ಇನ್‌ಸ್ಟಾಗ್ರಾಮ್‌ನಲ್ಲಿ ಕಾಂಟ್ಯಾಕ್ಟ್‌ ಅನ್ನು ಮ್ಯೂಟ್ ಮಾಡುವುದು ಹೇಗೆ?

|

ಬಳಕೆದಾರರ ನೆಚ್ಚಿನ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದಾಗಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಹೆಚ್ಚು ಡೌನ್‌ಲೋಡ್ ಮಾಡಿದ ಮೂರನೇ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದೆ. ಅದರಲ್ಲೂ ಜುಲೈ 2021 ರಲ್ಲಿ ಪ್ರಪಂಚದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಒಟ್ಟಾರೆ ಗೇಮಿಂಗ್ ಅಲ್ಲದ ಆಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ಇನ್‌ಸ್ಟಾಗ್ರಾಮ್‌ ಕೂಡ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಕ್ಲಿಕ್ಕಿಸಿದ ಫೋಟೋಗಳನ್ನು ಪೋಸ್ಟ್‌ ಮಾಡಬಹುದು. ಅಷ್ಟೇ ಅಲ್ಲ ಕ್ರಿಯೆಟರ್ಸ್‌ ಮತ್ತು ಕಂಪನಿಗಳು ತಮ್ಮ ಕೆಲಸವನ್ನು ಪ್ರದರ್ಶಿಸಲು ವ್ಯಾಪಕವಾಗಿ ಬಳಸುತ್ತಾರೆ. ಈ ಚಿತ್ರಗಳ ಮೂಲಕ ಸರ್ಫ್ ಮಾಡುವುದು ಸಾಮಾನ್ಯವಾಗಿದ್ದರೂ, ಕೆಲವೊಮ್ಮೆ ಕಿರಿಕಿರಿಯನ್ನು ಉಂಟುಮಾಡಬಹುದು. ಆದರಿಂದ ನೀವು ಕಿರಿಕಿರಿಯನ್ನು ತಪ್ಪಿಸಲು ಒಂದು ಪರಿಹಾರವಿದೆ. ಇದಕ್ಕಾಗಿ ನೀವು ಮ್ಯೂಟ್‌ ಫೀಚರ್ಸ್‌ ಅನ್ನು ಬಳಸಬಹುದಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಮ್ಯೂಟ್‌ ಫೀಚರ್ಸ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್ ಬಳಕೆದಾರರು ಪೋಸ್ಟ್‌ಗಳನ್ನು ನೋಡಲು ಬಯಸದ ಸಂಪರ್ಕವನ್ನು ಮ್ಯೂಟ್ ಮಾಡಲು ಅನುವು ಮಾಡಿಕೊಡುತ್ತದೆ. ಸಂಪರ್ಕವನ್ನು ಮ್ಯೂಟ್ ಮಾಡುವುದರಿಂದ ಅವರ ಪೋಸ್ಟ್‌ಗಳನ್ನು ನೀವು ನೋಡದೆ ಇರಲು ಸಾದ್ಯವಾಗಲಿದೆ. ನೀವು ಸಂಪರ್ಕವನ್ನು ಮ್ಯೂಟ್ ಮಾಡಿದಾಗ, ನೀವು ಮ್ಯೂಟ್ ಮಾಡಲು ನಿರ್ಧರಿಸಿದ್ದನ್ನು ಅವಲಂಬಿಸಿ ನೀವು ಅವರ ಪೋಸ್ಟ್‌ಗಳು ಮತ್ತು ಅವರ ಕಥೆಗಳನ್ನು ನೋಡುವುದನ್ನು ನಿಲ್ಲಿಸುತ್ತೀರಿ. ಆದರೆ, ಮ್ಯೂಟ್ ಮಾಡಿದ ಸಂಪರ್ಕವು ನಿಮ್ಮ ಎಲ್ಲಾ ಪೋಸ್ಟ್‌ಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ನೋಡಬಹುದು.

ಫೀಚರ್ಸ್‌

ಇನ್ನು ಈ ಫೀಚರ್ಸ್‌ನ ಮತ್ತೊಂದು ಉತ್ತಮ ಆಂಶ ಎಂದರೆ ಇನ್‌ಸ್ಟಾಗ್ರಾಮ್ ನಿಮ್ಮ ಆಯ್ಕೆಯ ಬಗ್ಗೆ ಮ್ಯೂಟ್ ಮಾಡಿದ ಸಂಪರ್ಕಕ್ಕೆ ತಿಳಿಸುವುದಿಲ್ಲ. ಆದರಿಂದ ನೀವು ನಿಮ್ಮ ಸ್ನೇಹಿತನನ್ನು ಮ್ಯೂಟ್ ಮಾಡಿದರೂ ಅವರಿಗೆ ತಿಳಿಯುವುದಿಲ್ಲ. ಹಾಗಾದ್ರೆ ನೀವು ನಿಮ್ಮ ಸ್ನೇಹಿತರು ಅಥವಾ ಕಿರಿಕಿರಿಗೊಳಿಸುವ ಯಾವುದೇ ಸಂಪರ್ಕವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮ್ಯೂಟ್ ಮಾಡಲು ಬಯಸಿದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಸಂಪರ್ಕವನ್ನು ಹೇಗೆ ಮ್ಯೂಟ್ ಮಾಡುವುದು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಕಂಟ್ಯಾಕ್ಟ್‌ ಅನ್ನು ಮ್ಯೂಟ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಕಂಟ್ಯಾಕ್ಟ್‌ ಅನ್ನು ಮ್ಯೂಟ್ ಮಾಡುವುದು ಹೇಗೆ?

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Instagram ಅಪ್ಲಿಕೇಶನ್ ತೆರೆಯಿರಿ.

ಹಂತ 2: ಆಪ್‌ನ ಸರ್ಚ್ ಬಾರ್‌ನಲ್ಲಿ ಹುಡುಕುವ ಮೂಲಕ ಅಥವಾ ಅವರ ಪೋಸ್ಟ್‌ನಲ್ಲಿರುವ ಅವರ ಸಂಪರ್ಕದ ಪ್ರೊಫೈಲ್ ಹೆಸರಿನ ಮೇಲೆ ಕ್ಲಿಕ್ ಮಾಡುವ ಮೂಲಕ ಪ್ರೊಫೈಲ್‌ಗೆ ಹೋಗಿ.

ಹಂತ 3: ಕೆಳಗಿನ ಬಟನ್ ಮೇಲೆ ಟ್ಯಾಪ್ ಮಾಡಿ. ಹೀಗೆ ಮಾಡುವುದರಿಂದ ಮೂರು ಆಯ್ಕೆಗಳನ್ನು ಹೊಂದಿರುವ ವಿಂಡೋ ತೆರೆಯುತ್ತದೆ - ಮ್ಯೂಟ್, ನಿರ್ಬಂಧಿಸಿ ಮತ್ತು ಅನುಸರಿಸಬೇಡಿ.

ಹಂತ 4: ಮ್ಯೂಟ್ ಬಟನ್ ಮೇಲೆ ಟ್ಯಾಪ್ ಮಾಡಿ.

ಹಂತ 5: ಈಗ, ಆಯ್ದ ಸಂಪರ್ಕದಿಂದ ಎಲ್ಲಾ ಪೋಸ್ಟ್‌ಗಳನ್ನು ಮ್ಯೂಟ್ ಮಾಡಲು ಪೋಸ್ಟ್ ಬಟನ್ ಅನ್ನು ಟಾಗಲ್ ಮಾಡಿ.

ಹಂತ 6: ಮುಂದೆ, ಸಂಪರ್ಕದಿಂದ ಎಲ್ಲಾ ಕಥೆಗಳನ್ನು ಮ್ಯೂಟ್ ಮಾಡಲು ಕಥೆಗಳ ಆಯ್ಕೆಯನ್ನು ಟಾಗಲ್ ಮಾಡಿ.

Most Read Articles
Best Mobiles in India

Read more about:
English summary
Instagram is great to have, but there are times when it gets jarring and you desperately need to ignore certain people.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X