ಹುವಾವೇ ಬ್ಯಾಂಡ್ 6 ಬಿಡುಗಡೆ! ಎರಡು ವಾರಗಳ ಬ್ಯಾಟರಿ ವಿಶೇಷ!

|

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್‌ ಬ್ಯಾಂಡ್‌ಗಳಿಗೆ ಭಾರಿ ಭೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಫಿಟ್ನೆಸ್‌ ಬ್ಯಾಂಡ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಹುವಾವೇ ಕಂಪೆನಿ ಕೂಡ ಒಂದಾಗಿದೆ. ಸದ್ಯ ಹುವಾವೇ ಕಂಪೆನಿ ಇದೀಗ ಹೊಸ ಫಿಟ್ನೆಸ್‌ ಬ್ಯಾಂಡ್‌ ಅನ್ನು ಲಾಂಚ್‌ ಮಾಡಿದೆ. ಇದು ದೊಡ್ಡ ಗಾತ್ರದ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಎರಡು ವಾರಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗ್ತಿದೆ.

ಹುವಾವೇ

ಹೌದು, ಹುವಾವೇ ಸಂಸ್ಥೆ ಹೊಸ ಹುವಾವೇ ಬ್ಯಾಂಡ್‌ 6 ಅನ್ನು ಮಲೇಷ್ಯಾ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇನ್ನು ಈ ವೇರಿಯೆಬಲ್ಸ್‌ ಫಿಟ್‌ನೆಸ್ ಬ್ಯಾಂಡ್‌ ಪ್ರೀಮಿಯಂ ಫೀಚರ್ಸ್‌ಗಳಾದ ಹಾರ್ಟ್‌ಬೀಟ್‌, ಸ್ಲೀಪ್, Spo2 (ರಕ್ತ-ಆಮ್ಲಜನಕ), ಜೊತೆಗೆ ಒತ್ತಡದ ಮೇಲ್ವಿಚಾರಣೆಯನ್ನು ಮಾಡಲಿದೆ. ಜತೆಗೆ ಹುವಾವೇ ಬ್ಯಾಂಡ್ 6 ನಲ್ಲಿ 96 ಕ್ಕೂ ಹೆಚ್ಚು ವರ್ಕೌಟ್‌ ಮೋಡ್‌ಗಳನ್ನು ನೀಡಲಾಗಿದೆ. ಇನ್ನುಳಿದಂತೆ ಈ ಫಿಟ್ನೆಸ್‌ ಬ್ಯಾಂಡ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹುವಾವೇ

ಹುವಾವೇ ಬ್ಯಾಂಡ್ 6 194x368 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.47-ಇಂಚಿನ ಅಮೋಲೆಡ್ ಫುಲ್-ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 64 % ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಈ ಹುವಾವೇ ಬ್ಯಾಂಡ್ 6 ರ ಡಿಸ್‌ಪ್ಲೇ ಹಿಂದಿನ ಹುವಾವೇ ಬ್ಯಾಂಡ್ 4 ಗಿಂತ 148% ದೊಡ್ಡದಾಗಿದೆ ಎಂದು ಹೇಳಲಾಗಿದೆ. ಇದು ಸ್ಕಿನ್‌-ಫ್ರೆಂಡ್ಲಿ ಯುವಿ-ಟ್ರಿಟೆಡ್‌ ಸಿಲಿಕೋನ್ ಸ್ಟ್ರಾಪ್‌ ಅನ್ನು ಒಳಗೊಂಡಿದೆ.

ಫಿಟ್ನೆಸ್‌

ಇನ್ನು ಈ ಫಿಟ್ನೆಸ್‌ ಬ್ಯಾಂಡ್‌ ಋತುಚಕ್ರ ಸೈಕಲ್ ಟ್ರ್ಯಾಕಿಂಗ್ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ ಅಲ್ಲದೆ ಫೋನ್ ಮೂಲಕ ಮ್ಯೂಸಿಕ್‌ ಅನ್ನು ಕಂಟ್ರೋಲ್‌ ಮಾಡುವ ಸಾಮರ್ಥ್ಯವಿದೆ. ಆದರೆ ಈ ಎರಡೂ ವೈಶಿಷ್ಟ್ಯಗಳು ಆಂಡ್ರಾಯ್ಡ್‌ನಲ್ಲಿ ಮಾತ್ರ ಬೆಂಬಲಿತವಾಗಿದೆ. ಇದ್ಯ ಈ ಫಿಟ್ನೆಸ್‌ ಬ್ಯಾಂಡ್‌ನಲ್ಲಿ 96 ಕ್ಕೂ ಹೆಚ್ಚು ವರ್ಕೌಟ್‌ ಮೋಡ್‌ಗಳನ್ನು ನೀಡಲಾಗಿದೆ. ಇದರಲ್ಲಿ ರನ್ನಿಂಗ್‌, ಸ್ವಿಮ್ಮಿಂಗ್‌, ಎಲಿಪ್ಟಿಕಲ್, ರೋಯಿಂಗ್, ಟ್ರೆಡ್‌ಮಿಲ್ ಮುಂತಾದ ಮೋಡ್‌ಗಳನ್ನು ನೀಡಲಾಗಿದೆ.

ಫಿಟ್ನೆಸ್‌

ಜೊತೆಗೆ ಫಿಟ್ನೆಸ್‌ ಬ್ಯಾಂಡ್‌ನಲ್ಲಿ ಅಪ್ಲಿಕೇಶನ್ ಅಧಿಸೂಚನೆಗಳು, ಒಳಬರುವ ಕರೆಗಳು ಮತ್ತು ಮೆಸೇಜ್‌ ಆಲರ್ಟ್‌, ಹವಾಮಾನ ನವೀಕರಣಗಳು ಮತ್ತು ಧರಿಸಬಹುದಾದ ಸಾಧನಗಳಿಗೆ ಸಂಪರ್ಕಗೊಂಡಿರುವ ಫೋನ್‌ನ ಕ್ಯಾಮೆರಾಕ್ಕಾಗಿ ರಿಮೋಟ್ ಶಟರ್ ಮುಂತಾದ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಈ ಫಿಟ್‌ನೆಸ್ ಬ್ಯಾಂಡ್ 5ATM (50 ಮೀಟರ್ ವರೆಗೆ) ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಹೊಂದಿದೆ. ಇದು ಮ್ಯಾಗ್ನೆಟಿಕ್ ಚಾರ್ಜಿಂಗ್ ಥಿಂಬಲ್ ಅನ್ನು ಹೊಂದಿದೆ ಮತ್ತು ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸುತ್ತದೆ ಮತ್ತು ನ್ಯಾವಿಗೇಷನ್ ಬೆಂಬಲಕ್ಕಾಗಿ ಸೈಡ್-ಬಟನ್ ಹೊಂದಿದೆ.

ಫಿಟ್ನೆಸ್‌

ಈ ಫಿಟ್ನೆಸ್‌ ಬ್ಯಾಂಡ್‌ ಎರಡು ವಾರಗಳ ಬ್ಯಾಟರಿ ಅವಧಿಯನ್ನು ಅಥವಾ 10 ದಿನಗಳವರೆಗೆ ಭಾರೀ ಬಳಕೆಯೊಂದಿಗೆ ನೀಡುತ್ತದೆ ಎಂದು ಹೇಳಲಾಗುತ್ತದೆ. ಕೇವಲ ಐದು ನಿಮಿಷಗಳ ಚಾರ್ಜಿಂಗ್‌ನಲ್ಲಿ ಹುವಾವೇ ಬ್ಯಾಂಡ್ 6 ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಹುವಾವೆಯ ಟ್ರೂಸೀನ್ 4.0 24x7 ಹೃದಯ ಬಡಿತ ಮಾನಿಟರಿಂಗ್, ಟ್ರೂಸ್ಲೀಪ್ 2.0 ಸ್ಲೀಪ್ ಮಾನಿಟರಿಂಗ್ ಮತ್ತು ಕಂಪನಿಯ ಟ್ರುರೆಲ್ಯಾಕ್ಸ್ ಒತ್ತಡ ಮೇಲ್ವಿಚಾರಣಾ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇನ್ನು ಈ ಹೊಸ ಹುವಾವೇ ಬ್ಯಾಂಡ್ 6 ಮಲೇಷ್ಯಾ ಮಾರುಕಟ್ಟೆಯಲ್ಲಿ ಆರ್ಎಂ 219 (ಸರಿಸುಮಾರು 3,800 ರೂ.) ಬೆಲೆಯಿದೆ. ಇದು ಅಂಬರ್ ಸನ್‌ರೈಸ್, ಫಾರೆಸ್ಟ್ ಗ್ರೀನ್ ಮತ್ತು ಗ್ರ್ಯಾಫೈಟ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಬರುತ್ತದೆ.

Most Read Articles
Best Mobiles in India

English summary
Huawei Band 6 With Two-Week Battery Life, 96 Workout Modes Launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X