ಭಾರತದಲ್ಲಿ HP ಪ್ರೊಬುಕ್‌ 635 ಏರೋ G7 ಲ್ಯಾಪ್‌ಟಾಪ್‌ ಅನಾವರಣ! ಬೆಲೆ ಎಷ್ಟು?

|

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಹೆಚ್‌ಪಿ ಕಂಫನಿ ತನ್ನ ಹೊಸ ಹೆಚ್‌ಪಿ ಪ್ರೊಬುಕ್‌ 635 ಏರೋ G7 ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದು ಇಂಟಿಗ್ರೇಟೆಡ್ AMD ರೇಡಿಯನ್ ವೆಗಾ ಗ್ರಾಫಿಕ್ಸ್‌ನೊಂದಿಗೆ AMD ರೈಜೆನ್ 4000 ಸರಣಿ ಮೊಬೈಲ್ ಪ್ರೊಸೆಸರ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ AMD ರೈಜೆನ್ 5 ಮತ್ತು AMD ರೈಜೆನ್ 7 ಪ್ರೊಸೆಸರ್‌ ಎಂಬ ಎರಡು ಪ್ರೊಸೆಸರ್ ಆಯ್ಕೆಗಳಲ್ಲಿ ಬರುತ್ತದೆ.

ಹೆಚ್‌ಪಿ

ಹೌದು, ಹೆಚ್‌ಪಿ ಕಂಪೆನಿ ತನ್ನ ಹೊಸ ಲ್ಯಾಪ್‌ಟಾಪ್‌ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ 42Wh ಬ್ಯಾಟರಿಯನ್ನು ಸಂಯೋಜಿಸುವ ಆಯ್ಕೆಗಳನ್ನ ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 18 ಗಂಟೆಗಳ ಬ್ಯಾಟರಿ ಪವರ್‌ ಅನ್ನು ನೀಡುತ್ತದೆ ಅಥವಾ 53Wh ಬ್ಯಾಟರಿಯನ್ನು 23 ಗಂಟೆಗಳ ಅವಧಿಯನ್ನು ನೀಡುತ್ತದೆ. ಇನ್ನು ಹೆಚ್‌ಪಿ ಪ್ರೊಬುಕ್ 635 ಏರೋ G7 ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೆಚ್‌ಪಿ ಪ್ರೊ

ಹೆಚ್‌ಪಿ ಪ್ರೊ ಬುಕ್ 635 ಏರೋ G7 ಲ್ಯಾಪ್‌ಟಾಪ್‌ 1,920 x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 13.3-ಇಂಚಿನ ಫುಲ್‌-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಐಪಿಎಸ್ ಡಿಸ್‌ಪ್ಲೇ ಆಗಿದ್ದು, 1000 ನಿಟ್ಸ್‌ ಬ್ರೈಟ್‌ನೆಶ್‌ ಅನ್ನು ಒಳಗೊಂಡಿದೆ. ಜೊತೆಗೆ ಇದು 86.2% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, ಎಚ್‌ಪಿ ಶ್ಯೂರ್ ವ್ಯೂ ಸಂಯೋಜಿತ ತಾಮ್ರ-ಬಣ್ಣದ ಗೌಪ್ಯತೆಯ ಸ್ಕ್ರೀನ್‌ ಅನ್ನು ಹೊಂದಿದೆ,

ಲ್ಯಾಪ್ಟಾಪ್

ಇನ್ನು ಈ ಲ್ಯಾಪ್ಟಾಪ್ ಎರಡು ಮಾದರಿಗಳಲ್ಲಿ ಬರುತ್ತದೆ - ಒಂದು AMD ರೈಜೆನ್ 5 ಪ್ರೊಸೆಸರ್ ಮತ್ತು ಎರಡನೇಯದು AMD ರೈಜೆನ್ 7 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು ವಿಂಡೋಸ್ 10 ಪ್ರೊನಲ್ಲಿ ಚಲಿಸುತ್ತದೆ. ಹಾಗೇಯೆ ಎಎಮ್‌ಡಿ ರೈಜೆನ್ 5 ಪ್ರೊಸೆಸರ್ 8GB RAM ಅನ್ನು ಪ್ಯಾಕ್ ಮಾಡಿದರೆ, ಎಎಮ್‌ಡಿ ರೈಜೆನ್ 7 ಪ್ರೊಸೆಸರ್ 16 GB RAM ಅನ್ನು ಪ್ಯಾಕ್ ಮಾಡುತ್ತದೆ. ಜೊತೆಗೆ 512GB ಇಂಟರ್‌ ಸ್ಟೋರೇಜ್‌ ಅಯ್ಕೆಯಲ್ಲಿ ಲಭ್ಯವಾಗಲಿದೆ. ಇದು ಎಎಮ್‌ಡಿ ರೇಡಿಯನ್ ಗ್ರಾಫಿಕ್ಸ್, 720p ಎಚ್‌ಡಿ ವೆಬ್ ಕ್ಯಾಮೆರಾ, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಡ್ಯುಯಲ್ ಅರೇ ಮೈಕ್ರೊಫೋನ್ ಅನ್ನು ಬೆಂಬಲಿಸಲಿದೆ.

ಲ್ಯಾಪ್‌ಟಾಪ್

ಎಚ್‌ಪಿ ಪ್ರೊಬುಕ್ 635 ಏರೋ G7 ಲ್ಯಾಪ್‌ಟಾಪ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇಂಟೆಲ್ AX200 ವೈ-ಫೈ 6, ಬ್ಲೂಟೂತ್ 5, ಮಲ್ಟಿ-ಯೂಸರ್ MIMO ಮತ್ತು ಮಿರಾಕಾಸ್ಟ್ ಸೇರಿವೆ. ಇದಲ್ಲದೆ ಈ ಲ್ಯಾಪ್‌ಟಾಪ್‌ 42Wh ಬ್ಯಾಟರಿ ಅಥವಾ 53Wh ಬ್ಯಾಟರಿಯನ್ನು ಸಂಯೋಜಿಸುವ ಆಯ್ಕೆಗಳಿವೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಎರಡು ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳು, ಒಂದು ಯುಎಸ್‌ಬಿ ಟೈಪ್-ಸಿ ಪೋರ್ಟ್, ಒಂದು ಹೆಡ್‌ಫೋನ್ / ಮೈಕ್ರೊಫೋನ್ ಕಾಂಬೊ ಜ್ಯಾಕ್, ನ್ಯಾನೊ-ಸೆಕ್ಯುರಿಟಿ ಲಾಕ್ ಸ್ಲಾಟ್, ಒಂದು ಎಚ್‌ಡಿಎಂಐ 2.0 ಪೋರ್ಟ್ ಮತ್ತು ಒಂದು ಎಸಿ ಪವರ್ ಪೋರ್ಟ್ ಅನ್ನು ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೊಸ ಹೆಚ್‌ಪಿ ಪ್ರೊಬುಕ್ 635 ಏರೋ G7 ಲ್ಯಾಪ್‌ಟಾಪ್ ಭಾರತದಲ್ಲಿ 74,999 ರೂ ಬೆಲೆಯನ್ನು ಹೊಂದಿದೆ.

Most Read Articles
Best Mobiles in India

English summary
HP ProBook 635 Aero G7 laptop has launched in India. It is powered by the AMD Ryzen 4000 series mobile processor with integrated AMD Radeon Vega graphics.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X