ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಆಯ್ಕೆ!..ಬಳಕೆದಾರರಿಗೆ ಆದಾಯ ಗಳಿಸಲು ನೆರವಾಗಲಿದೆ!

|

ಜನಪ್ರಿಯ ಸಾಮಾಜಿಕ ಜಾಲತಾಣ ಆಗಿ ಗುರುತಿಸಿಕೊಂಡಿರುವ ಇನ್‌ಸ್ಟಾಗ್ರಾಮ್‌ (Instagram) ಈಗಾಗಲೇ ಬಳಕೆದಾರರಿಗೆ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಹೊಸದಾಗಿ ಇನ್‌ಸ್ಟಾಗ್ರಾಮ್ ಚಂದಾದಾರಿಕೆ (Instagram Subscriptions) ಆಯ್ಕೆ ಪರಿಚಯಿಸುತ್ತದೆ. ಈ ಆಯ್ಕೆಯು ಕ್ರಿಯೆಟರ್ ಗಳು ಆದಾಯ ಗಳಿಸಲು ಅನುವು ಮಾಡಿಕೊಡುತ್ತದೆ. ಇನ್ನು ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ನಲ್ಲಿ ಕ್ರಿಯೆಟರ್ಸ್‌ ಫಾಲೋವರ್ಸ್‌ ಜೊತೆಗೆ ಆದಾಯ ಸಹ ಗಳಿಸಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಆಯ್ಕೆ!..ಬಳಕೆದಾರರಿಗೆ ಆದಾಯ ಗಳಿಸಲು ನೆರವಾಗಲಿದೆ!

ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್ ಸೋಶಿಯಲ್ ತಾಣವು ಅತ್ಯುತ್ತಮ ಫೋಟೊ ಶೇರಿಂಗ್ ವೇದೀಕೆಯಾಗಿದೆ. ಹಾಗೆಯೇ ಇನ್‌ಸ್ಟಾಗ್ರಾಮ್‌ ರೀಲ್ ಮೂಲಕ ಕಿರು ವಿಡಿಯೋ ಸಹ ಪೋಸ್ಟ್ ಮಾಡಬಹುದಾಗಿದೆ. ಈ ಮೂಲಕ ಕ್ರಿಯೆಟರ್ಸ್‌ ತಮ್ಮ ಪ್ರತಿಭೆ ಅನಾವರಣ ಮಾಡುಬಹುದು. ಈಗಾಗಲೇ ಅನೇಕರು ತಮ್ಮದೆ ಆದ ಫಾಲೋವರ್ಸ್‌ ಬಳಗ ಹೊಂದಿ, ಜನಪ್ರಿಯತೆ ಗಳಿಸಿದ್ದಾರೆ. ಇನ್‌ಸ್ಟಾಗ್ರಾಮ್ ಚಂದಾದಾರಿಕೆ ಆಯ್ಕೆಯು ಕ್ರಿಯೆಟರ್ಸ್‌ಗಳಿಗೆ ಫಾಲೋವರ್ಸ್‌ ಜೊತೆಗೆ ಆದಾಯ ತರುವಲ್ಲಿ ನೆರವಾಗಲಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಆಯ್ಕೆ!..ಬಳಕೆದಾರರಿಗೆ ಆದಾಯ ಗಳಿಸಲು ನೆರವಾಗಲಿದೆ!

ಇನ್‌ಸ್ಟಾಗ್ರಾಮ್ ಚಂದಾದಾರಿಕೆ ಈ ಫೀಚರ್‌ ಕೆಲವು ಕ್ರಿಯೆಟರ್ಸ್‌/ ರಚನೆಕಾರರೊಂದಿಗೆ ಪರೀಕ್ಷಾರ್ಥ ಹಂತದಲ್ಲಿದೆ. ಈ ಆಯ್ಕೆಯಲ್ಲಿ ಅವರು ತಮ್ಮ ಆಯ್ಕೆಯ ಮಾಸಿಕ ಬೆಲೆಯನ್ನು ಹೊಂದಿಸಲು ಸಾಧ್ಯವಾಗುತ್ತದೆ. ಅಲ್ಲದೇ ಅವರ ಪ್ರೊಫೈಲ್‌ನಲ್ಲಿ 'ಚಂದಾದಾರರಾಗಿ' (subscriber) ಬಟನ್ ಗೆ ಅವಕಾಶ ಇರುತ್ತದೆ ಎನ್ನಲಾಗಿದೆ. ಇನ್‌ಸ್ಟಾಗ್ರಾಮ್ ಚಂದಾದಾರಿಕೆ ಈ ಫೀಚರ್‌ ಸದ್ಯದಲ್ಲೇ ಕ್ರಿಯೆಟರ್ಸ್‌/ ರಚನೆಕಾರರಿಗೆ ಲಭ್ಯ ಮಾಡಲಿದೆ.

ಕ್ರಿಯೆಟರ್ಸ್‌ ತಮ್ಮ ಚಂದಾದಾರರಿಗೆ ಒದಗಿಸುವ ಪ್ರಯೋಜನಗಳು ಹೀಗಿರಲಿವೆ:

1. ಚಂದಾದಾರರ ಬ್ಯಾಡ್ಜ್‌ಗಳು (Subscriber Badges) : ಕ್ರಿಯೆಟರ್ಸ್‌ ಕಾಮೆಂಟ್‌ಗಳು ಮತ್ತು ಪೋಸ್ಟ್‌ಗಳ ಪಕ್ಕದಲ್ಲಿ ಚಂದಾದಾರರ ಬ್ಯಾಡ್ಜ್ ಅನ್ನು ನೋಡುತ್ತಾರೆ ಆದ್ದರಿಂದ ಅವರು ತಮ್ಮ ಚಂದಾದಾರರನ್ನು ಸುಲಭವಾಗಿ ಗುರುತಿಸಬಹುದು.

2. ಚಂದಾದಾರರ ಲೈವ್‌ಗಳು (Subscriber Lives) : ಕ್ರಿಯೆಟರ್ಸ್‌ ತಮ್ಮ ಚಂದಾದಾರರಿಗೆ ವಿಶೇಷ ಲೈವ್‌ಗಳನ್ನು ಸ್ಟ್ರೀಮ್ ಮಾಡಬಹುದು, ಇದು ಅವರಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

3. ಚಂದಾದಾರರ ಕಥೆಗಳು (Subscriber Stories) : ಕ್ರಿಯೆಟರ್ಸ್‌ ತಮ್ಮ ಚಂದಾದಾರರಿಗಾಗಿ ಕಥೆಗಳನ್ನು ರಚಿಸಬಹುದು, ವಿಶೇಷ ವಿಷಯವನ್ನು ಹಂಚಿಕೊಳ್ಳಲು ಮತ್ತು ಅವರ ಅತ್ಯಂತ ತೊಡಗಿಸಿಕೊಂಡಿರುವ ಅನುಯಾಯಿಗಳೊಂದಿಗೆ ಸಂವಾದಾತ್ಮಕ ಕಥೆ ಸ್ಟಿಕ್ಕರ್‌ಗಳನ್ನು ಬಳಸಲು ಅವರಿಗೆ ಅವಕಾಶ ನೀಡುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಆಯ್ಕೆ!..ಬಳಕೆದಾರರಿಗೆ ಆದಾಯ ಗಳಿಸಲು ನೆರವಾಗಲಿದೆ!

ಆಂಡ್ರಾಯ್ಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಇನ್‌ಸ್ಟಾಗ್ರಾಮ್ ಖಾತೆ ತೆರೆಯಲು ಈ ಕ್ರಮ ಅನುಸರಿಸಿ:
ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ಅನ್ನು ತೆರೆಯಿರಿ
ಹಂತ 2: ಈಗ ಕೆಳಗಿನ ಬಲ ಮೂಲೆಯಲ್ಲಿರುವ ಡಿಪಿ ಅನ್ನು ಕ್ಲಿಕ್ ಮಾಡುವ ಮೂಲಕ ಪ್ರೊಫೈಲ್‌ಗೆ ಹೋಗಿ.
ಹಂತ 3: ಗೇರ್ ಆಯ್ಕೆಮಾಡಿ ಅಥವಾ ಪರದೆಯ ಮೇಲಿನ ಬಲ ಭಾಗದ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಆಯ್ಕೆಮಾಡಿ.
ಹಂತ 4: ಮುಂದೆ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಖಾತೆಯನ್ನು ಸೇರಿಸಿ ಆಯ್ಕೆಮಾಡಿ.
ಹಂತ 5: ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಅಥವಾ ನಿಮ್ಮ ಫೇಸ್‌ಬುಕ್ ಖಾತೆಯೊಂದಿಗೆ ಲಾಗ್ ಇನ್ ಮಾಡಿ

ಇನ್‌ಸ್ಟಾಗ್ರಾಮ್‌ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ?
ಹಂತ 1: ಪ್ರೊಫೈಲ್ ಪುಟಕ್ಕೆ ಹೋಗಿ ಮತ್ತು ಗೇರ್ ಐಕಾನ್ ಆಯ್ಕೆಮಾಡಿ.
ಹಂತ 2: ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಲಾಗ್‌ಔಟ್ ಆಯ್ಕೆಗೆ ಹೋಗಿ, ಆಡ್ ಖಾತೆಯ ಬಳಿಯೇ ನೀಡಲಾಗಿದೆ.
ಹಂತ 3: ಡಿಲೀಟ್ ಮಾಡ ಬಯಸುವ ಯಾವುದೇ ಖಾತೆಯಿಂದ ಲಾಗ್ ಔಟ್ ಮಾಡಿ ಅಥವಾ ನೀವು ಎಲ್ಲಾ ಖಾತೆಗಳಿಂದ ಲಾಗ್ ಔಟ್ ಮಾಡಬಹುದು. ಇದು ಎಲ್ಲಾ ಖಾತೆಗಳನ್ನು ತೆಗೆದುಹಾಕುತ್ತದೆ.

Most Read Articles
Best Mobiles in India

English summary
Instagram Introducing Subscriptions: Helping Creators Earn Monthly Income.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X