ಜೆಬಿಎಲ್ ಟ್ಯೂನ್ 225TWS ಟ್ರೂ ವಾಯರ್‌ಲೆಸ್‌ ಇಯರ್‌ಫೋನ್‌ ಬಿಡುಗಡೆ!

|

ಜೆಬಿಎಲ್ ಕಂಪೆನಿ ತನ್ನ ಭಿನ್ನ ಮಾದರಿಯ ಇಯರ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಮ್ಯೂಸಿಕ್‌ ಅಸ್ವಾದಿಸುವ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಹೊಸ ವಿನ್ಯಾಸದ ಇಯರ್‌ಫೋನ್‌ಗಳನ್ನ ಪರಿಚಯಿಸುವಲ್ಲಿ ಜೆಬಿಎಲ್‌ ಸೈ ಎನಿಸಿಕೊಂಡಿದೆ. ಸದ್ಯ ಜೆಬಿಎಲ್‌ ಕಂಪೆನಿ ತನ್ನ ಹೊಸ ಟ್ಯೂನ್ 225TWS ಟ್ರೂ ವಾಯರ್‌ಲೆಸ್‌ ಸ್ಟಿರಿಯೊ ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸದ್ಯ ಈ ಇಯರ್‌ಫೋನ್‌ 8,499 ಬೆಲೆಯನ್ನು ಹೊಂದಿದ್ದು. ಕಂಪನಿಯ ಅಧಿಕೃತ ಆನ್‌ಲೈನ್ ಅಂಗಡಿಯಲ್ಲಿ ಲಭ್ಯವಿದೆ.

ಜೆಬಿಎಲ್‌

ಹೌದು, ಜೆಬಿಎಲ್‌ ಕಂಪೆನಿ ತನ್ನ ಟ್ಯೂನ್ 225TWS ಟ್ರೂ ವಾಯರ್‌ಲೆಸ್‌ ಸ್ಟಿರಿಯೊ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಸದ್ಯ ಭಾರತದಲ್ಲಿ ಲಭ್ಯವಿರುವ ಜೆಬಿಎಲ್‌ನ ಟ್ರೂಲಿ ವಾಯರ್‌ಲೆಸ್‌ ಶ್ರೇಣಿಯ ಇಯರ್‌ಫೋನ್‌ಗಳಲ್ಲಿ ಈ ಇಯರ್‌ಫೋನ್‌ ಹೊಸ ಆಪ್ಡೇಟ್‌ ಮಾದರಿಯನ್ನು ಹೊಂದಿದೆ. ಇನ್ನು ಇಯರ್‌ಫೋನ್‌ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಮತ್ತು ಕನೆಕ್ಟಿವಿಟಿಗಾಗಿ ಇತರ ಫೀಚರ್ಸ್‌ಗಳೊಂದಿಗೆ ಔಟ್‌-ಇಯರ್ ಫಿಟ್ ಅನ್ನು ಹೊಂದಿದೆ. ಹಾಗಾದ್ರೆ ಈ ಇಯರ್‌ಫೋನ್‌ನ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜೆಬಿಎಲ್

ಜೆಬಿಎಲ್ ಟ್ಯೂನ್ 225 TWS 12mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಅಲ್ಲದೆ ಈ ಇಯರ್‌ಫೋನ್‌ ಐದು ಗಂಟೆಗಳ ಬ್ಯಾಟರಿ ಅವಧಿಯನ್ನು ಮತ್ತು ಕೇಸ್‌ ಜೊತೆಗೆ ಹೆಚ್ಚುವರಿ ನಾಲ್ಕು ಪೂರ್ಣ ಚಾರ್ಜಿಂಗ್‌ ಅನ್ನು ಹೊಂದಿದೆ. ಅಲ್ಲದೆ ಇದು ಪ್ರತಿ ಚಾರ್ಜ್ ನಲ್ಲಿ ಒಟ್ಟು 25ಗಂಟೆಗಳ ಆಲಿಸುವಿಕೆಯನ್ನು ನೀಡುತ್ತದೆ. ಇನ್ನು ಇಯರ್‌ಫೋನ್‌ಗಳು ಕೇಳುಗರಿಗೆ ವರ್ಧಿತ ಬಾಸ್ ಅನ್ನು ನೀಡುತ್ತವೆ. ಇದಲ್ಲದೆ ಇದು ವಾಯರ್‌ಲೆಸ್ ಆಗಿರುವುದರಿಂದ, ಬಳಕೆದಾರರು ಅಗತ್ಯವಿದ್ದರೆ ಇಯರ್‌ಫೋನ್ ಅನ್ನು ಪ್ರತ್ಯೇಕವಾಗಿ ಸಹ ಬಳಸಲುಬಹುದು.

ಇಯರ್‌ಫೋನ್‌

ಇನ್ನು ಈ ಇಯರ್‌ಫೋನ್‌ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಅಲ್ಲದೆ ಈ ಇಯರ್‌ಫೋನ್‌ಗಳಲ್ಲಿ ವಾಯಿಸ್‌ ಅಸಿಸ್ಟೆಂಟ್‌ ಬೆಂಬಲವನ್ನು ಸಹ ನೀಡಲಾಗಿದೆ. ಇನ್ನು ಜೆಬಿಎಲ್ ಟ್ಯೂನ್ 225 TWS ಕ್ರಿಯೇಟಿವ್ lier ಏರ್ ಮತ್ತು ಸೋನಿ ಡಬ್ಲ್ಯುಎಫ್-ಎಕ್ಸ್‌ಬಿ 700 ಇಯರ್‌ಫೋನ್‌ ಗಳಿಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.ಏಕೆಂದರೆ ಈ ಎಲ್ಲಾ ಇಯರ್‌ಫೋನ್‌ಗಳು ಕೂಡ ಮಧ್ಯ ಶ್ರೇಣಿಯ ವಿಭಾಗದಲ್ಲಿ ತಮ್ಮ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುವ ಭರವಸೆಯನ್ನು ಹೊಂದಿವೆ. ಇನ್ನು ಈ ಇಯರ್‌ಫೋನ್‌ಗಳು ಸಂಪರ್ಕಕ್ಕಾಗಿ ಬ್ಲೂಟೂತ್ 5.0 ಅನ್ನು ಹೊಂದಿದ್ದು, ಆಪಲ್ ಏರ್‌ಪಾಡ್‌ಗಳಂತೆಯೇ ಹೊರ-ಕಿವಿಗೆ ಹೊಂದಿಕೊಳ್ಳುತ್ತದೆ.

ಜೆಬಿಎಲ್

ಅಲ್ಲದೆ ಇದು ಆರಾಮದಾಯಕವಾದ ಫಿಟ್ ಅನ್ನು ಹೊಂದಿದ್ದು, ಸುತ್ತುವರಿದ ಧ್ವನಿಯನ್ನು ಕೇಳುವ ಕೆಲವು ಸಾಮರ್ಥ್ಯವನ್ನು ಸಹ ನೀಡುತ್ತದೆ. ಇದಲ್ಲದೆ ಜೆಬಿಎಲ್ ಟ್ಯೂನ್ 225TWS ಇಯರ್‌ಫೋನ್‌ ಚಿಲ್ಲರೆ ಬೆಲೆ ರೂ. 10,499 ಆಗಿದ್ದು, ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಪ್ರಸ್ತುತ ಕಂಪನಿಯ ಅಧಿಕೃತ ಆನ್‌ಲೈನ್ ಮಳಿಗೆಯಲ್ಲಿ ರೂ. 8,499 ಆಗಿದೆ. ಸದ್ಯ ಇದೀಗ ಜೆಬಿಎಲ್ ಆನ್‌ಲೈನ್ ಅಂಗಡಿಯಲ್ಲಿ ಮಾತ್ರ ಪಟ್ಟಿ ಮಾಡಲಾಗಿದ್ದು, ಬ್ರಾಂಡ್ ತನ್ನ ಹೊಸ ಇಯರ್‌ಫೋನ್‌ಗಳನ್ನು ಇತರ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಮಾರಾಟ ಮಾಡಲಿದೆ.

Most Read Articles
Best Mobiles in India

English summary
JBL Tune 225TWS true wireless stereo (TWS) earphones have been launched in India, priced at Rs. 8,499. The new earphones from JBL are available on the company's official online store.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X