Just In
Don't Miss
- News
ಕೊರೊನಾ ಬಿಕ್ಕಟ್ಟು ನಿರ್ವಹಿಸುತ್ತಿರುವ ಸರ್ಕಾರಗಳ ಬಗ್ಗೆ ಹೈಕೋರ್ಟ್ ಅವಲೋಕನ
- Automobiles
ಅನಾವರಣವಾಯ್ತು ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್
- Lifestyle
ಅವಧಿ ಮುಗಿದ ಮೊಟ್ಟೆ ಸೇವಿಸಬಹುದೇ? ಇಲ್ಲಿದೆ ಉತ್ತರ
- Finance
ಕೊರೊನಾ ಕಾರಣ : ಬ್ಯಾಂಕ್ಗಳ ಕೆಲಸದ ಸಮಯ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಿರ್ಬಂಧ
- Sports
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿಗೆ ವಿಶೇಷ ದಾಖಲೆ
- Movies
ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾಗೆ ಬಲಿ
- Education
BEL Recruitment 2021: 268 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೇಶದ 22 ವೃತ್ತಗಳಲ್ಲಿ ಸ್ಪೆಕ್ಟ್ರಮ್ ಬಳಸುವ ಹಕ್ಕು ತನ್ನದಾಗಿಸಿಕೊಂಡ ಜಿಯೋ!
ಸ್ಪೆಕ್ಟ್ರಮ್ ಹರಾಜು 2021 ಅನ್ನು ಮಂಗಳವಾರ ಮುಕ್ತಾಯವಾಗಿದ್ದು, ರಿಲಯನ್ಸ್ ಜಿಯೋ ಅತಿದೊಡ್ಡ ಬಿಡ್ದರರಾಗಿ ಹೊರಹೊಮ್ಮಿದೆ. ಭಾರತದ ಎಲ್ಲ 22 ವೃತ್ತಗಳಲ್ಲೂ ಸ್ಪೆಕ್ಟ್ರಮ್ ಬಳಸುವ ಹಕ್ಕನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (RIL) ತನ್ನದಾಗಿಸಿಕೊಂಡಿದೆ. ಈಚೆಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಮುಕ್ತಾಯವಾದ ಸ್ಪೆಕ್ಟ್ರಮ್ ಹರಾಜಿನಲ್ಲಿ ಈ ಹಕ್ಕನ್ನು ಪಡೆದುಕೊಂಡಿದೆ. ಇನ್ನು ಯಾವ ರಾಜ್ಯದಲ್ಲಿ ಎಷ್ಟು ಬ್ಯಾಂಡ್ ಎಂಬ ವಿವರಗಳು ತಿಳಿಯಲು ಮುಂದೆ ಓದಿರಿ.

LTE ಸೇವೆ ಮತ್ತು ಭವಿಷ್ಯದ 5G ತಂತ್ರಜ್ಞಾನ ಮೇಲ್ದರ್ಜೆಗೆ RJIL ಉತ್ತಮ ಬ್ಯಾಲೆನ್ಸ್ ಹೊಂದಿದೆ. ಇತರ ಪ್ರಮುಖಾಂಶಗಳ ಮಾಹಿತಿ ಹೀಗಿದೆ.
* ಈ ಖರೀದಿ ಮೂಲಕ RJIL ಒಟ್ಟಾರೆ ಒಡೆತನದ ಸ್ಪೆಕ್ಟ್ರಂ ಮಹತ್ತರವಾದ ಏರಿಕೆ ಕಂಡು, ಶೇಕಡಾ 55ರಷ್ಟು ಹೆಚ್ಚಳವಾಗಿ 1,717 MHz (uplink+ downlink) ತಲುಪಿದೆ.
* ರಿಲಯನ್ಸ್ನ ಕನಿಷ್ಠ ಮೊತ್ತದ ಸಬ್- ಗಿಗಾಹಜ್ ಸ್ಪೆಕ್ಟ್ರಂ 2X10 MHz ಸ್ಪೆಕ್ಟ್ರಮ್ ಹಲವು ವೃತ್ತಗಳಲ್ಲಿವೆ. ಇದರ ಜತೆಗೆ 1800 MHz ಬ್ಯಾಂಡ್ನಲ್ಲಿ ಕನಿಷ್ಠ 2X10 MHz ಮತ್ತು ತಲಾ 22 ವೃತ್ತಗಳಲ್ಲಿ 2300 Mhzಬ್ಯಾಂಡ್ನಲ್ಲಿ 40 MHz ಇದೆ.

* RJIL ಪ್ರತಿ Mhzಗೆ ರೂ 60.8 ಕೋಟಿಯನ್ನು ಪಾವತಿ ಮಾಡಿದೆ.
* ಸ್ಪೆಕ್ಟ್ರಮ್ ವ್ಯಾಪ್ತಿ ವಿಸ್ತಾರ ಆಗುವುದರೊಂದಿಗೆ ಅಖಿಲ ಭಾರತ ಮಟ್ಟದಲ್ಲಿ ಮೂಲಸೌಕರ್ಯ ನಿಯೋಜಿಸಿದೆ. ಈಗಿರುವ ಗ್ರಾಹಕರಿಗೆ ಒದಗಿಸಬಹುದಾದ ಸೇವಾ ಸಾಮರ್ಥ್ಯದ ಜತೆಗೆ ಇನ್ನೂ ಲಕ್ಷಾಂತರ ಗ್ರಾಹಕರಿಗೆ ಸೇವೆ ಒದಗಿಸಬಹುದು.
* ಎಲ್ಲಿ ಜಿಯೋ ತನ್ನ ಸ್ವಂತ5G ಸಿದ್ಧಮಾಡಿಕೊಂಡಿದೆಯೋ ಅಲ್ಲಿ ಸರಿಯಾದ ಸಮಯಕ್ಕೆ 5G ಸೇವೆಗೆ ಬದಲಾವಣೆ ಮಾಡಿಕೊಳ್ಳಲು ಈ ಸ್ಪೆಕ್ಟ್ರಮ್ ಬಳಕೆ ಮಾಡಲಾಗುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ಡಿಜಿಟಲ್ ರೂಪು- ರೇಖೆಯಲ್ಲೇ ಜಿಯೋ ಕ್ರಾಂತಿಕಾರಿ ಬದಲಾವಣೆ ತಂದಿದೆ. ಡಿಜಿಟಲ್ ಜೀವನವನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿರುವ ದೇಶ ಇದಾಗಲಿದೆ. ನಮಗೆ ಈಗಿರುವ ಗ್ರಾಹಕರ ಅನುಭವದ ವ್ಯಾಪ್ತಿ ವಿಸ್ತಾರ ಮಾಡುವುದು ಮಾತ್ರವಲ್ಲ. 30 ಕೋಟಿ ಬಳಕೆದಾರರು ಡಿಜಿಟಲ್ ಸೇವೆಗೆ ಸೇರ್ಪಡೆ ಆಗಲಿದ್ದಾರೆ. 5G ಸೇವೆ ಒದಗಿಸುವುದಕ್ಕೆ ನಾವೀಗ ಸಂಸಿದ್ಧಗೊಂಡಿದ್ದೇವೆ ಎಂದಿದ್ದಾರೆ.

20 ವರ್ಷಗಳ ಅವಧಿಗೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕೆ ಸ್ಪೆಕ್ಟ್ರಮ್ಗೆ 57,123 ಕೋಟಿ ರೂಪಾಯಿ ಪಾವತಿಸಬೇಕು. ಈ ಮೊತ್ತವು ಪ್ರಾವಿಷನಲ್ ಆಗಿದ್ದು, ದೂರಸಂಪರ್ಕ ಇಲಾಖೆಯಿಂದ ಖಾತ್ರಿಯಾಗಬೇಕಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999