Just In
- 16 min ago
BSNLನ ಈ ಪ್ಲ್ಯಾನಿನಲ್ಲಿ ಸಿಗುತ್ತೆ 2GB ಡಾಟಾ ಮತ್ತು 54 ದಿನ ವ್ಯಾಲಿಡಿಟಿ!
- 2 hrs ago
ಡಿಸ್ಕೌಂಟ್ನಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಖರೀದಿಸಲು ಒಳ್ಳೆಯ ಚಾನ್ಸ್!
- 4 hrs ago
ಭಾರತದ ಜನರು ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಾಡಿದ 10 ಸ್ಮಾರ್ಟ್ ಫೋನ್ ಗಳು
- 16 hrs ago
ಹಲವು ಇಮೇಲ್ ಗಳನ್ನು ಒಂದೇ ಇಮೇಲ್ ನಲ್ಲಿ ಸೇರಿಸಿ ಸೆಂಡ್ ಮಾಡಲು ಅವಕಾಶ ನೀಡುವ ಜಿಮೇಲ್
Don't Miss
- Education
ಯುಪಿಎಸ್ಸಿ ಎನ್ಡಿಎ ಮತ್ತು ಎನ್ಎ II ಪರೀಕ್ಷಾ ಫಲಿತಾಂಶ ಪ್ರಕಟ
- News
ಕಾಲಚಕ್ರ ತಿರುಗಿದಾಗ: ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ: ಇಂದು ಮೋದಿಯಿಂದ standing ovation
- Finance
ಇನ್ಫೋಸಿಸ್ಗೆ ಸಂಕಟ, ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆಯಿಂದ ದೂರು
- Movies
'ಪಾರು' ಧಾರಾವಾಹಿಗೆ ಬಂದ 'ಮಿಲಿಟರಿ ಮಾವ' ಎಸ್.ನಾರಾಯಣ್.!
- Automobiles
2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು
- Sports
ಐಎಸ್ಎಲ್: ಕೇರಳಕ್ಕೆ ಜಯದ ಹಂಬಲ, ಜೇಮ್ಶೆಡ್ಪುರಕ್ಕೆ ಅಗ್ರ ಸ್ಥಾನದ ಗುರಿ
- Lifestyle
ಶುಕ್ರವಾರದ ದಿನ ಭವಿಷ್ಯ 13-12-2019
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಜಿಯೋ ಫೈಬರ್ ಎಂಟ್ರಿಗೆ ವಿಘ್ನವಾದ ಟಾಟಾಸ್ಕೈ ಬ್ರಾಡ್ಬ್ಯಾಂಡ್ನ ಹೊಸ ಆಫರ್!
ದೇಶಿಯ ಟೆಲಿಕಾಂ ವಲಯದಲ್ಲಿಗ ಜಿಯೋ ಗಿಗಾಫೈಬರ್ ಬ್ರಾಡ್ಬ್ಯಾಂಡ್ ಸುದ್ದಿಯೇ ಮುಂಚೂಣಿಯಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ (ಇದೇ ಸೆ.5)ಜಿಯೋ ಗಿಗಾಫೈಬರ್ ಅಧಿಕೃತವಾಗಿ ಸೇವೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಜಿಯೋಗೆ ಪ್ರಬಲ ಪ್ರತಿಸ್ಫರ್ಧಿಯಾಗಲು ಟಾಟಸ್ಕೈ ಗ್ರಾಹಕರಿಗೆ ಹಲವು ಆಫರ್ಗಳನ್ನು ನೀಡಲು ಸಜ್ಜಾಗುತ್ತಿದೆ. ಆ ಪೈಕಿ ಸದ್ಯ ಡೇಟಾ ರೋಲ್ ಓವರ್ ಸೌಲಭ್ಯವನ್ನು ಪರಿಚಯಿಸಿದೆ.
ಹೌದು, ಟೆಲಿಕಾಂ ವಲಯದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಟಾಟಾಸ್ಕೈ, ಈಗಾಗಲೇ ಗ್ರಾಹಕರಿಂದ ಬ್ರಾಡ್ಬ್ಯಾಂಡ್ ಸೇವೆಯಲ್ಲಿ ಸೈ ಎನಿಸಿಕೊಂಡಿದೆ. ಜಿಯೋ ಎಂಟ್ರಿಯ ಎಫೆಕ್ಟ್ ತಪ್ಪಿಸಿಕೊಳ್ಳಲು ಟಾಟಾಸ್ಕೈ ಇದೀಗ ಡೇಟಾ ರೋಲ್ ಓವರ್ (Data Carryover) ಅವಕಾಶವನ್ನು ತನ್ನ ಫಿಕ್ಸಡ್ GB ಪ್ಲ್ಯಾನ್ ಗ್ರಾಹಕರಿಗೆ ನೀಡಲು ಮುಂದಾಗಿದೆ. ಪ್ರಸಕ್ತ ತಿಂಗಳಲ್ಲಿ ಉಳಿದ ಡೇಟಾವು ಗ್ರಾಹಕರು ಮುಂದಿನ ತಿಂಗಳಿಗೆ ಜಮಾ ಆಗಲಿದೆ.
ಈ ಮೊದಲು ಟಾಟಾಸ್ಕೈ ಬ್ರಾಡ್ಬ್ಯಾಂಡ್ ಫಿಕ್ಸಡ್ GB ಪ್ಲ್ಯಾನ್ಗಳಲ್ಲಿ ಗ್ರಾಹಕರು ಆ ನಿರ್ದಿಷ್ಟ ತಿಂಗಳಿನಲ್ಲಿ ಲಭ್ಯವಿರುವ ಡೇಟಾವನ್ನು ಪೂರ್ಣವಾಗಿ ಬಳಸದೆ ಇದ್ದರೇ, ಉಳಿದ ಡೇಟಾವು ಗ್ರಾಹಕರ ಕೈ ತಪ್ಪಿ ಹೋಗುತ್ತಿತ್ತು. ಆದ್ರೆ ಕಂಪನಿಯು ಹೊಸದಾಗಿ 'ಡೇಟಾ ಕ್ಯಾರಿ ಓವರ್' ಆಯ್ಕೆಯನ್ನು ನೀಡಿದ್ದು, ನಿರ್ದಿಷ್ಟ ತಿಂಗಳಿನಲ್ಲಿ ಉಳಿದ ಡೇಟಾವು ಗ್ರಾಹಕರಿಗೆ ಮುಂದಿನ ತಿಂಗಳಿಗೆ ಸೇರಿಕೊಳ್ಳಲಿದೆ.
ಸದ್ಯ ಡೇಟಾ ಕ್ಯಾರಿ ಓವರ್ ಸೌಲಭ್ಯವು ಮುಂಬೈ, ಅಹಮದಾಬಾದ್, ಬೆಂಗಳೂರು, ಭೋಪಾಲ್, ಚೆನ್ನೈ, ಗಾಜಿಯಾಬಾದ್, ಗ್ರೇಟರ್ ನೋಯ್ಡಾ, ಗುರಗಾಂವ್, ಹೈದರಾಬಾದ್, ಜೈಪುರ, ಜೋಧ್ಪುರ, ಕಲ್ಯಾಣ್-ಡೊಂಬಿವ್ಲಿ, ಕೊಲ್ಕತ್ತಾ, ಲಕ್ನೋ, ಮೀರಾ ಭಾಯಂದರ್, ನವೀ ಚುಂಬೈ, ನವದೆಹಲಿ , ಪುಣೆ, ಸೂರತ್ ಮತ್ತು ಥಾಣೆ ನಗರ ಪ್ರದೇಶಗಳಿಗೆ ಸೀಮಿತವಾಗಿದೆ. ಈ ಯೋಜನೆಯನ್ನು ಶೀಘ್ರದಲ್ಲೇ ದೇಶದಾದ್ಯಂತ ಕಂಪನಿಯು ವಿಸ್ತರಿಸಲಿದೆ.
ಮುಂಬೈಯಲ್ಲಿ ನಗರದಲ್ಲಿ ಟಾಟಾ ಸ್ಕೈ ಒಂದು ತಿಂಗಳ ಫಿಕ್ಸಡ್ ಜಿಬಿ ಪ್ಲ್ಯಾನಿನ ಬೆಲೆಯು 999 ರೂ.ಗಳಾಗಿದ್ದು, 50Mbps ವೇಗದಲ್ಲಿ 200GB ಡೇಟಾವನ್ನು ಗ್ರಾಹಕರಿಗೆ ಲಭ್ಯವಾಗಲಿದೆ. ಇದರೊಂದಿಗೆ ಡೇಟಾ ರೋಲ್ಓವರ್ ಆಯ್ಕೆಯು ಸಿಗಲಿದೆ. ಅದೇ ಟಾಟಾ ಸ್ಕೈ ತ್ರೈಮಾಸಿಕ ಪ್ಲ್ಯಾನಿನ ಬೆಲೆಯು 2,997 ರೂ. ಆಗಿದ್ದು, ಈ ಪ್ಲ್ಯಾನ್ ಜೊತೆಗೆ ಗ್ರಾಹಕರಿಗೆ ಉಚಿತ ರೂಟರ್ ದೊರೆಯಲಿದೆ.
ಇನ್ನು ಆರು ತಿಂಗಳ ಪ್ಲ್ಯಾನಿನ ಬೆಲೆಯು 4,315 ರೂ. ಆಗಿದ್ದು, ಗ್ರಾಹಕರಿಗೆ 100 ಜಿಬಿ ಡೇಟಾ, 25 ಎಮ್ಬಿಪಿಎಸ್ ವೇಗದಲ್ಲಿ ದೊರೆಯಲಿದೆ. ಅದೇ ರೀತಿ ಆರು ತಿಂಗಳಿಗೆ 50Mbps ವೇಗದಲ್ಲಿ 200GB ಡೇಟಾ ಸಹ ದೊರೆಯಲಿದ್ದು, ಈ ಪ್ಲ್ಯಾನ್ ಬೆಲೆಯು 5,395 ರೂ.ಗಳಾಗಿದೆ. ಹಾಗೆಯೇ 25 ಎಮ್ಬಿಪಿಎಸ್ ವೇಗದೊಂದಿಗೆ 100 ಜಿಬಿ ಡೇಟಾದ ವಾರ್ಷಿಕ ಪ್ಲ್ಯಾನ್ ಬೆಲೆಯು 8,150ರೂ.ಗಳು ಮತ್ತು 50Mbps ವೇಗದಲ್ಲಿ 200GB ಡೇಟಾ ಲಭ್ಯವಿರುವ ಪ್ಲ್ಯಾನ್ ಬೆಲೆಯು 10,190 ರೂ.ಗಳು ಆಗಿದೆ.

ಭಾರೀ ಬೆಲೆ ಇಳಿಕೆ ಕಂಡ 'ನೋಕಿಯಾ 8.1' ಸ್ಮಾರ್ಟ್ಫೋನ್!
ವಿಶ್ವದಲ್ಲಿಯೇ ಜನಪ್ರಿಯತೆ ಪಡೆದಿರುವ 'ನೋಕಿಯಾ' ಕಂಪನಿಯ ಆಂಡ್ರಾಯ್ಡ್ ಓಎಸ್ ಮಾದರಿಯಲ್ಲಿ ಹಲವು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಕಳೆದ ವರ್ಷ ರಿಲೀಸ್ ಮಾಡಿದ್ದ, 'ನೋಕಿಯಾ 8.1' ಭಾರತದ ಮಾರುಕಟ್ಟೆಯಲ್ಲಿ ಅಬ್ಬರಿಸಿತ್ತು. ಈಗ ವಿಷಯ ಏನೆಂದರೆ ದೇಶಿಯ ಮಾರುಕಟ್ಟೆಯಲ್ಲಿ 'ನೋಕಿಯಾ 8.1' ಸ್ಮಾರ್ಟ್ಫೋನ್ ಬೆಲೆಯಲ್ಲಿ ಭರ್ಜರಿ ಕುಸಿತ ಆಗಿದ್ದು, ಬಜೆಟ್ ಬೆಲೆಯಲ್ಲಿ ದೊರೆಯಲಿದೆ.
ಹೌದು, ನೋಕಿಯಾ ಕಂಪನಿಯು ಅಧಿಕೃತವಾಗಿ ತನ್ನ 'ನೋಕಿಯಾ 8.1' ಸ್ಮಾರ್ಟ್ಫೋನ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಈ ಸ್ಮಾರ್ಟ್ಫೋನ್ 4GB RAM + 64GB ಸ್ಟೋರೇಜ್ ವೇರಿಯಂಟ್ ಆರಂಭದಲ್ಲಿ 26,999ರೂ.ಗಳ ಪ್ರೈಸ್ಟ್ಯಾಗ್ ಹೊಂದಿತ್ತು. ಆದ್ರೆ ಈಗ ಬೆಲೆ ಇಳಿಕೆಯಿಂದಾಗಿ 15,999ರೂ.ಗಳಿಗೆ ಲಭ್ಯವಾಗಲಿದೆ. ಈ ಫೋನ್ ಸ್ನ್ಯಾಪ್ಡ್ರಾಗನ್ 710 ಪ್ರೊಸೆಸರ್ ಹೊಂದಿದೆ.
ಹಾಗೆಯೇ ಪ್ರೊಸೆಸರ್ ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಪಡೆದಿದ್ದು, ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ಅನ್ನು ಒಳಗೊಂಡಿದೆ. ಬಾಹ್ಯ ಮೆಮೊರಿಯನ್ನು 40GB ವರೆಗೂ ವಿಸ್ತರಿಸುವ ಅವಕಾಶವನ್ನು ನೀಡಲಾಗಿದೆ. ಇದೀಗ ಬೆಲೆಯ ಇಳಿಕೆ ಕಂಡಿರುವ ನೋಕಿಯಾ 8.1 ಸ್ಮಾರ್ಟ್ಫೋನಿನ ಇತರೆ ಫೀಚರ್ಸ್ಗಳೆನು ಹಾಗೂ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್ಪ್ಲೇ ರಚನೆ
ನೋಕಿಯಾ 8.1 ಸ್ಮಾರ್ಟ್ಫೋನ್ 6.18 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ ಡಿಸ್ಪ್ಲೇನನ್ನು ಹೊಂದಿದ್ದು, ಡಿಸ್ಪ್ಲೇಯು 1080x2244 ಪಿಕ್ಸಲ್ ರೆಸಲ್ಯೂಶನ್ ಒಳಗೊಂಡಿದೆ. ಡಿಸ್ಪ್ಲೇಯ ಅನುಪಾತವು 18.7:9 ಆಗಿದ್ದು, ಸ್ಕ್ರೀನ್ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ. 81.5% ಆಗಿದೆ. ಡಿಸ್ಪ್ಲೇಯ ಸುತ್ತಲೂ 2.5D ಕರ್ವ್ ರಚನೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ
ನೋಕಿಯಾ 8.1 ಸ್ಮಾರ್ಟ್ಫೋನಿನಲ್ಲಿ ಆಕ್ಟಾ-ಕೋರ್ 2.2GHz ವೇಗದೊಂದಿಗೆ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 710 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಪಡೆದಿದೆ. ಹಾಗೆಯೇ 4GB RAM + 64GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಮೈಕ್ರೋ ಎಸ್ಡಿ ಕಾರ್ಡ್ ಸಹಾಯದಿಂದ 400GB ವರೆಗಗೂ ಮೆಮೊರಿ ಹೆಚ್ಚಿಸುವ ಆಯ್ಕೆ ಇದೆ.

ಡ್ಯುಯಲ್ ಕ್ಯಾಮೆರಾ
ಈ ಸ್ಮಾರ್ಟ್ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ಆಯ್ಕೆ ಹೊಂದಿದ್ದು, ಪ್ರಾಥಮಿಕ್ ಕ್ಯಾಮೆರಾವು 12ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 13ಎಂಪಿ ಸೆನ್ಸಾರ್ನಲ್ಲಿದೆ. ಹಾಗೂ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದ್ದು, ಕ್ಯಾಮೆರಾಗಳು Zeiss ಲೆನ್ಸ್ ಬೆಂಬಲದಲ್ಲಿವೆ. ಕ್ಯಾಮೆರಾಗಳು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಒಳಗೊಂಡಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ನೋಕಿಯಾ 8.1 ಸ್ಮಾರ್ಟ್ಪೋನ್ 3,500mAh ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಸೌಲಭ್ಯವನ್ನು ಪಡೆದಿದೆ. 4G ವೋಲ್ಟ್, Wi-Fi 802.11ac, VoWiFi, ಬ್ಲೂಟೂತ್ v5.0, GPS/ A-GPS, 3.5mm ಹೆಡ್ಫೋನ್ ಜ್ಯಾಕ್, USB Type-C ಪೋರ್ಟ್ನಂತಹ ಇತ್ತೀಚಿನ ಫೀಚರ್ಸ್ಗಳನ್ನು ಹೊಂದಿದ್ದು, ಜೊತೆಗೆ ಆಂಡ್ರಾಯ್ಡ್ 9 ಪೈ ಓಎಸ್ ಸಪೋರ್ಟ್ ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಿರುವ ನೋಕಿಯಾ 8.1 ಸ್ಮಾರ್ಟ್ಫೋನ್ ಗ್ರಾಹಕರಿಗೆ ಕೇವಲ 15,999ರೂ.ಗಳಿಗೆ ಲಭ್ಯವಾಗಲಿದೆ. ಗ್ರಾಹಕರು ನೋಕಿಯಾದ ಅಧಿಕೃತ ವೆಬ್ತಾಣದಲ್ಲಿ ಫೋನ್ ಖರೀದಿಸಬಹುದಾಗಿದ್ದು, ಹಾಗೆಯೇ ಜನಪ್ರಿಯ ಇ ಕಾಮರ್ಸ್ ತಾಣಗಳಾದ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ಗಳಲ್ಲಿಯೂ ಈ ಸ್ಮಾರ್ಟ್ಫೋನ್ ಲಭ್ಯವಿದೆ. .
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790