ಇಂದು ಲಾಂಚ್ ಆಗಲಿದೆ ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಪ್ಲಸ್‌ ಸ್ಮಾರ್ಟ್‌ಫೋನ್‌!

|

ಇನ್‌ಫಿನಿಕ್ಸ್‌ ಸಂಸ್ಥೆಯು ಈಗಾಗಲೇ ಅಗ್ಗದ ಸ್ಮಾರ್ಟ್‌ಫೋನ್ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಮತ್ತೆ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಪ್ಲಸ್ ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಇಂದು (ಜುಲೈ 21) ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಟೀಸರ್ ಪುಟವು ಕಾಣಿಸಿಕೊಂಡಿದೆ.

ಇನ್‌ಫಿನಿಕ್ಸ್‌

ಇನ್ನೂ ಕಂಪನಿಯು ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಪ್ಲಸ್‌ ಸ್ಮಾರ್ಟ್‌ಫೋನ್‌ ಎಲ್ಲ ಫೀಚರ್ಸ್‌ಗಳು ಬಹಿರಂಗಪಡಿಸಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಇರಲಿದ್ದು, ಸುಮಾರು 31 ದಿನಗಳ ಸ್ಟ್ಯಾಂಡ್‌ಬೈ ಸಮಯ ಮತ್ತು 38 ಗಂಟೆಗಳ ಟಾಕ್‌ಟೈಮ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ 6.82 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು ಡ್ರಾಪ್ ನಾಚ್ ಮಾದರಿಯೊಂದಿಗೆ ಬರಲಿದೆ ಎಂದು ಹೇಳುತ್ತದೆ.

ತ್ರಿವಳಿ ಕ್ಯಾಮೆರಾ

ಹಾಗೆಯೇ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 13 ಮೆಗಾಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿರಲಿದೆ. ಹಾಗೆಯೇ ಕ್ಯಾಮೆರಾವು AI ಬೆಂಬಲಿತವಾಗಿರಲಿವೆ. ಇನ್ನುಳಿದ ಎರಡು ಕ್ಯಾಮೆರಾಗಳ ಸೆನ್ಸಾರ್‌ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ ಒಂದು ಕ್ಯಾಮೆರಾ ಇದೆ ಮತ್ತು ಇದರ ಸೆನ್ಸಾರ್‌ ಬಗ್ಗೆ ಹೆಚ್ಚಿನ ಮಾಹಿತಿ ಹೊರಹಾಕಿಲ್ಲ. ಎರಡೂ ಬದಿಯಲ್ಲಿ ಎರಡು LED ಫ್ಲ್ಯಾಶ್‌ ಮಾಡ್ಯೂಲ್ಗಳಿವೆ.

 ಟೆಕ್ ಹಿಲಿಯೊ

ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್‌ ಒಳಗೊಂಡಿರಲಿದ್ದು, 3 GB RAM ವೇರಿಯಂಟ್ ಆಯ್ಕೆ ಪಡೆದಿರಲಿದೆ. ಫೋನ್‌ ಸುರಕ್ಷತೆಗಾಗಿ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ಟೀಸರ್‌ನಲ್ಲಿ ಇರುವಂತೆ ಈ ಫೋನ್ ಆಕ್ವಾ ನೀಲಿ / ಹಸಿರು ಫಿನಿಶ್ ಬಣ್ಣದ ಆಯ್ಕೆ ಹೊಂದಿರಲಿದೆ. ಇತರೆ ಬಣ್ಣಗಳ ಆಯ್ಕೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಕಂಪನಿಯು ತಿಳಿಸಿಲ್ಲ.

ಹೈಲೈಟ್ಸ್‌

ಇನ್ನು ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್‌ ಅಂದರೇ ಅದು ಸಿನಿಮ್ಯಾಟಿಕ್ ಸ್ಕ್ರೀನ್‌ ಮತ್ತು 6000mAh ಬ್ಯಾಟರಿ ಬ್ಯಾಕ್‌ಅಪ್. ಗೇಮಿಂಗಿಗೂ ಸುಮಾರು 15 ಗಂಟೆಗಳ ಬ್ಯಾಕ್‌ಅಪ್‌ ಒದಗಿಸಲಿದೆ ಎಂದು ಹೇಳಿಕೊಂಡಿದೆ. 44 ಗಂಟೆ ಮ್ಯೂಸಿಕ್‌ ಪ್ಲೇಬ್ಯಾಕ್‌ ನೀಡಲಿದೆ ಎನ್ನಲಾಗಿದೆ. ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಪ್ಲಸ್‌ ಸ್ಮಾರ್ಟ್‌ಫೋನ್‌ ಇಂದು ಮಧ್ಯಾಹ್ನ 12ರಂದು ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ತಾಣದಲ್ಲಿ ಅನಾವರಣಗೊಳ್ಳಲಿದೆ.

Most Read Articles
Best Mobiles in India

English summary
The Infinix Smart 4 Plus will be available exclusively on Flipkart.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X