ಮೊಬೈಲ್ ಉತ್ಪಾದನೆಯಲ್ಲಿ ವಿಶ್ವದಲ್ಲೇ ನಂ.1 ಆಗಲಿದೆ ಭಾರತ: ಪ್ರಧಾನಿ ಮೋದಿ

|

ಮೇಕ್ ಇನ್ ಇಂಡಿಯಾ ಅಭಿಯಾನ ಜಾಗತಿಕ ವ್ಯಾಪಾರದ ಗುರುತಾಗಿ ಸೃಷ್ಟಿಯಾಗಿದ್ದು, ನಾವು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ಭಾರತ ಜಾಗತಿಕ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ನಾವು ವಿಶ್ವಕ್ಕೆ ನಂಬರ್ 1 ಸ್ಥಾನಕ್ಕೆ ತಲುಪಲು ನಾವು ಮುನ್ನುಗ್ಗುತ್ತಿದ್ದೇವೆ ಎಂದು ಪ್ರಧಾನಿ ಮಂತ್ರಿ ಮೋದಿಯವರು ಹೇಳಿದರು.

ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ರಾಜಧಾನಿ ಟೊಕಿಯೋಗೆ ಆಗಮಿಸಿದ ಮೋದಿ ತಮ್ಮ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಭಾರತದ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. ನಂತರ, ಎಲೆಕ್ಟ್ರಾನಿಕ್ಸ್ ಮತ್ತು ಆಟೊಮೊಬೈಲ್ ಉತ್ಪನ್ನ ಕ್ಷೇತ್ರಗಳಲ್ಲಿ ನಾವು ಸಾಧನೆ ಮಾಡುತ್ತಿದ್ದೇವೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ನಾವು ವಿಶ್ವಕ್ಕೆ ನಂಬರ್ 1 ಸ್ಥಾನಕ್ಕೆ ತಲುಪಲು ನಾವು ಮುನ್ನುಗ್ಗುತ್ತಿದ್ದೇವೆ ಎಂದು ಹೇಳಿದರು.

ಮೊಬೈಲ್ ಉತ್ಪಾದನೆಯಲ್ಲಿ ವಿಶ್ವದಲ್ಲೇ ನಂ.1 ಆಗಲಿದೆ ಭಾರತ: ಪ್ರಧಾನಿ ಮೋದಿ

ಡಿಜಿಟಲ್ ಮೂಲಭೂತ ಸೌಕರ್ಯಗಳಲ್ಲಿ ಇಂದು ಭಾರತ ಮಹತ್ವಪೂರ್ಣ ಬೆಳವಣಿಗೆಗಳನ್ನು ಕಾಣುತ್ತಿದೆ. ಅಂತರ್ಜಾಲ ಸಂಪರ್ಕ ಭಾರತದಲ್ಲಿ ಇಂದು ಹಳ್ಳಿ ಹಳ್ಳಿಗೆ ತಲುಪುತ್ತಿದೆ. 100 ಕೋಟಿಗೂ ಅಧಿಕ ಮೊಬೈಲ್ ಫೋನ್‌ಗಳು ಭಾರತದಲ್ಲಿ ಸಕ್ರಿಯವಾಗಿದೆ. ಇಂದು ಭಾರತದಲ್ಲಿ ಒಂದು ಸಣ್ಣ ಕೂಲ್ ಡ್ರಿಂಕ್ಸ್ ಬಾಟಲ್‌ಗಿಂತ 1ಜಿಬಿ ಡೇಟಾ ಅಗ್ಗವಾಗಿದೆ. ಸೇವಾ ಪೂರೈಕೆಗೆ ಈ ದತ್ತಾಂಶಗಳು ಸಾಧನವಾಗಿವೆ ಎಂದು ಮೋದಿ ಅಭಿಪ್ರಾಯಪಟ್ಟರು.

ಹಣಕಾಸಿನ ಒಳಹರಿವಿಕೆಗೆ ಭಾರತದ ಮಾದರಿಗಳಾದ ಜನ ಧನ ಯೋಜನೆ, ಮೊಬೈಲ್, ಆಧಾರ್ ಮತ್ತು ಡಿಜಿಟಲ್ ಮಾದರಿ ವಹಿವಾಟು ಇತ್ಯಾದಿಗಳನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ. ಭಾರತದಲ್ಲಿ ಇಂದು ಟೆಲಿ ಕಮ್ಯುನಿಕೇಶನ್ ಮತ್ತು ಅಂತರ್ಜಾಲ ಸಂಪರ್ಕ ವ್ಯವಸ್ಥೆ ಕೂಡ ವಿಸ್ತಾರವಾಗಿದೆ ಎಂದು ಶ್ಲಾಘಿಸಿದರು. ಅಗತ್ಯ ಮತ್ತು ಸಮಸ್ಯೆಗಳಿಗೆ ಭಾರತೀಯ ಪರಿಹಾರಗಳು ಮತ್ತು ಜಾಗತಿಕ ಅನ್ವಯಿಕೆಗಳ ಉತ್ಸಾಹದೊಂದಿಗೆ ಭಾರತ ಸತತವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಮೊಬೈಲ್ ಉತ್ಪಾದನೆಯಲ್ಲಿ ವಿಶ್ವದಲ್ಲೇ ನಂ.1 ಆಗಲಿದೆ ಭಾರತ: ಪ್ರಧಾನಿ ಮೋದಿ

ಇಂದು ಭಾರತ ಬೃಹತ್ ರೂಪಾಂತರ ಹಂತದಲ್ಲಿ ಸಾಗುತ್ತಿದೆ. ಮುಂದಿನ ದಶಕದಲ್ಲಿ ಜಾಗತಿಕ ಆರ್ಥಿಕತೆಯ ಬೆಳವಣಿಗೆಯಲ್ಲಿ ಭಾರತ ದೇಶದ ಪ್ರಯಾಣ ಸಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಉದ್ಯಮ ಸಂಸ್ಥೆಗಳು ಹೇಳುತ್ತಿವೆ .ಜಪಾನಿನಲ್ಲಿರುವ ಭಾರತೀಯ ಸಮುದಾಯದವರು ನವ ಭಾರತ ನಿರ್ಮಾಣಕ್ಕೆ ಸಕ್ರಿಯವಾಗಿ ಕೊಡುಗೆ ನೀಡಬೇಕು. ಇದು ದೇಶವನ್ನು ಮುನ್ನೆಡೆಸಲು ಸಹಾಯವಾಗಲಿದೆ ಎಂದು ಹೇಳಿದರು.

Most Read Articles
Best Mobiles in India

English summary
Modi said India is becoming one of the fastest growing big economy due to the development taking place in the country.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more