ಹೆಚ್‌ಪಿ ಸಂಸ್ಥೆಯಿಂದ ಮೂರು ಹೊಸ ಲ್ಯಾಪ್‌ಟಾಪ್‌ ಬಿಡುಗಡೆ! ವಿಶೇಷತೆ ಏನು?

|

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕರಲ್ಲಿ ಹೆಚ್‌ಪಿ ಕಂಪೆನಿ ಕೂಡ ಒಂದಾಗಿದೆ. ಈಗಾಗಲೇ ಹಲವು ಆಕರ್ಷಕ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹೆಚ್‌ಪಿ ಕಂಪೆನಿ ಭಾರತದಲ್ಲಿ ಮೂರು ಹೊಸ ಪೆವಿಲಿಯನ್ ಸರಣಿ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್‌ಪಿ ಪೆವಿಲಿಯನ್ 13, ಹೆಚ್‌ಪಿ ಪೆವಿಲಿಯನ್ 14 ಮತ್ತು ಹೆಚ್‌ಪಿ ಪೆವಿಲಿಯನ್ 15 ಲ್ಯಾಪ್‌ಟಾಪ್‌ ಎಂದು ಹೆಸರಿಸಲಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಇಂಟೆಲ್ ಕ್ಸೆ ಗ್ರಾಫಿಕ್ಸ್‌ನೊಂದಿಗೆ ಜೋಡಿಸಲಾದ 11 ನೇ-ಜನರಲ್ ಇಂಟೆಲ್ ಕೋರ್ ಪ್ರೊಸೆಸರ್‌ ಅನ್ನು ಹೊಂದಿವೆ.

ಹೆಚ್‌ಪಿ ಕಂಪೆನಿ

ಹೌದು, ಹೆಚ್‌ಪಿ ಕಂಪೆನಿ ಮೂರು ಹೊಸ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಪೋಸ್ಟ್-ಕನ್ಸೂಮರ್-ರಿಸೈಕಲ್ಡ್‌ ಅಂಡ್ ಓಷನ್-ಬೌಂಡ್ ಪ್ಲಾಸ್ಟಿಕ್ ಇನ್ ದಿ ಕನ್ಸ್ಟ್ರಕ್ಷನ್ ಆಫ್‌ ದಿ ಸ್ಪೀಕರ್ ಹೌಸಿಂಗ್ ಹೊಂದಿರುವ ಗ್ರಾಹಕ ನೋಟ್‌ಬುಕ್ ಶ್ರೇಣಿ ಇದಾಗಿದೆ ಎಂದು ಕಂಪನಿ ಹೇಳಿದೆ. ಈ ಲ್ಯಾಪ್‌ಟಾಪ್‌ಗಳು ಇಪಿಎಟಿ ಸಿಲ್ವರ್ ನೋಂದಾಯಿತ ಮತ್ತು ಎನರ್ಜಿ ಸ್ಟಾರ್ ಪ್ರಮಾಣೀಕರಣವನ್ನು ಹೊಂದಿವೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೆಚ್‌ಪಿ ಪೆವಿಲಿಯನ್ 13

ಹೆಚ್‌ಪಿ ಪೆವಿಲಿಯನ್ 13

ಹೆಚ್‌ಪಿ ಪೆವಿಲಿಯನ್ 13 ಲ್ಯಾಪ್‌ಟಾಪ್‌ 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 13.3-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 250 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಇಂಟೆಲ್‌ ಕೋರ್‌ ಐ5 11ನೇ ತಲೆಮಾರಿನ ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್ ಅನ್ನು ಹೊಂದಿದೆ. ಈ ಲ್ಯಾಪ್ಟಾಪ್ ಇಂಟೆಲ್ ಐರಿಸ್ ಎಕ್ಸ್ ಗ್ರಾಫಿಕ್ಸ್ ಅನ್ನು ಸಂಯೋಜಿಸುತ್ತದೆ. ಇನ್ನು ಹೆಚ್‌ಪಿ ಪೆವಿಲಿಯನ್ 13 43Wr ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, 65W ಪವರ್ ಅಡಾಪ್ಟರ್ ಹೊಂದಿದೆ. ಈ ಬ್ಯಾಟರಿ 8.5 ಗಂಟೆಗಳವರೆಗೆ ಇರುತ್ತದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ ಎಸಿ ಮತ್ತು ಬ್ಲೂಟೂತ್ 5 ಅನ್ನು ಬೆಂಬಲಿಸಲಿದೆ.

ಹೆಚ್‌ಪಿ ಪೆವಿಲಿಯನ್ 14 ಮತ್ತು ಹೆಚ್‌ಪಿ ಪೆವಿಲಿಯನ್‌ 15

ಹೆಚ್‌ಪಿ ಪೆವಿಲಿಯನ್ 14 ಮತ್ತು ಹೆಚ್‌ಪಿ ಪೆವಿಲಿಯನ್‌ 15

ಹೆಚ್‌ಪಿ ಪೆವಿಲಿಯನ್‌ 14 ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌-ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. 250 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಇನ್ನು ಹೆಚ್‌ಪಿ ಪೆವಿಲಿಯನ್ 15 ಲ್ಯಾಪ್‌ಟಾಪ್‌ 15.6 ಫುಲ್‌-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಹೆಚ್‌ಪಿ ಪೆವಿಲಿಯನ್ 14 ಮತ್ತು ಹೆಚ್‌ಪಿ ಪೆವಿಲಿಯನ್ 15 ಎರಡರಲ್ಲೂ ಬ್ಯಾಟರಿ 8.75 ಗಂಟೆಗಳವರೆಗೆ ಇರುತ್ತದೆ ಎಂದು ಹೇಳಲಾಗಿದೆ. ಹೆಚ್‌ಪಿ ಪೆವಿಲಿಯನ್ 14 ಮತ್ತು ಹೆಚ್‌ಪಿ ಪೆವಿಲಿಯನ್ 15 ಎನ್‌ವಿಡಿಯಾ ಜೀಫೋರ್ಸ್ ಎಂಎಕ್ಸ್ 450 ಗ್ರಾಫಿಕ್ಸ್‌ನೊಂದಿಗೆ ಬರುತ್ತವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೆಚ್‌ಪಿ ಪೆವಿಲಿಯನ್ 13 ಲ್ಯಾಪ್‌ಟಾಪ್‌ ಭಾರತದಲ್ಲಿ 71,999 ರೂ. ಬೆಲೆ ಹೊಂದಿದೆ. ಇದು ಸೆರಾಮಿಕ್ ವೈಟ್ ಮತ್ತು ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಹೆಚ್‌ಪಿ ಪೆವಿಲಿಯನ್ 14 ಬೆಲೆ 62,999, ರೂ ಆಗಿದ್ದು, ಇದು ಸಿಲ್ವರ್, ಸೆರಾಮಿಕ್ ವೈಟ್ ಮತ್ತು ಟ್ರ್ಯಾಂಕ್ವಿಲ್ ಪಿಂಕ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಅಲ್ಲದೆ ಐರಿಸ್ ಪ್ಲಸ್ ಗ್ರಾಫಿಕ್ಸ್‌ನೊಂದಿಗೆ ಕೋರ್ ಐ 5 ಎಚ್‌ಪಿ ಪೆವಿಲಿಯನ್ 14 ಮಾದರಿಯೂ ರೂ. 67,999 ರೂ ಬೆಲೆ ಹೊಂದಿದೆ. ಈ ಮಾದರಿಯು ಸಿಲ್ವರ್ ಕಲರ್ ಆಯ್ಕೆಯಲ್ಲಿ ಮಾತ್ರ ಬರುತ್ತದೆ. ಇನ್ನು ಹೆಚ್‌ಪಿ ಪೆವಿಲಿಯನ್ 15 ಲ್ಯಾಪ್‌ಟಾಪ್‌ ಬೆಲೆ ರೂ. 69,999 ಆಗಿದ್ದು, ಇದು ಸೆರಾಮಿಕ್ ವೈಟ್, ಫಾಗ್ ಬ್ಲೂ ಮತ್ತು ಸಿಲ್ವರ್ ಕಲರ್ ಆಯ್ಕೆಗಳಲ್ಲಿ ಬರುತ್ತದೆ.

Most Read Articles
Best Mobiles in India

English summary
HP Pavilion 13, Pavilion 14, Pavilion 15 Laptops Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X