35 ಯೂಟ್ಯೂಬ್ ಚಾನೆಲ್‌ಗಳನ್ನು ಬ್ಲಾಕ್‌ ಮಾಡಿದ ಕೇಂದ್ರ ಸರ್ಕಾರ! ಕಾರಣ ಏನು?

|

ಭಾರತದ ವಿರುದ್ದ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ 35 ಯೂಟ್ಯೂಬ್ ಚಾನೆಲ್‌ಗಳು ಮತ್ತು 2 ವೆಬ್‌ಸೈಟ್‌ಗಳನ್ನು ಕೇಂದ್ರ ಸರ್ಕಾರ ಬ್ಲಾಕ್‌ ಮಾಡಿದೆ. ಈ ಯೂಟ್ಯೂಬ್‌ ಚಾನಲ್‌ಗಳು ಪಾಕಿಸ್ತಾನ ಪ್ರಾಯೋಜಿತ ಚಾನಲ್‌ಗಳಾಗಿದ್ದವು ಎನ್ನುವ ಆತಂಕಕಾರಿ ಮಾಹಿತಿ ಕೂಡ ಹೊರಬಿದ್ದಿದೆ. ಇನ್ನು ಈ ನಕಲಿ ಖಾತೆಗಳು ಡಿಜಿಟಲ್ ಮೀಡಿಯಾ ಮೂಲಕ ಸಂಘಟಿತವಾಗಿ ದೇಶ ವಿರೋದಿ ಸುದ್ದಿಗಳನ್ನು ಹರಡುವಲ್ಲಿ ತೊಡಗಿದ್ದವು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಇದಲ್ಲದೆ ಈ ಯೂಟ್ಯೂಬ್‌ ಚಾನಲ್‌ಗಳು 1 ಕೋಟಿ 20 ಲಕ್ಷಕ್ಕೂ ಹೆಚ್ಚಿನ ಚಂದಾದಾರನ್ನು ಹೊಂದಿದ್ದವು ಎಂದು ಸರ್ಕಾರ ತಿಳಿಸಿದೆ.

ಯೂಟ್ಯೂಬ್‌

ಹೌದು, ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ನಕಲಿ ಚಾನಲ್‌ಗಳ ಹಾವಳಿ ಜಾಸ್ತಿಯಾಗಿದೆ. ಫೇಕ್‌ ಐಡಿ ಮೂಲಕ ಹುಟ್ಟಿಕೊಳ್ಳುವ ಈ ಚಾನಲ್‌ಗಳು ಭಾರತದ ವಿರುದ್ದ ಸುಳ್ಳು ಸುದ್ದಿ ಹರಡುವಲ್ಲಿ ನಿರತವಾಗಿವೆ. ಇಂತಹ ನಕಲಿ ಯೂಟ್ಯೂಬ್‌ ಚಾನಲ್‌ಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬ್ಲಾಕ್‌ ಮಾಡಿದೆ. ಕೇಂದ್ರ ಸರ್ಕಾರ ಬ್ಲಾಕ್‌ ಮಾಡಿರುವ ಯೂಟ್ಯೂಬ್‌ ಚಾನಲ್‌ಗಳಲ್ಲಿರುವ ವೀಡಿಯೊಗಳು 130ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದಿವೆ ಎನ್ನಲಾಗಿದೆ. ಹಾಗಾದ್ರೆ ಭಾರತ ಸರ್ಕಾರ ಈ ಚಾನಲ್‌ಗಳನ್ನು ಬ್ಲಾಕ್‌ ಮಾಡಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯೂಟ್ಯೂಬ್‌

ಭಾರತದ ವಿರುದ್ದ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ ನಕಲಿ ಯೂಟ್ಯೂಬ್‌ ಚಾನಲ್‌ಗಳನ್ನು ಕೇಂದ್ರ ಬ್ಲಾಕ್‌ ಮಾಡಿದೆ. ಈ ಯೂಟ್ಯೂಬ್‌ ಚಾನಲ್‌ಗಳು ಪಾಕಿಸ್ತಾನ ಪ್ರಾಯೋಜಿತ ಎನ್ನಲಾಗಿದೆ. ಸದ್ಯ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 35 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು ಮತ್ತು 2 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಆದೇಶಿಸಿದೆ. ಸಚಿವಾಲಯವು ನಿರ್ಬಂಧಿಸಿದ ಯೂಟ್ಯೂಬ್ ಖಾತೆಗಳು ಒಟ್ಟು 1 ಕೋಟಿ 20 ಲಕ್ಷಕ್ಕೂ ಹೆಚ್ಚು ಚಂದಾದಾರರ ಸಂಖ್ಯೆಯನ್ನು ಹೊಂದಿದ್ದು, ಇದರ ವೀಡಿಯೊಗಳು 130 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ.

ಬ್ಲಾಕ್‌

ಇದಲ್ಲದೆ ಭಾರತ ವಿರೋದಿ ಸಂದೇಶ ಹರಡುತ್ತಿದ್ದ ಎರಡು ಟ್ವಿಟರ್ ಖಾತೆಗಳು, ಎರಡು ಇನ್‌ಸ್ಟಾಗ್ರಾಮ್ ಖಾತೆಗಳು ಮತ್ತು ಒಂದು ಫೇಸ್‌ಬುಕ್ ಖಾತೆಯನ್ನು ಕೂಡ ಬ್ಲಾಕ್‌ ಮಾಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಚಾನಲ್‌ಗಳಲ್ಲಿ ಭಾರತದ ಸೇನೆ, ಭಾರತದ ವಿದೇಶಾಂಗ ನೀತಿ ಕುರಿತು ಸುಳ್ಳು ಸುದ್ದಿಗಳು ಬಿತ್ತರವಾಗಿರೋದು ಪತ್ತೆಯಾಗಿದೆ. ಭಾರತೀಯ ಗುಪ್ತಚರ ಸಂಸ್ಥೆಗಳು ಈ ಸೊಶೀಯಲ್‌ ಮೀಡಿಯಾ ಖಾತೆಗಳು ಮತ್ತು ವೆಬ್‌ಸೈಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಸಚಿವಾಲಯಕ್ಕೆ ಫ್ಲ್ಯಾಗ್ ಮಾಡಿದೆ ಎಂದು ಸರ್ಕಾರ ಹೇಳಿದೆ.

ನಿಷೇಧಿತ

ಇನ್ನು ಸರ್ಕಾರದ ಪ್ರಕಾರ, ಈ ನಿಷೇಧಿತ ಖಾತೆಗಳ ಮುಖ್ಯ ಉದ್ದೇಶ ಸಂಘಟಿತ ರೀತಿಯಲ್ಲಿ ಭಾರತದ ವಿರುದ್ದ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವುದು. ಈ ಮೂಲಕ ದೇಶ ವಿರೋದಿ ಚಟುವಟಿಕೆಗಳಲ್ಲಿ ಯುವಜನತೆ ತೊಡಗುವಂತೆ ಉತ್ತೇಜಿಸುವುದಾಗಿದೆ. ಅದರಲ್ಲೂ ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿ ದೇಶದ ಯುವಜನತೆಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಪಾಕಿಸ್ತಾನ ಪ್ರಾಯೋಜಿತ ಚಾನಲ್‌ಗಳು ಮಾಡಿವೆ. ಜೊತೆಗೆ ಕೆಲವು ಯೂಟ್ಯೂಬ್ ಚಾನೆಲ್‌ಗಳನ್ನು ಪಾಕಿಸ್ತಾನಿ ಟಿವಿ ನ್ಯೂಸ್ ಚಾನೆಲ್‌ಗಳ ಆಂಕರ್‌ಗಳು ನಿರ್ವಹಿಸುತ್ತಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ.

ಯೂಟ್ಯೂಬ್

ಇದಲ್ಲದೆ, ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಪಂಚ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ದೇಶ ವಿರೋದಿ ಸುದ್ದಿಗಳನ್ನು ಹರಡಲು ಈ ಚಾನಲ್‌ಗಳು ಮುಂದಾಗಿದ್ದವು. ಈ ಮೂಲಕ ದೇಶದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಈ ಯೂಟ್ಯೂಬ್ ಚಾನೆಲ್‌ಗಳು ಪೋಸ್ಟ್ ಮಾಡಲು ಪ್ರಾರಂಭಿಸಿವೆ ಎಂದು ಸರ್ಕಾರ ಹೇಳಿಕೊಂಡಿದೆ. ಇದೇ ಕಾರಣಕ್ಕೆ ಭಾರತ ಸರ್ಕಾರದ 2021ರ ಐಟಿ ನಿಯಮಗಳು ಅಡಿಯಲ್ಲಿ ಈ ಯೂಟ್ಯೂಬ್‌ ಚಾನಲ್‌ಗಳನ್ನು ಬ್ಲಾಕ್‌ ಮಾಡಿದೆ.

ಯೂಟ್ಯೂಬ್‌ ಚಾನಲ್‌ಗಳ ನೆಟ್‌ವರ್ಕ್

ಯೂಟ್ಯೂಬ್‌ ಚಾನಲ್‌ಗಳ ನೆಟ್‌ವರ್ಕ್

ಸದ್ಯ ಭಾರತ ಸರ್ಕಾರ ನಿಷೇದ ಮಾಡಿರುವ 35 ಯೂಟ್ಯೂಬ್‌ ಅಕೌಂಟ್‌ಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ನಾಲ್ಕು ಸಂಘಟಿತ ತಪ್ಪು ಮಾಹಿತಿ ಜಾಲಗಳ ಭಾಗವೆಂದು ಗುರುತಿಸಲಾಗಿದೆ ಎಂದು ಸರ್ಕಾರ ಘೋಷಿಸಿದೆ. ಇವುಗಳಲ್ಲಿ ಅಪ್ನಿ ದುನಿಯಾ ನೆಟ್‌ವರ್ಕ್ 14 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿದೆ ಮತ್ತು ತಲ್ಹಾ ಫಿಲ್ಮ್ಸ್ ನೆಟ್‌ವರ್ಕ್ 13 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿದೆ. ಈ ನಾಲ್ಕು ಚಾನೆಲ್‌ಗಳ ಸೆಟ್ ಮತ್ತು ಇತರ ಎರಡು ಚಾನಲ್‌ಗಳ ಸೆಟ್‌ಗಳು ಪರಸ್ಪರ ಸಿಂಕ್ರೊನೈಸೇಶನ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.

Most Read Articles
Best Mobiles in India

English summary
Indian Govt bans 35 YouTube channels, 2 websites for spreading anti-India fake news.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X