ರೀಲ್ಸ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದ ಇನ್‌ಸ್ಟಾಗ್ರಾಮ್‌!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ತನ್ನ ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಸಮಯದ ಮಿತಿಯನ್ನು ಹೆಚ್ಚು ಮಾಡಿದೆ. ಅಂದರೆ ರೀಲ್‌ಗಳ ಲೆಂತ್‌ ಅನ್ನು ಜಾಸ್ತಿ ಮಾಡಿದೆ. ಆದ್ದರಿಂದ ಬಳಕೆದಾರರು ಮುಂದೆ ವೀಡಿಯೊಗಳನ್ನು ಮಾಡಲು ಸಾಧ್ಯವಾಗುತ್ತದೆ. ಕಂಪನಿಯು ತನ್ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಈ ಹೊಸ ಅಪ್ಡೇಟ್‌ ಅನ್ನು ಪ್ರಕಟಿಸಿದೆ. ಇತ್ತೀಚಿನ ಟ್ವೀಟ್ ಪ್ರಕಾರ, ಇನ್ಸ್ಟಾಗ್ರಾಮ್ ರೀಲ್ಸ್ ವೀಡಿಯೊ ಉದ್ದವನ್ನು 60 ಸೆಕೆಂಡುಗಳಿಗೆ ಹೆಚ್ಚಿಸಲಾಗಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಸಮಯದ ಮಿತಿಯನ್ನು ಹೆಚ್ಚಿನಸಲಾಗಿದೆ. ಈ ಹಿಂದೆ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ 15-ಸೆಕೆಂಡ್ ಅಥವಾ 30-ಸೆಕೆಂಡ್ ವೀಡಿಯೊ ಉದ್ದದ ಮಿತಿಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಈಗ ನೀವು 60 ಸೆಕೆಂಡುಗಳ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ತನ್ನ ರೀಲ್ಸ್‌ನ ಉದ್ದವನ್ನು ಹೆಚ್ಚಿಸುವ ಮೂಲಕ ತನ್ನ ಪ್ರತಿಸ್ಪರ್ಧಿ ಟಿಕ್‌ಟಾಕ್‌ಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದೆ. ಅಲ್ಲದೆ ಇತರೆ ಶಾರ್ಟ್‌ ವೀಡಿಯೋ ಪ್ಲಾಟ್‌ಫಾರ್ಮ್‌ಗಳಿಗೆ ಟಕ್ಕರ್‌ ಕೊಟ್ಟಿದೆ. ಇದರಿಂದ ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ವೀಡಿಯೋ ಮಾಡುವವರು ಒಂದು ನಿಮಿಷದ ವೀಡಿಯೋ ಕ್ರಿಯೆಟ್‌ ಮಾಡಬಹುದಾಗಿದೆ. ಈ ಮೂಲಕ ಇನ್ನು ಹೆಚ್ಚಿನ ಮನರಂಜನೆಯನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

ಇನ್‌ಸ್ಟಾಗ್ರಾಮ್‌

ಇದಲ್ಲದೆ ಇನ್‌ಸ್ಟಾಗ್ರಾಮ್‌ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹದಿಹರೆಯದ ಬಳಕೆದಾರರ ಖಾಸಗಿ ಖಾತೆಗಳಿಗೆ ಡೀಫಾಲ್ಟ್ ಮಾಡುವ ಮೂಲಕ ಹೊಸ ಸೆಕ್ಯುರ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಈ ವಾರದಿಂದ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಥವಾ ಕೆಲವು ದೇಶಗಳಲ್ಲಿ 18 ವರ್ಷದೊಳಗಿನ) ಎಲ್ಲರೂ ಇನ್‌ಸ್ಟಾಗ್ರಾಮ್‌ಗೆ ಸೇರಿದಾಗ ಖಾಸಗಿ ಖಾತೆಗೆ ಡೀಫಾಲ್ಟ್ ಆಗುತ್ತಾರೆ. ಜಾಹೀರಾತುದಾರರು ಜಾಹೀರಾತುದಾರರೊಂದಿಗೆ ಯುವಜನರನ್ನು ತಲುಪಬೇಕಾದ ಆಯ್ಕೆಗಳನ್ನು ಕಂಪನಿಯು ಸೀಮಿತಗೊಳಿಸುತ್ತಿದೆ.

ಇನ್‌ಸ್ಟಾಗ್ರಾಮ್‌

Instagram ನ ಸ್ವಂತ ಪರೀಕ್ಷೆಯ ಪ್ರಕಾರ, ಸೈನ್ ಅಪ್ ಸಮಯದಲ್ಲಿ ಹತ್ತು ಯುವಕರಲ್ಲಿ ಎಂಟು ಮಂದಿ ಖಾಸಗಿ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಸ್ವೀಕರಿಸಿದ್ದಾರೆ. ಈ ಬದಲಾವಣೆಗಳು ಆಗ್ನೇಯ ಏಷ್ಯಾ ಮತ್ತು ಭಾರತದ ಎಲ್ಲ ಬಳಕೆದಾರರಿಗೆ ಅನ್ವಯವಾಗುತ್ತವೆ ಮತ್ತು ಪ್ಲಾಟ್‌ಫಾರ್ಮ್‌ಗೆ ಸೇರುವಾಗ ಅವರ ವಯಸ್ಸನ್ನು ಪ್ರವೇಶಿಸಲು ಅವರು ಪ್ರಾಂಪ್ಟ್ ನೋಡುತ್ತಾರೆ. ಆದಾಗ್ಯೂ, ಈ ಬಳಕೆದಾರರು ಯಾವಾಗಲೂ ಸಾರ್ವಜನಿಕ ಖಾತೆಗೆ ಬದಲಾಯಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಇನ್‌ಸ್ಟಾಗ್ರಾಮ್‌

ಜೊತೆಗೆ ಇನ್‌ಸ್ಟಾಗ್ರಾಮ್‌ ಕಂಪನಿಯು "ಬೋನಸ್" ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದು ಸೃಷ್ಟಿಕರ್ತರಿಗೆ ರೀಲ್ಸ್ ಮಾಡುವ ಮೂಲಕ ಹಣವನ್ನು ಸಂಪಾದಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ. ಡೆವಲಪರ್ ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳಲ್ಲಿ ಒಂದು "ಬೋನಸ್" ಆಯ್ಕೆಯು ಸಾಮಾನ್ಯ ಬಳಕೆದಾರರಿಗೆ ಲಭ್ಯವಿರುವುದಿಲ್ಲ ಎಂದು ದೃಡಪಡಿಸಿದೆ.

Most Read Articles
Best Mobiles in India

Read more about:
English summary
Instagram allowed users to make 15-second or 30-second video length limits, and now you also have a 60-second option.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X