ಹೆಚ್‌ಪಿ ಕಂಪೆನಿಯಿಂದ ಹೊಸ ಮಾದರಿಯ ಗೇಮಿಂಗ್‌ ಲ್ಯಾಪ್‌ಟಾಪ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ಸಾಕಷ್ಟು ವೈವಿದ್ಯಮಯವಾದ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಪರ್ಸ್‌ನಲ್‌ ಯೂಸ್‌ಗೆ ಮಾತ್ರವಲ್ಲದೆ ಗೇಮಿಂಗ್‌ ಟೆಕ್ನಾಲಜಿಯನ್ನು ಬೆಂಬಲಿಸುವ ಲ್ಯಾಪ್‌ಟಾಪ್‌ಗಳು ಕೂಡ ಲಭ್ಯವಿವೆ. ಇನ್ನು ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿವಿಧ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿವೆ. ಇವುಗಳಲ್ಲಿ ಎಚ್‌ಪಿ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ಎಚ್‌ಪಿ ಕಂಪೆನಿ ಎಚ್‌ಪಿ ಒಮೆನ್ 15 ಮತ್ತು ಎಚ್‌ಪಿ ಪೆವಿಲಿಯನ್ ಗೇಮಿಂಗ್ 16 ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಲ್ಯಾಪ್‌ಟಾಪ್

ಹೌದು, ತನ್ನ ವೈವಿದ್ಯಮಯ ಲ್ಯಾಪ್‌ಟಾಪ್‌ಗಳಿಂದಲೇ ಜನಪ್ರಿಯತೆ ಗಳಿಸಿರುವ ಎಚ್‌ಪಿ ಕಂಪೆನಿ ಇದೀಗ ತನ್ನ ಎಚ್‌ಪಿ ಒಮೆನ್ 15 ಮತ್ತು ಎಚ್‌ಪಿ ಪೆವಿಲಿಯನ್ ಗೇಮಿಂಗ್ 16 ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನ ಬಿಡುಗಡೆ ಮಾಡಿದೆ. ಹಾಗೇ ನೊಡಿದ್ರೆ ಈ ಎರಡು ಲ್ಯಾಪ್‌ಟಾಪ್‌ಗಳನ್ನು ಜೂನ್‌ನಲ್ಲಿಯೇ ಬಿಡುಗಡೆ ಮಾಡಲಾಗಿತ್ತು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಈಗ ಬಿಡುಗಡೆ ಮಾಡಲಾಗಿದೆ. ಇನ್ನು ಎಚ್‌ಪಿ ಒಮೆನ್ 15 ರಿಫ್ರೆಶ್ ಆವೃತ್ತಿ ಆಗಿದ್ದು, ಎಚ್‌ಪಿ ಪೆವಿಲಿಯನ್ ಗೇಮಿಂಗ್ 16HP ಮೊದಲ 16 ಇಂಚಿನ ಗೇಮಿಂಗ್ ಲ್ಯಾಪ್‌ಟಾಪ್ ಆಗಿದೆ ಮತ್ತು ಈ ಎರಡೂ ಮಾದರಿಗಳು ಇಂಟೆಲ್ ಮತ್ತು ಎಎಮ್‌ಡಿ ಸಿಪಿಯು ಆಯ್ಕೆಗಳೊಂದಿಗೆ ಲಭ್ಯವಿದೆ. ಹಾಗಾದ್ರೆ ಈ ಲ್ಯಾಪ್‌ಟಾಪ್‌ ಏನೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

HP ಒಮೆನ್ 15 ಲ್ಯಾಪ್‌ಟಾಪ್‌

HP ಒಮೆನ್ 15 ಲ್ಯಾಪ್‌ಟಾಪ್‌

HP ಒಮೆನ್ 15 ಲ್ಯಾಪ್‌ಟಾಪ್‌ 3,840x2,160 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು ಹೊಸ 180 ಡಿಗ್ರಿ ಫ್ಲಾಟ್ ಹಿಂಜ್ ವಿನ್ಯಾಸವನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ 4K UHD ಅಮೋಲೆಡ್ ಡಿಸ್‌ಪ್ಲೇ ಅಥವಾ 300 Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಎನ್‌ವಿಡಿಯಾ ಜಿ-ಸಿಂಕ್ ಟೆಕ್ನಾಲಜಿಯನ್ನು ಹೊಂದಿರುವ 1,920x1,080 ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯದ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಪಡೆಯಲು ಸಹ ಆಯ್ಕೆಗಳನ್ನು ನೀಡಲಾಗಿದೆ.

ಲ್ಯಾಪ್‌ಟಾಪ್‌

ಇನ್ನು ಈ ಲ್ಯಾಪ್‌ಟಾಪ್‌ 10 ನೇ ತಲೆಮಾರಿನ ಇಂಟೆಲ್ ಕೋರ್ I7 H-ಸರಣಿ CPU ಅಥವಾ AMD ರೈಜೆನ್ 7H-ಸೀರಿಸ್ ಪ್ರೊಸೆಸರ್ ವರೆಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು 32GB RAM ಮತ್ತು ಎನ್ವಿಡಿಯಾ ಜೀಫೋರ್ಸ್ ಆರ್ಟಿಎಕ್ಸ್ 2070 ಸೂಪರ್ ವರೆಗೆ ಮ್ಯಾಕ್ಸ್-ಕ್ಯೂ ಡಿಸೈನ್ ಜಿಪಿಯು ಹೊಂದಿರಲಿದೆ. ಜೊತೆಗೆ ಎಚ್‌ಐಪಿ ಒಮೆನ್15 1TB ವರೆಗಿನ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಐಆರ್ ಥರ್ಮೋಪೈಲ್ ಸೆನ್ಸಾರ್‌ ಹೊಂದಿದ್ದು. ಇದು ಆಂತರಿಕ ತಾಪಮಾನವನ್ನು ಅವಲಂಬಿಸಿ ಫ್ಯಾನ್ ನಿಯಂತ್ರಣವನ್ನು ಕಾಯ್ದುಕೊಳ್ಳುವ ಮೂಲಕ ಉಷ್ಣ ದಕ್ಷತೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಈ ಲ್ಯಾಪ್‌ಟಾಪ್‌ನಲ್ಲಿ ಒಮೆನ್ ಟೆಂಪೆಸ್ಟ್ ಕೂಲಿಂಗ್ ಟೆಕ್ನಾಲಜಿ ಜೊತೆಗೆ 12 ವಿ ಫ್ಯಾನ್, ಮೂರು-ಸೈಡೆಡ್ ವೆಂಟಿಂಗ್, ಜೊತೆಗೆ ಐದು-ವೇ ಗಾಳಿಯ ಹರಿವನ್ನು ಹೊಂದಿದೆ.

ಎಚ್‌ಪಿ ಪೆವಿಲಿಯನ್ ಗೇಮಿಂಗ್ 16

ಎಚ್‌ಪಿ ಪೆವಿಲಿಯನ್ ಗೇಮಿಂಗ್ 16

ಇನ್ನು ಈ ಲ್ಯಾಪ್‌ಟಾಪ್‌ 16 ಇಂಚಿನ ಡಿಸ್‌ಪ್ಲೇ ಮತ್ತು ಮೈಕ್ರೋ ಎಡ್ಜ್ ಬೆಜೆಲ್‌ಹೊಂದಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ ಐ 7 ಪ್ರೊಸೆಸರ್ ಮತ್ತು ಎನ್ವಿಡಿಯಾ ಜೀಫೋರ್ಸ್ ಜಿಟಿಎಕ್ಸ್ 1660 ಟಿ ಜಿಪಿಯು ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಫುಲ್‌ ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ.ಅಲ್ಲದೆ ಇದು ವೈ-ಫೈ 6 ಬೆಂಬಲವನ್ನು ಸಹ ಹೊಂದಿದೆ. ಇನ್ನು ಎಚ್‌ಪಿ ಪೆವಿಲಿಯನ್ ಗೇಮಿಂಗ್ 16 ಎಚ್‌ಪಿ ಒಮೆನ್ 15 ಗಿಂತ ವಿಭಿನ್ನ ಸ್ಕ್ರೀನ್ ಹಿಂಜ್ ವಿನ್ಯಾಸವನ್ನು ಬಳಸುತ್ತದೆ ಮತ್ತು ಪ್ರದರ್ಶನದ ಎರಡೂ ಬದಿಯಲ್ಲಿ ಸ್ಲಿಮ್ ಬೆಜೆಲ್‌ಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಚ್‌ಪಿ ಒಮೆನ್ 15 (2020) ಲ್ಯಾಪ್‌ಟಾಪ್‌ ಬೆಲೆ ಇಂಟೆಲ್‌ ಮಾದರಿಗೆ 79,999 ರೂ ಆಗಿದ್ದು, ಎಎಮ್‌ಡಿ ಮಾದರಿಗೆ 75,999 ರೂ. ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಮೈಕಾ ಸಿಲ್ವರ್ ಮತ್ತು ಶ್ಯಾಡೋ ಬ್ಲ್ಯಾಕ್ ಎಂಬ ಎರಡು ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಎಚ್‌ಪಿ ಪೆವಿಲಿಯನ್ ಗೇಮಿಂಗ್ 16 ಗೇಮಿಂಗ್‌ ಲ್ಯಾಪ್‌ಟಾಪ್‌ ಬೆಲೆ ಇಂಟೆಲ್‌ ಮಾದರಿಗೆ 70,999 ರೂ ಆಗಿದ್ದು, ಎಎಮ್‌ಡಿ ಮಾದರಿಗೆ 59,999 ರೂ. ಆಗಿದೆ.

Most Read Articles
Best Mobiles in India

English summary
HP Omen 15 and HP Pavilion Gaming 16 gaming laptop have been launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X