ನಿಮ್ಮ ಫೋನ್‌ ಬ್ಯಾಟರಿ ಬ್ಯಾಕ್‌ಅಪ್ ಹೆಚ್ಚಿಸಲು ಮರೆಯದೆ ಹೀಗೆ ಮಾಡಿ!

|

ಸದ್ಯ ಸ್ಮಾರ್ಟ್‌ಫೋನ್‌ ದೈನಂದಿನ ಜೀವನದಲ್ಲಿ ಅತೀ ಅಗತ್ಯ ಡಿವೈಸ್ ಎಂದೇನಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್‌ ಬಾಳಿಕೆ ಅತ್ಯುತ್ತಮವಾಗಿರಲೆಂದು ಮೊಬೈಲ್ ತಯಾರಿಕಾ ಕಂಪನಿಗಳು ಇತ್ತೀಚಿನ ಸ್ಮಾರ್ಟ್‌ಫೋನಗಳಲ್ಲಿ ಅಧಿಕ ಬ್ಯಾಟರಿ ಸಾಮರ್ಥ್ಯವನ್ನು ಒದಗಿಸುತ್ತಿವೆ. ಅದಕ್ಕೆ ಪೂರಕವಾಗಿ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡುತ್ತಿವೆ. ಅದಾಗ್ಯೂ ಕೆಲವೊಮ್ಮೆ ನಾನಾ ಕಾರಣಗಳಿಂದಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ಇಳಿಮುಖವಾಗುತ್ತಾ ಹೋಗುತ್ತದೆ. ಫೋನ್ ಬ್ಯಾಟರಿ ಬ್ಯಾಕ್‌ಅಪ್ ಸರಿಯಾಗಿ ಬರುತ್ತಿಲ್ಲ ಎಂದು ಕೆಲವು ಸ್ಮಾರ್ಟ್‌ಫೋನ್‌ ಬಳಕೆದಾರರು ಹೇಳುವುದನ್ನು ಕೇಳಿರುತ್ತಿರಿ.

ಮೊಬೈಲ್

ಹೌದು, ಇತ್ತೀಚಿನ ಬಹುತೇಕ ಮೊಬೈಲ್ ಕಂಪನಿಗಳ ನೂತನ ಸ್ಮಾರ್ಟ್‌ಫೋನಗಳಲ್ಲಿ ಹೆಚ್ಚಿನ (mAh) ಬ್ಯಾಟರಿಯಲ್ಲಿ ಶಕ್ತಿ ನೀಡುತ್ತಿದ್ದಾರೆ. ಆದರೂ ಅಧಿಕ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಫೋನ್‌ಗಳ ಬ್ಯಾಟರಿ ಸಹ ಒಂದು ದಿನದ ಮಟ್ಟಿಗೆ ಬ್ಯಾಕ್‌ಅಪ್‌ ನೀಡಬಲ್ಲವು. ಏಕೆಂದರೇ ನಾನಾ ಕಾರಣಗಳಿಂದಾಗಿ ಸ್ಮಾರ್ಟ್‌ಫೋನ್‌ನ ಬಳಕೆ ಹೆಚ್ಚಾಗಿದ್ದು, ಜೊತೆಗೆ ಬ್ಯಾಟರಿ ಕಬಳಿಸುವ ಆಪ್ಸ್‌ಗಳು ಸ್ಮಾರ್ಟ್‌ಫೋನ್‌ ಸೇರಿರುತ್ತವೆ. ಆದರೆ ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸುವ ಮೂಲಕ ಫೋನ್ ಬ್ಯಾಟರಿ ಶಕ್ತಿ ಅಧಿಕಗೊಳಿಸಬಹುದು. ಹಾಗಾದರೇ ಯಾವೆಲ್ಲಾ ಕ್ರಮಗಳ ಮೂಲಕ ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ವೃದ್ಧಿಸಬಹುದು ಎನ್ನುವುದನ್ನು ನೋಡೋಣ ಬನ್ನಿರಿ.

ಹೋಮ್‌ ಸ್ಕ್ರೀನ್‌ನಲ್ಲಿ ಲೈವ್‌ ವಾಲ್‌ಪೇಪರ್ ಬೇಡ

ಹೋಮ್‌ ಸ್ಕ್ರೀನ್‌ನಲ್ಲಿ ಲೈವ್‌ ವಾಲ್‌ಪೇಪರ್ ಬೇಡ

ಬಹಳಷ್ಟು ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹೋಮ್ ಸ್ಕ್ರೀನ್ widgets ಬಳಸುತ್ತಾರೆ. ಇದು ಅವರ ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ಇದು ಬ್ಯಾಟರಿ ಬಾಳಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. widgets ಕಾರ್ಯವು ಹೆಚ್ಚಿನ RAM ಅನ್ನು ತೆಗೆದುಕೊಂಡಿರುವುದರಿಂದ ಮತ್ತು ಹಿನ್ನೆಲೆ ಪ್ರಕ್ರಿಯೆಯು ನಿಮ್ಮ ಬ್ಯಾಟರಿಯನ್ನು ಬರಿದಾಗಿಸುವುದನ್ನು ವೇಗಗೊಳಿಸುತ್ತದೆ. ಹೀಗಾಗಿ widgets ಹಾಗೂ ಲೈವ್‌ ವಾಲ್‌ಪೇಪರ್ ಬಳಕೆ ತಪ್ಪಿಸಿ.

ಆಟೋಮ್ಯಾಟಿಕ್ ಬ್ರೈಟ್ನೆಸ್ ಆಫ್ ಮಾಡಿ

ಆಟೋಮ್ಯಾಟಿಕ್ ಬ್ರೈಟ್ನೆಸ್ ಆಫ್ ಮಾಡಿ

ಆಟೋಮ್ಯಾಟಿಕ್ ಬ್ರೈಟ್ನೆಸ್ ಆಯ್ಕೆಯನ್ನು ಸಾಮಾನ್ಯವಾಗಿ ಎಲ್ಲರೂ ಬಳಕೆ ಮಾಡುತ್ತಾರೆ. ಆದರೆ ಬ್ರೈಟ್ನೆಸ್‌ ಕಡಿಮೆ ಹಾಗೂ ಆರಾಮದಾಯಕ ಮಟ್ಟಕ್ಕೆ ಮ್ಯಾನುವಲಿ ಹೊಂದಿಸುವುದು ಉತ್ತಮ. ಅಗತ್ಯವಿದ್ದಾಗ ಬ್ರೈಟ್ನೆಸ್ ಅನ್ನು ಹೆಚ್ಚಿಸಿಕೊಳ್ಳಬಹುದು. ಬ್ಯಾಟರಿ ಬಾಳಿಕೆ ಉಳಿಸಲು ಇದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ.

ಬ್ಯಾಕ್‌ಗ್ರೌಂಡ್‌ ಆಪ್ಸ್‌ ಕ್ಲಿಯರ್‌ ಮಾಡಿ

ಬ್ಯಾಕ್‌ಗ್ರೌಂಡ್‌ ಆಪ್ಸ್‌ ಕ್ಲಿಯರ್‌ ಮಾಡಿ

ನಾನಾ ಕಾರಣಗಳಿಂದ ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ತೆರೆಯುತ್ತಿರಿ. ಆದರೆ ಬಹುತೇಕ ಬಳಕೆದಾರರು ಆಪ್‌ಗಳಲ್ಲಿ ಕೆಲಸ ಮಾಡಿ ಮುಗಿಸಿದಾಗ ಆ ಆಪ್ ಅನ್ನು ಕ್ಲೋಸ್‌ ಮಾಡುವುದೇ ಇಲ್ಲ. ಹಾಗಾಗಿ ಬ್ಯಾಕ್‌ಗ್ರೌಂಡ್‌ನಲ್ಲಿ ಆ ಆಪ್ಸ್‌ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಜೊತೆಗೆ ಬ್ಯಾಟರಿಯನ್ನು ಕಬಳಿಸುತ್ತ ಬ್ಯಾಟರಿ ಖಾಲಿಮಾಡುತ್ತವೆ. ಅದಕ್ಕಾಗಿ ಬ್ಯಾಕ್‌ಗ್ರೌಂಡ್‌ ಆಪ್ಸ್‌ ಕ್ಲಿಯರ್‌ ಮಾಡಿಬಿಡಿ.

ಸ್ಕ್ರೀನ್‌ ಆಫ್‌ ಟೈಮ್‌ ಇಳಿಸಿ

ಸ್ಕ್ರೀನ್‌ ಆಫ್‌ ಟೈಮ್‌ ಇಳಿಸಿ

ಸ್ಮಾರ್ಟ್‌ಫೋನ್‌ನ ಬಳಕೆ ಮುಗಿಸ ಬಳಿಕ ಸ್ಕ್ರೀನ್‌ ಸ್ಲಿಪ್ ಮೋಡ್‌ಗೆ ಹೋಗುತ್ತದೆ ಅಂದರೇ ಸ್ಕ್ರೀನ್ ಲೈಟ್‌ ಆಫ್‌ ಆಗುತ್ತದೆ. ಈ ಸ್ಲಿಪ್‌ ಮೋಡ್‌ ಆಪ್‌ ಆಗಲು 1ನಿಮಿಷ, 30ಸೆಕೆಂಡ್ ಮತ್ತು 15 ಸೆಕೆಂಡ್ ಎಂಬ ಆಯ್ಕೆಗಳು ಸ್ಮಾರ್ಟ್‌ಫೋನ್‌ನಲ್ಲಿ ಇರುತ್ತವೆ. ಸ್ಲಿಪ್‌ ಟೈಮ್‌ ಅನ್ನು ಆದಷ್ಟು ಕಡಿಮೆ ಮಾಡಿರಿ ಇದು ಫೋನ್‌ ಬ್ಯಾಟರಿ ಉಳಿಸಲು ನೆರವಾಗಲಿದೆ.

ಅನಿಮೇಷನ್‌ ಆಫ್‌ ಮಾಡಿರಿ

ಅನಿಮೇಷನ್‌ ಆಫ್‌ ಮಾಡಿರಿ

ಆಂಡ್ರಾಯ್ಡ್ ಸಾಧನಗಳಲ್ಲಿ ಬ್ಯಾಟರಿ ಬಳಕೆಯನ್ನು ಅತ್ಯುತ್ತಮವಾಗಿಸಲು ಅನಿಮೇಷನ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಮತ್ತೊಂದು ಉತ್ತಮ ಆಯ್ಕೆಯಾಗಿದೆ. ಆದರೆ ಅನಿಮೇಷನ್ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ನೀವು Developer Options ಅನ್ನು ಪ್ರವೇಶಿಸಬೇಕು - ಇದು ನಿಮ್ಮ ಆಂಡ್ರಾಯ್ಡ್ ಸೆಟ್ಟಿಂಗ್‌ಗಳಲ್ಲಿ ಮರೆಮಾಡಲಾಗಿದೆ.

ವೈಬ್ರೈಟ್ ಮೋಡ್‌ ಆಫ್‌ ಮಾಡಿ

ವೈಬ್ರೈಟ್ ಮೋಡ್‌ ಆಫ್‌ ಮಾಡಿ

ಸ್ಮಾರ್ಟ್‌ಫೋನ್‌ಗಳ ಬಳಕೆದಾರರು ರಿಂಗ್‌ ಜೊತೆಗೆ ವೈಬ್ರೈಟ್‌ ಆಯ್ಕೆಯನ್ನು ಸೆಟ್‌ ಮಾಡಿಕೊಂಡಿರುತ್ತಾರೆ. ಇನ್ನೂ ಕೇಲವರು ಹೆಚ್ಚಾಗಿ ವೈಬ್ರೈಟ್‌ ಮೋಡ್‌ ಅನ್ನು ಬಳೆಸುತ್ತಾರೆ. ವೈಬ್ರೈಟ್‌ನಿಂದ ಫೋನ್‌ ಬ್ಯಾಟರಿ ಬೇಗ ಖಾಲಿಯಾಗುತ್ತದೆ ಆದಕ್ಕಾಗಿ ಫೋನ್‌ ರಿಂಗಿಂಗ್‌ ಆಯ್ಕೆಯಲ್ಲಿ ಸಾಧ್ಯವಾದಷ್ಟು ವೈಬ್ರೈಟ್‌ ಮೋಡ್‌ ಆಯ್ಕೆ ಬಳಸುವುದನ್ನು ನಿಲ್ಲಿಸಿರಿ.

ಬ್ಲೂಟೂತ್- ವೈಫೈ ಆಫ್‌ ಮಾಡಿರಿ

ಬ್ಲೂಟೂತ್- ವೈಫೈ ಆಫ್‌ ಮಾಡಿರಿ

ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್‌ ಬಳಸಲು ಬಹುತೇಕರು ವೈಫೈ ಆಯ್ಕೆಯನ್ನು ಬಳಸುತ್ತಾರೆ ಆದರೆ ಬಳಕೆ ಮುಗಿದ ತಕ್ಷಣ ಅದನ್ನು ಆಫ್‌ ಮಾಡುವುದೇ ಇಲ್ಲ ಹಾಗೇ ಬ್ಲೂಟೂತ್ ಅನ್ನು ಸದಾ ಆಪ್‌ ಆಗುಯೇ ಇಟ್ಟಿರುತ್ತಾರೆ. ಇದು ಸಹ ಬ್ಯಾಟರಿ ಕಬಳಿಸುತ್ತದೆ ಎನ್ನುವುದು ನೆನಪಿರಲಿ. ಹಾಗಾಗಿ ಅಗತ್ಯತೆ ಮುಗಿದ ಬಳಿಕ ವೈಫೈ ಮತ್ತು ಬ್ಲೂಟೂತ್‌ ಆಫ್‌ ಮಾಡಿರಿ.

Most Read Articles
Best Mobiles in India

English summary
How To Improve Battery Life Of Android Phone 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X