ಇನ್ಫಿನಿಕ್ಸ್ ನೋಟ್ 11 ಮತ್ತು ಇನ್ಫಿನಿಕ್ಸ್ ನೋಟ್ 11 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್!

|

ಭಿನ್ನ ಪ್ರೈಸ್‌ನಲ್ಲಿ ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿರುವ ಇನ್‌ಫಿನಿಕ್ಸ್ ಕಂಪನಿಯು ತನ್ನ ಇನ್‌ಫಿನಿಕ್ಸ್ ನೋಟ್ 11 ಫೋನ್‌ ಸರಣಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಸರಣಿಯು ಇನ್‌ಫಿನಿಕ್ಸ್ ನೋಟ್ 11 ಮತ್ತು ಇನ್ಫಿನಿಕ್ಸ್ ನೋಟ್ 11 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದ್ದು, ಮೀಡಿಯಾ ಟೆಕ್‌ ಹಿಲಿಯೋ G96 SoC ಪ್ರೊಸೆಸರ್‌ ಶಕ್ತಿಯನ್ನು ಪಡೆದುಕೊಂಡಿದೆ. ಕಂಪನಿಯು ಅಕ್ಟೋಬರ್ 12 ರಂದು ಇನ್‌ಫಿನಿಕ್ಸ್ ನೋಟ್ 11 ಸರಣಿಯನ್ನು ಜಾಗತಿಕವಾಗಿ ಅನಾವರಣ ಆಗಿತ್ತು.

ಸಪೋರ್ಟ್‌

ಹೌದು, ಇನ್‌ಫಿನಿಕ್ಸ್‌ ಕಂಪನಿಯು ನೂತನವಾಗಿ ಇನ್‌ಫಿನಿಕ್ಸ್ ನೋಟ್ 11 ಮತ್ತು ಇನ್ಫಿನಿಕ್ಸ್ ನೋಟ್ 11 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಹೊಂದಿದೆ. ಇನ್ಫಿನಿಕ್ಸ್ ನೋಟ್ 11 ಸೆಲೆಸ್ಟಿಯಲ್ ಸ್ನೋ, ಗ್ಲೇಸಿಯರ್ ಗ್ರೀನ್ ಮತ್ತು ಗ್ರ್ಯಾಫೈಟ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದೆ. ಅದೇ ರೀತಿ ಇನ್ಫಿನಿಕ್ಸ್ ನೋಟ್ 11 ಪ್ರೊ ಹೇಜ್ ಗ್ರೀನ್, ಮಿಸ್ಟ್ ಬ್ಲೂ ಮತ್ತು ಮಿಥ್ರಿಲ್ ಗ್ರೇ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಫೋನ್‌ಗಳ ಲಭ್ಯತೆಯ ಬಗ್ಗೆ ಇನ್ನು ಮಾಹಿತಿ ಹೊರಹಾಕಿಲ್ಲ. ಹಾಗಾದರೇ ಈ ಸ್ಮಾರ್ಟ್‌ಫೋನ್‌ಗಳ ಇತರೆ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಂಡ್ರಾಯ್ಡ್

ಹೊಸದಾಗಿ ಬಿಡುಗಡೆ ಆಗಿರುವ ಇನ್ಫಿನಿಕ್ಸ್ ನೋಟ್ 11 ಮತ್ತು ಇನ್ಫಿನಿಕ್ಸ್ ನೋಟ್ 11 ಪ್ರೊ ಫೋನ್‌ಗಳು ಡ್ಯುಯಲ್-ಸಿಮ್ (ನ್ಯಾನೋ) ಕಾರ್ಡ್ ಸೆಟ್‌ಅಪ್‌ ಸಪೋರ್ಟ್‌ ಪಡೆದಿವೆ. ಹಾಗೆಯೇ ಆಂಡ್ರಾಯ್ಡ್ 11 ಓಎಸ್‌ ಆಯ್ಕೆಯನ್ನು ಒಳಗೊಂಡಿದೆ. ಇನ್ಫಿನಿಕ್ಸ್ ನೋಟ್ 11 ಪ್ರೊ ಫೋನ್ 1,080x2,460 ಪಿಕ್ಸೆಲ್‌ಗಳೊಂದಿಗೆ 6.95-ಇಂಚಿನ ಫುಲ್ ಹೆಚ್‌ಡಿ+ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ದರ ಮತ್ತು 180Hz ಸ್ಪರ್ಶ ಮಾದರಿ ದರವನ್ನು ಹೊಂದಿದೆ.

ಎಸ್‌ಡಿ

ಇನ್ಫಿನಿಕ್ಸ್ ನೋಟ್ 11 ಪ್ರೊ ಫೋನ್ ಮೀಡಿಯಾ ಟೆಕ್ ಹಿಲಿಯೋ G96 SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದಿದ್ದು, ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸಬಹುದಾಗಿದೆ. ಇನ್ಫಿನಿಕ್ಸ್ ನೋಟ್ 11 ಸಹ ಮೀಡಿಯಾ ಟೆಕ್ ಹಿಲಿಯೋ G96 SoC ಪ್ರೊಸೆಸರ್‌ ಒಳಗೊಂಡದೆ.

ಸೆನ್ಸಾರ್

ಇನ್ನು ಇನ್ಫಿನಿಕ್ಸ್ ನೋಟ್ 11 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದ್ದು, ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇನ್ಫಿನಿಕ್ಸ್ ನೋಟ್ 11 ಫೋನ್ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾ 2 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿದೆ. ಇನ್ನು ಈ ಎರಡಿ ಫೋನ್‌ಗಳು 16 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒಳಗೊಂಡಿವೆ.

ಸೌಂಡ್‌

ಹಾಗೆಯೇ ಈ ಎರಡು ಫೋನ್‌ಗಳು 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಈ ಫೋನ್‌ಗಳು ಗೇಮಿಂಗ್ ಪೂರಕವಾಗಿವೆ. ಜೊತೆಗೆ ಡಿಟಿಎಸ್ ಸರೌಂಡ್ ಸೌಂಡ್‌ ನೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿವೆ. ಹಾಗೆಯೇ ಫೇಸ್ ಅನ್‌ಲಾಕ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಪಡೆದಿವೆ. ಇನ್ಫಿನಿಕ್ಸ್ ನೋಟ್ 11 ಪ್ರೊ ಫೋನ್‌ 5G, 4G LET, ವೈ-ಫೈ, ಬ್ಲೂಟೂತ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಯುಎಸ್ ಬಿ ಒಟಿಜಿ ಮತ್ತು 3.5 ಎಂಎಂ ಹೆಡ್ ಫೋನ್ ಜ್ಯಾಕ್ ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ. ಈ ಎರಡು ಫೋನ್‌ಗಳ ಬೆಲೆ ಎಷ್ಟು ಎನ್ನುವ ಬಗ್ಗೆ ಇನ್ಫಿನಿಕ್ಸ್ ಕಂಪನಿಯು ಅಧಿಕೃತವಾಗಿ ಮಾಹಿತಿ ಹೊರ ಹಾಕಿಲ್ಲ. ಹಾಗೆಯೇ ಈ ಫೋನ್‌ಗಳ ಸೇಲ್‌ ದಿನಾಂಕವನ್ನು ಇನ್ನೂ ತಿಳಿಸಿಲ್ಲ.

Most Read Articles
Best Mobiles in India

English summary
Infinix Note 11, Infinix Note 11 Pro With 5,000mAh Battery Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X