ಹೊಸ ಆಲ್‌-ಇನ್‌-ಒನ್‌ ಪಿಸಿಗಳನ್ನು ಪರಿಚಯಿಸಿದ ಹೆಚ್‌ಪಿ ಕಂಪೆನಿ!..ಬೆಲೆ ಎಷ್ಟು?

|

ಲ್ಯಾಪ್‌ಟಾಪ್‌ ವಲಯದಲ್ಲಿ ಜನಪ್ರಿಯತೆ ಸಾಧಿಸಿರುವ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಹೆಚ್‌ಪಿ ಕಂಪೆನಿ ಒಂದಾಗಿದೆ. ಹೆಚ್‌ಪಿ ಕಂಪೆನಿಯ ಲ್ಯಾಪ್‌ಟಾಪ್‌ಗಳು ಬಳಕೆದಾರರ ಅಚ್ಚುಮೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಹೆಚ್‌ಪಿ ಕಂಪೆನಿ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ತನ್ನ ಹೊಸ ಶ್ರೇಣಿಯ ಆಲ್‌ ಇನ್‌ ಒನ್‌ ಪಿಸಿ(PC)ಗಳನ್ನು ಬಿಡುಗಡೆ ಮಾಡಿದೆ. ಇದು PC ಮತ್ತು TV ​​ಗುಣಲಕ್ಷಣಗಳನ್ನು ಒಳಗೊಂಡಿದೆ.

ಹೆಚ್‌ಪಿ

ಹೌದು, ಹೆಚ್‌ಪಿ ಕಂಪೆನಿ ಭಾರತದಲ್ಲಿ ಹೊಸ ಶ್ರೇಣಿಯ ಆಲ್-ಇನ್-ಒನ್ PC ಗಳನ್ನು ಪರಿಚಯಿಸಿದೆ. ಈ ಹೊಸ ಪ್ರಾಡಕ್ಟ್‌ ಲೈನ್‌ ಅನ್ನು ಹೈಬ್ರಿಡ್ ವರ್ಕ್‌ಸ್ಪೇಸ್‌ಗಾಗಿ ಬಿಲ್ಡ್‌ ಮಾಡಲಾಗಿದೆ ಎಂದು ಹೆಚ್‌ಪಿ ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಹೊಸ ಆಲ್-ಇನ್-ಒನ್ PC ಗಳನ್ನು HP ENVY 34-ಇಂಚು ಮತ್ತು ಪೆವಿಲಿಯನ್ 31.5 ಇಂಚು ಎಂದು ಹೆಸರಿಸಲಾಗಿದೆ. ಈ ಪಿಸಿಗಳು ಇಂಟೆಲ್‌ 11th Gen ಮತ್ತು 12th Gen ಪ್ರೊಸೆಸರ್‌ಗಳಿಂದ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಈ ಎರಡು ಆಲ್‌ ಇನ್‌ ಒನ್‌ ಪಿಸಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೆಚ್‌ಪಿ ENVY 34-ಇಂಚಿನ ಆಲ್-ಇನ್-ಒನ್

ಹೆಚ್‌ಪಿ ENVY 34-ಇಂಚಿನ ಆಲ್-ಇನ್-ಒನ್

ಹೆಚ್‌ಪಿ ENVY 34-ಇಂಚಿನ ಆಲ್-ಇನ್-ಒನ್ ಪಿಸಿ 34 ಇಂಚಿನ ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು TUV- ಪ್ರಮಾಣೀಕೃತ ಡಿಸ್‌ಪ್ಲೇಯಾಗಿದ್ದು, 5K ಡಿಸ್‌ಪ್ಲೇ ಆಗಿದೆ. ಇನ್ನು ಈ ಡಿಸ್‌ಪ್ಲೇ 21:9ರಚನೆಯ ಅನುಪಾತವನ್ನು ಹೊಂದಿದೆ. ಈ ಮಾನಿಟರ್‌ನಲ್ಲಿ ಡಿಟ್ಯಾಚೇಬಲ್, ಮ್ಯಾಗ್ನೆಟಿಕ್ ಮೂವಿಬಲ್ ಕ್ಯಾಮೆರಾವನ್ನು ಒಳಗೊಂಡಿದ್ದು, ಅತ್ಯುತ್ತಮ ವೀಕ್ಷಣೆಗಳಿಗಾಗಿ ಮಲ್ಟಿ ಪೊಸಿಷನ್ಸ್‌ ಬದಲಾಯಿಸುವುದಕ್ಕೆ ಅವಕಾಶ ನೀಡಲಿದೆ.

ಮಾನಿಟರ್

ಇದಲ್ಲದೆ ಈ ಮಾನಿಟರ್ ಹೊಂದಾಣಿಕೆ ಮಾಡಬಹುದಾದ ಬ್ಲೂ ಲೈಟ್‌ ಲೋ ಫಿಲ್ಟರ್‌ ಅನ್ನು ಒಳಗೊಂಡಿದೆ. ಈ ಪಿಸಿಯು 11 ನೇ ತಲೆಮಾರಿನ 8-ಕೋರ್ ಇಂಟೆಲ್‌ ಕೋರ್‌ i9 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಎನ್‌ವಿಡಿಯಾ ಜಿಪೋರ್ಸ್‌ RTX 3060 ಗ್ರಾಫಿಕ್ಸ್‌ ಕಾರ್ಡ್‌ ಅನ್ನು ಒಳಗೊಂಡಿದೆ. ಈ ಮಾನಿಟರ್‌ನಲ್ಲಿ ನೀವು ಬಿನ್ನಿಂಗ್ ಟೆಕ್ನಾಲಜಿಯನ್ನು ಹೊಂದಿರುವ 16MP ಕ್ಯಾಮೆರಾವನ್ನು ಕಾಣಬಹುದು. ಅಲ್ಲದೆ ಇದು HP ಕ್ವಿಕ್ ಡ್ರಾಪ್, ಅಮೆಜಾನ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್, HP ವರ್ಧಿತ ಲೈಟಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಹೆಚ್‌ಪಿ ಪೆವಿಲಿಯನ್ 31.5-ಇಂಚಿನ ಆಲ್-ಇನ್-ಒನ್

ಹೆಚ್‌ಪಿ ಪೆವಿಲಿಯನ್ 31.5-ಇಂಚಿನ ಆಲ್-ಇನ್-ಒನ್

ಹೆಚ್‌ಪಿ ಪೆವಿಲಿಯನ್ 31.5-ಇಂಚಿನ ಆಲ್-ಇನ್-ಒನ್ ಪಿಸಿ 31.5-ಇಂಚಿನ UHD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ HDR 400, DCI-P3 98% ಮತ್ತು QHD/sRGB 99% ಹೊಂದಿದೆ. ಈ ಮಾನಿಟರ್ HP ಐಸೇಫ್‌ ಪ್ರಮಾಣೀಕೃತ ಸ್ಕ್ರೀನ್‌ ಹೊಂದಿದೆ. ಅಲ್ಲದೆ ಫ್ಲಿಕರ್-ಫ್ರೀ TUV ಪ್ರಮಾಣೀಕೃತ ಆಂಟಿ-ಗ್ಲೇರ್ ಪ್ಯಾನೆಲ್ ಅನ್ನು ಇದು ಒಳಗೊಂಡಿದೆ. ಇನ್ನು ಈ ಪಿಸಿ 12 ನೇ ತಲೆಮಾರಿನ ಇಂಟೆಲ್‌ i5 ಮತ್ತು i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮಲ್ಟಿ HDMI ಪೋರ್ಟ್‌ ಮತ್ತು B&O ಮೂಲಕ ಆಡಿಯೋವನ್ನು ಪಡೆದುಕೊಳ್ಳಬಹುದಾಗಿದೆ.

ಹೆಚ್‌ಪಿ

ಇನ್ನು ಹೆಚ್‌ಪಿ ಇಂಡಿಯಾದ ಪರ್ಸನಲ್ ಸಿಸ್ಟಮ್ಸ್‌ನ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಹೊಸ ಆಲ್‌ ಇನ್‌ ಒನ್‌ ಪಿಸಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. HP ಯಾವಾಗಲೂ ಗ್ರಾಹಕರ ಒಳನೋಟಗಳ ಆಧಾರದ ಮೇಲೆ ಹೊಸ ಪ್ರಾಡಕ್ಟ್‌ಗಳನ್ನು ಬಿಲ್ಡ್‌ ಮಾಡಲು ಬಯಸುತ್ತದೆ. ಗ್ರಾಹಕರ ಲೈಪ್‌ಸ್ಟೈಲ್‌ಗೆ ತಕ್ಕಂತೆ ಅಗತ್ಯವಿರುವ ಅತ್ಯುತ್ತಮ ಅನುಭವಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ ಎಂದಿದ್ದಾರೆ. ನಮ್ಮ ಈ ಹೊಸ ಆಲ್-ಇನ್-ಒನ್ ಡೆಸ್ಕ್‌ಟಾಪ್‌ಗಳು ಇಂದಿನ ಆಧುನಿಕ ಕ್ರಿಯೆಟರ್ಸ್‌ಗಳಿಗೆ ಸೂಕ್ತವಾಗಿದೆ. ಅಲ್ಲದೆ ಮಲ್ಟಿ ಡಿವೈಸ್‌ಗಳ ಅಗತ್ಯವಿಲ್ಲ ವರ್ಕ್‌, ಎಂಟರ್‌ಟೈನ್‌ಮೆಂಟ್‌ ಮತ್ತು ಗೇಮ್‌ಗಳನ್ನು ಕೂಡ ಬೆಂಬಲಿಸಲಿದೆ ಎಂದಿದ್ದಾರೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೆಚ್‌ಪಿ ಕಂಪೆನಿಯ HP ENVY 34-ಇಂಚಿನ ಆಲ್-ಇನ್-ಒನ್ ಡೆಸ್ಕ್‌ಟಾಪ್ ಪಿಸಿ ಭಾರತದಲ್ಲಿ 1,75,999ರೂ. ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಟರ್ಬೊ ಸಿಲ್ವರ್ ಬಣ್ಣದ ರೂಪಾಂತರದಲ್ಲಿ ಲಭ್ಯವಾಗಲಿದೆ.
ಇನ್ನು ಹೆಚ್‌ಪಿ ಪೆವಿಲಿಯನ್ 31.5-ಇಂಚಿನ ಆಲ್-ಇನ್-ಒನ್ ಡೆಸ್ಕ್‌ಟಾಪ್ ಪಿಸಿ 99,999ರೂ. ಆರಂಭಿಕ ಬೆಲೆಯಲ್ಲಿ ಬರಲಿದ್ದು, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕಲರ್ ವೇರಿಯಂಟ್‌ನಲ್ಲಿ ಲಭ್ಯವಾಗಲಿದೆ.

Best Mobiles in India

Read more about:
English summary
HP has launched a new range of all-in-one PCs that will have both PC and TV attributes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X