ಭಾರತದಲ್ಲೂ ಸಿಂಗಲ್‌ ಚಾರ್ಜರ್‌ ನೀತಿ ಜಾರಿಗೆ ಬರುತ್ತಾ? ಹಾಗಾದ್ರೆ ನಿಮ್ಮ ಚಾರ್ಜರ್‌ಗಳ ಕಥೆ ಏನು?

|

ಇನ್ಮುಂದೆ ನೀವು ಬಳಸುವ ಎಲ್ಲಾ ಮಾದರಿಯ ಸ್ಮಾರ್ಟ್‌ಫೋನ್‌ಗಳ ಚಾರ್ಜರ್‌ ಒಂದೇ ರೀತಿ ಇರಲಿದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ ಟ್ಯಾಬ್ಲೆಟ್‌ ಸೇರಿದಂತೆ ಎಲ್ಲಾ ಡಿವೈಸ್‌ಗಳಿಗೂ ಒಂದೇ ಚಾರ್ಜರ್‌ ಅಳವಡಿಸಿಕೊಳ್ಳುವ ಆಯ್ಕೆಯನ್ನು ಭಾರತ ಸರ್ಕಾರ ರೂಪಿಸಲು ಮುಂದಾಗಿದೆ. ಹೀಗೆ ಮಾಡುವುದರಿಂದ ನೀವು ಬಳಸುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೂ ಒಂದೇ ಚಾರ್ಜರ್‌ ಬಳಸಬಹುದು. ಇದರಿಂದ ಇ-ವೇಸ್ಟ್‌ ಅನ್ನು ತಡೆಗಟ್ಟಬಹುದು ಎನ್ನುವ ಚಿಂತನೆ ಸರ್ಕಾರದ್ದಾಗಿದೆ.

ಟ್ಯಾಬ್ಲೆಟ್‌ಗಳು

ಹೌದು, ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಸೇರಿದಂತೆ ಎಲ್ಲಾ ಡಿವೈಸ್‌ಗಳಿಗೆ ಒಂದು ಚಾರ್ಜರ್‌ ನೀತಿಯನ್ನು ಜಾರಿಗೊಳಿಸಲು ಸರ್ಕಾರ ಪ್ಲಾನ್‌ ಮಾಡಿದೆ. ಈಗಾಗಲೇ ಯುರೋಪ್ ಕೂಡ ಇದೇ ನೀತಿಯನ್ನು ಅಳವಡಿಸಿಕೊಂಡಿದೆ. ಈ ನೀತಿ ಯುರೋಪ್‌ನಲ್ಲಿ 2024 ರಿಂದ ಜಾರಿಗೆ ಬರಲಿದೆ. ಇದರ ಸಾಧ್ಯತೆಗಳ ಬಗ್ಗೆ ಚರ್ಚಿಸಲು ಭಾರತ ಸರ್ಕಾರ ಇದೇ ಆಗಸ್ಟ್ 17 ರಂದು ಸಭೆಯನ್ನು ಕರೆದಿದೆ. ಹಾಗಾದ್ರೆ ಭಾರತದಲ್ಲಿ ಹೊಸ ಚಾರ್ಜರ್‌ ನೀತಿ ಜಾರಿಗೆ ತರಲು ಕಾರಣ ಏನು? ಹೊಸ ಚಾರ್ಜರ್‌ ನೀತಿ ಏನೆಲ್ಲಾ ಪರಿಣಾಮ ಬೀರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ರಸ್ತುತ

ಪ್ರಸ್ತುತ ನಾವು ನೀವೆಲ್ಲಾ ಬಳಸುವ ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯ ಚಾರ್ಜರ್‌ ಅನ್ನು ಹೊಂದಿಲ್ಲ. ಒಂದು ಸ್ಮಾರ್ಟ್‌ಫೋನಿನ ಚಾರ್ಜರ್‌ ಮತ್ತೊಂದು ಸ್ಮಾರ್ಟ್‌ಫೋನಿನ ಚಾರ್ಜರ್‌ ಅನ್ನು ಹೋಲುವುದಿಲ್ಲ. ಇದರಿಂದ ನೀವು ಸ್ಮಾರ್ಟ್‌ಫೋನ್‌ ಅನ್ನು ಚೇಂಜ್‌ ಮಾಡಿದಾಗಲೆಲ್ಲಾ ಹೊಸ ಚಾರ್ಜರ್‌ ಅನ್ನು ಬಳಸಬೇಕಾಗುತ್ತದೆ. ಇದರಿಂದ ಮಲ್ಟಿ ಚಾರ್ಜರ್‌ಗಳ ಬಳಕೆ ಹೆಚ್ಚಾದಂತೆ ಭಾರತದಲ್ಲಿ ಇ-ತ್ಯಾಜ್ಯ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವುದರ ಜೊತೆಗೆ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ.

ಚಾರ್ಜರ್‌

ಮಲ್ಟಿ ಚಾರ್ಜರ್‌ಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಸರ್ಕಾರ ಸಿಂಗಲ್‌ ಚಾರ್ಜರ್‌ ನೀತಿಯನ್ನು ಜಾರಿಗೆ ತರುವ ಚಿಂತನೆ ನಡೆಸಿದೆ. ಈ ಸಾಧ್ಯತೆಯ ಬಗ್ಗೆ ಚರ್ಚೆ ನಡೆಸಲು ಭಾರತ ಸರ್ಕಾರ ಸ್ಮಾರ್ಟ್‌ಫೋನ್ ತಯಾರಕರು ಮತ್ತು ವಲಯ-ನಿರ್ದಿಷ್ಟ ಸಂಸ್ಥೆಗಳೊಂದಿಗೆ ಸಭೆ ನಡೆಸಲು ಮುಂದಾಗಿದೆ. ಈ ಕಂಪನಿಗಳು ಯುರೋಪ್ ಮತ್ತು ಯುಎಸ್‌ನಲ್ಲಿ ಸಿಂಗಲ್‌ ಚಾರ್ಜರ್‌ ನೀತಿಯನ್ನು ಅನುಸರಿಸಬಹುದಾದರೆ, ಭಾರತದಲ್ಲಿ ಅದನ್ನು ಏಕೆ ಮಾಡಬಾರದು? ಎಂಬ ಚಿಂತನೆ ಭಾರತ ಸರ್ಕಾರದ್ದಾಗಿದೆ.

ಚಾರ್ಜರ್‌

ಇನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಂತಹ ಡಿವೈಸ್‌ಗಳು ಸಾಮಾನ್ಯ ಚಾರ್ಜರ್‌ ಹೊಂದಿರಬೇಕು ಅನ್ನೊದು ಸರ್ಕಾರದ ನಿರ್ಧಾರವಾಗಿದೆ. ಇದರಿಂದ ಪ್ರತಿ ಡಿವೈಸ್‌ಗೂ ಪ್ರತ್ಯೇಕ ಚಾರ್ಜರ್‌ಗಳನ್ನು ಖರೀದಿಸುವುದು ತಪ್ಪಲಿದೆ. ಸದ್ಯ ಟ್ಯಾಬ್ಲೆಟ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಪ್ರತ್ಯೇಕ ಚಾರ್ಜರ್‌ಗಳನ್ನು ಹೊಂದಿದೆ. ಅಲ್ಲದೆ ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳು ಕೂಡ ಪ್ರತ್ಯೇಕ ಚಾರ್ಜರ್‌ಗಳನ್ನು ಹೊಂದಿವೆ. ಇದರಿಂದ ಒಂದು ಡಿವೈಸ್‌ನ ಚಾರ್ಜರ್‌ ಮತ್ತೊಂದು ಡಿವೈಸ್‌ಗೆ ಹೊಂದಿಕೆಯಾಗುವುದಿಲ್ಲ.

ಪ್ರತ್ಯೇಕ

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಕಂಪೆನಿಗಳು ಪ್ರತ್ಯೇಕ ಚಾರ್ಜರ್‌ಗಳನ್ನು ನೀಡುತ್ತಿವೆ. ಇದರಿಂದ ನಿಮ್ಮ ಡಿವೈಸ್‌ಗೆ ಬೇಕಾದ ಚಾರ್ಜಂಗ್‌ಗೆ ಬೇರೆ ಚಾರ್ಜರ್‌ ಬಳಸುವುದಕ್ಕೆ ಸಾಧ್ಯವಾಗ್ತಿಲ್ಲ. ಇದು ಹೀಗೆ ಮುಂದುವರೆದರೆ ಭಾರತದಲ್ಲಿ ಇ-ತ್ಯಾಜ್ಯದ ಪರಿಮಾಣ ಹೆಚ್ಚಾಗಲಿದೆ. ಇದರಿಂದ ಸಾಕಷ್ಟು ತೊಂದರೆ ಎದುರಿಸಬೇಕಾಗಬಹುದು. ಇದೆಲ್ಲವನ್ನೂ ಗನಿಸಿರುವ ಸರ್ಕಾರದ ಸಿಂಗಲ್‌ ಚಾರ್ಜರ್‌ ನೀತಿ ತರುವ ಪ್ರಯತ್ನ ನಡೆಸಿದೆ. ಒಂದು ವೇಳೆ ಸಿಂಗಲ್‌ ಚಾರ್ಜರ್‌ ನೀತಿ ಜಾರಿಗೆ ಬಂದರೆ ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳು ಒಂದೇ ಚಾರ್ಜರ್‌ ಬಳಸಬಹುದಾಗಿದೆ. ಇದರಿಂದ ಜನರು ಪ್ರತ್ಯೇಕವಾಗಿ ಚಾರ್ಜರ್‌ಗಳನ್ನು ಖರೀದಿಸುವ ಅವಶ್ಯಕತೆ ಬರುವುದಿಲ್ಲ.

ಚಾರ್ಜರ್‌

ಇನ್ನು ಸಿಂಗಲ್‌ ಚಾರ್ಜರ್‌ ನೀತಿ ಜಾರಿಗೆ ತರುವ ಪ್ರಯತ್ನದಲ್ಲಿ ಭಾರತವೇ ಮೊದಲ ದೇಶವಲ್ಲ. ಜೂನ್ 2022 ರಲ್ಲಿಯೇ ಯುರೋಪಿಯನ್ ಕೌನ್ಸಿಲ್, ಆಯೋಗ ಮತ್ತು ಸಂಸತ್ತು ಮೊಬೈಲ್ ಮತ್ತು ಇತರ ಸಾಧನಗಳಿಗೆ ಸಿಂಗಲ್‌ ಮೊಬೈಲ್ ಚಾರ್ಜಿಂಗ್ ಪೋರ್ಟ್ ಅನ್ನು ಕಾರ್ಯಗತಗೊಳಿಸುವ ನೀತಿ ತಂದಿದೆ. ಇದರಿಂದ ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಇ-ರೀಡರ್‌ಗಳು, ಇಯರ್‌ಬಡ್‌ಗಳು, ಡಿಜಿಟಲ್ ಕ್ಯಾಮೆರಾಗಳು, ಹೆಡ್‌ಫೋನ್‌ಗಳು ಮತ್ತು ಹೆಡ್‌ಸೆಟ್‌ಗಳು, ಹ್ಯಾಂಡ್‌ಹೆಲ್ಡ್ ವೀಡಿಯೋಗೇಮ್ ಕನ್ಸೋಲ್‌ಗಳು ಮತ್ತು ವೈರ್ಡ್ ಕೇಬಲ್ ಮೂಲಕ ರೀಚಾರ್ಜ್ ಮಾಡಬಹುದಾದ ಪೋರ್ಟಬಲ್ ಸ್ಪೀಕರ್‌ಗಳು ಎಲ್ಲವೂ ಕೂಡ USB ಟೈಪ್-ಸಿ ಪೋರ್ಟ್‌ ಚಾರ್ಜರ್‌ ಅನ್ನು ಹೊಂದಿರಬೇಕು ಎನ್ನಲಾಗಿದೆ.

Best Mobiles in India

Read more about:
English summary
India wants to make USB Type-C Mandatory for all future smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X