TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಜಿಯೋಗೆ ದಂಡ ವಿಧಿಸಿದ ಟ್ರಾಯ್: ಏರ್ಟೆಲ್ಗೂ ಬಿಟ್ಟಿಲ್ಲ..! ಯಾಕೆ..?
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸತನಗಳಿಗೆ ಸಾಕ್ಷಿಯಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋಗೆ, ಟೆಲಿಕಾಂ ನಿಯಂತ್ರಕ ಟ್ರಾಯ್ ಭಾರಿ ಪ್ರಮಾಣದ ದಂಡವನ್ನು ವಿಧಿಸಿದೆ ಎನ್ನಲಾಗಿದೆ. ಬಳಕೆದಾರರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವಲ್ಲಿ ವಿಫಲವಾಗಿದೆ ಎನ್ನುವ ಕಾರಣಕ್ಕೆ ಜಿಯೋ ಮೇಲೆ ದಂಡಾಸ್ತ್ರವನ್ನು ಪ್ರಯೋಗ ಮಾಡಲು ಮುಂದಾಗಿದೆ. ಜಿಯೋ ಮಾತ್ರವಲ್ಲದೇ ಎಲ್ಲಾ ಟೆಲಿಕಾಂ ಕಂಪನಿಗಳಗೂ ದಂಡವನ್ನು ವಿಧಿಸಿದೆ ಎನ್ನಲಾಗಿದೆ.
ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡಲು ವಿಫಲವಾಗಿವೆ. ಕೆಲವು ಭಾಗಗಳಲ್ಲಿ ಮಾತ್ರವೇ ಉತ್ತಮವಾದ ಸೇವೆಯನ್ನು ನೀಡಿ ಬೇರೆ ಪ್ರದೇಶಗಳಲ್ಲಿ ಸರಿಯಾದ ಕ್ವಾಲಿಟಿಯನ್ನು ನೀಡಲು ಶಕ್ತವಾಗಿಲ್ಲ. ಈ ಹಿನ್ನಲೆಯಲ್ಲಿ ಜಿಯೋ, ಏರ್ಟೆಲ್, ವೊಡಾಫೋನ್ ಹಾಗೂ ಐಡಿಯಾಗಳಿಗೂ ದಂಡವನ್ನು ನೀಡಿದೆ ಎನ್ನಲಾಗಿದೆ.
ಜಿಯೋಗೆ ದಂಡ:
ಜಿಯೋ ಮಾರುಕಟ್ಟೆಯಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದರೂ ಸಹ ದಂಡ ಪಾವತಿ ಮಾಡಬೇಕಾಗಿದೆ. ರೂ.34 ಲಕ್ಷಗಳನ್ನು ದಂಡವಾಗಿ ಪಾವತಿ ಮಾಡುವಂತೆ ಟ್ರಾಯ್ ಸೂಚಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸೇವೆಯನ್ನು ನೀಡುತ್ತಿದ್ದರೂ ಸಹ ಗುಣಮಟ್ಟವನ್ನು ನೀಡಲು ಶಕ್ತವಾಗಿಲ್ಲ ಎನ್ನಲಾಗಿದೆ.
ಮಾನದಂಡ:
ಜಿಯೋ ಬಳಕೆದಾರರ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿರುವುದು ಸೇರಿದಂತೆ ಹಲವು ಮಾದರಿಯ ಕ್ವಾಲಿಟಿ ಬೆಂಚ್ ಮಾರ್ಕ್ ಅನ್ನು ತಲುಪುವಲ್ಲಿ ಜಿಯೋ ವಿಫಲವಾಗಿದ್ದು, ಈ ಹಿನ್ನಲೆಯಲ್ಲಿ ಟ್ರಾಯ್ ಈ ಬಾರಿ ದಂಡವನ್ನು ವಿಧಿಸಿದ್ದು, ಶೀಘ್ರವೇ ಸೇವಾ ಗುಣಮಟ್ಟವನ್ನು ಉತ್ತಮ ಪಡಿಸುವಂತೆ ಸೂಚನೆ ನೀಡಿದೆ.
ಏರ್ಟೆಲ್ಗೂ ದಂಡ:
ಸದ್ಯ ಮಾರುಕಟ್ಟೆಯ ಅತೀ ದೊಡ್ಡ ನೆಟ್ವರ್ಕ್ ಎನ್ನಿಸಿಕೊಂಡಿರುವ ಏರ್ಟೆಲ್ ಸಹ ಟ್ರಾಯ್ ನಿಂದ ದಂಡಕ್ಕೆ ಗುರಿಯಾಗಿದೆ. ಏರ್ಟೆಲ್ ಸಹ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಿಲ್ಲ ಎನ್ನಲಾಗಿದ್ದು, ರೂ.11 ಲಕ್ಷದ ದಂಡ ಪಾವತಿಗೆ ಸೂಚಿಸಲಾಗಿದೆ.
ಐಡಿಯಾ ಸಹ:
ಇದಲ್ಲದೇ ಮಾರುಕಟ್ಟೆಯಲ್ಲಿ ನಷ್ಟವನ್ನು ತುಂಬಿಕೊಳ್ಳುವ ಸಲುವಾಗಿ ವೊಡಾಫೋನ್ನೊಂದಿಗೆ ವಿಲೀನವಾಗಲು ಉತ್ಸುಕವಾಗಿರುವ ಐಡಿಯಾ ಸಹ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ವಿಫಲವಾಗಿದ್ದು, ಈ ಹಿನ್ನಲೆಯಲ್ಲಿ ರೂ.12.5 ಲಕ್ಷದ ದಂಡ ಪಾವತಿಸ ಬೇಕಾಗಿ ಬಂದಿದೆ.
ವೊಡಾಫೋನ್:
ರೂ.4 ಲಕ್ಷ ದಂಡವನ್ನು ಪಾವತಿಸುವಂತೆ ವೊಡಾಫೋನಿಗೂ ಟ್ರಾಯ್ ಸೂಚನೆಯನ್ನು ನೀಡಿದ್ದು, ಬಳಕೆದಾರರಿಗೆ ಗುಣಮಟ್ಟದ ಸೇವೆಯನ್ನು ನೀಡುವಲ್ಲಿ ವೊಡಾಫೋನ್ ಸಹ ಯಶಸ್ವಿಯಾಗಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಗಲಿದ್ದು, ದಂಡ ಪಾವತಿಗೆ ಹೆದರಿ ಗುಣಮಟ್ಟದ ಸೇವೆಯನ್ನು ನಿರೀಕ್ಷಿಸಬಹುದಾಗಿದೆ.