ನಕಲಿ ಖಾತೆಗಳನ್ನು ಪತ್ತೆ ಹಚ್ಚಲು ಇನ್‌ಸ್ಟಾಗ್ರಾಮ್‌ನಿಂದ ನ್ಯೂ ಪ್ಲ್ಯಾನ್‌!

|

ಇದು ಸೊಶೀಯಲ್‌ ಮೀಡಿಯಾ ಜಮಾನ. ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದಾಗಿದೆ. ತನ್ನ ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರುವ ಇನ್‌ಸ್ಟಾಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇರುವ ಅನುಮಾನಾಸ್ಪದ ಖಾತೆಗಳನ್ನು ಗುರುತಿಸುವ ಕಾರ್ಯ ಮಾಡಲು ಮುಂದಾಗಿದೆ. ಸದ್ಯ ಇನ್‌ಸ್ಟಾಗ್ರಾಮ್‌ ಅನುಮಾನಾಸ್ಪದ ಖಾತೆಗಳನ್ನು ಸರ್ಕಾರಿ ಐಡಿಯೊಂದಿಗೆ ಅವರ ಗುರುತುಗಳನ್ನು ಪರಿಶೀಲಿಸುವ ಕೆಲಸಕ್ಕೆ ಮುಂದಾಗಿದೆ.

ಇನ್‌ಸ್ಟಾಗ್ರಾಮ್‌

ಹೌದು, ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರ ಖಾತೆಗಳ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿದೆ. ಇನ್‌ಸ್ಟಾಗ್ರಾಮ್‌ ಬಳಕೆದಾರರು ಕುಶಲತೆಯಿಂದ ನಿರ್ವಹಿಸುತ್ತಿರುವ ಬಾಟ್‌ಗಳು ಮತ್ತು ಇತರ ಖಾತೆಗಳನ್ನು ತೆಗೆಯಲು Instagram ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಶೀಘ್ರದಲ್ಲೇ ಬಳಕೆದಾರರು ‘potential inauthentic behaviour' ಎಂದು ಅನುಮಾನಿಸಿದರೆ ಅವರ ಗುರುತುಗಳನ್ನು ಪರಿಶೀಲಿಸಲಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಹೊಸ ನೀತಿಯನ್ನು ಪರಿಚಯಿಸಲಿದೆ. ಇದರ ಅನ್ವಯ ನಕಲಿ ಖಾತೆಗಳನ್ನು ಪತ್ತೆ ಹಚ್ಚಲು ಇನ್‌ಸ್ಟಾಗ್ರಾಮ್‌ ಮುಂದಾಗಿದೆ. ಇದಕ್ಕಾಗಿ ಸರ್ಕಾರಿ ಐಡಿ ಗುರುತಿನೊಂದಿಗೆ ಪರಿಶೀಲಿಸಲಿದೆ ಎನ್ನಲಾಗ್ತಿದೆ. ಇದು ಹೆಚ್ಚಿನ ಬಳಕೆದಾರರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಇನ್‌ಸ್ಟಾಗ್ರಾಮ್‌ ಹೇಳಿದೆ. ಆದರೆ ಅದು ಅನುಮಾನಾಸ್ಪದ ಖಾತೆಗಳನ್ನು ಗುರಿಯಾಗಿಸಲಿದೆ ಎಂದು ಹೇಳಿದೆ. ಸಂಘಟಿತ ಅಸಮರ್ಪಕ ನಡವಳಿಕೆಯಲ್ಲಿ ತೊಡಗಿರುವ ಖಾತೆಗಳನ್ನು ಇದು ಒಳಗೊಂಡಿದೆ.

ಇನ್‌ಸ್ಟಾಗ್ರಾಮ್‌

ಇದರಿಂದ ಇನ್‌ಸ್ಟಾಗ್ರಾಮ್‌ ನಲ್ಲಿ ಲಬ್ಯವಿರುವ ನಕಲಿ ಖಾತೆಗಳನ್ನು ತಡೆಹಿಡಿಯಲು ಮುಂದಾಗಿದೆ. ಇದರಿಂದ ಯಾರೊಬ್ಬರ ಅನುಯಾಯಿಗಳು ಬೇರೆ ದೇಶದಿಂದ ತಮ್ಮ ಸ್ಥಳಕ್ಕೆ ಬಂದಾಗ ಅಥವಾ ಬೋಟ್ ಖಾತೆಗಳಂತೆ ಯಾಂತ್ರೀಕೃತಗೊಂಡ ಚಿಹ್ನೆಗಳನ್ನು ಕಂಡುಕೊಂಡರೆ ಅದನ್ನು ಪರಿಶೀಲಿಸಲಿದೆ ಎಂದು ಹೇಳಿದೆ. ಅಲ್ಲದೆ ಹೊಸ ನಿಯಮಗಳ ಅಡಿಯಲ್ಲಿ, ಈ ‘ಅನುಮಾನಾಸ್ಪದ' ಖಾತೆಗಳನ್ನು ಸರ್ಕಾರಿ ಐಡಿ ಸಲ್ಲಿಸುವ ಮೂಲಕ ತಮ್ಮ ಗುರುತನ್ನು ಪರಿಶೀಲಿಸಬಹುದಾಗಿದೆ.

ಇನ್‌ಸ್ಟಾಗ್ರಾಮ್

ಈ ನಿಯಮದಲ್ಲಿ ಬಳಕೆದಾರರ ತನ್ನ ಗುರುತನ್ನು ದೃಡೀಕರಿಸವುದರಲ್ಲಿ ವಿಫಲವಾದರೆ, ಇನ್‌ಸ್ಟಾಗ್ರಾಮ್ ಫೀಡ್‌ನಲ್ಲಿ ಅವರ ಪೋಸ್ಟ್‌ಗಳನ್ನು ಅಥವಾ ಅವರ ಖಾತೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುತ್ತದೆ. ಈಗಾಗಲೇ ಫೇಸ್‌ಬುಕ್‌ ಕೂಡ ಇದೇ ರೀತಿಯ ನೀತಿಯನ್ನು ಜಾರಿಗೆ ತಂದಿದೆ, ಅದು ಜನಪ್ರಿಯ ಪುಟಗಳನ್ನು ಚಲಾಯಿಸುವ ಜನರು ತಮ್ಮ ಗುರುತುಗಳನ್ನು ಪರಿಶೀಲಿಸುವ ಅಗತ್ಯವಿದೆ. ಸದ್ಯ ಇನ್‌ಸ್ಟಾಗ್ರಾಮ್‌ ಕೂಡ ತನ್ನ ಬಳಕೆದಾರರಿಗೆ ಒರಿಜಿನಲ್‌ ಖಾತೆಗಳನ್ನು ಐಡೆಟಿಂಟಿ ಮಾಡಲು ಮುಂದಾಗಿದೆ.

Most Read Articles
Best Mobiles in India

Read more about:
English summary
Instagram is taking some strict measures to weed out bots and other accounts that are manipulating the platform..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X