Just In
Don't Miss
- News
ನೂಪುರ್ ವಿರುದ್ಧದ ಸುಪ್ರೀಂ ಹೇಳಿಕೆಗೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳ ಆಕ್ಷೇಪ
- Sports
ಈತನ ಹುಚ್ಚುತನದಿಂದ ನಾಲ್ಕನೇ ದಿನ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮಂಕಾಯಿತು ಎಂದ ಪೀಟರ್ಸನ್!
- Education
SSC CGL Tier 1 2022 Result : ಎಸ್ಎಸ್ಸಿ ಸಿಜಿಎಲ್ ಟಯರ್ 1 ಫಲಿತಾಂಶ ವೀಕ್ಷಿಸುವುದು ಹೇಗೆ ?
- Lifestyle
ನೀವು ಯಾವ ಭಂಗಿಯಲ್ಲಿ ಮಲಗುತ್ತೀರಾ ಅದೇ ಹೇಳುತ್ತೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತಾ!
- Automobiles
ಇಂದಿನಿಂದ ಸ್ಕಾರ್ಪಿಯೋ-ಎನ್ ಕಾರು ಮಾದರಿಯ ಟೆಸ್ಟ್ ಡ್ರೈವ್ ಆರಂಭಿಸಿದ ಮಹೀಂದ್ರಾ
- Movies
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಮಹಿಳಾ ದಿನಾಚರಣೆ 2021: ಇಲ್ಲಿವೆ ನೋಡಿ ಬೆಸ್ಟ್ ಗಿಫ್ಟ್ ಐಡಿಯಾ!
ಪ್ರತಿವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಜೀವನದಲ್ಲಿ ಮಹಿಳೆಯರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಈ ದಿನವು ನಮ್ಮೆಲ್ಲರಿಗೂ ಅವಕಾಶವನ್ನು ನೀಡುತ್ತದೆ. ಈ ದಿನದಂದು ನಿಮ್ಮ ತಾಯಿ, ಸಹೋದರಿ, ಗೆಳತಿ ಅಥವಾ ಹೆಂಡತಿಗೆ ಏನಾದರೂ ಗಿಫ್ಟ್ ನೀಡಬೇಕು ಎಂದು ಯೋಚಿಸುತ್ತಿದ್ದಿರಾ?.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಈ ಬಾರಿ ನೀವು ಅವರಿಗೆ ಅಗತ್ಯವಿರುವ ಟೆಕ್ ಉಡುಗೊರೆಗಳನ್ನು ನೀವು ನೀಡಬಹುದು. ಹಾಗಾದರೇ ಯಾವೆಲ್ಲಾ ಟೆಕ್ ಡಿವೈಸ್ಗಳನ್ನು ನೀಡಬಹುದು ಎನ್ನುವ ಬಗ್ಗೆ ತಿಳಿಸಲಾಗಿದೆ ಮುಂದೆ ಓದಿರಿ.

ಅತ್ಯುತ್ತಮ ಹೆಡ್ಫೋನ್
ಪ್ರವಾಸ ಮಾಡುವಾಗ ಅಥವಾ ಏಕಾಂತದಲ್ಲಿ ಸಂಗೀತ ಕೇಳಲು ಒಳ್ಳೇಯ ಜತೆಗಾರ ಈ ಹೆಡ್ಫೋನ್. ನಿಮ್ಮ ಸಹೋದರಿ/ಹೆಂಡತಿ/ ಗೆಳತಿ ಮ್ಯೂಸಿಕ್ ಇಷ್ಟಪಡುವವರಾಗಿದ್ದರೇ ಅವರಿಗೆ ಅತ್ಯುತ್ತಮ ಹೆಡ್ಫೋನ್ ಉಡುಗೊರೆಯಾಗಿ ನೀಡಬಹುದು, ವಿವಿಧ ಬೆಲೆಗಳಲ್ಲಿ, ತರಹೆವಾರಿ ಕಲರ್ಗಳ ಆಯ್ಕೆಗಳಲ್ಲಿ ಹೆಡ್ಫೋನ್ಗಳ ದೊರೆಯುತ್ತವೆ.

ಪೆನ್ ಡ್ರೈವ್
ಪೆನ್ಡ್ರೈವ್ ನೋಡಲು ಅತೀ ಚಿಕ್ಕದಾಗಿದ್ದರು ಅತ್ಯಂತ ಮುಖ್ಯವಾದ ದತ್ತಾಂಶಗಳನ್ನು ತನ್ನಲ್ಲಿ ಭದ್ರವಾಗಿ ಇಟ್ಟುಕೊಳ್ಳುತ್ತದೆ. ಫೋಟೋಗಳನ್ನು, ವಿಡಿಯೋಗಳನ್ನು, ನೋಟ್ಸ್, ಆಫೀಸ್ ಫೈಲ್ಸ್ ಹೀಗೆ ಹಲವು ದತ್ತಾಂಶಗಳನ್ನು ಇರಿಸಿಕೊಳ್ಳಲು ನೆರವಾಗುತ್ತದೆ. ಇದರಲ್ಲಿ 4GB, 8GB, 16GB, 32GB ಇನ್ನೂ ಹೆಚ್ಚಿನ ಸಂಗ್ರಹ ಸಾಮರ್ಥ್ಯದ ಪೆನ್ಡ್ರೈವ್ಗಳು ಸಿಗುತ್ತವೆ. ಮತ್ತು ವಿವಿಧ ಡಿಸೈನ್ಗಳಲ್ಲಿಯೂ ಲಭ್ಯ ಇವೆ.

ಬ್ಲೂಟೂತ್ ಸ್ಪೀಕರ್
ಇಂದಿನ ಬಹುತೇಕ ಗ್ಯಾಜೆಟ್ಗಳು ವೈಯರ್ ಲೆಸ್ ಆಗಿದ್ದು, ಬ್ಲೂಟೂತ್ ಸಂಪರ್ಕದ ಮೂಲಕ ಕೆಲಸ ಮಾಡುತ್ತವೆ. ಅವುಗಳಲ್ಲಿ ಬ್ಲೂಟೂತ್ ಸ್ಪೀಕರ್ ಕೂಡಾ ಒಂದಾಗಿದ್ದು, ಹೀಗಾಗಿ ನಿಮ್ಮ ಸಹೋದರಿ/ಗೆಳತಿ/ಹೆಂಡತಿಗೆ ಬ್ಲೂಟೂತ್ ಸ್ಪೀಕರ್ ಅನ್ನು ಸಹ ಉಡುಗೊರೆಯಾಗಿ ನೀಡಬಹುದು.

ಆಕರ್ಷಕ ಸ್ಮಾರ್ಟ್ವಾಚ್
ಅವರ ಬ್ಯಾಗ್ಲ್ಲಿ ಸ್ಮಾರ್ಟ್ಫೋನ್ ಇದ್ದ ಮೇಲೆ ಅವರ ಕೈಗೊಂದು ಸ್ಮಾರ್ಟ್ವಾಚ್ ಇಲ್ಲದಿದ್ದರೇ ಹೇಗೆ. ಸೋ ಮಹಿಳಾ ದಿನದ ಅಂಗವಾಗಿ ಸ್ಮಾರ್ಟ್ವಾಚ್ ಅನ್ನು ಸಹ ನೀವು ಗಿಫ್ಟ್ ರೂಪದಲ್ಲಿ ನೀಡಬಹುದು. ಜನಪ್ರಿಯ ಇ ಕಾಮರ್ಸ್ ಜಾಲತಾಣಗಳಲ್ಲಿ ಕಡಿಮೆ ದರದಲ್ಲಿ ಅನೇಕ ಸ್ಮಾರ್ಟ್ವಾಚ್ ಗಳು ದೊರೆಯುತ್ತವೆ. ಹೀಗಾಗಿ ಸ್ಮಾರ್ಟ್ವಾಚ್ ಉಡುಗೊರೆ ಕೊಡಲು ಒಂದು ಸ್ಮಾರ್ಟ್ ಆಯ್ಕೆ ಎನ್ನಬಹುದು.

ಪವರ್ ಬ್ಯಾಂಕ್
ಮಹಿಳಾ ದಿನದ ಅಂಗವಾಗಿ ಉತ್ತಮ ಪವರ್ ಬ್ಯಾಂಕ್ ಒಂದನ್ನು ಉಡುಗೊರೆಯಾಗಿ ನೀಡಬಹುದು. ಕೆಲವೊಂದು ಪರಿಸ್ಥಿತಿಯಲ್ಲಿ ಅವರ ಸ್ಮಾರ್ಟ್ಫೋನ್ನಲ್ಲಿ ಚಾರ್ಜ್ ಖಾಲಿ ಆದಾಗ ಪವರ್ಬ್ಯಾಂಕ್ ಅವರಿಗೆ ನೆರೆವಾಗಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086