2022ರ ಕೊನೆಯಲ್ಲಿ ಸಿಗಲಿದೆ ಭಾರತದಲ್ಲಿ ಇ-ಪಾಸ್‌ಪೋರ್ಟ್‌! ಏನಿದರ ವಿಶೇಷ!

|

ಭಾರತದಲ್ಲಿ ಇ-ಪಾಸ್‌ಪೋರ್ಟ್‌ ಪ್ರಾರಂಭದ ಬಗ್ಗೆ ಸಾಕಷ್ಟು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಅದರಲ್ಲೂ ಈ ವರ್ಷದ ಕೇಂದ್ರ ಬಜೆಟ್‌ನಲ್ಲಿಯೂ ಕೂಡ ಇ-ಪಾಸ್‌ಪೋರ್ಟ್‌ ಪ್ರಾರಂಭದ ಬಗ್ಗೆ ಪ್ರಾಸ್ತಪಿಸಲಾಗಿತ್ತು. ಸದ್ಯ ಇದೀಗ ಭಾರತದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ಗಳನ್ನು ಪ್ರಾರಭಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು ಈಗಾಗಲೇ ಹೊಸ ನಿಯಂತ್ರಣ ಕೇಂದ್ರ ಮತ್ತು ಹೊಸ ಡೇಟಾ ಸೆಂಟರ್‌ ಸ್ಥಾಪಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ನೊಂದಿಗೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

ಇ-ಪಾಸ್‌ಪೋರ್ಟ್‌

ಹೌದು, ದೇಶದಲ್ಲಿ ಇ-ಪಾಸ್‌ಪೋರ್ಟ್‌ ಅನ್ನು ಪರಿಚಯಿಸುವ ನಿಟ್ಟಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕೆಲಸ ಮಾಡುತ್ತಿದೆ. ಇದಕ್ಕಾಗೊ ಹೊಸ ಡೇಟಾ ಸೆಂಟರ್‌ ಮತ್ತು ನಿಯಂತ್ರಣ ಕೇಂದ್ರವನ್ನು ಪ್ರಾರಂಭಿಸಲು ಮುಂದಾಗಿದೆ. ಈ ಸೆಂಟರ್‌ಗಳನ್ನು ಪ್ರಾರಂಭಿಸಿದ ನಂತರ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು ದೇಶದಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲು ಪ್ರಾರಂಭಿಸುತ್ತದೆ ಎಂದು ವರದಿಯಾಗಿದೆ. ಅದರಂತೆ ಈ ವರ್ಷದ ಕೊನೆಯಲ್ಲಿಯೇ ದೇಶದಲ್ಲಿ ಚಿಪ್‌ ಆಧಾರಿತ ಇ-ಪಾಸ್‌ಪೋರ್ಟ್‌ಗಳು ದೊರೆಯಲಿವೆ.

ಎಕನಾಮಿಕ್

ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಇ-ಪಾಸ್‌ಪೋರ್ಟ್ ಅನ್ನು ನೀಡುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆಗೆ ಕೆಲಸ ಮಾಡುತ್ತಿದೆ. ಇ-ಪಾಸ್‌ಪೋರ್ಟ್‌ ಅನುಷ್ಠಾನ ಹಂತದ ಪ್ರಕ್ರಿಯೆಯ ಎರಡನೇ ಹಂತದಲ್ಲಿ ಹೊಸ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಸ್ಥಾಪಿಸ ಲಾಗುತ್ತದೆ ಎನ್ನಲಾಗಿದೆ. ಇದರಿಂದ ಹೆಚ್ಚು ಅನುಕೂಲಕರವಾಗಲಿದ್ದು, ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ಸುಧಾರಿಸಲು ಸಾಧ್ಯವಾಗಲಿದೆ. ಹಾಗಾದ್ರೆ ಇ-ಪಾಸ್‌ಪೋರ್ಟ್‌ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ? ಇ-ಪಾಸ್‌ಪೋರ್ಟ್‌ನ ವಿಶೇಷತೆ ಏನು? ಇದರಿಂದಾಗುವ ಪ್ರಯೋಜನಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇ-ಪಾಸ್‌ಪೋರ್ಟ್‌

ಇ-ಪಾಸ್‌ಪೋರ್ಟ್‌ ಈ ವರ್ಷದ ಕೊನೆಯಲ್ಲಿ ಲಭ್ಯವಾಗುವಂತೆ ಮಾಡಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ದೇಶದಲ್ಲಿ ಹೊಸ ಡೇಟಾ ಸೆಂಟರ್‌ ಹಾಗೂ ಹೊಸ ನಿಯಂತ್ರಣಾ ಕಚೇರಿ ಸ್ಥಾಪಿಸಲು ಮುಂದಾಗಿದೆ. ಇದರಿಂದ ಎರಡನೇ ಹಂತದಲ್ಲಿ ದೇಶದಲ್ಲಿರುವ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ಅಪ್ಡೇಟ್‌ ಮಾಡಲಿದೆ. ಇದು ಚಾಟ್‌ಬಾಟ್‌ಗಳು, ಬಯೋಮೆಟ್ರಿಕ್ಸ್ ಮತ್ತು ಪಾಸ್‌ಪೋರ್ಟ್ ಅರ್ಜಿಯನ್ನು ಪ್ರಕ್ರಿಯೆಗೊಳಿಸುತ್ತಿದ್ದಂತೆ ಆಟೋ-ರೆಸ್ಪಾನ್ಸ್‌ ಮೂಲಕ ಪಾಸ್‌ಪೋಟ್‌ ಪಡೆಯಲು ಬಯಸುವ ನಾಗರಿಕರಿಗೆ ಉತ್ತಮ ಅನುಭವ ನೀಡಲಿದೆ.

ಪಾಸ್‌ಪೋರ್ಟ್‌

ಭಾರತದಲ್ಲಿ ಪ್ರಾರಂಭಿಸಲಾಗುತ್ತಿರುವ ಇ-ಪಾಸ್‌ಪೋರ್ಟ್‌ ಚಿಪ್‌ ಆಧಾರಿತವಾಗಿರುತ್ತದೆ. ಆದರೆ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಟೆಕ್‌ ಮತ್ತು ಆಟೋ ಉದ್ಯಮಗಳು ಚಿಪ್‌ ಕೊರತೆಯನ್ನು ಅನುಭವಿಸುತ್ತಿವೆ. ಭಾರತದಲ್ಲಿ ಇ-ಪಾಸ್‌ಪೋರ್ಟ್‌ ಯೋಜನೆ ಇದೇ ಕಾರಣಕ್ಕೆ ನಿಧಾನವಾಗುತ್ತಿದೆ ಎನ್ನಲಾಗಿದೆ. ಆದರೆ ಜಾಗತಿಕ ಚಿಪ್‌ ಕೊರಯೆ ಪಾಸ್‌ಪೋರ್ಟ್ ಯೋಜನೆಯ ಎರಡನೇ ಹಂತದ ನಿಯೋಜನೆ ಮತ್ತು ಅದರ ಟೈಮ್‌ಲೈನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು TCS ಕಾರ್ಯನಿರ್ವಾಹಕರು ಹೇಳೀದ್ದಾರೆ.

ಮೈಕ್ರೋಚಿಪ್‌ಗಳನ್ನು

ಇನ್ನು ಭಾರತದ ಇ-ಪಾಸ್‌ಪೋರ್ಟ್‌ಗಳು ಎಂಬೆಡೆಡ್‌ ಮೈಕ್ರೋಚಿಪ್‌ಗಳನ್ನು ಹೊಂದಿರಲಿವೆ ಎನ್ನಲಾಗಿದೆ. ಇದರಿಂದ ಇ-ಪಾಸ್‌ಪೋರ್ಟ್‌ಗಳು ಸಾಕಷ್ಟು ಸುರಕ್ಷಿತವಾಗಿರುತ್ತವೆ ಎನ್ನಲಾಗಿದೆ. ಅದರಲ್ಲೂ ಪ್ರಮುಖವಾಗಿ ಭದ್ರತಾ ಡೇಟಾವನ್ನು ಇದರಲ್ಲಿ ಸಂಗ್ರಹಿಸಲಾಗುತ್ತದೆ. ಇದರಿಂದ ನಿಮ್ಮ ಡೇಟಾ ಸುರಕ್ಷಿತವಾಗಿರಲಿದೆ. ಸದ್ಯ ಭಾರತದಲ್ಲಿ ಸಾಂಪ್ರದಾಯಿಕ ಮಾದರಿಯ ಮುದ್ರಿತ ಪಾಸ್‌ಪೋರ್ಟ್‌ಗಳನ್ನು ಮಾತ್ರ ಕಾಣಬಹುದಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಲಭ್ಯವಾಗುವ ಇ-ಪಾಸ್‌ಪೋರ್ಟ್‌ಗಳು ಇದರ ವಿನ್ಯಾಸವನ್ನು ಬದಲಾಯಿಸಲಿದೆ. ಇನ್ನು ಇ-ಪಾಸ್‌ಪೋರ್ಟ್‌ ಪರಿಕಲ್ಪನೆ ಇದೇ ಮೊದಲೇನಲ್ಲ. ಈಗಾಗಲೇ ಯುಎಸ್, ಯುಕೆ ಮತ್ತು ಜರ್ಮನಿ ಸೇರಿದಂತೆ ದೇಶಗಳಲ್ಲಿ ಲಭ್ಯವಿದೆ.

ಡಿಜಿಟಲ್‌

ಇಂದಿನ ಡಿಜಿಟಲ್‌ ಜಗತ್ತಿನಲ್ಲಿ ಎಲ್ಲವೂ ಡಿಜಿಟಲೀಕರಣಗೊಳ್ಳುತ್ತಿದೆ. ಅದರ ಮುಂದುವರಿದ ಭಾಗವೇ ಇ-ಪಾಸ್‌ಪೋರ್ಟ್‌ ಪರಿಕಲ್ಪನೆ. ಇ-ಪಾಸ್‌ಪೋರ್ಟ್‌ ನಲ್ಲಿರುವ ಚಿಪ್‌ ನಿಮ್ಮ ಸುರಕ್ಷಿತ ಬಯೋಮೆಟ್ರಿಕ್ ಡೇಟಾವನ್ನು ಒಳಗೊಂಡಿರುತ್ತದೆ. ಇದು ಜಾಗತಿಕವಾಗಿ ಪ್ರಯಾಣ ಮಾಡುವವರಿಗೆ ಸಾಕಷ್ಟು ಸಹಾಯ ಮಾಡಲಿದೆ. ಇನ್ನು ಇ-ಪಾಸ್‌ಪೋರ್ಟ್ ICAO ಕಂಪ್ಲೈಂಟ್ ಆಗಿರಲಿದ್ದು, ಇದನ್ನು ನಾಸಿಕ್‌ನ ಇಂಡಿಯಾ ಸೆಕ್ಯುರಿಟಿ ಪ್ರೆಸ್‌ನಲ್ಲಿ ತಯಾರಿಸಲಾಗುವುದು ಎನ್ನಲಾಗಿದೆ.

ಇ-ಪಾಸ್‌ಪೋರ್ಟ್ ಎಂದರೇನು?

ಇ-ಪಾಸ್‌ಪೋರ್ಟ್ ಎಂದರೇನು?

ಹೆಸರೇ ಸೂಚಿಸುವಂತೆ ಇ-ಪಾಸ್‌ಪೋರ್ಟ್ ಅನ್ನೊದು ಡಿಜಿಟಲೀಕರಣದ ಒಂದು ಪರಿಕಲ್ಪನೆ. ಅಂದರೆ ಸಾಂಪ್ರದಾಯಿಕ ಪಾಸ್‌ಪೋರ್ಟ್‌ನಲ್ಲಿರುವ ನಿಮ್ಮ ಡೇಟಾ ಒಂದು ಚಿಪ್‌ನಲ್ಲಿ ಸಂಗ್ರಹವಾಗಿರಲಿದೆ. ಇದರಿಂದ ನಿಮ್ಮ ಡೇಟಾವನ್ನು ಕೇವಲ ಸ್ಕ್ಯಾನ್‌ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದು ಇಮಿಗ್ರೇಷನ್‌ ಸೆಂಟರ್‌ನಲ್ಲಿ ನಿಮ್ಮ ಸಮಯವನ್ನು ಉಳಿಸಲಿದೆ. ಆದರೆ ಸಾಂಪ್ರದಾಯಿಕ ಪಾಸ್‌ಪೋರ್ಟ್‌ಗಿಂತ ಇದು ಭಿನ್ನವಾಗಿರಲಿದೆ. ಕಾರ್ಯಗಳು ಮಾತ್ರ ಸಾಂಪ್ರದಾಯಿಕ ಮಾದರಿಯ ಕಾರ್ಯಗಳನ್ನೇ ಹೊಂದಿರುತ್ತದೆ.

ಪಾಸ್‌ಪೋರ್ಟ್‌

ಇ-ಪಾಸ್‌ಪೋರ್ಟ್‌ ಸಾಂಪ್ರದಾಯಿಕ ಪಾಸ್‌ಪೋರ್ಟ್‌ಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ. ಏಕೆಂದರೆ ಇ-ಪಾಸ್‌ಪೋರ್ಟ್ ಎಲೆಕ್ಟ್ರಾನಿಕ್ ಚಿಪ್ ಅನ್ನು ಒಳಗೊಂಡಿರುತ್ತದೆ. ಇದು ಮುದ್ರಿತ ಪಾಸ್‌ಪೋರ್ಟ್‌ನಂತೆಯೇ ಎಲ್ಲಾ ಮಾಹಿತಿಯನ್ನು ಹೊಂದಿರುತ್ತದೆ. ಆದರೆ ಇ ಮಾಹಿತಿಯನ್ನು ತಿಳಿಯಲು ಡಿಜಿಟಲ್‌ ಸ್ಕ್ಯಾನ್‌ ಮಾಡಬೇಕಾಗುತ್ತದೆ. ಇನ್ನು ಇ-ಪಾಸ್‌ಪೋರ್ಟ್‌ನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದರಿಂದ ಇ-ಪಾಸ್‌ಪೋರ್ಟ್ ಅನ್ನು ಇಮಿಗ್ರೇಷನ್ ಕೌಂಟರ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಸ್ಕ್ಯಾನ್ ಮಾಡಬಹುದು. ಈ ಮಾದರಿಯ ವ್ಯವಸ್ಥೆ ಈಗಾಗಲೇ US, UK ಮತ್ತು ಜರ್ಮನಿ ಸೇರಿದಂತೆ 120 ದೇಶಗಳಲ್ಲಿ ಲಭ್ಯವಿದೆ.

ಇ-ಪಾಸ್‌ಪೋರ್ಟ್‌ನ ವಿಶೇಷತೆ ಏನು?

ಇ-ಪಾಸ್‌ಪೋರ್ಟ್‌ನ ವಿಶೇಷತೆ ಏನು?

ಇಂದಿನ ದಿನಗಳಲ್ಲಿ ಇ-ಪಾಸ್‌ಪೋರ್ಟ್ ಅವಶ್ಯಕತೆ ತುಂಬಾನೆ ಇದೆ. ಎಲ್ಲಾ ದೇಶಗಳು ಇ-ಪಾಸ್‌ಪೋರ್ಟ್‌ ಮಾದರಿಗೆ ಬದಲಾಗುತ್ತಿರುವುದರಿಂದ ಭಾರತದಲ್ಲಿಯೂ ಕೂಡ ಇದರ ಅವಶ್ಯಕತೆ ತುಂಬಾನೆ ಇದೆ. ಇ-ಪಾಸ್‌ಪೋರ್ಟ್‌ ಸಂಪೂರ್ಣವಾಗಿ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಚಿಪ್‌ನಲ್ಲಿ ಸೆಕ್ಯುರ್‌ ಮಾಡಲಿದೆ. ಇದರಿಂದ ನಕಲಿ ಪಾಸ್‌ಪೋರ್ಟ್‌ಗಳ ಹಾವಳಿಯನ್ನು ಕೂಡ ತಡೆಗಟ್ಟುವುದಕ್ಕೆ ಸಾಧ್ಯವಾಗಲಿದೆ. ಇನ್ನು ಈ ಚಿಪ್‌ 64KB ಸ್ಟೋರೇಜ್‌ ಸ್ಪೇಸ್‌ ಅನ್ನು ಹೊಂದಿರಲಿದ್ದು, ಈ ಚಿಪ್ ಪ್ರಾರಂಭಿಕ ಹಂತದಲ್ಲಿ 30 ಅಂತರರಾಷ್ಟ್ರೀಯ ಪ್ರವಾಸಗಳ ಡೇಟಾವನ್ನು ಹೊಂದಿರುತ್ತದೆ ಎನ್ನಲಾಗಿದೆ.

ಪಾಸ್‌ಪೋರ್ಟ್‌ನ

ಇದಲ್ಲದೆ ಇ-ಪಾಸ್‌ಪೋರ್ಟ್‌ನ ಚಿಪ್‌ನಲ್ಲಿ ನಿಮ್ಮ ಬೆರಳಚ್ಚು ಒಳಗೊಂಡ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಬಯೋಮೆಟ್ರಿಕ್‌ ಡೇಟಾ ದೊಂದಿಗೆ ಪಾಸ್‌ಪೋರ್ಟ್ ಹೊಂದಿರುವವರ ಚಿತ್ರವನ್ನು ಸ್ಟೋರೇಜ್‌ ಮಾಡುವ ಸಾದ್ಯತೆಯಿದೆ. ಇದರಿಂದ ಮುದ್ರಿತ ಪಾಸ್‌ಪೋರ್ಟ್‌ಗಿಂತ ಎಲೆಕ್ಟ್ರಾನಿಕ್ಸ್‌ ಚಿಪ್‌ನಲ್ಲಿಯೇ ನಿಮ್ಮ ಮಾಹಿತಿ ದೊರೆಯುವುದರಿಂದ ಅಂತರರಾಷ್ಟ್ರೀಯ ಪ್ರಯಾಣ ಇನ್ನು ಸುಲಭವಾಗಲಿದೆ. ಜೊತೆಗೆ ವಿಮಾನಯಾನದಲ್ಲಿ ಹೊಸ ಡಿಜಿಟಲೀಕರಣಕ್ಕೆ ಇದು ಸಹಾಯಮಾಡಲಿದೆ.

Best Mobiles in India

English summary
Tata Consultancy Services (TCS) is expected to begin the rollout of chip-based e-passports in India by the end of 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X