Just In
- 5 hrs ago
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- 6 hrs ago
ಇದೇ ತಿಂಗಳು 5G ಸೇವೆ ಬರಲಿದೆ ಅಂತಾ ನಿರೀಕ್ಷಿಸುತ್ತಿದ್ದೀರಾ?..ಈ ಸುದ್ದಿಯನ್ನೊಮ್ಮೆ ಗಮನಿಸಿ!
- 7 hrs ago
ಅತೀ ಕಡಿಮೆ ಬೆಲೆಗೆ ಲಗ್ಗೆ ಇಟ್ಟ 'ಇನ್ಫಿನಿಕ್ಸ್ ಸ್ಮಾರ್ಟ್ 6 HD' ಫೋನ್!
- 8 hrs ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
Don't Miss
- News
ಉಪ ಲೋಕಾಯುಕ್ತ ಹುದ್ದೆ ಖಾಲಿ, ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- Sports
Asia Cup 2022: ಏಷ್ಯಾಕಪ್ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ
- Movies
ದರ್ಶನ್ ಫ್ಯಾನ್ಸ್ Vs ಅಪ್ಪು ಫ್ಯಾನ್ಸ್; 'ಕದನ ವಿರಾಮ' ಘೋಷಣೆ!
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Lifestyle
Raksha Bandhan Horoscope 2022: ರಕ್ಷಾ ಬಂಧನದ ದಿನ ಯಾವ ರಾಶಿಗೆ ಅದೃಷ್ಟವಿದೆ, ಯಾರೆಲ್ಲಾ ಎಚ್ಚರಿಕೆಯಿಂದಿರಬೇಕು?
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ವರ್ಷದ ಅಂತ್ಯದೊಳಗೆ ಲಾಂಚ್ ಆಗಲಿರುವ ಪ್ರಮುಖ ಫೋನ್ಗಳು!
ಪ್ರಸ್ತುತ ನಾವೆಲ್ಲರೂ ಈ ವರ್ಷದ (2022) ಮಧ್ಯಭಾಗದಲ್ಲಿದ್ದೇವೆ. ಕಳೆದ ಆರು ತಿಂಗಳಿನಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ಇದಕ್ಕೆ ಟೆಕ್ ವಲಯವೂ ಕೂಡ ಹೊರತಾಗಿಲ್ಲ. ಟೆಕ್ ವಲಯದಲ್ಲಿ ಈ ವರ್ಷದ ಪ್ರಾರಂಭದಿಂದ ಇಂದಿನವರೆಗೂ ಸಾಕಷ್ಟು ಬದಲಾವಣೆಗಳಿಗೆ ಈ ವರ್ಷ ಸಾಕ್ಷಿಯಾಗಿದೆ. ಇನ್ನು ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಈ ವರ್ಷದ ಆರಂಭದಿಂದಲೂ ಹೊಸ ಮಾದರಿಯ ಫೋನ್ಗಳು ಎಂಟ್ರಿ ನೀಡಿವೆ. ನೂತನ ಮಾದರಿಯ ಪ್ರೊಸೆಸರ್ ಹಾಗೂ ಕ್ಯಾಮೆರಾ ಫೀಚರ್ಸ್ಗಳ ಮೂಲಕ ಆಕರ್ಷಿಸಿವೆ.

ಅದರಂತೆ ಇನ್ನುಳಿದ ಆರು ತಿಂಗಳಿನಲ್ಲಿಯೂ ಸಾಕಷ್ಟು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಎಂಟ್ರಿ ನೀಡಲು ಸಿದ್ಧತೆ ನಡೆಸಿವೆ. ಈಗಾಗಲೇ ಹಲವು ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳು ತಮ್ಮ ಹೊಸ ಡಿವೈಸ್ಗಳನ್ನು ಪರಿಚಯಿಸಲು ತಯಾರಿ ನಡೆಸಿವೆ. ಇವುಗಳಲ್ಲಿ ಅನೇಕ ಸ್ಮಾರ್ಟ್ಫೋನ್ಗಳ ಫೀಚರ್ಸ್ಗಳು ಸೋರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿವೆ. ಇದರಲ್ಲಿ ಸ್ಯಾಮ್ಸಂಗ್, ಶಿಯೋಮಿ, ಒನ್ಪ್ಲಸ್, ರಿಯಲ್ಮಿ, ಆಪಲ್ ಕಂಪೆನಿಯ ಫೋನ್ಗಳು ಕೂಡ ಸೇರಿವೆ.

ಹೌದು, ಮುಂದಿನ ಆರು ತಿಂಗಳಿನಲ್ಲಿ ಟೆಕ್ ವಲಯದಲ್ಲಿ ಅನೇಕ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿವೆ. ಹೊಸ ಮಾದರಿಯ ಟೆಕ್ನಾಲಜಿಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲು ಅಣಿಯಾಗಿವೆ. ಇದರಲ್ಲಿ ಹಲವು ಸ್ಮಾರ್ಟ್ಫೋನ್ಗಳು ವಿವಿಧ ಬೆಲೆಯಲ್ಲಿ ಲಭ್ಯವಾಗಲಿವೆ. ಇನ್ನು ಈ ವರ್ಷ ಬಿಡುಗಡೆಯಾಗುವ ಸ್ಮಾರ್ಟ್ಫೋನ್ಗಳಲ್ಲಿ ಹೊಸ A16 ಬಯೋನಿಕ್ ಚಿಪ್ಸೆಟ್ ಒಳಗೊಂಡಿರುವ ಐಫೋನ್ 14 ಸರಣಿ ಕೂಡ ಬರಲಿದೆ. ಹಾಗಾದ್ರೆ ಮುಂದಿನ ಆರು ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ ಓದಿರಿ.

ಶಿಯೋಮಿ 12S ಸರಣಿ
ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳಲ್ಲಿ ಶಿಯೋಮಿ 12S ಸರಣಿ ಕೂಡ ಸೇರಿದೆ. ಈ ಸ್ಮಾರ್ಟ್ಫೋನ್ ಸರಣಿ ಇದೇ ಜುಲೈ 4 ರಂದು ಅನಾವರಣಗೊಳ್ಳಲಿದೆ ಎನ್ನಲಾಗಿದೆ. ಇನ್ನು ಈ ಸರಣಿಯಲ್ಲಿ ಶಿಯೋಮಿ ಕಂಪನಿಯು ಮೂರು ಪ್ರೀಮಿಯಂ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಸಾದ್ಯತೆಯಿದೆ. ಇವುಗಳನ್ನು ಶಿಯೋಮಿ 12S, ಶಿಯೋಮಿ 12S ಪ್ರೊ ಮತ್ತು ಶಿಯೋಮಿ 12S ಅಲ್ಟ್ರಾ ಫೋನ್ಗಳು ಸೇರಿವೆ ಎನ್ನಲಾಗಿದೆ. ಇದರಲ್ಲಿ ಶಿಯೋಮಿ 12S ಸರಣಿಯು ಲೈಕಾ-ಟ್ಯೂನ್ಡ್ ಕ್ಯಾಮೆರಾ ಸೆನ್ಸಾರ್ಗಳನ್ನು ಹೊಂದಿರಲಿದೆ.

ಇನ್ನು ಶಿಯೋಮಿ 12S ಅಲ್ಟ್ರಾ 1 ಇಂಚಿನ ಸೋನಿ IMX989 ಸೆನ್ಸಾರ್ ಸಾಮರ್ಥ್ಯದ ಮುಖ್ಯ ಕ್ಯಾಮೆರಾವನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. ಇದಲ್ಲದೆ ಈ ಎಲ್ಲಾ ಮೂರು ಸ್ಮಾರ್ಟ್ಫೋನ್ಗಳು ಸ್ನಾಪ್ಡ್ರಾಗನ್ 8+ Gen 1 SoC ಪ್ರೊಸೆಸರ್ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಶಿಯೋಮಿ 12S ಪ್ರೊ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ಪ್ರೊಸೆಸರ್ ಹೊಂದಿರುವ ಸಾಧ್ಯತೆಯಿದೆ. ಜೊತೆಗೆ ಈ ಎಲ್ಲಾ ಮೂರು ಫೋನ್ಗಳು 120Hz ಅಮೋಲೆಡ್ ಡಿಸ್ಪ್ಲೇಯನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಒನ್ಪ್ಲಸ್ 10T 5G
ಈ ವರ್ಷದ ಕೊನೆಯಲ್ಲಿ ಲಾಂಚ್ ಆಗಲಿರುವ ಪ್ರಮುಖ ಪ್ರೀಮಯಂ ಸ್ಮಾರ್ಟ್ಫೋನ್ಗಳಲ್ಲಿ ಒನ್ಪ್ಲಸ್ 10T 5G 10 ಕೂಡ ಒಂದು. ಈ ಸ್ಮಾರ್ಟ್ಫೋನ್ 6.7 ಇಂಚಿನ 120Hz ಅಮೋಲೆಡ್ ಡಿಸ್ಪ್ಲೇ, ಸ್ನಾಪ್ಡ್ರಾಗನ್ 8+ Gen 1 SoC ಪ್ರೊಸೆಸರ್ ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ 50MP ಪ್ರೈಮೆರಿ ಕ್ಯಾಮೆರಾ ಒಳಗೊಂಡ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುವ ನಿರೀಕ್ಷೆಯಿದೆ. ಅನ್ನು ಹೊಂದಿರುತ್ತದೆ. ಇನ್ನು ಈ ಡಿವೈಸ್ ಮೈನಸ್ ಕರ್ವ್ಡ್ ಡಿಸ್ಪ್ಲೇಯನ್ನು ಹೋಲುತ್ತದೆ. ಜೊತೆಗೆ 4800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, 150W ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ.

ಐಫೋನ್ 14 ಸರಣಿ
ಟೆಕ್ ದಿಗ್ಗಜ ಆಪಲ್ ಕಂಪೆನಿ ಈ ವರ್ಷದ ಕೊನೆಯಲ್ಲಿ ಐಫೋನ್ 14 ಅನ್ನು ಲಾಂಚ್ ಮಾಡಲಿದೆ. ಇದರಲ್ಲಿ ನಾಲ್ಕು ಮಾಡೆಲ್ಗಳು ಎಂಟ್ರಿ ನೀಡಲಿದೆ ಎನ್ನಲಾಗಿದೆ. ಇನ್ನು ಈ ಸರಣಿಯಲ್ಲಿ ಐಫೋನ್ 14 ಮತ್ತು ಐಫೋನ್ 14 ಮ್ಯಾಕ್ಸ್ ಜೊತೆಗೆ ಇರುತ್ತದೆ. ಪ್ರೊ-ಅಲ್ಲದ ಎರಡೂ ಐಫೋನ್ 14 ಮಾದರಿಗಳು ಐಫೋನ್ 13 ವಿನ್ಯಾಸವನ್ನು ಹೊಂದಿರುವ ಸಾಧ್ಯತೆಯಿದೆ. ಇನ್ನು ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಪ್ರಮುಖ ಅಪ್ಡೇಟ್ಗಳನ್ನು ಹೊಂದಿರಲಿದೆ. ಇದರಲ್ಲಿ ಮುಂಭಾಗದ ಕ್ಯಾಮರಾ ಮತ್ತು ಫೇಸ್ ಐಡಿ ಸೆನ್ಸಾರ್ಗಳಿಗಾಗಿ ಹೋಲ್ ಪಂಚ್ ಹೊಂದಿರುವ ಸಾದ್ಯತೆಯಿದೆ. ಆದರೆ ಈ ವರ್ಷ ಯಾವುದೇ ಐಫೋನ್ 14 ಮಿನಿ ಲಾಂಚ್ ಆಗುತ್ತಿಲ್ಲ ಎಂದು ಹೇಳಲಾಗಿದೆ. ಐಫೋನ್ 14 ಸರಣಿಯ ಅನಾವರಣಗೊಳಿಸುವ ಆಪಲ್ ಈವೆಂಟ್ ಸೆಪ್ಟೆಂಬರ್ 13, 2022 ರಂದು ಆಯೋಜಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ
ಮೊಟೊರೊಲಾ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್ಫೋನ್ ಈ ವರ್ಷವೇ ಎಂಟ್ರಿ ನೀಡಲಿರುವ ಸ್ಮಾರ್ಟ್ಫೋನ್ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್ಫೋನ್ 6.8 ಇಂಚಿನ 120Hz ಅಮೊಲೆಟ್ ಡಿಸ್ಪ್ಲೇ ಒಳಗೊಂಡಿರಲಿದೆ. ಇದು ಹೊಸ ಸ್ನಾಪ್ಡ್ರಾಗನ್ 8+ Gen 1 SoC ಪ್ರೊಸೆಸರ್ ಹೊಂದಿರಲಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದ್ದು, ಮೇನ್ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಈ ಫೋನ್ 60 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಐಕ್ಯೂ 9T
ಐಕ್ಯೂ 9T ಸ್ಮಾರ್ಟ್ಫೋನ್ ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸದ್ಯ ಸೋರಿಕೆಯಾದ ಮಾಹಿತಿಯ ಪ್ರಕಾರ ಈ ಸ್ಮಾರ್ಟ್ಫೋನ್ 6.78 ಇಂಚಿನ 120Hz ಅಮೋಲೆಡ್ ಡಿಸ್ಪ್ಲೇ ಹೊಂದಿರಲಿದೆ. ಇದು ಸ್ನಾಪ್ಡ್ರಾಗನ್ 8+ Gen 1 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಈ ಫೋನ್ 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಫೋನಿನ ಕ್ಯಾಮೆರಾ ಫೀಚರ್ಸ್ಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086