Jio, BSNL, Airtel: 500ರೂ.ಒಳಗೆ ಲಭ್ಯವಾಗುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು!

|

ಪ್ರಸ್ತುತ ಭಾರತದ ಟೆಲಿಕಾಂ ವಲಯದಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ದಿನೇ ದಿನೇ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಪಡೆದುಕೊಳ್ಳುತ್ತಿರುವ ಜನಪ್ರಿಯತೆಯನ್ನು ಗಮನಿಸಿ ಜಿಯೋ, ಬಿಎಸ್‌ಎನ್‌ಎಲ್, ಏರ್‌ಟೆಲ್ ಮತ್ತು ಇತರ ಹಲವು ಟೆಲಿಕಾಂ ಕಂಪನಿಗಳು ಹಲವು ಆಕರ್ಷಕ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪರಿಚಯಿಸಿವೆ. ಈ ಪ್ಲಾನ್‌ಗಳು ಹೆಚ್ಚಿನ ವೇಗದ ಡೇಟಾ ಜೊತೆಗೆ ಅನಿಯಮಿತ ಕರೆ ಪ್ರಯೋಜನಗಳನ್ನು ಸಹ ನೀಡುತ್ತಿವೆ.

ಬ್ರಾಡ್‌ಬ್ಯಾಂಡ್‌

ಹೌದು, ಟೆಲಿಕಾಂ ವಲಯದಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಕೂಡ ಜನ್ರಿಯತೆಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಖಾಸಗಿ ಟೆಲಿಕಾಂಗಳು ಸೇರಿದಂತೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕೂಡ ಹಲವು ಆಯ್ಕೆಯ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಹೊಂದಿವೆ. ಇನ್ನು ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಗ್ರಾಹಕರಿಗೆ ಹೆಚ್ಚಿನ ಡೇಟಾ ನೀಡುವುದರಿಂದ ಹೆಚ್ಚಿನ ಜನರು ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ 500ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಪ್ಲಾನ್‌

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂ ಕೂಡ 500ರೂ. ಕ್ಕಿಂತ ಕಡಿಮೆ ಬೆಲೆಯ ಬ್ರಾಡ್‌ಬ್ಯಾಂಡ್ ಪ್ಲಾನ್‌ ಹೊಂದಿದೆ. ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಫೈಬರ್‌ ಪ್ಲಾನ್‌ 499ರೂ.ಗಳಿಂದ ಆರಂಭವಾಗಲಿದೆ. ಈ ಪ್ಲಾನ್ 40 Mbps ವೇಗದಲ್ಲಿ ಅನ್‌ಲಿಮಿಟೆಡ್‌ ಡೇಟಾ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್, ವಿಂಕ್ ಮ್ಯೂಸಿಕ್, ಶಾ ಅಕಾಡೆಮಿ, ವೂಟ್ ಬೇಸಿಕ್, ಇರೋಸ್ ನೌ, ಹಂಗಾಮ ಪ್ಲೇ, ಶೆಮರೂ ಎಂ, ಮತ್ತು ಅಲ್ಟ್ರಾ ಆಪ್‌ಗೆ ಉಚಿತ ಪ್ರವೇಶವನ್ನು ಸಹ ನೀಡಲಿದೆ. ಈ ಪ್ಲಾನ್‌ನಲ್ಲಿ ನೀವು 1-ತಿಂಗಳ HD ಪ್ಯಾಕ್‌ನೊಂದಿಗೆ ಎಕ್ಸ್‌ಸ್ಟ್ರೀಮ್ ಬಾಕ್ಸ್ ಅನ್ನು ಸಹ ಆಯ್ಕೆ ಮಾಡಬಹುದು. ಈ ಪ್ಲಾನ್‌ 30 ದಿನಗಳ ವ್ಯಾಲಿಡಿಟಿ ಹೊಂದಿದೆ.

ರಿಲಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಪ್ಲಾನ್‌

ರಿಲಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಪ್ಲಾನ್‌

ರಿಲಯನ್ಸ್ ಜಿಯೋದ ಬ್ರಾಡ್‌ಬ್ಯಾಂಡ್ ಸೇವೆಯಾದ ಜಿಯೋಫೈಬರ್ ಕೂಡ 500ರೂ. ಒಳಗಿನ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಹೊಂದಿದೆ. ಈ ಪ್ಲಾನ್ 399ರೂ.ಗಳಿಂದ ಶುರುವಾಗಲಿದೆ. ಈ ಪ್ಲಾನ್‌ನಲ್ಲಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಈ ಪ್ಲಾನ್‌ 30 ದಿನಗಳ ಮಾನ್ಯತೆ ಹೊಂದಿದ್ದು, 3.3TB ವರೆಗಿನ ಅನಿಯಮಿತ ಡೇಟಾವನ್ನು ನೀಡಲಿದೆ. ಜೊತೆಗೆ ಹೆಚ್ಚುವರಿಯಾಗಿ, ಈ ಯೋಜನೆಯೊಂದಿಗೆ ನೀವು ಫ್ರೀ ವಾಯ್ಸ್‌ ಕಾಲ್‌ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

BSNL ಪ್ಲಾನ್‌

BSNL ಪ್ಲಾನ್‌

ಇನ್ನು ಸರ್ಕಾರಿ ಸ್ವಾಮ್ಯದ BSNL ಕೂಡ 500ರೂ. ಒಳಗೆ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಪರಿಚಯಿಸಿದೆ. ಇದು 449ರೂ. ಮಾಸಿಕ ಪ್ಲಾನ್ ಹೊಂದಿದೆ. ಈ ಪ್ಲಾನ್‌ ಮೂಲಕ ನೀವು 30Mbps ವೇಗದಲ್ಲಿ ಒಟ್ಟು 3.3TB ಅಥವಾ 3,300GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಈ ಯೋಜನೆಯಲ್ಲಿ ಯಾವುದೇ OTT ಅಪ್ಲಿಕೇಶನ್‌ಗೆ ಚಂದಾದಾರಿಕೆ ಸಿಗುವುದಿಲ್ಲ.

ಎಕ್ಸಿಟೆಲ್ ಪ್ಲಾನ್‌

ಎಕ್ಸಿಟೆಲ್ ಪ್ಲಾನ್‌

ಇನ್ನು ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆದಾರ ಎಕ್ಸಿಟೇಲ್ ಕೂಡ 500ರೂ ಒಳಗೆ 3 ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರಲ್ಲಿ399ರೂ, 449ರೂ. ಮತ್ತು 499ರೂ. ಪ್ಲಾನ್‌ ಸೇರಿವೆ. ಈ ಪ್ಲಾನ್‌ಗಳು ಕ್ರಮವಾಗಿ 100 Mbps, 200 Mbps ಮತ್ತು 300 Mbps ಡೌನ್‌ಲೋಡ್/ಅಪ್‌ಲೋಡ್ ವೇಗವನ್ನು ನೀಡಲಿವೆ.

ಏರ್‌ಟೆಲ್‌

ಇದಲ್ಲದೆ ಭಾರ್ತಿ ಏರ್‌ಟೆಲ್‌ ಸಂಸ್ಥೆಯು ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಗ್ರಾಹಕರಿಗೆ ನೀಡಿದ್ದು, ಅವುಗಳಲ್ಲಿ 799ರೂ. ಪ್ಲ್ಯಾನ್ ಹೆಚ್ಚು ಆಕರ್ಷಿಸಿದೆ. ಈ ಪ್ಲ್ಯಾನಿನಲ್ಲಿ 100 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ದೊರೆಯಲಿದ್ದು, ತಿಂಗಳಿಗೆ 150GB FUP ಮಿತಿ ನೀಡಲಾಗಿದೆ. ಈ ಪ್ಯಾನಿನೊಂದಿಗೆ ಏರ್‌ಟೆಲ್ ಎಕ್ಸ್‌ಟ್ರಿಮ್‌ ಸದಸ್ಯತ್ವ ದೊರೆಯಲಿದ್ದು, ಜೊತೆಗೆ ಅನಿಯಮಿತ ಉಚಿತ ಕರೆಗಳು ಪ್ರಯೋಜನ ಸಿಗಲಿದೆ.

ACT ಫೈಬರ್‌ನೆಟ್‌

ACT ಫೈಬರ್‌ನೆಟ್‌ ಸಹ ಅಗ್ಗದ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆಗಳನ್ನು ಹೊಂದಿದ್ದು, 100 Mbps ವೇಗದ ಆರಂಭಿಕ ಪ್ಲ್ಯಾನ್ 799ರೂ.ಗಳಾಗಿದೆ (ದೆಹಲಿಯಲ್ಲಿ). ಇದೇ ಪ್ಲ್ಯಾನ್‌ ಹೈದ್ರಾಬಾದನಲ್ಲಿ ಟಾಕ್ಸ್‌ ಹೊರತುಪಡಿಸಿ 1,075ರೂ. ಆಗಿದೆ. ಈ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ 1000GB ಡೇಟಾ ಸೌಲಭ್ಯವು ದೊರೆಯಲಿದ್ದು, ನಿಗದಿತ ಡೇಟಾ ಬಳಕೆ ಮುಗಿತ ಬಳಿಕ FUP ವೇಗದ ಮಿತಿಯು 5 Mbps ಸಾಮರ್ಥ್ಯದಲ್ಲಿರಲಿದೆ.

Most Read Articles
Best Mobiles in India

Read more about:
English summary
Jio, BSNL, Airtel, and many other telecom companies have introduced affordable broadband plans.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X