ಈತ ನಿಮ್ಮಿಂದಲೇ ವಿಶ್ವದ ಅತೀ ಶ್ರೀಮಂತನಾದವನು.! ಈತನ ಆಸ್ತಿ 4 ದೇಶಗಳಿಗೆ ಸಮ...!

|

ವಿಶ್ವದ ನಂಬರ್ ಒನ್ ಕುಬೇರರ ಸ್ಥಾನದಲ್ಲಿ ಕೂರಲು ಸದಾ ಮೈಕ್ರೋಸಾಫ್ಟ್ ಮಾಲೀಕ ಬಿಲ್​ಗೇಟ್ಸ್​ ನೊಂದಿಗೆ ಸ್ಪರ್ಧೇಯಲ್ಲಿ ಇರುವ ಜಾಗತಿಕ ಇ ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಆಸ್ತಿ ಮೊತ್ತವನ್ನು ಕೇಳಿದ್ರೆ ನಿಮಗೆ ತಲೆ ತಿರುಗುವುದು ಗ್ಯಾರೆಂಟಿ. ನೀವು ತಿಳಿಯಬೇಕಾದ ವಿಚಾರ ಎಂದರೆ, ಇವರ ಬಳಿ ಇರುವ ಆಸ್ತಿಯ ಮೊತ್ತದಷ್ಟು GDP (ಒಟ್ಟು ದೇಶೀಯ ಉತ್ಪನ್ನ) ಯನ್ನು ಅನೇಕ ದೇಶಗಳು ಹೊಂದಿಲ್ಲ ಎನ್ನಲಾಗಿದೆ. ಅಲ್ಲದೆ ಇವರ ಆಸ್ತಿ ಪ್ರಮುಖ ನಾಲ್ಕು ದೇಶಗಳ ಒಟ್ಟು ದೇಶೀಯ ಉತ್ಪನ್ನಕ್ಕಿಂತಲೂ ಅಧಿಕವಾಗಿದೆ ಎನ್ನುವುದು ಸದ್ಯದ ವಿಚಾರ.

ಈತ ನಿಮ್ಮಿಂದಲೇ ವಿಶ್ವದ ಅತೀ ಶ್ರೀಮಂತನಾದವನು.! ಈತನ ಆಸ್ತಿ 4 ದೇಶಗಳಿಗೆ ಸಮ...!

ಈಗಾಗಲೇ ಅಮೆರಿಕಾದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಮಾರಕಟ್ಟೆಯನ್ನು ಹೊಂದಿರುವ ಅಮೆಜಾನ್, ಭಾರತ ಸೇರಿದಂತೆ ಜಾಗತಿಕವಾಗಿ ಹಲವು ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿತ್ಯ ಕೋಟಿ ಕೋಟಿ ಡಾಲರ್ ವ್ಯವಹಾರವನ್ನು ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಒಟ್ಟು ಆಸ್ತಿ ಮೊತ್ತವೂ ತೀವ್ರಗತಿಯನ್ನು ಏರಿಕೆಯನ್ನು ಕಂಡಿದೆ. ಸದ್ಯ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಪಡೆದುಕೊಂಡಿದ್ದು, ಬಿಲ್​ಗೇಟ್ಸ್​ನ್ನು ಹಿಂದಿಕ್ಕಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಒಟ್ಟು ಆದಾಯದ ಕುರಿತ ಮಾಹಿತಿಯೂ ನಿಮ್ಮ ಮುಂದಿದೆ.

ಅಂತರಾಷ್ಟ್ರೀಯ ಹಣಕಾಸು ನಿಧಿ ವರದಿ:

ಅಂತರಾಷ್ಟ್ರೀಯ ಹಣಕಾಸು ನಿಧಿ ವರದಿ:

ಇ ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಆಸ್ತಿ ಕುರಿತ ಮಾಹಿತಿಯನ್ನು ನೀಡಿರುವುದು ಯಾರೋ ಕೆಲಸಕ್ಕೆ ಬಾರದವರು ಅಲ್ಲ, ಅವರ ಆಸ್ತಿಯ ಬಗ್ಗೆ ನಿಖರವಾಗಿ ಲೆಕ್ಕ ಹಾಕಿರುವ ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ವರದಿಯೊಂದನ್ನು ನೀಡಿದ್ದು, ಇದರಲ್ಲಿ ಜೆಫ್ ಬೆಜೋಸ್ ಆದಾಯದ ಏರಿಕೆಯ ಕುರಿತು ಮಾಹಿತಿಯನ್ನು ನೀಡಿದ್ದು, ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದನ್ನು ತಿಳಿಸಿದೆ.

150 ಬಿಲಿಯನ್​ ಡಾಲರ್​:

150 ಬಿಲಿಯನ್​ ಡಾಲರ್​:

ಮೈಕ್ರೋಸಾಫ್ಟ್​ ದಿಗ್ಗಜ ಬಿಲ್​ಗೇಟ್ಸ್ ಅವರನ್ನು ಹಿಂದಿಕ್ಕಿರುವ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಒಟ್ಟು ಆಸ್ತಿ 150 ಬಿಲಿಯನ್​ ಡಾಲರ್ ಎನ್ನಲಾಗಿದ್ದು, ಇದು ಪ್ರಮುಖ ನಾಲ್ಕು ದೇಶಗಳ ಜಿಡಿಪಿಗೆ ಸಮವಾಗಿದೆ ಎಂದರೆ ನೀವು ನಂಬಲೇ ಬೇಕು.

150 ಬಿಲಿಯನ್​ ಡಾಲರ್​:

150 ಬಿಲಿಯನ್​ ಡಾಲರ್​:

ಮೈಕ್ರೋಸಾಫ್ಟ್​ ದಿಗ್ಗಜ ಬಿಲ್​ಗೇಟ್ಸ್ ಅವರನ್ನು ಹಿಂದಿಕ್ಕಿರುವ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಒಟ್ಟು ಆಸ್ತಿ 150 ಬಿಲಿಯನ್​ ಡಾಲರ್ ಎನ್ನಲಾಗಿದ್ದು, ಇದು ಪ್ರಮುಖ ನಾಲ್ಕು ದೇಶಗಳ ಜಿಡಿಪಿಗೆ ಸಮವಾಗಿದೆ ಎಂದರೆ ನೀವು ನಂಬಲೇ ಬೇಕು.

ಭಾರತೀಯ ರೂಪಾಯಿಗಳಲ್ಲಿ:

ಭಾರತೀಯ ರೂಪಾಯಿಗಳಲ್ಲಿ:

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಒಟ್ಟು ಆಸ್ತಿಯನ್ನು ಭಾರತೀಯ ರೂಪಾಯಿಗಳಲ್ಲಿ ಲೆಕ್ಕ ಹಾಕಿದರೆ ಒಟ್ಟು ರೂ.1,02,80,25,00,00,000.00 ಆಗುತ್ತದೆ. ಎಷ್ಟು ರೂಪಾಯಿ ಎನ್ನುವುದನ್ನು ನೀವೆ ಲೆಕ್ಕಾಹಾಕಿ.

ನಾಲ್ಕು ದೇಶದ ಆದಾಯಕ್ಕಿಂತ ಹೆಚ್ಚು:

ನಾಲ್ಕು ದೇಶದ ಆದಾಯಕ್ಕಿಂತ ಹೆಚ್ಚು:

ಜಾಗತಿಕವಾಗಿ ಗುರುತಿಸಿಕೊಂಡಿರುವ ಮತ್ತು ಮೊನ್ನೇ ನಡೆಸ ಫಿಫಾ ಫೈನಲ್ ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ಕ್ರೋಷಿಯಾ, ಉತ್ತಮ ಪ್ರದರ್ಶನ ನೀಡಿದ ಐಸ್​ಲ್ಯಾಂಡ್​, ಎಸ್ಟೋನಿಯಾ ಮತ್ತು ಪಕ್ಕದ ಕಾಂಬೋಡಿಯಾ ದೇಶಗಳ ಒಟ್ಟು GDP (ಒಟ್ಟು ದೇಶೀಯ ಉತ್ಪನ್ನ) ಗಿಂತಲೂ ಜೆಫ್ ಬೆಜೋಸ್ ಒಟ್ಟು ಆಸ್ತಿ ಹೆಚ್ಚಿದೆ ಎನ್ನುವ ಮಾಹಿತಿಯನ್ನು IMF ತಿಳಿಸಿದೆ.

ಈ ದೇಶಗಳ ಆದಾಯ:

ಈ ದೇಶಗಳ ಆದಾಯ:

ಕ್ರೋಷಿಯಾ ದೇಶದ ಒಟ್ಟು ದೇಶೀಯ ಉತ್ಪನ್ನ 61 ಬಿಲಿಯನ್​ ಡಾಲರ್ ಇದ್ದು, ಐಸ್​ಲ್ಯಾಂಡ್​ ದೇಶದ ಒಟ್ಟು ದೇಶೀಯ ಉತ್ಪನ್ನ 29 ಬಿಲಿಯನ್​ ಡಾಲರ್ ಆಗಿದ್ದು, ಇದೇ ಮಾದರಿಯಲ್ಲಿ ಕಾಂಬೋಡಿಯಾ ದೇಶದ ಒಟ್ಟು ದೇಶೀಯ ಉತ್ಪನ್ನ 24 ಬಿಲಿಯನ್​ ಡಾಲರ್ ಇದೆ. ಇದೇ ಮಾದರಿಯಲ್ಲಿ ಎಸ್ಟೋನಿಯಾ ದೇಶದ ಒಟ್ಟು ದೇಶೀಯ ಉತ್ಪನ್ನ 30 ಬಿಲಿಯನ್​ ಡಾಲರ್ ಎನ್ನಲಾಗಿದ್ದು, ಇವುಗಳನ್ನು ಒಟ್ಟು ಮಾಡಿದರೂ ಜೆಫ್ ಬೆಜೋಸ್ ಒಟ್ಟು ಆಸ್ತಿಗಿಂತಲೂ ಕಡಿಮೆಯಾಗಲಿದೆ.

ಆದಾಯ ಇನ್ನು ಹೆಚ್ಚಾಗಲಿದೆ:

ಆದಾಯ ಇನ್ನು ಹೆಚ್ಚಾಗಲಿದೆ:

ಹಳ್ಳದ ಕಡೆಗೆ ನೀರು ಎನ್ನುವ ಹಾಗೆ ಈಗಾಗಲೇ 150 ಬಿಲಿಯನ್ ಮೊತ್ತದ ಆಸ್ತಿಯನ್ನು ಹೊಂದಿರುವ ಜೆಫ್ ಬೆಜೋಸ್, ಇನ್ನು ಶ್ರೀಮಂತರಾಗುತ್ತಲೇ ಇರುತ್ತಾರೆ. ಇವರು ಹೊಸದಾಗಿ ಆರಂಭಿಸಿರುವ ಬ್ಲೂ ಒರಿಜಿನ್ಸ್​ ಎಂಬ ಅಂತರಿಕ್ಷಯಾನ ಸಂಸ್ಥೆ ಇನ್ನು ಹೆಚ್ಚಿನ ಆದಾಯವನ್ನು ಮುಂದಿನ ದಿನಗಳಲ್ಲಿ ನೀಡಲಿದೆ ಎನ್ನುವ ಲೆಕ್ಕಾಚಾರ ಇದೆ.

ಅಮೆಜಾನ್ ಬೆಳೆದಂತೆ:

ಅಮೆಜಾನ್ ಬೆಳೆದಂತೆ:

ಮಾರುಕಟ್ಟೆಯಲ್ಲಿ ಅಮೆಜಾನ್ ಕಂಪನಿ ಮೌಲ್ಯ ಹೆಚ್ಚಾದಂತೆ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಒಟ್ಟು ಆಸ್ತಿಯೂ ಹೆಚ್ಚಾಗುತ್ತಾ ಸಾಗುತ್ತದೆ. ದುಡ್ಡು ಸೇರುತ್ತಲೇ ಇರುತ್ತದೆ ಎನ್ನಲಾಗಿದೆ.

ಭಾರತಕ್ಕೆ ಮಾತ್ರವಲ್ಲ...ಈಗ ಏಷ್ಯಾದ ನಂ 1 ಶ್ರೀಮಂತ

ಭಾರತಕ್ಕೆ ಮಾತ್ರವಲ್ಲ...ಈಗ ಏಷ್ಯಾದ ನಂ 1 ಶ್ರೀಮಂತ

ಇಲ್ಲಿಯವರೆಗೂ ಭಾರತದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರು ಈಗ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಚೀನಾದ ಅಲಿಬಾಬಾ ಡಾಟ್ ಕಾಮ್ ಒಡೆಯ ಜಾಕ್ ಮಾ ಅವರನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಏಷ್ಯಾದ ನಂ 1 ಶ್ರೀಮಂತ ಮುಖೇಶ್ ಅಂಬಾನಿ!!

ಏಷ್ಯಾದ ನಂ 1 ಶ್ರೀಮಂತ ಮುಖೇಶ್ ಅಂಬಾನಿ!!

ಬ್ಲೂಮ್​ಬರ್ಗ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮುಖೇಶ್​ ಅಂಬಾನಿ 44.3 ಬಿಲಿಯನ್​ ಡಾಲರ್​ ಸಂಪತ್ತು ಹೊಂದುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಜಾಕ್​ ಮಾ ಅವರ ಒಟ್ಟು ಆಸ್ತಿ 44 ಬಿಲಿಯನ್​ ಡಾಲರ್​ ಆಸ್ತಿಯೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಾಗಾಗಿ, ಇದೆ ಮೊದಲ ಬಾರಿಗೆ ಅಂಬಾನಿ ಏಷ್ಯಾದ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜಿಯೋಯಿಂದ ಅಂಬಾನಿಗೆ ಸಿಕ್ಕಿರುವ ಕೊಡುಗೆ

ಜಿಯೋಯಿಂದ ಅಂಬಾನಿಗೆ ಸಿಕ್ಕಿರುವ ಕೊಡುಗೆ

ಇತ್ತೀಚಿಗೆ ಅಂಬಾನಿ ನಡೆಸುತ್ತಿರುವ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿರುವುದರಿಂದ ರಿಲಯನ್ಸ್​ ಇಂಡಸ್ಟ್ರೀಸ್​ನ ಷೇರು ಪ್ರಮಾಣದಲ್ಲಿ ಭಾರೀ ಜಿಗಿತ ಕಂಡಿದೆ. ಹಾಗಾದರೆ, ವಿಶ್ವದಲ್ಲಿ ಅಂಬಾನಿ ಈಗ ಎಷ್ಟನೇ ಶ್ರೀಮಂತ? ವಿಶ್ವದ ನಂಬರ್ ಶ್ರೀಮಂತ ಯಾರು? ಜಿಯೋಯಿಂದ ಅಂಬಾನಿಗೆ ಸಿಕ್ಕಿರುವ ಕೊಡುಗೆ ಏನು ಎಂಬುದನ್ನು ಮುಂದೆ ತಿಳಿಯಿರಿ.

ರಿಲಯನ್ಸ್​ ಇಂಡಸ್ಟ್ರೀಸ್ ಜಿಗಿತ!

ರಿಲಯನ್ಸ್​ ಇಂಡಸ್ಟ್ರೀಸ್ ಜಿಗಿತ!

ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮಾರುಕಟ್ಟೆ ಇಂದು 7 ಲಕ್ಷ ಕೋಟಿ ವರಮಾನ ಹೊಂದುವ ಮೂಲಕ ಟಿಸಿಎಸ್​ನ ನಂತರ ಈ ಪ್ರಮಾಣದ ವಹಿವಾಟನ್ನು ನಡೆಸಿದ ದೇಶದ 2ನೇ ಸಂಸ್ಥೆಯಾಗಿ ದಾಖಲೆ ಬರೆದಿದೆ. ಈ ಬೆಳವಣಿಗೆಯ ನಂತರ ರಿಲಯನ್ಸ್​ ಇಂಡಸ್ಟ್ರೀಸ್​ನ ಷೇರು ಪ್ರಮಾಣದಲ್ಲಿ ಭಾರೀ ಹೆಚ್ಚಳ ಕಂಡಿದೆ ಎಂದು ವರದಿಯಾಗಿದೆ.

ಜಾಕ್ ಮಾ ಹಿಂದಿಕ್ಕಿದ ಅಂಬಾನಿ!

ಜಾಕ್ ಮಾ ಹಿಂದಿಕ್ಕಿದ ಅಂಬಾನಿ!

ಕಳೆದ ಕೆಲವು ವರ್ಷಗಳಿಂದಲೂ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಚೀನಾದ ಜಾಕ್‌ಮಾ ಈಗ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಜಾಕ್‌ಮಾ ಅವರ ಆಲಿಬಾಬಗಿಂತಲೂ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ವ್ಯವಹಾರ ಉತ್ತಮವಾಗಿದೆ. ಕೇವಲ ಒಂದೇ ದಿನದಲ್ಲಿ ಶೇ. 1.7ರಷ್ಟು ಹೆಚ್ಚಳವಾಗಿ ಅಂಬಾನಿ ಏಷ್ಯಾದ ಶ್ರೀಮಂತರಾಗಿದ್ದಾರೆ.

ಜಿಯೋ ಮೈಲಿಗಲ್ಲು!

ಜಿಯೋ ಮೈಲಿಗಲ್ಲು!

ಅಂಬಾನಿ ಏಷ್ಯಾದ ಶ್ರೀಂತವಾಗುವ ಮುನ್ನವೇ ಟೆಲಿಕಾಂ ಕ್ಷೇತ್ರದಲ್ಲಿ 21.5 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ಜಿಯೋ ಮೈಲಿಗಲ್ಲು ಸ್ಥಾಪಿಸಿದೆ. 4ಕೆ ರೆಸಲ್ಯೂಷನ್​ನ ಅಡ್ವಾನ್ಸ​ಡ್​ ಫೈಬರ್​ ಒಳಗೊಂಡಿರುವ ಜಿಯೋ ಗಿಗಾಫೈಬರ್​ ಬ್ರಾಡ್​ ಬ್ಯಾಂಡ್ ಮತ್ತು ಟಿವಿ ಸೇವೆಗಳು ಮಾರುಕಟ್ಟೆಗೆ ಪರಿಚಯಿಸಿರುವುದರಿಂದ ಅಂಬಾನಿ ಮೇಲೆ ಷೇರುದಾರರಿಗೆ ವಿಶ್ವಾಸ ಮೂಡಿದೆ.

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸ್ ಮಾಲಿಕತ್ವ ಹೊಂದಿರುವ ಅಂಬಾನಿ ಮುಂಬಯಿ ಇಂಡಿಯನ್ಸ್ ಕ್ರಿಕೆಟ್ ತಂಡವನ್ನು ಹೊಂದಿರುವುದು ನಿಮಗೆಲ್ಲಾ ತಿಳಿದಿದೆ. ಆದರೆ, ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೆಚ್ಚಾಗಿ ಹಾಕಿಯನ್ನು ಆಡುತ್ತಿದ್ದರು ಮತ್ತು ಹಾಕಿ ಆಟದ ಕಾರಣದಿಂದಾಗಿ ಅವರು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.!!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!

! ಐಟಿ ಉದ್ಯಮೇತರನಾಗಿ ಮುಖೇಶ್ ಅಂಬಾನಿ ಯಾವಾಗಲೂ ಒಳ್ಳೆಯ ಉದ್ಯಮಿ ಎನ್ನುತ್ತವೆ ವರದಿಗಳು. ಇದಕ್ಕೆ ಪೂರಕವೆಂಬಂತೆ ಮುಖೇಶ್ ಅಂಬಾನಿ ಅವರು ವಿಶ್ವದಲ್ಲಿಯೇ ಅತಿ ದೊಡ್ಡ ಸಂಸ್ಕರಣಾಗಾರವನ್ನು ಹೊಂದಿದ್ದಾರೆ. ಪ್ರಪಂಚದ ಅತಿದೊಡ್ಡ ಸಂಸ್ಕರಣಾಗಾರವಾದ ದಿನಕ್ಕೆ 6,68,000 ಬ್ಯಾರೆಲ್ ರಿಫೈನರಿ ನಡೆಯುತ್ತದಂತೆ.

ವಿಶ್ವದ ಅತ್ಯಂತ ದುಬಾರಿ ಮನೆ!

ವಿಶ್ವದ ಅತ್ಯಂತ ದುಬಾರಿ ಮನೆ!

ಮುಖೇಶ್ ಅಂಬಾನಿ ಅವರು ವಿಶ್ವದ ಅತ್ಯಂತ ದುಬಾರಿ ಮನೆಯ ಮಾಲಿಕತಾಗಿದ್ದಾರೆ. ದಕ್ಷಿಣ ಮುಂಬಯಿಯಲ್ಲಿ ಇರುವ ಅಂಟಿಲಿಯಾ ಮನೆಯ ಅಂದಾಜು ಮೌಲ್ಯ ಸುಮಾರು 1 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಈ ಮನೆ 27 ಅಂತಸ್ತುಗಳನ್ನು ಹೊಂದಿದ್ದು, 600 ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ಹೊಂದಿದೆ ಎನ್ನಲಾಗಿದೆ.

168 ಕ್ಕಿಂತಲೂ ಹೆಚ್ಚು ಕಾರಿವೆ.!

168 ಕ್ಕಿಂತಲೂ ಹೆಚ್ಚು ಕಾರಿವೆ.!

ಮುಖೇಶ್ ಅಂಬಾನಿ ಕಾರುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂಬಾನಿ ಬಳಿಯಲ್ಲಿ 168 ಕ್ಕಿಂತಲೂ ಹೆಚ್ಚು ಕಾರುಗಳಿವೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸುತ್ತಿರುವ ಹಾಗೂ ಬಾಂಬ್ ಸ್ಫೋಟವನ್ನು ತಡೆಯುವಷ್ಟು ರಕ್ಷಾಕವಚ ಹೊಂದಿರುವ BMW 760LI ಕಾರು ಬಳಕೆಯಲ್ಲಿದೆ. ಮರ್ಸಿಡಿಸ್-ಮೇಬ್ಯಾಚ್ ಬೆಂಜ್ S660 ಗಾರ್ಡ್, ಆಯ್ಸ್ಟನ್ ಮಾರ್ಟಿನ್ ರ್ಯಾಪಿಡ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುಗಳೂ ಕೂಡ ಅಂಬಾನಿ ಬತ್ತಳಿಕೆಯಲ್ಲಿವೆ.

Most Read Articles
Best Mobiles in India

English summary
Jeff Bezos Becomes the Richest Man in Modern History. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more