ಅಚಾನಕ್‌ ಆಗಿ ವಿಮಾನದಿಂದ ಕೆಳಗೆ ಬಿದ್ದ ಐಫೋನ್; ಮುಂದೆನಾಯ್ತು?

|

ಸದ್ಯ ಪ್ರತಿಯೊಬ್ಬರ ಅವಶ್ಯ ಡಿವೈಸ್‌ ಆಗಿರುವ ಸ್ಮಾರ್ಟ್‌ಫೋನ್‌ ಆಕಸ್ಮಿಕವಾಗಿ ಕೈ ಯಿಂದ ಜಾರಿ ಬಿದ್ದರೇ, ಬಳಕೆದಾರರು ಅಯ್ಯೋ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಒಡೆದು ಹೋಗುತ್ತದೆ ಎಂದು ಒಂದು ಕ್ಷಣ ಶಾಕ್‌ ಆಗಿ ಬಿಡುತ್ತಾರೆ. ಅದರಲ್ಲಿಯೂ ದುಬಾರಿ ಬೆಲೆಯ ಅಥವಾ ಐಫೋನ್‌ ಕೈ ಯಿಂದ ಕೆಳಗೆ ಬಿದ್ದರಂತೂ ಬಹುತೇಕ ಬಳಕೆದಾರರ ಜೀವವೇ ಹೋದಂತೆ ಆಡಿಬಿಡುತ್ತಾರೆ. ಆದ್ರೆ ಇಲ್ಲೊಬ್ಬ ಮಹಾಶಯ ವಿಮಾನದಿಂದ ತನ್ನ ಐಫೋನ್‌ ಬೀಳಿಸಿಕೊಂಡಿದ್ದಾನೆ.

ಸಾಕ್ಷ್ಯಚಿತ್ರ

ಹೌದು, ಬ್ರೆಜಿಲ್‌ನ ಸಾಕ್ಷ್ಯಚಿತ್ರ ನಿರ್ಮಾಪಕ ಅರ್ನೆಸ್ಟೊ ಗ್ಯಾಲಿಯೊಟ್ಟೊ ಅವರ ವಿಮಾನದಲ್ಲಿ ತನ್ನ ಐಫೋನ್ 6 ಫೋನಿನಲ್ಲಿ ಚಿತ್ರೀಕರಣದಲ್ಲಿದ್ದಾಗ ಅಚಾನಕ್ ಆಗಿ ಫೋನ್ ವಿಮಾನದಿಂದ ಕೆಳಗೆ ಬಿದ್ದಿದೆ. ಬರೋಬ್ಬರಿ 2000 ಅಡಿಗಳಷ್ಟು ಎತ್ತರದಿಂದ ಐಫೋನ್‌ ಭೂಮಿಗೆ ಅಪ್ಪಳಿಸಿದ್ದು, ಅಚ್ಚರಿಯಂದರೆ ಫೋನ್‌ಗೆ ಹಾನಿ ಆಗಿಲ್ಲ. ಈ ವೇಳೆ ಕ್ಯಾಮೆರಾ ರೆಕಾರ್ಡಿಂಗ್ ಆನ್‌ ಇದ್ದಿದ್ದರಿಂದ ಫೂರ್ಣ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ.

ಬ್ರೆಜಿಲ್‌ನ

ಇನ್ನು ಈ ಘಟನೆಯು ಬ್ರೆಜಿಲ್‌ನ ರಿಯೊ ಡಿ ಜನೈರೊದಿಂದ ಪೂರ್ವಕ್ಕೆ 100 ಮೈಲಿ ದೂರದಲ್ಲಿರುವ ಪೆರೆ ಬೀಚ್‌ನಲ್ಲಿ ಸಂಭವಿಸಿದೆ. ಬ್ರೆಜಿಲಿಯನ್ ಮಾಧ್ಯಮ ಸಂಸ್ಥೆ G1 ಈ ಘಟನೆಯನ್ನು ವರದಿ ಮಾಡಿದೆ. ವಿಮಾನದಿಂದ ಐಫೋನ್ ಕೆಳಗೆ ಬಿದ್ದ ನಂತರ, ನಿರ್ಮಾಪಕ ಅರ್ನೆಸ್ಟೊ ತನ್ನ ಐಫೋನ್‌ ಕಳೆದೆ ಹೋಯಿತೆಯೋ ಎಂದು ಭಾವಿಸಿದನು. ಆದರೆ ಅವರು GPS ಟ್ರ್ಯಾಕಿಂಗ್‌ನ ಸಹಾಯದಿಂದ ಫೋನ್ ಇರುವ ಸ್ಥಳವನ್ನು ಪತ್ತೆ ಮಾಡಿದ್ದಾರೆ.

GPS

ಈ ಘಟನೆಯಲ್ಲಿ ಆಪಲ್ ಡಿವೈಸ್‌ಗಳಲ್ಲಿನ ಅಂತರ್ನಿರ್ಮಿತ GPS ಟ್ರ್ಯಾಕಿಂಗ್‌ ವ್ಯವಸ್ಥೆಯು ಅರ್ನೆಸ್ಟೊ ಅವರ ನೆರವಿಗೆ ಬಂದಿದೆ. ಜಿಪಿಎಸ್‌ ಮೂಲಕ ತಮ್ಮ ಐಫೋನ್ ಕಡಲತೀರದ ಬಳಿ ಇಳಿದಿರುವುದನ್ನು ಕಂಡುಕೊಂಡರು. ವಿಮಾನದಿಂದ ಕೆಳಗೆ ಬಿದ್ದರಿದ್ದರೂ ಐಫೋನ್ ಸುರಕ್ಷಿತವಾಗಿರುವುದನ್ನು ನೋಡಿ ಅವರು ಆಶ್ಚರ್ಯಚಕಿತರಾದರು. ಆದರೆ ಐಫೋನ್‌ ಸ್ಕ್ರೀನ್‌ ಗಾರ್ಡ್‌ಗೆ ಮಾತ್ರ ಹಾನಿಯಾಗಿದ್ದು, ಉಳಿದಂತೆ ಫೋನ್ ಅದ್ಭುತ ರೀತಿಯ ಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ.

ಐಸ್ಲ್ಯಾಂಡ್ನಲ್ಲಿ

ಕಳೆದ 2019 ರಲ್ಲಿ, ಫೋಟೊಗ್ರಾಫರ್‌ಯೊಬ್ಬರು ದಕ್ಷಿಣ ಐಸ್ಲ್ಯಾಂಡ್ನಲ್ಲಿ ಪ್ರವಾಸ ಮಾಡುತ್ತಿದ್ದಾಗ ಅವರ ಐಫೋನ್ ಅನ್ನು ವಿಮಾನದಿಂದ ಅಚಾನಕ್ ಆಗಿ ಕೈ ಜಾರಿ ಬಿದ್ದಿತ್ತು. ಅವರು ದಕ್ಷಿಣ ಐಸ್ಲ್ಯಾಂಡ್‌ನ ನದಿಯ ಮೇಲೆ ವಿಮಾನದಲ್ಲಿ ಪ್ರಯಾಣಿಸುವಾಗ ಹಿಮನದಿ ನದಿಯ ಪ್ರವಾಹವನ್ನು ಸೆರೆಹಿಡಿಯುತ್ತಿದ್ದರು. ಆ ವೇಳೆ ಪ್ರವಾಹವನ್ನು ಸೆರೆಹಿಡಿಯಲು ವಿಮಾನದ ಕಿಟಕಿಯಿಂದ ಕೈಯನ್ನು ಹೊರಹಾಕಿದಾಗ ಫೋನ್ ಗಾಳಿಯ ಹೊಡೆತಕ್ಕೆ ಅವರ ಕೈ ಜಾರಿ ಪತನವಾಗಿತ್ತು. ಸುಮಾರು 13 ತಿಂಗಳ ನಂತರ ಅವರಿಗೆ ವಿಮಾನದಿಂದ ಬಿದ್ದ ಫೋನ್ ಸಿಕ್ಕಿತು ಹಾಗೂ ಅದು ಕೆಲಸ ಮಾಡುವ ಸ್ಥಿತಿಯಲ್ಲಿ ಇತ್ತು.

Most Read Articles
Best Mobiles in India

English summary
Impossible it might seem, the phone survived the fall and because the camera was on, the entire incident was captured on video.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X