ಲಾಕ್‌ ಆಗಿರುವ ನಿಮ್ಮ ಟ್ವಿಟರ್‌ ಖಾತೆಯನ್ನು ಅನ್‌ಲಾಕ್ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ವಿಟರ್‌ ಕೂಡ ಒಂದೆನಿಸಿಕೊಂಡಿದೆ. ದೇಶದ ಪ್ರಧಾನಿಯಿಂದ ಹಿಡಿದು ರಾಜಕೀಯ, ಸಿನಿಮಾ, ಎಲ್ಲಾ ಕ್ಷೇತ್ರದ ಗಣ್ಯರು ಕೂಡ ತಮ್ಮ ವಿಷಯಗಳನ್ನು ಟ್ವಿಟರ್‌ ಮೂಲಕ ಶೇರ್‌ ಮಾಡುವುದು ಸಾಮಾನ್ಯವಾಗಿದೆ. ಆದರೆ ಇದಕ್ಕಿದಂತೆ ನಿಮ್ಮ ಟ್ವಿಟರ್‌ ಖಾತೆ ಲಾಕ್‌ ಆಗಿ ಹೋದರೆ ಏನು ಮಾಡೋದು. ನಿಮ್ಮ ಟ್ವಿಟರ್‌ ಖಾತೆಯನ್ನು ಲಾಗ್‌ ಇನ್‌ ಮಾಡಿದಾಗ ಭದ್ರತಾ ಉದ್ದೇಶಗಳಿಗಾಗಿ ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ ಎನ್ನುವ ಸಂದೇಶ ಕಾಣಲಿದೆ. ಅಂದರೆ ನಿಮ್ಮ ಖಾತೆಯಲ್ಲಿ ಅನುಮಾನಾಸ್ಪದ ನಡವಳಿಕೆಯನ್ನು ಪತ್ತೆಹಚ್ಚಲಾಗಿದೆ ಎಂದರ್ಥ.

ಟ್ವಿಟರ್‌

ಹೌದು, ಟ್ವಿಟರ್‌ ಖಾತೆ ಲಾಕ್‌ ಆಗಿ ಹೋದರೆ ನಿಮ್ಮ ಖಾತೆಯಲ್ಲಿ ಅನುಮಾನಸ್ಪದ ನಡವಳಿಕೆ ಕಂಡು ಬಂದಿದೆ ಎಂದರ್ಥ. ಇಂತಹ ಸನ್ನಿವೇಶದಲ್ಲಿ ನೀವು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಬದಲಾಗಿ ಟ್ವಿಟರ್‌ಗೆ ನೀವು ಒದಗಿಸಿದ ಮಾಹಿತಿಯ ಪ್ರಕಾರ, ನಿಮ್ಮ ಖಾತೆಯನ್ನು ಅನ್‌ಲಾಕ್ ಮಾಡಲು, ನಿಮ್ಮ ಪಾಸ್‌ವರ್ಡ್ ಅನ್ನು ಬದಲಾವಣೆ ಮಾಡುವ ಮೂಲಕ ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಬಹುದು. ನಿಮ್ಮ ಖಾತೆಗೆ ಸಂಬಂಧಿಸಿದ ಇಮೇಲ್ ವಿಳಾಸವನ್ನು ನೀವು ಹೊಂದಿದ್ದರೆ, ಟ್ವಿಟರ್‌ ಕೆಲವೊಂದು ಸೂಚನೆಗಳನ್ನು ಟ್ವಿಟರ್‌ಗೆ ಕಳುಹಿಸಲಿದೆ. ಹಾಗಾದ್ರೆ ನಿಮ್ಮ ಟ್ವಿಟರ್‌ ಖಾತೆ ಲಾಕ್‌ ಆದ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಕ್ರಮಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಿಮ್ಮ ಟ್ವಿಟರ್‌ ಖಾತೆಯನ್ನು ಅನ್‌ಲಾಕ್ ಮಾಡುವುದು ಹೇಗೆ?

ನಿಮ್ಮ ಟ್ವಿಟರ್‌ ಖಾತೆಯನ್ನು ಅನ್‌ಲಾಕ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
ಹಂತ:2 ನಂತರ ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ ಎಂದು ನಿಮಗೆ ತಿಳಿಸುವ ಸಂದೇಶ ಕಾಣಿಸಲಿದೆ
ಹಂತ:3 ಇದರಲ್ಲಿ ನೀವು ಸ್ಟಾರ್ಟ್‌ ಕ್ಲಿಕ್ ಮಾಡಿ.
ಹಂತ:4 ನಂತರ ನೀವು ನಿಮ್ಮ ಫೋನ್ ಸಂಖ್ಯೆಯನ್ನು ಎಂಟ್ರಿ ಮಾಡಿ. ನಿಮ್ಮ ಖಾತೆಯೊಂದಿಗೆ ಸಂಯೋಜಿಸಲಾದ ಫೋನ್‌ ಸಂಖ್ಯೆಯನ್ನು ಮಾತ್ರ ಎಂಟ್ರಿ ಮಾಡಬೇಕು.
ಹಂತ:5 ನಂತರ Twitter ನಿಮಗೆ ಪರಿಶೀಲನಾ ಕೋಡ್‌ನೊಂದಿಗೆ ಫೋನ್ ಕರೆ ಬರಲಿದೆ. ನಂತರ ನಿಮ್ಮ ಪರಿಶೀಲನೆ ಕೋಡ್ ಅನ್ನು ನಮೂದಿಸಿದರೆ, ನಿಮ್ಮ ಖಾತೆಯನ್ನು ಅನ್‌ಲಾಕ್ ಮಾಡಲು ಸಬ್ಮಿಟ್‌ ಕ್ಲಿಕ್ ಮಾಡಿ.

ಟ್ವಿಟರ್‌

ನಿಮ್ಮ ಟ್ವಿಟರ್‌ ಖಾತೆಯು ಲಾಕ್‌ ಆದ ಸಂದರ್ಭದಲ್ಲಿ ನಿಮ್ಮ ಅನುಯಾಯಿಗಳಿಗೆ ಮಾತ್ರ ನೀವು ನೇರ ಸಂದೇಶಗಳನ್ನು ಕಳುಹಿಸಬಹುದು. ನೀವು ಟ್ವೀಟ್ ಮಾಡುವುದು, ಮರುಟ್ವೀಟ್ ಮಾಡುವುದು ಅಥವಾ ಇಷ್ಟಪಡುವಂತಹ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಹಿಂದಿನ ಟ್ವೀಟ್‌ಗಳನ್ನು ನಿಮ್ಮ ಅನುಯಾಯಿಗಳು ಮಾತ್ರ ನೋಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಇಮೇಲ್ ವಿಳಾಸವನ್ನು ಪರಿಶೀಲಿಸುವುದು, ನಿಮ್ಮ ಖಾತೆಗೆ ಫೋನ್ ಸಂಖ್ಯೆಯನ್ನು ಸೇರಿಸುವುದು ಅಥವಾ ನಿಮ್ಮ ನಿಯಮಗಳನ್ನು ಉಲ್ಲಂಘಿಸುವ ಟ್ವೀಟ್‌ಗಳನ್ನು ಡಿಲೀಟ್‌ ಮಾಡುವುದು ಸೇರಿದಂತೆ ಕೆಲವು ಕ್ರಿಯೆಗಳನ್ನು ಪೂರ್ಣಗೊಳಿಸಲು ಟ್ವಿಟರ್‌ ನಿಮ್ಮನ್ನು ಕೇಳಬಹುದು.

ಟ್ವಿಟರ್‌

ಇದಲ್ಲದೆ ಇತ್ತೀಚಿಗೆ ಟ್ವಿಟರ್‌ ತನ್ನ ಬಳಕೆದಾರರಿಗೆ ಚಂದಾದರಿಕೆ ಸೇವೆ ನೀಡುವ ಟ್ವಿಟರ್‌ ಬ್ಲೂ ಪರಿಚಯಿಸಿದೆ. ಈ ಚಂದಾದಾರಿಕೆ ಸೇವೆಯು ಟ್ವೀಟ್‌ಗಳನ್ನು ರದ್ದುಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ಜಾಹೀರಾತುಗಳಿಲ್ಲದೆ ಕೆಲವು ಸುದ್ದಿ ಲೇಖನಗಳನ್ನು ಓದಬಹುದಾದ ಫೀಚರ್ಸ್‌ಗಳ ಸೇರ್ಪಡೆಗೆ ಮುಂದಾಗಿದೆ. ಇದರೊಂದಿಗೆ ಟ್ವಿಟರ್‌ ಬ್ಲೂ ಚಂದಾದಾರಿಕೆ ಮೂಲಕ ತನ್ನ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸಲು ನೋಡುತ್ತಿದೆ. ಈ ಚಂದಾದಾರಿಕೆ ಸೇವೆಯು undo ಬಟನ್ ಸೇರಿದಂತೆ ಹೊಸ ಫೀಚರ್ಸ್‌ಗಳನ್ನು ಸೇರಿಸುತ್ತಿದೆ. ಇದು ಟ್ವೀಟ್‌ಗಳನ್ನು ಕಳುಹಿಸುವ ಮೊದಲು undo ಮಾಡಲು ನಿಮಗೆ ಅನುಮತಿಸಲಿದೆ.

ಟ್ವಿಟರ್‌

ಟ್ವಿಟರ್‌ ಸೇರಿಸಿರುವ undo ಬಟನ್‌ ಚಂದಾದಾರರು ಟ್ವೀಟ್‌ಗಳನ್ನು ಕಳುಹಿಸುವ ಮೊದಲು ಪ್ರಿವ್ಯೂ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ಚಂದಾದಾರರು ರೀಡರ್‌ಗೆ ಪ್ರವೇಶವನ್ನು ನೀಡಲಿದೆ. ಇದು ಲಾಂಗ್‌ ಥ್ರೇಡ್‌ಗಳನ್ನು ಸುಲಭವಾಗಿ ಓದುವುದಕ್ಕೆ ಅನುಮತಿಸಲಿದೆ. ತಮ್ಮ ಅನುಭವವನ್ನು ಇನ್ನಷ್ಟು ಸರಿಹೊಂದಿಸಲು ರೀಡರ್‌ನಲ್ಲಿ ಪಠ್ಯ ಗಾತ್ರವನ್ನು ಬದಲಾಯಿಸಬಹುದು ಎಂದು ಹೇಳಲಾಗಿದೆ. ಅಲ್ಲದೆ ನೀವು ಭಾಗವಹಿಸುವ ವೆಬ್‌ಸೈಟ್‌ಗಳಲ್ಲಿ ಜಾಹೀರಾತು-ಮುಕ್ತ ಲೇಖನಗಳನ್ನು ವೀಕ್ಷಿಸಲು ಜನರಿಗೆ ಅನುಮತಿಸುತ್ತದೆ. ಆ ಸೈಟ್‌ಗಳಿಗೆ ಟ್ವಿಟರ್‌ ಬ್ಲೂ ಚಂದಾದಾರಿಕೆಗಳಿಂದ ಬರುವ ಆದಾಯದ ಒಂದು ಭಾಗವನ್ನು ನೀಡಲಿದೆ ಎನ್ನಲಾಗಿದೆ.

Most Read Articles
Best Mobiles in India

English summary
If your Twitter account has been locked for security purposes, then you can get it unlocked by changing your password. Here are all steps explained.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X