Just In
Don't Miss
- Automobiles
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- News
ಕರ್ನಾಟಕದ 25 ಜಿಲ್ಲೆಗಳಲ್ಲಿ ಒಂದಂಕಿ ಕೊರೊನಾವೈರಸ್ ಕೇಸ್!
- Movies
'ತಲೆದಂಡ' ಸಿನಿಮಾಕ್ಕೆ ಅನ್ಯಾಯ: ಮನವಿ ಮಾಡಿದ ಸಂಚಾರಿ ವಿಜಯ್
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Sports
ಸೌತಾಂಪ್ಟನ್ನಲ್ಲಿ ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
- Lifestyle
ಹೀಗೆ ಆಯ್ಕೆ ಮಾಡಿದರೆ ನೀವು ಬಯಸಿದಂಥ ಸಂಗಾತಿಯೇ ಸಿಗುವರು
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 4 ಲಾಂಚ್!
ಬಜೆಟ್ ಬೆಲೆಯಲ್ಲಿ ಹಲವು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿ ಸೈ ಅನಿಸಿಕೊಂಡಿರುವ ಇನ್ಫಿನಿಕ್ಸ್ ಕಂಪನಿಯು ಇದೀಗ ಮತ್ತೊಂದು ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಪರಿಚಯಿಸಿದೆ. ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 4 ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿರುವುದು ಪ್ರಮುಖ ಹೈಲೈಟ್ ಆಗಿದೆ.

ಹೌದು, ಇನ್ಫಿನಿಕ್ಸ್ ಕಂಪನಿಯು ಇನ್ಫಿನಿಕ್ಸ್ ಸ್ಮಾರ್ಟ್ 4 ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್ನಲ್ಲಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 6,999 ರೂ.ಗಳಾಗಿದ್ದು, ಇದೇ ನವೆಂಬರ್ 8ರಂದು ಫ್ಲಿಪ್ಕಾರ್ಟ್ನಲ್ಲಿ ಫಸ್ಟ್ ಸೇಲ್ ನಡೆಸಲಿದೆ. ಬ್ಲ್ಯಾಕ್, ಓಶಿಯನ್ ವೇವ್ ಹಾಗೂ ವೈಲೆಟ್ ಬಣ್ಣಗಳ ಆಯ್ಕೆ ಪಡೆದಿದೆ. ಹಾಗಾದರೇ ಇನ್ಫಿನಿಕ್ಸ್ ಸ್ಮಾರ್ಟ್ 4 ಸ್ಮಾರ್ಟ್ಫೋನ್ ಇತರೆ ಯಾವೆಲ್ಲಾ ಫೀಚರ್ಸ್ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್ಪ್ಲೇ ರಚನೆ
ಇನ್ಫಿನಿಕ್ಸ್ ಸ್ಮಾರ್ಟ್ 4 ಸ್ಮಾರ್ಟ್ಫೋನ್ 1,640x720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.82 ಇಂಚಿನ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದ್ದು, ಡಿಸ್ಪ್ಲೇಯ ಅನುಪಾತವು 20:5:9 ಆಗಿದೆ. ಹಾಗೆಯೇ ಸ್ಕ್ರೀನ್ನಿಂದ ಬಾಹ್ಯಬಾಡಿಯ ನಡುವಿನ ಅನುಪಾತವು ಶೇ.90.5ರಷ್ಟು ಆಗಿದೆ.

ಪ್ರೊಸೆಸರ್ ಬಲ
ಇನ್ಫಿನಿಕ್ಸ್ ಸ್ಮಾರ್ಟ್ 4 ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹಿಲಿಯೊ A22 SoC, ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಪಡೆದಿದೆ. ಹಾಗೆಯೇ 2GB RAM + 32GB ಆಂತರಿಕ ಸ್ಥಳಾವಕಾಶ ವೇರಿಯಂಟ್ ಆಯ್ಕೆ ಹೊಂದಿದೆ. ಎಸ್ಡಿ ಕಾರ್ಡ್ ಮೂಲಕ ಬಾಹ್ಯವಾಗಿ 256GB ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಡ್ಯುಯಲ್ ಕ್ಯಾಮೆರಾ
ಇನ್ಫಿನಿಕ್ಸ್ ಸ್ಮಾರ್ಟ್ 4 ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ಪಡೆದಿದೆ. ಮುಖ್ಯ ಕ್ಯಾಮೆರಾವು 13 ಮೆಗಾಪಿಕ್ಸಲ್ ಸೆನ್ಸಾರ್ ಪಡೆದಿದ್ದು, ಸೆಕೆಂಡರಿ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಒಳಗೊಂಡಿದೆ. ಸೆಲ್ಫಿಗಾಗಿ 8ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದ್ದು, AI 3D ಬ್ಯೂಟಿ, ಪನೋರಮಾ, ವೈಲ್ಡ್ ಸೆಲ್ಫಿ, ಎಲ್ಇಡಿ ಸೇರಿದಂತೆ ಆಕರ್ಷಕ ಫೀಚರ್ಸ್ಗಳನ್ನು ಪಡೆದಿದೆ.

ಬ್ಯಾಟರಿ ಬಾಳಿಕೆ
ಇನ್ಫಿನಿಕ್ಸ್ ಸ್ಮಾರ್ಟ್ 4 ಸ್ಮಾರ್ಟ್ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಪಡೆದಿದೆ. 10W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದರೊಂದಿಗೆ ರಿಯರ್ ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್, ಆಂಬಿಯಂಟ್ ಲೈಟ್ ಸೆನ್ಸಾರ್, ಇ-ಕಾಂಪಾಸ್ ನಂತಹ ಸೌಲಭ್ಯಗಳನ್ನು ಸಹ ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್ ಸ್ಮಾರ್ಟ್ 4 ಸ್ಮಾರ್ಟ್ಫೋನ್ 2GB RAM + 32GB ವೇರಿಯಂಟ್ ಆಯ್ಕೆ ಪಡೆದಿದೆ. ಈ ಫೋನ್ ಬೆಲೆಯು 6,999ರೂ.ಗಳು ಆಗಿದೆ. ಇದೇ ನವೆಂಬರ್ 8ರಂದು ಫ್ಲಿಪ್ಕಾರ್ಟ್ ತಾಣದಲ್ಲಿ ಮೊದಲ ಸೇಲ್ ಆರಂಭಿಸಲಿದೆ. ಇನ್ನು ಈ ಫೋನ್ ಬ್ಲ್ಯಾಕ್, ಓಶಿಯನ್ ವೇವ್ ಹಾಗೂ ವೈಲೆಟ್ ಬಣ್ಣಗಳ ಆಯ್ಕೆ ಪಡೆದಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190