ನೆಟ್‌ವರ್ಕ್‌ ಸಮಸ್ಯೆ ಎದುರಿಸಿದ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ 'ಜಿಯೋ'!

|

ರಿಲಾಯನ್ಸ್‌ ಜಿಯೋ ನೆಟ್‌ವರ್ಕ್‌ ಡೌನ್‌ ಆಗಿದೆ ಎಂದು ನೆನ್ನೆ (ಅ.6) ಕೆಲವು ಬಳಕೆದಾರರು ಟ್ವಿಟ್ಟರ್ ನಲ್ಲಿ ತಿಳಿಸಿದ್ದರು. ಇಂಟರ್ನೆಟ್ ಬಳಕೆ ಮಾಡಲು ಮತ್ತು ಕರೆ ಮಾಡಲು ಆಗುತ್ತಿಲ್ಲ ಎಂದು ದೂರಿನಲ್ಲಿ ಹೇಳಿಕೊಂಡಿದ್ದರು. ನೆಟ್‌ವರ್ಕ್ ಸ್ಥಗಿತದಿಂದಾಗಿ ಬಳಕೆದಾರರಿಗೆ ಆಗಿರುವ ನೆಟ್‌ವರ್ಕ್ ಸೇವೆಗಳ ನಷ್ಟ ಸರಿದೂಗಿಸಲು ರಿಲಾಯನ್ಸ್‌ ಜಿಯೋ ಭರ್ಜರಿ ಕೊಡುಗೆಯನ್ನು ಘೋಷಿಸಿದೆ.

ನೀಡುವುದಾಗಿ

ಹೌದು, ರಿಲಯನ್ಸ್‌ ಜಿಯೋ ಟೆಲಿಕಾಂ ನೆಟ್‌ವರ್ಕ್ ಸ್ಥಗಿತದಿಂದ ಬಳಕೆದಾರರಿಗೆ ಆದ ನೆಟ್‌ವರ್ಕ್ ಸೇವೆಗಳ ನಷ್ಟವನ್ನು ಭರಿಸಲು ಜಿಯೋ ಬಳಕೆದಾರರಿಗೆ 2 ದಿನಗಳ ಪೂರಕ ಸೇವೆಯನ್ನು ನೀಡುವುದಾಗಿ ತಿಳಿಸಿದೆ. ಹಾಗೆಯೇ ಬಳಕೆದಾರರಿಗೆ ತಡೆರಹಿತ ಸೇವಾ ಅನುಭವವನ್ನು ನೀಡುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದೆ. ಇನ್ನು ಈ 2 ದಿನಗಳ ಪೂರಕ ಸೇವೆಯನ್ನು ಬಳಕೆದಾರರ ಅನಿಯಮಿತ ಯೋಜನೆಗಳಿಗೆ ಸ್ವಯಂಚಾಲಿತವಾಗಿ ಸೇರಿಸಲಾಗಿದೆ ಎಂದು ಹೇಳಲಾಗಿದೆ.

ಮ್ಯಾನುವಲ್

ಜಿಯೋದ ಈ ಸೌಲಭ್ಯವು ನಿನ್ನೆ ಬಳಕೆದಾರರಿಗೆ ನೆಟ್‌ವರ್ಕ್ ಸೇವೆಗಳ ನಷ್ಟವನ್ನು ಸರಿದೂಗಿಸಲು ಕೈಗೊಂಡ ಕ್ರಮವಾಗಿದೆ. ಈ ಸೌಲಭ್ಯವನ್ನು ಪಡೆಯಲು ಬಳಕೆದಾರರು ಮೈ ಜಿಯೋ ಆಪ್‌ಗೆ ಭೇಟಿ ನೀಡಿ ಮ್ಯಾನುವಲ್ ಆಗಿ ಮಾಡುವ ಅಗತ್ಯ ಇಲ್ಲ ಎನ್ನಲಾಗಿದೆ. ಬದಲಿಗೆ ಎರಡು ದಿನಗಳ ಪೂರಕ ಸೇವೆಯನ್ನು ಬಳಕೆದಾರರ ಅನಿಯಮಿತ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಿಗೆ ಆಟೋಮ್ಯಾಟಿಕ್ ಆಗಿ ಸೇರಿಸಲಾಗಿದೆ.

ದಿನಾಂಕವನ್ನು

ಈ ಸೌಲಭ್ಯದಿಂದಾಗಿ ಈಗ ಜಿಯೋದಿಂದ ಬಳಕೆದಾರರ ಅನಿಯಮಿತ ಪ್ಲ್ಯಾನ್‌ ವ್ಯಾಲಿಡಿಟಿ/ಮುಕ್ತಾಯದ ದಿನಾಂಕವನ್ನು ಎರಡು ದಿನಗಳವರೆಗೆ ಹೆಚ್ಚುವರಿಯಾಗಿ ವಿಸ್ತರಿಸಲಾಗುತ್ತದೆ. ಇನ್ನು ಈ ಎರಡು ದಿನಗಳ ಸೌಲಭ್ಯವು ಬಳಕೆದಾರರ ಮೂಲ ಯೋಜನೆಯ ಪ್ರಯೋಜನಗಳಂತೆ ಇರುತ್ತದೆ.

ಸೇವೆಗಳು

ಇನ್ನು ನೆನ್ನೆಯ ನೆಟ್‌ವರ್ಕ್ ಜಿಯೋ ನೆಟ್‌ವರ್ಕ್ ಸ್ಥಗಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ರಿಲಯನ್ಸ್‌ ಜಿಯೋ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಹೊರಹಾಕಿಲ್ಲ. ಆದರೆ ಸುಮಾರು 10 ಅಥವಾ 11 ಗಂಟೆಗಳ ನಂತರ ಅನೇಕ ಬಳಕೆದಾರರಿಗೆ ಜಿಯೋ ನೆಟ್‌ವರ್ಕ್ ಸೇವೆಗಳು ಮರಳಿ ಬಂದವು. ಒಂದು ವೇಳೆ ಜಿಯೋ ನೆಟ್‌ವರ್ಕ್‌ ಸ್ಥಗಿತದಿಂದ ನೀವು ಸಮಸ್ಯೆ ಎದುರಿಸಿದ್ದರೇ, ರಿಲಯನ್ಸ್‌ ಜಿಯೋಯಿಂದ ಎರಡು ದಿನಗಳ ಪೂರಕ ಸೇವೆ ಲಭ್ಯವಾಗಲಿದೆ.

ರಿಲಯನ್ಸ್‌ ಜಿಯೋ ಅತ್ಯುತ್ತಮ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆ

ರಿಲಯನ್ಸ್‌ ಜಿಯೋ ಅತ್ಯುತ್ತಮ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆ

ರಿಲಯನ್ಸ್‌ ಜಿಯೋ ಟೆಲಿಕಾಂ ಭಿನ್ನ ಶ್ರೇಣಿಯ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಿದೆ. ಅವುಗಳಲ್ಲಿ ಬಹುತೇಕ ಯೋಜನೆಗಳು ದೈನಂದಿನ ಡೇಟಾ, ಅನಿಯಮಿತ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೇವೆಗಳನ್ನು ಒಳಗೊಂಡಿವೆ. ಹಾಗೆಯೇ ಭಿನ್ನ ವ್ಯಾಲಿಡಿಟಿ ಪ್ರಯೋಜನ ಪಡೆದಿವೆ. ಈ ನಿಟ್ಟಿನಲ್ಲಿ ಜಿಯೋ ಟೆಲಿಕಾಂನ ಎರಡು ಪ್ಲ್ಯಾನ್‌ಗಳು ಆಕರ್ಷಕ ಎನಿಸಿವೆ. ಹಾಗಾದರೇ ಜಿಯೋದ ಆ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಆಲ್‌-ಇನ್‌-ಒನ್‌ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ಜಿಯೋಕ್ಲೌಡ್, ಜಿಯೋ ಸೆಕ್ಯುರಿಟಿ, ಜಿಯೋ ಸಿನಿಮ, ಜಿಯೋನ್ಯೂಸ್ ಮತ್ತು ಜಿಯೋಟಿವಿ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಹೆಚ್ಚುವರಿ ಪ್ರಯೋಜನವನ್ನು ಹೊಂದಿವೆ.

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ಜಿಯೋಕ್ಲೌಡ್, ಜಿಯೋ ಸೆಕ್ಯುರಿಟಿ, ಜಿಯೋ ಸಿನಿಮ, ಜಿಯೋನ್ಯೂಸ್ ಮತ್ತು ಜಿಯೋಟಿವಿ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಹೆಚ್ಚುವರಿ ಪ್ರಯೋಜನವನ್ನು ಹೊಂದಿವೆ.

Most Read Articles
Best Mobiles in India

English summary
Jio Network Outage: Jio Is Offering Two Days of Free Service For Network Outage Affected Users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X