Just In
Don't Miss
- Movies
'ತಲೆದಂಡ' ಸಿನಿಮಾಕ್ಕೆ ಅನ್ಯಾಯ: ಮನವಿ ಮಾಡಿದ ಸಂಚಾರಿ ವಿಜಯ್
- News
ಅಂತಾರಾಷ್ಟ್ರೀಯ ಮಹಿಳಾ ದಿನ; ಸವಾಲುಗಳೇ ಮಹಿಳೆಯ ಸಾಧನೆಯ ಮೆಟ್ಟಿಲು: ಡಾ.ಹೇಮಾ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Automobiles
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
- Sports
ಸೌತಾಂಪ್ಟನ್ನಲ್ಲಿ ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
- Lifestyle
ಹೀಗೆ ಆಯ್ಕೆ ಮಾಡಿದರೆ ನೀವು ಬಯಸಿದಂಥ ಸಂಗಾತಿಯೇ ಸಿಗುವರು
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವರ್ಡ್ ಡಾಕ್ಯುಮೆಂಟ್ ಅನ್ನು ಪಾಸ್ವರ್ಡ್ ಮೂಲಕ ರಕ್ಷಿಸುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಡಾಕ್ಯುಮೆಂಟ್ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಪಾಸ್ವರ್ಡ್ ಪ್ರೊಟೆಕ್ಷನ್ ಮೂಲಕ ಡಾಕ್ಯುಮೆಂಟ್ ಅನ್ನು ವರ್ಡ್ ರೂಪದಲ್ಲಿ ಇಡುವುದು ಸಾಕಷ್ಟು ಅವಶ್ಯಕತೆ ಕೂಡ ಆಗಿದೆ. ಇದೇ ಕಾರಣಕ್ಕೆ ಡಾಕ್ಯುಮೆಂಟ್ ಸೆಕ್ಯೂರ್ ಮಾಡುವಾಗ ವರ್ಡ್ ಫೈಲ್ನಲ್ಲಿ ಇಲ್ಲವೇ ಪಿಡಿಎಫ್ ಮಾದರಿಯಲ್ಲಿ ರಕ್ಷಣೆ ಮಾಡಿ ಇಡುತ್ತಾರೆ. ಇನ್ನು ಮೈಕ್ರೋಸಾಫ್ಟ್ ವರ್ಡ್ ಅಥವಾ ಇತರ ಆಫೀಸ್ ಅಪ್ಲಿಕೇಶನ್ಗಳಲ್ಲಿ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುವಾಗ ಡಾಕ್ಯುಮೆಂಟ್ಗಳನ್ನು ರಕ್ಷಿಸುವ ಪಾಸ್ವರ್ಡ್ ಅನ್ನು ಪರಿಗಣಿಸಲು ಬಯಸುತ್ತಾರೆ.

ಹೌದು, ಮೈಕ್ರೋಸಾಫ್ಟ್ ವರ್ಡ್ , ಇಲ್ಲವೇ ಇತರೆ ಅಪ್ಲಿಕೇಶನ್ಗಳಲ್ಲಿ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿಡುವಾಗ ಇತರರು ಸುಲಭವಾಗಿ ಪ್ರವೇಶಿಸಲು ಅವಕಾಶ ನೀಡದಂತೆ ಅದಕ್ಕೆ ಪಾಸ್ವರ್ಡ್ ಸೆಟ್ಮಾಡುವುದು ಉತ್ತಮ. ನೀವು ಸೂಕ್ಷ್ಮ ಮಾಹಿತಿಯನ್ನು ಹೊಂದಿರುವ ವರ್ಡ್ ಡಾಕ್ಯುಮೆಂಟ್ ಅನ್ನು ಸಾರ್ವಜನಿಕ ಫೋಲ್ಡರ್ನಲ್ಲಿ ಸಂಗ್ರಹಿಸಬೇಕಾಗಬಹುದು. ಈ ಸಂದರ್ಭದಲ್ಲಿ, ನೀವು ಬಹುಶಃ ಫೈಲ್ ಅನ್ನು ಎನ್ಕ್ರಿಪ್ಟ್ ಮಾಡಬೇಕು ಮತ್ತು ಡಾಕ್ಯುಮೆಂಟ್ ಅನ್ನು ಪ್ರವೇಶಿಸಬೇಕಾದವರೊಂದಿಗೆ ಮಾತ್ರ ಪಾಸ್ವರ್ಡ್ ಅನ್ನು ಹಂಚಿಕೊಳ್ಳಬೇಕಾಗುತ್ತದೆ. ಹಾಗಾದ್ರೆ ವರ್ಡ್ ಡಾಕ್ಯುಮೆಂಟ್ ಅನ್ನು ಪಾಸ್ವರ್ಡ್ ಮೂಲಕ ರಕ್ಷಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೂಕ್ಷ್ಮ ಮಾಹಿತಿಯನ್ನು ಹೊಂದಿರುವ ನಿಮ್ಮ ಡಾಕ್ಯುಮೆಂಟ್ಗಳಲ್ಲಿ ಸುರಕ್ಷಿತ ಪಾಸ್ವರ್ಡ್ ಅನ್ನು ಸೆಟ್ಮಾಡುವುದು ಉತ್ತಮವಾದ ಮಾರ್ಗವಾಗಿದೆ. ಈಗ, ವಿಂಡೋಸ್ನಲ್ಲಿ ನಿಮ್ಮ ವರ್ಡ್ ಡಾಕ್ಯುಮೆಂಟ್ ಅನ್ನು ಪಾಸ್ವರ್ಡ್ ಮೂಲಕ ರಕ್ಷಿಸುವುದು ಹೇಗೆ ಅನ್ನೊದನ್ನ ತಿಳಿಯಲು ಈ ಹಂತಗಳನ್ನು ಅನುಸರಿಸಿ.

ವರ್ಡ್ ಡಾಕ್ಯುಮೆಂಟ್ ಅನ್ನು ಪಾಸ್ವರ್ಡ್ ಮೂಲಕ ರಕ್ಷಿಸುವುದು ಹೇಗೆ
ಹಂತ:1 ನಿಮ್ಮ ವಿಂಡೋಸ್ Machine ಅಲ್ಲಿ ಮೈಕ್ರೋಸಾಫ್ಟ್ ವರ್ಡ್ ಅನ್ನು ಪ್ರಾರಂಭಿಸಿ ಮತ್ತು ಡಾಕ್ಯುಮೆಂಟ್ ತೆರೆಯಿರಿ.
ಹಂತ:2 ಫೈಲ್ಗೆ ಹೋಗಿ> Protect Document ಅನ್ನು ಕ್ಲಿಕ್ ಮಾಡಿ> ಪಾಸ್ವರ್ಡ್ನೊಂದಿಗೆ ಎನ್ಕ್ರಿಪ್ಟ್ ಕ್ಲಿಕ್ ಮಾಡಿ.
ಹಂತ:3 ಈಗ ನೀವು ಬಯಸಿದ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು OK ಕ್ಲಿಕ್ ಮಾಡಿ.
ಹಂತ:4 ನಂತರ ಅದನ್ನು ದೃಡೀಕರಿಸಲು ನೀವು ಮತ್ತೆ ನಿಮ್ಮ ಪಾಸ್ವರ್ಡ್ ಅನ್ನು ರಿ ಎಂಟ್ರಿ ಮಾಡಿ ಮತ್ತು OK ಒತ್ತಿರಿ.
ಇದನ್ನು ಮಾಡಿದ ನಂತರ, ನಿಮ್ಮ ವರ್ಡ್ ಡಾಕ್ಯುಮೆಂಟ್ ಪಾಸ್ವರ್ಡ್ ರಕ್ಷಣೆ ಹೊಂದಿರಲಿದೆ. ನಂತರ ನಿಮ್ಮ ಡಾಕ್ಯುಮೆಂಟ್ ಅನ್ನು ಯಾರೆ ತೆರೆಯಲು ಪ್ರಯತ್ನಿಸಿದರು ಪಾಸ್ವರ್ಡ್ ನಮೂದಿಸಲೇಬೇಕಾಗುತ್ತದೆ.

ಮ್ಯಾಕ್ನಲ್ಲಿ ಡಾಕ್ಯುಮೆಂಟ್ ಅನ್ನು ಎನ್ಕ್ರಿಪ್ಟ್ ಮಾಡುವುದು ಹೇಗೆ?
ಇನ್ನು ಮ್ಯಾಕ್ನಲ್ಲಿ ವರ್ಡ್ ಡಾಕ್ಯುಮೆಂಟ್ನಲ್ಲಿ ಪಾಸ್ವರ್ಡ್ ಹಾಕಲು ಈ ಹಂತಗಳನ್ನು ಅನುಸರಿಸಿ.
ಹಂತ:1 ನಿಮ್ಮ ಮ್ಯಾಕ್ನಲ್ಲಿ ಮೈಕ್ರೋಸಾಫ್ಟ್ ವರ್ಡ್ ಅನ್ನು ಪ್ರಾರಂಭಿಸಿ ಮತ್ತು ಡಾಕ್ಯುಮೆಂಟ್ ತೆರೆಯಿರಿ.
ಹಂತ:2 ರಿಬ್ಬನ್ ಅಪ್ ಟಾಪ್ ನಲ್ಲಿ, Review ಅನ್ನು ಒತ್ತಿ> protect ಅನ್ನು ಕ್ಲಿಕ್ ಮಾಡಿ> protect ಡಾಕ್ಯುಮೆಂಟ್ ಅನ್ನು ಕ್ಲಿಕ್ ಮಾಡಿ.
ಹಂತ:3 ಡಾಕ್ಯುಮೆಂಟ್ ತೆರೆಯಲು ಈಗ ನೀವು ಬಯಸಿದ ಪಾಸ್ವರ್ಡ್ ಅನ್ನು ಸೆಟ್ಮಾಡಿ ಮತ್ತು Ok ಕ್ಲಿಕ್ ಮಾಡಿ. ಮತ್ತೆ ದೃಡೀಕರಿಸಲು ಪಾಸ್ವರ್ಡ್ ಅನ್ನು ರಿ ಎಂಟ್ರಿ ಮಾಡಲು ಕೇಳಲಾಗುತ್ತದೆ. ನಂತರ ರೀ ಎಂಟ್ರಿ ಮಾಡಿದರೆ ನಿಮ್ಮ ಡಾಕ್ಯುಮೆಂಟ್ ಪಾಸ್ವರ್ಡ್ ಪ್ರೊಟೆಕ್ಷನ್ ಅನ್ನು ಪಡೆದುಕೊಳ್ಳಲಿದೆ.
ಹಂತ:4 ಡಾಕ್ಯುಮೆಂಟ್ ಅನ್ನು ಮಾರ್ಪಡಿಸಲು ನೀವು ಪಾಸ್ವರ್ಡ್ ಅನ್ನು ಸಹ ಹೊಂದಿಸಬಹುದು.
ಮೈಕ್ರೋಸಾಫ್ಟ್ ವರ್ಡ್ನಲ್ಲಿ ನಿಮ್ಮ ಡಾಕ್ಯುಮೆಂಟ್ ಅನ್ನು ನೀವು ಈ ರೀತಿ ಎನ್ಕ್ರಿಪ್ಟ್ ಮಾಡಬಹುದು, ಇದರಿಂದಾಗಿ ಯಾರಾದರೂ ನಿಮ್ಮ ಖಾತೆಗೆ ಪ್ರವೇಶಿಸಲು ಪ್ರಯತ್ನಿಸಿದರೆ, ಅವರು ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಸಾಧ್ಯವಾಗುವುದಿಲ್ಲ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190