅನ್ನೊ ವಿವರ ಇಲ್ಲಿದೆ ಓದಿರಿ.

ಗೂಗಲ್

ಹಂತ:1 ಗೂಗಲ್ ಸರ್ಚ್‌ನಲ್ಲಿ ನೀವು ಬಯಸುವ ಇಮೇಜ್‌ ಹುಡುಕಿ. ರಿಸಲ್ಟ್‌ ಬಂದ ನಂತರ, ಸರ್ಚ್‌ಬಾಕ್ಸ್‌ ನಲ್ಲಿರುವ ಇಮೇಜ್‌ಗಳ ಮೇಲೆ ಕ್ಲಿಕ್ ಮಾಡಿ.

ಹಂತ:2 ಫಿಲ್ಟರ್ ಮೆನು ಪಡೆಯಲು ‘ಟೂಲ್ಸ್‌' ಅನ್ನು ಕ್ಲಿಕ್ ಮಾಡಿ.

ಹಂತ:3 ನಂತರ ‘‘Usage Rights' ಕ್ಲಿಕ್ ಮಾಡಿ ಮತ್ತು ಇಮೇಜ್‌ ಲೈಸೆನ್ಸ್‌ ವಿಂಗಂಡಿಸುವ ಕ್ರಿಯೇಟಿವ್ ಕಾಮನ್ಸ್ ಆಯ್ಕೆ ಕಾಣಲಿದೆ.

ಹಂತ:4 ಲೈಸೆನ್ಸ್‌ ಪಡೆದ ಚಿತ್ರಕ್ಕಾಗಿ ಅದರ ವಿವರಣೆಯಿಂದ ನೇರವಾಗಿ ಹಕ್ಕುಗಳನ್ನು ಹೇಗೆ ಪಡೆಯುವುದು ಎಂದು ಗೂಗಲ್ ತಿಳಿಸಲಿದೆ.

ಹಂತ:5 ಇದೀಗ ನೀವು ಯಾವುದೇ ಬಳಕೆಯ ಹಕ್ಕುಗಳ ಆಯ್ಕೆಗಳ ಮೇಲೆ ಕ್ಲಿಕ್ ಮಾಡದಿದ್ದರೆ, ನಿಮ್ಮ ಹುಡುಕಾಟ ಮಾನದಂಡಕ್ಕೆ ಸರಿಹೊಂದುವ ಎಲ್ಲಾ ಚಿತ್ರಗಳನ್ನು Google ನಿಮಗೆ ತೋರಿಸುತ್ತದೆ. ಪರವಾನಗಿ ಡೇಟಾವನ್ನು ಹೊಂದಿರದ ಎಲ್ಲಾ ಇಮೇಜ್‌ಗಳು ಲಭ್ಯವಾಗಲಿದೆ.

ಇಮೇಜ್‌ ಕ್ರಿಯೆಟರ್

ಇನ್ನು ಇಮೇಜ್‌ ಕ್ರಿಯೆಟರ್‌ ಅಥವಾ ಪಬ್ಲಿಷರ್‌ ಈಗಾಗಲೇ ಈ ಮಾಹಿತಿಯನ್ನು ಒದಗಿಸಿದ್ದರೆ ಮಾತ್ರ ಗೂಗಲ್ ಇಮೇಜ್‌ಗಳಿಗೆ ಪರವಾನಗಿ ವಿವರಗಳನ್ನು ನೀಡುತ್ತದೆ. ಆದ್ದರಿಂದ ಕೃತಿಸ್ವಾಮ್ಯದ ಚಿತ್ರವನ್ನು ತಿಳಿಯದೆ ತಪ್ಪಿಸಲು ಉತ್ತಮ ಆಯ್ಕೆಯೆಂದರೆ ಈ ಮಾಹಿತಿಯ ಕೊರತೆಯಿರುವ ಫೋಟೋಗಳನ್ನು ಫಿಲ್ಟರ್ ಮಾಡುವುದು. ಒಂದು ವೇಳೆ ನಿಮಗೆ ಸರಿಯಾದ ಚಿತ್ರವನ್ನು Google ನಲ್ಲಿ ಕಂಡುಹಿಡಿಯಲಾಗದಿದ್ದರೆ, ನೀವು ಯಾವಾಗಲೂ ಪಿಕ್ಸಬೇ ನಂತಹ ಹಕ್ಕುಸ್ವಾಮ್ಯ ರಹಿತ ಸ್ಟಾಕ್ ಫೋಟೋ ಸೈಟ್‌ಗಳ ಮೂಲಕ ಸ್ಕ್ಯಾನ್ ಮಾಡಬಹುದಾಗಿರುತ್ತದೆ.

Most Read Articles
Best Mobiles in India

Read more about:
English summary
While stock photos are a go-to for most of us content creators, finding the right image is often a problem when you want to ensure it comes with no legal liabilities.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X