Home
ಸುದ್ದಿಜಾಲ

ನಾಳೆ ಹೊಸ iQOO ಫೋನ್ ಸೇಲ್; 2000 ಡಿಸ್ಕೌಂಟ್.. 2000 ಎಕ್ಸ್‌ಚೇಂಜ್ ಬೋನಸ್.. ಬೆಲೆ, ವಿಶೇಷತೆಗಳೇನು?

ಬಹುನಿರೀಕ್ಷಿತ ಐಕ್ಯೂ ನಿಯೋ 10R (iQOO Neo 10R) ಫೋನ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಡಗೆಯಾಗಿದೆ. ಇದನ್ನು ಗೇಮಿಂಗ್ ಪ್ರಿಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಂದಹಾಗೆ, ಈ ಮೊಬೈಲ್ ನಾಳೆಯಿಂದ (ಮಾರ್ಚ್ 19) ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ನೀವು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ಖರೀದಿಸಬಹುದು. ಈಗಾಗಲೇ ಮುಂಗಡ ಬುಕಿಂಗ್ ಸಹ ಪ್ರಾರಂಭವಾಗಿದೆ. ಈ ಫೋನಿನ ಬೆಲೆ, ಆಫರ್ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್‌ 30,000 ರೂ.ಗಳ ಬಜೆಟ್‌ನಲ್ಲಿ ಬಿಡುಗಡೆಯಾಗಿದೆ. ನೀವು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಕೊಳ್ಳಬಹುದು. ಇದು ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಗೇಮಿಂಗ್‌ಗಾಗಿ ಇದು 6000mm2 ವೇಪರ್ ಕೂಲಿಂಗ್ ಚೇಂಬರ್ ಹೊಂದಿದೆ. ಇದರೊಂದಿಗೆ 6.78 ಇಂಚಿನ ಡಿಸ್ಪ್ಲೇ ಇದೆ. ಹಾಗೆಯೇ 6400mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಒಳಗೊಂಡಿದೆ.

ನಾಳೆ ಹೊಸ iQOO ಫೋನ್ ಸೇಲ್; 2000 ಡಿಸ್ಕೌಂಟ್.. 2000 ಬೋನಸ್.. ಬೆಲೆ ನೋಡಿ

ಐಕ್ಯೂ ನಿಯೋ 10R ಬೆಲೆ ಮತ್ತು ಆಫರ್

ಐಕ್ಯೂ ನಿಯೋ 10R ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ 26,999 ರೂ.ಗೆ ಮಾರಾಟವಾಗಲಿದೆ. 8GB RAM + 256GB ಸ್ಟೋರೇಜ್ ಆಯ್ಕೆಯನ್ನು 28,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಇನ್ನು 12GB RAM + 256GB ಸ್ಟೋರೇಜ್ ಮಾದರಿಯ ಬೆಲೆ 30,999 ರೂ. ಆಗಿದೆ. ಮೊದಲ ದಿನ ಕೊಂಡರೆ, ಕೆಲವು ಆಫರ್ ಲಭ್ಯವಿದೆ. 2000 ಡಿಸ್ಕೌಂಟ್ ಮತ್ತು 2000 ಎಕ್ಸ್‌ಚೇಂಜ್ ಬೋನಸ್‌ ಲಭ್ಯವಿದೆ. ನಾಳೆಯಿಂದ (ಮಾರ್ಚ್ 19) ಅಮೆಜಾನ್ ಮತ್ತು ಐಕ್ಯೂ ಆನ್‌ಲೈನ್ ಸ್ಟೋರ್‌ ಮೂಲಕ ಈ ಫೋನ್ ಮೊದಲ ಮಾರಾಟ ಶುರು ಮಾಡಲಿದೆ. ನೀವು ಮೂನ್‌ನೈಟ್ ಟೈಟಾನಿಯಂ ಮತ್ತು ರೇಜಿಂಗ್ ಬ್ಲೂ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು.

ಐಕ್ಯೂ ನಿಯೋ 10R: ಟಾಪ್ 5 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಐಕ್ಯೂ ನಿಯೋ 10R ಫೋನ್‌ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2800 × 1260 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಹೊಂದಿದೆ. ಇದು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 144Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಲಭ್ಯವಿದೆ.

ಪ್ರೊಸೆಸರ್‌ ಯಾವುದು?

ಐಕ್ಯೂ ನಿಯೋ 10R ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8S ಜೆನ್ 3 ಪ್ರೊಸೆಸರ್‌ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಆಂಡ್ರಾಯ್ಡ್ 15 ಆಧಾರಿತ Funtouch ಓಎಸ್‌ 15 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ ಈ ಸ್ಮಾರ್ಟ್‌ಫೋನ್, ಅಡ್ರಿನೊ 735 ಜಿಪಿಯು ಸಹ ಹೊಂದಿದೆ. ಈ ಫೋನ್ 8GB RAM ಮತ್ತು 12GB RAM ಹೊಂದಿದೆ. ಈ ಫೋನ್ ವಿಸ್ತೃತ RAM ತಂತ್ರಜ್ಞಾನ ಹೊಂದಿದೆ. ನೀವು 12GB ವರ್ಚುವಲ್ RAM ಬಳಸಬಹುದು. ಈ ಫೋನಿನಲ್ಲಿ 128GB ಸ್ಟೋರೇಜ್ ಲಭ್ಯವಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ಐಕ್ಯೂ ನಿಯೋ 10R ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಹೇಗಿದೆ ಬ್ಯಾಟರಿ ಬ್ಯಾಕಪ್?

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್‌ ಮೊಬೈಲ್ 6400mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದರೊಂದಿಗೆ ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಲಭ್ಯವಿದೆ.

Best Mobiles in India

English summary
iQOO Neo 10R First Sale Start in india Tomorrow via Amazon: check price, offers, specification and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+