Just In
Don't Miss
- News
ನೂಪುರ್ ವಿರುದ್ಧದ ಸುಪ್ರೀಂ ಹೇಳಿಕೆಗೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳ ಆಕ್ಷೇಪ
- Sports
ಈತನ ಹುಚ್ಚುತನದಿಂದ ನಾಲ್ಕನೇ ದಿನ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮಂಕಾಯಿತು ಎಂದ ಪೀಟರ್ಸನ್!
- Education
SSC CGL Tier 1 2022 Result : ಎಸ್ಎಸ್ಸಿ ಸಿಜಿಎಲ್ ಟಯರ್ 1 ಫಲಿತಾಂಶ ವೀಕ್ಷಿಸುವುದು ಹೇಗೆ ?
- Lifestyle
ನೀವು ಯಾವ ಭಂಗಿಯಲ್ಲಿ ಮಲಗುತ್ತೀರಾ ಅದೇ ಹೇಳುತ್ತೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತಾ!
- Automobiles
ಇಂದಿನಿಂದ ಸ್ಕಾರ್ಪಿಯೋ-ಎನ್ ಕಾರು ಮಾದರಿಯ ಟೆಸ್ಟ್ ಡ್ರೈವ್ ಆರಂಭಿಸಿದ ಮಹೀಂದ್ರಾ
- Movies
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ನೆಕ್ಸಸ್ ಮಾಲ್ಗಳಲ್ಲಿ EV ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲಿರುವ ಜಿಯೋ-ಬಿಪಿ
ರಿಲಾಯನ್ಸ್ ಮತ್ತು ಬಿಪಿ ಜಂಟಿ ಸಂಸ್ಥೆಯಾಗಿರುವ ಜಿಯೋ-ಬಿಪಿ ಅಡಿಯಲ್ಲಿ ನೆಕ್ಸಸ್ ಮಾಲ್ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲಿದೆ. 13 ನಗರಗಳಲ್ಲಿ ನೆಕ್ಸಸ್ನ 17 ಮಾಲ್ಗಳು ಇದ್ದು, ಇದರಲ್ಲಿ ಅತ್ಯಾಧುನಿಕ ಚಾರ್ಜಿಂಗ್ ಸ್ಟೇಷನ್ಗಳು ಮತ್ತು ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲಾಗುತ್ತದೆ.

ಎಲೆಕ್ಟ್ರಾನಿಕ್ ವಾಹನಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಜಿಯೋ-ಬಿಪಿ ಶ್ರಮಿಸುತ್ತಿದೆ. ಕಳೆದ ವರ್ಷ ಭಾರತದಲ್ಲೇ ಎರಡು ಅತಿದೊಡ್ಡ ಇವಿ ಚಾರ್ಜಿಂಗ್ ಹಬ್ಗಳನ್ನು ಕಂಪನಿ ಸ್ಥಾಪಿಸಿದೆ. ನೆಕ್ಸಸ್ ಮಾಲ್ಗಳ ಜೊತೆಗಿನ ಈ ಸಹಭಾಗಿತ್ವದ ಅಡಿಯಲ್ಲಿ ದಿನವಿಡೀ ಕೆಲಸ ಮಾಡುವ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲಾಗುತ್ತದೆ.

ಇದು ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಚಾರ್ಜಿಂಗ್ ಮತ್ತು ಬ್ಯಾಟರಿ ಸ್ವ್ಯಾಪಿಂಗ್ ವ್ಯವಸ್ಥೆ ಇರಲಿದೆ. ಮೊದಲ ಹಂತದಲ್ಲಿ, ನವಿ ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ನಲ್ಲಿರುವ ನೆಕ್ಸಸ್ ಮಾಲ್ಗಳಲ್ಲಿ ಜೂನ್ 2022 ರಿಂದ ಚಾರ್ಜಿಂಗ್ ಸ್ಟೇಷನ್ಗಳು ಲಭ್ಯವಾಗಿರಲಿವೆ.

ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಹೆಚ್ಚು ಜನರು ಬಳಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ತಮ್ಮ ಮಾಲ್ಗಳಲ್ಲಿ ವಾಹನಗಳನ್ನು ಚಾರ್ಜ್ ಮಾಡಿಸಿಕೊಳ್ಳುವಂತೆ ತಮ್ಮ ಗ್ರಾಹಕರಿಗೆ ನೆಕ್ಸಸ್ ಪ್ರೋತ್ಸಾಹಿಸಲಿದೆ. 13 ನಗರಗಳಲ್ಲಿ 17 ಮಾಲ್ಗಳನ್ನು ಹೊಂದಿರುವ ನೆಕ್ಸಸ್ ಮಾಲ್ಗಳು ಸದ್ಯ ದೇಶದ ಅತಿದೊಡ್ಡ ಮಾಲ್ಗಳಲ್ಲಿ ಒಂದಾಗಿದೆ. ಇದು ಈಗಾಗಲೇ 100% ವಹಿವಾಟು ಚೇತರಿಕೆಯನ್ನು ಗಳಿಸಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ನೆಕ್ಸಸ್ ಮಾಲ್ಗಳು ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಇದರಿಂದಾಗಿ ಮಾಲ್ಗಳಲ್ಲಿ ವಹಿವಾಟು ಅತ್ಯಂತ ಬೇಗ ಚೇತರಿಸಿಕೊಂಡಿದೆ.

ಜಿಯೋ-ಬಿಪಿ ಪಲ್ಸ್ ಅಡಿಯಲ್ಲಿ ಭಾರತೀಯ ಗ್ರಾಹಕರಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಜಿಯೋ-ಬಿಪಿ ಜಂಟಿ ಸಂಸ್ಥೆಯು ಒದಗಿಸುತ್ತಿದೆ. ಜಿಯೋ-ಬಿಪಿ ಪಲ್ಸ್ ಮೊಬೈಲ್ ಆಪ್ ಬಳಸಿಕೊಂಡು ಗ್ರಾಹಕರು ತಮ್ಮ ಸಮೀಪದಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ಹುಡುಕಬಹುದು ಮತ್ತು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದು.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಜಿಯೋ ಬಿಪಿ ಮತ್ತು ಟಿವಿಎಸ್ ಮೋಟರ್ ಕಂಪನಿ ಇತ್ತೀಚಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ಟಿವಿಎಸ್ ಎಲೆಕ್ಟ್ರಿಕ್ ವಾಹನಗಳ ಗ್ರಾಹಕರು ಜಿಯೋ ಬಿಪಿ ಚಾರ್ಜಿಂಗ್ ನೆಟ್ವರ್ಕ್ ಅನ್ನು ಬಳಸಿಕೊಳ್ಳಬಹುದಾಗಿದೆ. ಜಿಯೋ ಬಿಪಿ ಚಾರ್ಜಿಂಗ್ ನೆಟ್ವರ್ಕ್ ಟಿವಿಎಸ್ ಸೇರಿದಂತೆ ಇತರ ಎಲ್ಲ ಕಂಪನಿಯ ವಾಹನಗಳಿಗೂ ಚಾರ್ಜಿಂಗ್ ವ್ಯವಸ್ಥೆಯನ್ನು ಕಲ್ಪಿಸುತ್ತದೆ.

ಪಾಲುದಾರಿಕೆ ಅಡಿಯಲ್ಲಿ ಎಸಿ ಚಾರ್ಜಿಂಗ್ ನೆಟ್ವರ್ಕ್ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ನೆಟ್ವರ್ಕ್ ಬಳಸಬಹುದಾಗಿದೆ. ಈ ಒಪ್ಪಂದದ ಮೂಲಕ, ಜಿಯೋ ಬಿಪಿ ಮತ್ತು ಟಿವಿಎಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ವಿಶಾಲವಾದ ಮತ್ತು ವಿಶ್ವಾಸಾರ್ಹವಾದ ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸುವ ತಮ್ಮ ಬದ್ಧತೆಯನ್ನು ಸಾಬೀತುಪಡಿಸುತ್ತವೆ. ಟಿವಿಎಸ್ ಮತ್ತು ಜಿಯೋ ಬಿಪಿ ಗ್ರಾಹಕರಿಗೆ ಈ ಅನುಕೂಲವನ್ನು ಕಲ್ಪಿಸುವುದರ ಜೊತೆಗೆ, ವಿದ್ಯುದೀಕರಣದಲ್ಲಿ ತಮ್ಮ ಅನುಭವದ ಅನುಕೂಲವನ್ನು ಗ್ರಾಹಕರಿಗೆ ಒದಗಿಸುತ್ತವೆ ಮತ್ತು ಅತ್ಯುತ್ತಮ ಗ್ರಾಹಕ ಅನುಭವವನ್ನು ಒದಗಿಸುವುದಕ್ಕಾಗಿ ವಿಭಿನ್ನ ಗ್ರಾಹಕ ಅನುಭವವನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂಪಿಸುತ್ತವೆ.

ಜಿಯೋ ಬಿಪಿ ಪಲ್ಸ್ ಅಡಿಯಲ್ಲಿ ಜಿಯೋ ಬಿಪಿ ತನ್ನ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಮತ್ತು ಸ್ವ್ಯಾಪಿಂಗ್ ಸ್ಟೇಷನ್ಗಳನ್ನು ನಡೆಸುತ್ತಿದೆ. ಜಿಯೋ ಬಿಪಿ ಪಲ್ಸ್ ಆಪ್ ಮೂಲಕ, ಸಮೀಪದಲ್ಲಿರುವ ಸ್ಟೇಷನ್ಗಳನ್ನು ಗ್ರಾಹಕರು ಸುಲಭವಾಗಿ ಹುಡುಕಬಹುದು ಮತ್ತು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದು. ಅಷ್ಟೇ ಅಲ್ಲ, ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ನೆಟ್ವರ್ಕ್ ಆಗುವ ಧ್ಯೇಯದೊಂದಿಗೆ, ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿನ ಎಲ್ಲ ಕಂಪನಿಗಳಿಗೂ ಪ್ರಯೋಜನವನ್ನು ಜಿಯೋ ಬಿಪಿ ಚಾರ್ಜಿಂಗ್ ವ್ಯವಸ್ಥೆಯು ಒದಗಿಸಲಿದೆ.

ಹೊಸ ಎಲೆಕ್ಟ್ರಿಕ್ ಮೊಬಿಲಿಟಿ ಉತ್ಪನ್ನಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಟಿವಿಎಸ್ ಮೋಟರ್ ಕಂಪನಿ ಮಹತ್ವದ ಪ್ರಯತ್ನಗಳನ್ನು ಮಾಡಿದೆ. ತನ್ನ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಐಕ್ಯೂಬ್ ಅನ್ನು ಬಿಡುಗಡೆ ಮಾಡಿದಾಗಿನಿಂದ 12,000 ಕ್ಕೂ ಹೆಚ್ಚು ವಾಹನವನ್ನು ಮಾರಾಟ ಮಾಡಿದೆ. ಐಕ್ಯೂಬ್ ಸ್ಮಾರ್ಟ್ ಆದ ವಾಹನವಾಗಿದ್ದು, ಗ್ರಾಹಕರ ದೈನಂದಿನ ಓಡಾಟದ ಅಗತ್ಯವನ್ನು ಪೂರೈಸುತ್ತದೆ. ಇವಿ ಉದ್ಯಮದಲ್ಲಿ 1 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. 2 ರಿಂದ 25 ಕಿ.ವ್ಯಾ ಶ್ರೇಣಿಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಕಂಪನಿ ಬಿಡುಗಡೆ ಮಾಡಲಿದೆ. ಹಲವು ವಾಹನಗಳು ಮುಂದಿನ 24 ತಿಂಗಳುಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.

ಇದರಿಂದ ಇನ್ನಷ್ಟು ಜನರು ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಬಳಸುವುದಕ್ಕೆ ಪ್ರೇರೇಪಣೆಯಾಗುತ್ತದೆ. ಚಾರ್ಜಿಂಗ್ ಸ್ಟೇಷನ್ಗಳ ಸಂಖ್ಯೆ ಹೆಚ್ಚಳವಾಗುವುದರಿಂದ ಎರಡೂ ಕಂಪನಿಗಳು ತಮ್ಮ ಕಾರ್ಬನ್ ಹೆಜ್ಜೆಗುರುತನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಜಿಯೋ ಟೆಲಿಕಾಂನ ಜನಪ್ರಿಯ ಯೋಜನಗಳು
ಜಿಯೋದ 719ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು: ಜಿಯೋ ಟೆಲಿಕಾಂನ 719ರೂ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್ಗಳ ಸೌಲಭ್ಯ ದೊರೆಯುತ್ತದೆ.

ಜಿಯೋದ 299ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು: ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2 GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್ ಸಹ ಲಭ್ಯ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086