Just In
- 9 hrs ago
ಜಿಯೋ ಸಂಸ್ಥೆಯಿಂದ ಐದು ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ! - 11 hrs ago
ಭಾರತದಲ್ಲಿ 4G ನೆಟ್ವರ್ಕ್ ಬೆಂಬಲಿಸುವ ಅತ್ಯುತ್ತಮ ಫೀಚರ್ ಫೋನ್‌ಗಳು! - 13 hrs ago
ಟ್ವಿಟರ್ನಲ್ಲಿ ಉದ್ಯೋಗವಕಾಶ? ನೋಡಲ್ ಅಧಿಕಾರಿ ಸ್ಥಾನಕ್ಕೆ ಅರ್ಜಿ ಆಹ್ವಾನ? - 15 hrs ago
4G ಗೆ ಹೋಲಿಸಿದರೆ 5G ವೇಗ ಎಷ್ಟು ವೇಗವಾಗಿರಲಿದೆ? 4G ಗಿಂತ 5G ಹೇಗೆ ಭಿನ್ನವಾಗಿದೆ?
Don't Miss
- Education
New Academic Year 2021: ಜುಲೈ 1 ರಿಂದ ನೂತನ ಶೈಕ್ಷಣಿಕ ವರ್ಷ ಆರಂಭ ; ಆಫ್ಲೈನ್ ಆಫ್ಲೈನ್ ತರಗತಿಗೆ ಮಾರ್ಗಸೂಚಿ ಪ್ರಕಟ - Sports
UEFA Euro 2020: ಆಟದ ಮಧ್ಯೆಯೇ ಕುಸಿದ ಆಟಗಾರ, ಡೆನ್ಮಾರ್ಕ್-ಫಿನ್ಲ್ಯಾಂಡ್ ಪಂದ್ಯ ಅಮಾನತು! - Lifestyle
ಅನುರಾಧ ನಕ್ಷತ್ರಕ್ಕೆ ಕೇತು ಸಂಚಾರ: 12 ರಾಶಿಗಳ ಮೇಲೆ ಬೀರುವ ಪರಿಣಾಮವೇನು? - Finance
ಮೊಟ್ಟ ಮೊದಲ ಬಾರಿಗೆ $600 ಬಿಲಿಯನ್ ದಾಟಿದ ವಿದೇಶಿ ವಿನಿಮಯ ಸಂಗ್ರಹ - Automobiles
2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್ - News
ಬಿಹಾರದಲ್ಲಿ ನಾಲ್ಕು ನಿಮಿಷದಲ್ಲಿ HDFC Bank ನಲ್ಲಿ 1.19 ಕೋಟಿ ರೂ. ದರೋಡೆ ಪ್ರಕರಣ - Movies
ಸುಶಾಂತ್ ಸಿಂಗ್ ರಿಜೆಕ್ಟ್ ಮಾಡಿದ ಈ ಪ್ರಮುಖ ಸಿನಿಮಾಗಳು ಸೂಪರ್ ಹಿಟ್ ಆಗಿವೆ - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ವದೇಶಿ ಮ್ಯಾಪ್ ಸೇವೆ ಒದಗಿಸಲು ಜಂಟಿಯಾದ ಇಸ್ರೊ ಮತ್ತು ಮ್ಯಾಪ್ ಮೈ ಇಂಡಿಯಾ!
ಗೂಗಲ್ ಮ್ಯಾಪ್ ಅಪ್ಲಿಕೇಶನ್‌ಗೆ ಬದಲಾಗಿ ಸ್ವದೇಶಿ ಮ್ಯಾಪ್ ಸೇವೆ ಅಭಿವೃದ್ಧಿ ಪಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮತ್ತು ಮ್ಯಾಪ್ ಮೈ ಇಂಡಿಯಾ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.

ಸ್ವದೇಶಿ ಮ್ಯಾಪ್ ಸೇವೆ ಅಭಿವೃದ್ಧಿಯಿಂದ ಮ್ಯಾಪ್, ಜಿಯೊ ಲೊಕೇಶನ್, ನ್ಯಾವಿಗೇಷನ್ ಸೇರಿದಂತೆ ಮ್ಯಾಪ್ ಸೇವೆಗಳಿಗೆ ವಿದೇಶಿ ಕಂಪನಿಗಳನ್ನು ಅವಲಂಬಿಸುವುದು ತಪ್ಪುತ್ತದೆ. ಇಸ್ರೊದ ಭೂ ಪರಿವೀಕ್ಷಣೆ ಡೇಟಾ, ಸ್ಯಾಟಲೈಟ್ ಫೋಟೊಗಳನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಮ್ಯಾಪ್ ಸೇವೆ ನೀಡಲು ಸಾಧ್ಯವಾಗುತ್ತದೆ. ಆತ್ಮನಿರ್ಭರ ಭಾರತ ಹಾದಿಯಲ್ಲಿ ಇದು ಮಹತ್ವದ ಮೈಲಿಗಲ್ಲು ಎಂದು ಮ್ಯಾಪ್ ಮೈ ಇಂಡಿಯಾ ಸಿಇಒ ರೋಹನ್ ವರ್ಮಾ ಹೇಳಿದ್ದಾರೆ.

ಮ್ಯಾಪ್ ಮೈ ಇಂಡಿಯಾ ಮಾಲೀಕತ್ವ ಹೊಂದಿರುವ ಸಿ.ಇ. ಇನ್ಫೋ ಸಿಸ್ಟಮ್ಸ್ ಪ್ರೈ.ಲಿ. ಮತ್ತು ಬಾಹ್ಯಾಕಾಶ ಇಲಾಖೆ ಫೆ.11ರಂದು ಒಪ್ಪಂದ ಮಾಡಿಕೊಂಡಿವೆ ಎಂದು ಇಸ್ರೊ ತಿಳಿಸಿದೆ. ಭೂ ಪರಿವೀಕ್ಷಣೆ ಡೇಟಾಗಾಗಿ ಇಸ್ರೊದ 'NavIC', 'ವೆಬ್ ಸೇವೆಗಳು', 'API', 'ಮ್ಯಾಪ್ ಮೈ ಇಂಡಿಯಾ', 'ಭುವನ್', 'VEDAS' ಮತ್ತು 'MOSDAC 'ಗಳನ್ನು ಬಳಸಿಕೊಂಡು ಜಂಟಿಯಾಗಿ ಸ್ಥಳಗಳ ವಿವರ ಒದಗಿಸುವ ಉತ್ತಮ ಮ್ಯಾಪ್ ಸೇವೆ ಒದಗಿಸಲು ಮ್ಯಾಪ್ ಮೈ ಇಂಡಿಯಾ ಜೊತೆಗಿನಒಪ್ಪಂದ ನೆರವಾಗುತ್ತದೆ ಎಂದು ಇಸ್ರೊ ತಿಳಿಸಿದೆ.

ಕೇಂದ್ರ ಸರಕಾರದ ಅಧಿಕೃತ ಮ್ಯಾಪ್ ಬಳಸುವ ಮ್ಯಾಪ್ ಮೈ ಇಂಡಿಯಾ, ಭಾರತದ ನೈಜ ಸಾರ್ವಭೌಮತೆಯನ್ನು ಪ್ರದರ್ಶಿಸುವ ಭಾರತೀಯ ಕಂಪನಿಯಾಗಿದೆ. ಮ್ಯಾಫ್ಸ್, ಆ್ಯಫ್ಸ್ ಮತ್ತು ಸೇವೆಗಳು ಇನ್ನು ಮುಂದೆ ಇಸ್ರೊದ ಬೃಹತ್ ಛಾಯಾಚಿತ್ರ ಮತ್ತು ಭೂಪರೀಕ್ಷಣೆ ಸ್ಯಾಟಲೈಟ್ ಡೇಟಾ ಜತೆ ಏಕೀಕರಣಗೊಳ್ಳಲಿವೆ ಎಂದು ಮ್ಯಾಪ್ ಮೈ ಇಂಡಿಯಾ ತಿಳಿಸಿದೆ.
ವಿದೇಶಿ ಸಂಸ್ಥೆಯಗಳು ಉಚಿತ ಸೇವೆ ಹೆಸರಿನಲ್ಲಿ ಬಳಕೆದಾರರ ಖಾಸಗಿ ಮಾಹಿತಿ, ಓಡಾಟ ಮತ್ತು ಲೊಕೇಶನ್ ಅನ್ನು ಮಾರಿಕೊಳ್ಳುತ್ತವೆ. ಖಾಸಗಿತನಕ್ಕೆ ಧಕ್ಕೆ ತರುವ ದೃಷ್ಠಿಯಿಂದ ಇದು ಒಳ್ಳೆಯ ಕ್ರಮವಲ್ಲ. ಆದರೆ, ನಮ್ಮದು ಖಾಸಗಿತನಕ್ಕೆ ಧಕ್ಕೆಯಾಗದಂತೆ ಜಾಹೀರಾತು ಬಿಸಿನೆಸ್ ಮಾಡೆಲ್ ಒಳಗೊಂಡಿರದ ಸುರಕ್ಷಿತ ಮ್ಯಾಪ್ ಆಗಿದೆ ಎಂದು ಮ್ಯಾಪ್ ಮೈ ಇಂಡಿಯಾ ಸಿಇಒ ರೋಹನ್ ವರ್ಮಾ ಹೇಳಿದ್ದಾರೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999







































