Just In
- 2 hrs ago
ರಿಯಲ್ಮಿ C25 ಫಸ್ಟ್ ಲುಕ್: ಬಜೆಟ್ ದರದಲ್ಲಿ ಜಬರ್ದಸ್ತ್ ಕಾರ್ಯವೈಖರಿಯ ಫೋನ್!
- 15 hrs ago
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಸೇವ್ ಮಾಡುವುದು ಹೇಗೆ?
- 16 hrs ago
ವಾಟ್ಸಾಪ್ ಬಳಕೆದಾರರನ್ನು ಕಂಗಾಲು ಮಾಡಿದ Pink WhatsApp ಲಿಂಕ್!
- 17 hrs ago
ಫ್ಲಿಪ್ಕಾರ್ಟ್ ಸ್ಮಾರ್ಟ್ಫೋನ್ ಕಾರ್ನಿವಲ್ ಸೇಲ್: ಈ ಫೋನ್ಗಳಿಗೆ ಆಕರ್ಷಕ ಕೊಡುಗೆ!
Don't Miss
- News
ಬುದ್ದಿವಂತ ಜಿಲ್ಲೆಯ ಸಂಸದ ನಳಿನ್ ಕಟೀಲ್ ಅವರ ಈ ಚಿತ್ರವನೊಮ್ಮೆ ನೋಡಿ!
- Sports
ಮ್ಯಾಕ್ಸ್ವೆಲ್ ಸಿಕ್ಸ್ ದಾಖಲೆ ಮುರಿದ ಕೀರನ್ ಪೊಲಾರ್ಡ್
- Movies
ಕೊರೊನಾ ಪಾಸಿಟಿವ್ ಬಂದರೂ ಸಾಮಾಜಿಕ ಕಾರ್ಯ ನಿಲ್ಲಿಸದ ಸೋನು ಸೂದ್
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Automobiles
ವಾರದ ಸುದ್ದಿ: ಲಾಕ್ಡೌನ್ ಭೀತಿಯಲ್ಲಿ ಆಟೋ ಉದ್ಯಮ, ವಾಹನಗಳ ಬೆಲೆ ಏರಿಕೆ, ಇವಿ ಸಬ್ಸಡಿ ಮಾನ್ಯತೆ ವಿಸ್ತರಣೆ
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಿಯೋ 749ರೂ. ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ ಒಂದು ವರ್ಷ ಉಚಿತ ಸೇವೆ ಲಭ್ಯ!
ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಿಲಾಯನ್ಸ್ ಜಿಯೋ ತನ್ನ ಜಿಯೋಫೋನ್ ಗ್ರಾಹಕರಿಗೆ ಆಕರ್ಷಕ ಧಮಾಕ್ ಆಫರ್ ಘೋಷಿಸಿದೆ. ಈಗಾಗಲೇ ಅಗ್ಗದ ರೀಚಾರ್ಜ್ ಪ್ಲ್ಯಾನ್ಗಳಿಂದ ಗಮನ ಸೆಳೆದಿದ್ದ ಜಿಯೋ ಈಗ ಕಡಿಮೆ ಬೆಲೆಯಲ್ಲಿ ವಾರ್ಷಿಕ ಅವಧಿಯ ಪ್ರಯೋಜನಗಳ ಯೋಜನೆಯನ್ನು ಪರಿಚಯಿಸಿ ಮತ್ತೆ ತನ್ನ ಗ್ರಾಹಕರನ್ನು ಖುಷಿಪಡಿಸಿದೆ.
ಹೌದು, ರಿಲಾಯನ್ಸ್ ಜಿಯೋ ಟೆಲಿಕಾಂ ಈಗ ಜಿಯೋ ಫೋನ್ ಬಳಕೆದಾರರಿಗಾಗಿ ಜಿಯೋ 749ರೂ. ರೀಚಾರ್ಜ್ ಯೋಜನೆಯನ್ನು ಘೋಷಿಸಿದೆ. ಈಗಾಗಲೇ ಜಿಯೋ ಫೋನ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಮಾತ್ರ ಈ ಯೋಜನೆಯು ಲಭ್ಯವಾಗಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ವಾರ್ಷಿಕ ಅವಧಿಯ ಪ್ರಯೋಜನಗಳು ಲಭ್ಯವಾಗುತ್ತವೆ. ಜೊತೆಗೆ ಜಿಯೋ ಆಪ್ಸ್ಗಳ ಸೇವೆ ದೊರೆಯಲಿದೆ. ಹಾಗಾದರೇ ಈ ಯೋಜನೆಯ ಒಟ್ಟಾರೇ ಪ್ರಯೋಜನಗಳೆನು ಹಾಗೂ ಇತರೆ ಜಿಯೋ ಫೋನ್ ರೀಚಾರ್ಜ್ ಆಯ್ಕೆಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಜಿಯೋ 749ರೂ. ಪ್ಲಾನ್
ಜಿಯೋದ 749ರೂ. ಪ್ಲಾನಿನಲ್ಲಿ ಒಂದು ವರ್ಷದ ವ್ಯಾಲಿಡಿಟಿ ಲಭ್ಯವಾಗಲಿದ್ದು, ಈ ಅವಧಿಯಲ್ಲಿ ಪ್ರತಿ ತಿಂಗಳು 2GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಹ ಲಭ್ಯವಾಗಲಿದೆ. ಇನ್ನು ಈ ಯೋಜನೆಯು ಎಕ್ಸಿಸ್ಟಿಂಗ್ ಜಿಯೋ ಫೋನ್ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಇದೇ ಮಾರ್ಚ್ 1, 2021ರಿಂದ ಲಭ್ಯವಾಗಲಿದೆ.

ಜಿಯೋ 75ರೂ. ಪ್ಲಾನ್
ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್ಎಮ್ಎಸ್ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 125ರೂ. ಪ್ಲಾನ್
ಜಿಯೋದ ಈ 125ರೂ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 14GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್ಎಮ್ಎಸ್ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 155ರೂ. ಪ್ಲಾನ್
ಜಿಯೋದ ಈ 155ರೂ. ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 28GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪ್ರತಿದಿನ 1GB ಡೇಟಾ ಬಳಕೆ ಮಾಡಬಹುದು. ಇದರೊಂದಿಗೆ ಪ್ರತಿದಿನ ಒಟ್ಟು 100 ಎಸ್ಎಮ್ಎಸ್ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 185ರೂ. ಪ್ಲಾನ್
ಜಿಯೋದ ಈ 185ರೂ. ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 56GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪ್ರತಿದಿನ 2GB ಡೇಟಾ ಬಳಕೆ ಮಾಡಬಹುದು. ಇದರೊಂದಿಗೆ ಪ್ರತಿದಿನ ಒಟ್ಟು 100 ಎಸ್ಎಮ್ಎಸ್ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999