ಕುತೂಹಲ ಹೆಚ್ಚಿಸಿದ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌!

|

ಟೆಕ್ ದೈತ್ಯ ಆಪಲ್ ಸಂಸ್ಥೆಯು ಪ್ರತಿ ವರ್ಷ ಅಪ್‌ಡೇಟ್ ಆವೃತ್ತಿಗಳಲ್ಲಿ ಹೊಸ ಐಫೋನ್‌ಗಳನ್ನು ಪರಿಚಯಿಸುತ್ತಾ ಮುನ್ನಡೆದಿದೆ. ಕಳೆದ ವರ್ಷ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಭಾರಿ ಅಬ್ಬರ ಹುಟ್ಟುಹಾಕಿದೆ. ಇದೀಗ ಆಪಲ್ ಸಂಸ್ಥೆಯು ಮುಂದಿನ ಐಫೋನ್ 14 ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಆ ಬಗ್ಗೆ ಕೆಲವು ಮಾಹಿತಿಗಳು ಬಹಿರಂಗ ಆಗಿವೆ. ಬರಲಿರುವ ಐಫೋನ್ 14 ಸರಣಿಯ ಫೋನ್‌ಗಳು ಐಫೋನ್‌ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿವೆ.

ಕುತೂಹಲ ಹೆಚ್ಚಿಸಿದ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌!

ಹೌದು, ಆಪಲ್‌ ಸಂಸ್ಥೆಯು ಈಗ ಐಫೋನ್ 14 ಸರಣಿಯನ್ನು ಲಾಂಚ್ ಮಾಡಲು ತಯಾರಾಗುತ್ತಿದೆ. ಈ ಹೊಸ ಐಫೋನ್ ಆವೃತ್ತಿಯು ನಾಲ್ಕು ಹೊಸ ಐಫೋನ್ ಮಾದರಿಗಳನ್ನು ಅನಾವರಣಗೊಳಿಸಲಿದೆ ಎಂದು ಹೊಸ ವರದಿಯು ಸೂಚಿಸುತ್ತದೆ. ಆ ಪೈಕಿ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌ ಹೈ ಎಂಡ್‌ ಮಾಡೆಲ್‌ಗಳಾಗಿ ಕಾಣಿಸಿಕೊಳ್ಳಲಿವೆ. ಇವು ನಾಚ್ ಹಾಗೂ 3D ಫೇಸ್‌ಐಡಿ ಆಯ್ಕೆಗಳಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಕುತೂಹಲ ಹೆಚ್ಚಿಸಿದ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌!

ಮ್ಯಾಕ್‌ರೂಮರ್ಸ್ ವರದಿಯ ಪ್ರಕಾರ, ಟ್ರೆಂಡ್‌ಫೋರ್ಸ್‌ನ ವಿಶ್ಲೇಷಕರು ಹೊಸ ಸಂಶೋಧನೆಯನ್ನು ಮಾಡಿದ್ದಾರೆ. ಇದು ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಮೇಲ್ಭಾಗದಲ್ಲಿ ಮಾತ್ರೆ ಆಕಾರದ ಕ್ಯಾಮೆರಾ ರಚನೆಯನ್ನು ಒಳಗೊಂಡಿರುವ ಸಾಧ್ಯತೆಗಳು ಇರಲಿವೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು, ಹೈಟಾಂಗ್ ಇಂಟರ್ನ್ಯಾಷನಲ್ ಸೆಕ್ಯುರಿಟೀಸ್ ವಿಶ್ಲೇಷಕ ಆಪಲ್ ತನ್ನ ಪ್ರೊ ಮಾಡೆಲ್‌ಗಳ ಕ್ಯಾಮೆರಾಗಳ ಸೆನ್ಸಾರ್‌ಗಳನ್ನು ಅಪ್‌ಗ್ರೇಡ್ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ ಎಂದು ಹೇಳಿದೆ. ಉಳಿದಂತೆ ಇತರೆ ಕ್ಯಾಮೆರಾಗಳು 12 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಮತ್ತು ಟೆಲಿಫೋಟೋ ಸೆನ್ಸಾರ್‌ನಲ್ಲಿ ಬರಬಹುದು.

ಇನ್ನು ಐಫೋನ್ 14 ಪ್ರೊ ಫೋನ್ 6.1 ಇಂಚಿನ ಸ್ಕ್ರೀನ್‌ ಹೊಂದಿರುವ ಸಾಧ್ಯತೆಗಳು ಇವೆ. ಅದೇ ರೀತಿ ಐಫೋನ್ 14 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ಸ್ಕ್ರೀನ್‌ ಹೊಂದಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಹಾಗೆಯೇ ಐಫೋನ್ 14 ಪ್ರೊ ಫೋನಿನ ಆರಂಭಿಕ ಬೆಲೆ $1,099 (ಭಾರತದಲ್ಲಿ ಅಂದಾಜು ಸುಮಾರು 81,200ರೂ. ಎನ್ನಲಾಗಿದೆ) ಕ್ಕೆ ಮಾರಾಟವಾಗಲಿದೆ ಮತ್ತು ಉನ್ನತ ಮಟ್ಟದ ಐಫೋನ್ 14 ಪ್ರೊ ಮ್ಯಾಕ್ಸ್‌ ಫೋನ್ $1,199 (ಭಾರತದಲ್ಲಿ ಸುಮಾರು 88,600ರೂ.) ವೆಚ್ಚವಾಗಲಿದೆ ಎಂದು ಹೇಳಲಾಗಿದೆ.

ಕುತೂಹಲ ಹೆಚ್ಚಿಸಿದ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌!

ಐಫೋನ್ 13 ಪ್ರೊ ಫೋನ್‌ ಫೀಚರ್ಸ್‌
ಐಫೋನ್ 13 ಪ್ರೊ ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಹಾಗೆಯೇ ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದ್ದು, ಅತ್ಯುತ್ತಮ ವಿಡಿಯೋ ರೆಕಾರ್ಡ್‌ ಮಾಡಬಹುದಾಗಿದೆ. ಇನ್ನು ಈ ನಾಲ್ಕು ಬಣ್ಣಗಳ ಆಯ್ಕೆ ಪಡೆದಿದೆ.

ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ ಫೀಚರ್ಸ್‌
ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತಮ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್‌ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ ಸಹ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ನೈಟ್‌ ಮೋಡ್‌ ಆಯ್ಕೆ ಇದ್ದು, ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಬಹುದಾಗಿದೆ. ಹಾಗೆಯೇ ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದ್ದು, ಅತ್ಯುತ್ತಮ ವಿಡಿಯೋ ರೆಕಾರ್ಡ್‌ ಬೆಂಬಲಿಸಲಿದೆ.

Most Read Articles
Best Mobiles in India

English summary
iPhone 14 Pro, iPhone 14 Pro Max Rumored to feature a 48MP camera: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X