Just In
Don't Miss
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗೂಗಲ್ ಕ್ರೋಮ್ ವೆಬ್ ಪೇಜ್ನಲ್ಲಿ ಸ್ಕ್ರೀನ್ಶಾಟ್ ತೆಗೆದುಕೊಳ್ಳುವುದು ಹೇಗೆ?
ಗೂಗಲ್ ಕ್ರೋಮ್ ಬಳಕೆದಾರರ ನೆಚ್ಚಿನ ವೆಬ್ ಬ್ರೌಸರ್ ಎನಿಸಿಕೊಂಡಿದೆ. ಇನ್ನು ಗೂಗಲ್ ಕ್ರೋಮ್ನಲ್ಲಿ ಹಲವು ಫೀಚರ್ಸ್ಗಳನ್ನು ಪರಿಚಯಿಸಲಾಗಿದ್ದು, ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಇನ್ನು ಕಳೆದ ವರ್ಷ, ಗೂಗಲ್ ಆಂಡ್ರಾಯ್ಡ್ಗಾಗಿ ಕ್ರೋಮ್ನಲ್ಲಿ ಶೇರ್ ಮೆನುವನ್ನು ಪರಿಷ್ಕರಿಸಲಾಗಿತ್ತು. ಇದೀಗ ಹೊಸ ಕ್ರೋಮ್ 91 ಬಿಡುಗಡೆಯೊಂದಿಗೆ, ಕಂಪನಿಯು ಶೇರ್ ಮೆನುವಿನಲ್ಲಿ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ, ಇದು ಬಳಕೆದಾರರಿಗೆ ವೆಬ್ಪೇಜ್ನ ಸ್ಕ್ರೀನ್ಶಾಟ್ಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಹೌದು, ಗೂಗಲ್ ಕ್ರೋಮ್ನಲ್ಲಿ ಹೊಸ ಫೀಚರ್ಸ್ ಅನ್ನು ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಕ್ರೋಮ್ನಲ್ಲಿ ವೆಬ್ಪೇಜ್ ಅನ್ನು ಸ್ಕ್ರೀನ್ಶಾಟ್ ತೆಗೆದುಕೊಳ್ಳಲು ಸಹಾಯ ಮಾಡಲಿದೆ. ಇದರಿಂದ ವೆಬ್ಪೇಜ್ ಸ್ಕ್ರೀನ್ಶಾಟ್ ತೆಗೆದುಕೊಳ್ಳಲು ಬಯಸುವವರು ಶೇರ್ ಮೆನುವಿನ ಮೂಲಕವೇ ಸ್ಕ್ರೀನ್ ಶಾಟ್ ತೆಗೆಯಬಹುದು. ಹಾಗಾದ್ರೆ ಗೂಗಲ್ ಕ್ರೋಮ್ ನಲ್ಲಿ ವೆಬ್ಪೇಜ್ ಅನ್ನು ಸ್ಕ್ರೀನ್ ಶಾಟ್ ತೆಗೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಕ್ರೋಮ್ ಬಳಕೆದಾರರಿಗೆ ವೆಬ್ಪೇಜ್ನಲ್ಲಿ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಆಯ್ಕೆಯನ್ನು ನೀಡಿದೆ. ಇನ್ನು ಈ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ಅಪ್ಲಿಕೇಶನ್ ಮೇಲಿನ ವೆಬ್ಬಾರ್ ಸೇರಿದಂತೆ ಸಂಪೂರ್ಣ ವೆಬ್ಪುಟದ ಸ್ಕ್ರೀನ್ಶಾಟ್ ತೆಗೆದುಕೊಳ್ಳುತ್ತದೆ. ಅಪ್ಲಿಕೇಶನ್ ನಂತರ ಪರದೆಯ ಕೆಳಭಾಗದಲ್ಲಿ ಕ್ರಾಪ್, ಟೆಕ್ಸ್ಟ್ ಮತ್ತು ಡ್ರಾ ಎಂಬ ಮೂರು ಆಯ್ಕೆಗಳನ್ನು ತೋರಿಸುತ್ತದೆ.

ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಗೂಗಲ್ ಕ್ರೋಮ್ ವೆಬ್ ಪೇಜ್ನಲ್ಲಿ ಸ್ಕ್ರೀನ್ಶಾಟ್ ತೆಗೆದುಕೊಳ್ಳುವುದು ಹೇಗೆ?
ಹಂತ 1: ನಿಮ್ಮ Android ಸ್ಮಾರ್ಟ್ಫೋನ್ನಲ್ಲಿ Chrome ವೆಬ್ ಬ್ರೌಸರ್ ತೆರೆಯಿರಿ ಮತ್ತು ನೀವು ಸ್ಕ್ರೀನ್ಶಾಟ್ ತೆಗೆದುಕೊಳ್ಳಲು ಬಯಸುವ ವೆಬ್ಪುಟಕ್ಕೆ ಹೋಗಿ.
ಹಂತ 2: ಪುಟ ತೆರೆದಾಗ, ಪರದೆಯ ಮೇಲೆ ಅಥವಾ ಅಡ್ರೆಸ್ ಬಾರ್ ಎಲ್ಲಿಯಾದರೂ ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ ಮತ್ತು ನಂತರ ಶೇರ್ ಮೆನು ತೆರೆಯಲಿದೆ, ಶೇರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ 3: ಶೇರ್ ಮೆನುವಿನಲ್ಲಿ, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳ ಪಟ್ಟಿಯ ಕೆಳಗೆ, ಮೆನುವಿನ ಎರಡನೇ ಸಾಲಿನಲ್ಲಿ "ಸ್ಕ್ರೀನ್ಶಾಟ್" ಆಯ್ಕೆಯನ್ನು ನೀವು ನೋಡುತ್ತೀರಿ.

ಹಂತ 4: ಕ್ರಾಪ್, ಟೆಕ್ಸ್ಟ್ ಮತ್ತು ಡ್ರಾ ಎಂಬ ಮೂರು ಆಯ್ಕೆಗಳನ್ನು ಹೊಂದಿರುವ ಸ್ಕ್ರೀನ್ ಕಾಣಲಿದೆ. ನಿಮಗೆ ಅಗತ್ಯವಿದ್ದರೆ ಅವುಗಳಲ್ಲಿ ಯಾವುದನ್ನಾದರೂ ನೀವು ಆಯ್ಕೆ ಮಾಡಬಹುದು. ಇಲ್ಲದಿದ್ದರೆ, ಮೇಲಿನ ಬಲ ಮೂಲೆಯಲ್ಲಿರುವ "ನೆಕ್ಸ್ಟ್" ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 5: ಈಗ, ಸ್ಕ್ರೀನ್ಶಾಟ್ ಶೇರ್ ಮಾಡಲು ಡಿವೈಸ್ನಲ್ಲಿ ಸೇವ್ ಮಾಡಿರಿ. ನಿಮ್ಮ ಫೋನ್ನಲ್ಲಿ ಸ್ಕ್ರೀನ್ಶಾಟ್ ಉಳಿಸಲು "ಸೇವ್ ಒನ್ಲಿ ಡಿವೈಸ್" ಆಯ್ಕೆಯನ್ನು ಆರಿಸಿ.
ವೆಬ್ಪುಟದ ಸ್ಕ್ರೀನ್ಶಾಟ್ ಅನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸಾಧನಕ್ಕೆ ಉಳಿಸಲು ನೀವು ಆರಿಸಿದರೆ ಅದನ್ನು ಸಂಗ್ರಹಿಸಲಾಗುತ್ತದೆ. ಅದನ್ನು ಉಳಿಸಿದ ನಂತರ, ನೀವು ಅದನ್ನು ಹಂಚಿಕೆ ಮೆನುವನ್ನು ಇತರರೊಂದಿಗೆ ಹಂಚಿಕೊಳ್ಳಲು ಸಹ ಬಳಸಬಹುದು.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999