Jio's Got Talent: ಜಿಯೋ 10 ಸೆಕೆಂಡ್ ವಿಡಿಯೊ ಚಾಲೆಂಜ್: ವಿಜೇತರಿಗೆ ವಿದೇಶ ಪ್ರಯಾಣ!

|

ದೇಶದ ಟೆಲಿಕಾಂ ವಲಯದಲ್ಲಿ ಬೆಲೆ ಸಮರದ ಮೂಲಕ ಭಾರಿ ಸಂಚಯನ ಮೂಡಿಸಿರುವ ರಿಲಾಯನ್ಸ್‌ ಜಿಯೋ ಸಂಸ್ಥೆಯು ಇದೀಗ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಜಿಯೋ ಮತ್ತು ಸ್ನ್ಯಾಪ್‌ಚಾಟ್‌ ಸಂಸ್ಥೆಗಳೆರಡು ಜೊತೆಗೂಡಿ ವಿಭಿನ್ನ ಪ್ರತಿಭೆಯನ್ನು ಹೊಂದಿರುವವರಿಗೆ ವೇದಿಕೆ ರೂಪಿಸಿದ್ದು, 10 ಸೆಕೆಂಡ್ ವಿಡಿಯೊ ಚಾಲೆಂಜ್ ನೀಡಿದೆ. ಈ ಚಾಲೆಂಜ್‌ನಲ್ಲಿ ಗೆದ್ದವರಿಗೆ ಭರ್ಜರಿ ಬಹುಮಾನ ಮತ್ತು ಫಾರೀನ್‌ ಟ್ರಿಪ್ ಕಾದಿವೆ.

ಜಿಯೋ ಮತ್ತು ಸ್ನ್ಯಾಪ್‌ಚಾಟ್‌

ಹೌದು, ಜಿಯೋ ಮತ್ತು ಸ್ನ್ಯಾಪ್‌ಚಾಟ್‌ ಸಂಸ್ಥೆಗಳು ಒಂದಾಗಿ ಜಿಯೋ ಗಾಟ್ ಟ್ಯಾಲೆಂಟ್ (Jio's Got Talent) ಹೆಸರಿನ ಕಾರ್ಯಕ್ರಮ ಆಯೋಜಿಸಿವೆ. ಈ ಯೋಜನೆಯಲ್ಲಿ ಸ್ನ್ಯಾಪ್‌ಚಾಟ್ ಬಳಕೆದಾರರಿಗೆ ಜಿಯೋ 10 ಸೆಕೆಂಡ್ ವಿಡಿಯೊ ಚಾಲೆಂಜ್ ನೀಡಿದ್ದು, ಬಳಕೆದಾರರು ಅವರಲ್ಲಿನ ವಿಶೇಷ ಪ್ರತಿಭೆಯನ್ನು ವಿಡಿಯೊ ಮಾಡಿ ಅಪ್‌ಲೋಡ್ ಮಾಡಬೇಕು. ಆಯ್ಕೆ ಆದವರಿಗೆ ವಿದೇಶ ಪ್ರಯಾಣದ ಆಫರ್ ನೀಡಲಾಗಿದೆ. ಅಂದಹಾಗೆ ಈ ಚಾಲೆಂಜ್ ಇದೇ ಜನೆವರಿ 26ರಿಂದ ಶುರುವಾಗಿದ್ದು, ಫೆಬ್ರುವರಿ 4, 2020ರ ವರೆಗೆ ಮಾತ್ರ ಇರಲಿದೆ.

ಏನಿದು ಚಾಲೆಂಜ್

ಏನಿದು ಚಾಲೆಂಜ್

ಜಿಯೋ ಮತ್ತು ಸ್ನ್ಯಾಪ್‌ಚಾಟ್‌ ಸಂಸ್ಥೆಗಳು ಜಂಟಿಯಾಗಿ ಈ 10 ಸೆಕೆಂಡ್ ವಿಡಿಯೊ ಚಾಲೆಂಜ್ ಅನ್ನು ಘೋಷಿಸಿವೆ. ಸ್ನ್ಯಾಪ್‌ಚಾಟ್‌ ಆಪ್ ಬಳಕೆದಾರರು ಈ ಚಾಲೆಂಜ್ ಸ್ವೀಕರಿಸಬಹುದಾಗಿದೆ. ಚಾಲೆಂಜ್‌ನಲ್ಲಿ ಭಾಗವಹಿಸುವವರು ವಿಡಿಯೊದಲ್ಲಿ ಹಾಟ್, ಹೆಡ್‌ಫೋನ್ ಮತ್ತು ಲೈಟ್‌ರಿಂಗ್ ಪರಿಕರಗಳನ್ನು ಬಳಕೆಮಾಡಿಕೊಳ್ಳಬಹುದಾಗಿದೆ. ಎಂದು ಸಂಸ್ಥೆ ಹೇಳಿದೆ.

ವಿಡಿಯೊ ಅಪ್‌ಲೋಡ್ ಹೇಗೆ

ವಿಡಿಯೊ ಅಪ್‌ಲೋಡ್ ಹೇಗೆ

* ಸ್ನ್ಯಾಪ್‌ಚಾಟ್‌ ಆಪ್ ತೆರೆಯಿರಿ
* ಸ್ನ್ಯಾಪ್‌ಕೋಡ್ ಸ್ಕ್ಯಾನ್ ಮಾಡಿರಿ
* Jio's Got Talent ಲೆನ್ಸ್‌ ಅನ್‌ಲಾಕ್ ಮಾಡಿ
* 10 ಸೆಕೆಂಡ್ ವಿಡಿಯೊ ರೆಕಾರ್ಡ್ ಮಾಡಿರಿ
* ವಿಡಿಯೊಗೆ ನಿಮ್ಮ ಸ್ನ್ಯಾಪ್‌ಚಾಟ್ ಐಡಿ ಸೇರಿಸಿ
* ಯುವರ್ ಸ್ಟೋರಿ ನಲ್ಲಿ ವಿಡಿಯೊ ಸಬ್ಮಿಟ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://www.jio.com/en-in/jios-got-talent

ಬಹುಮಾನ ಏನಿದೆ

ಬಹುಮಾನ ಏನಿದೆ

ಜೀಯೋ ಮತ್ತು ಸ್ನ್ಯಾಪ್‌ಚಾಟ್ ಆಯೋಜಿಸಿರುವ ಈ 10 ಸೆಕೆಂಡ್ ಚಾಲೆಂಜ್ ವಿಡಿಯೊ ಕಂಟೆಸ್ಟ್‌ನಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳಿವೆ. ಗ್ರ್ಯಾಂಡ್ ಪ್ರೈಸ್‌ ವಿಜೇತರಿಬ್ಬರಿಗೆ ಥೈಲ್ಯಾಂಡ್ ಟ್ರಿಪ್ ಅವಕಾಶ ಇದೆ. ಹಾಗೂ ಇತರೆ 100 ಬೆಸ್ಟ್‌ ಎಂಟ್ರಿ ಸ್ಪರ್ಧಾಳುಗಳಿಗೆ ಒಂದು ತಿಂಗಳ ಜಿಯೋ ರೀಚಾರ್ಜ್ ಕೊಡುಗೆ ಲಭ್ಯವಾಗಲಿದೆ.

ಜಿಯೋ ವೈಫೈ ಕಾಲಿಂಗ್

ಜಿಯೋ ವೈಫೈ ಕಾಲಿಂಗ್

ಜನಪ್ರಿಯ ಜಿಯೋ ಸಂಸ್ಥೆಯು ಇತ್ತೀಚಿಗೆ ವೈಫೈ ಕಾಲಿಂಗ್ ಸೇವೆಯನ್ನು ಪರಿಚಯಿಸಿದೆ. ಈ ವೈಫೈ ಕಾಲಿಂಗ್ ಸೇವೆಯು ವಾಯಿಸ್‌ ಮತ್ತು ವಿಡಿಯೊ ಕರೆ ಸೌಲಭ್ಯವನ್ನು ಒಳಗೊಂಡಿದೆ. ಯಾವುದೇ ಟಾರೀಫ್ ಪ್ಲ್ಯಾನ್ ಹೊಂದಿರುವ ಜಿಯೋ ಚಂದಾದಾರರು ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ. ಇನ್ನು ವೈ ಪೈ ಕಾಲಿಂಗ್ ಸೇವೆಯು ಕೆಲವು ಹೊಸ ಮಾದರಿಯ ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲಿಯು ಲಭ್ಯವಿದೆ. ಜಿಯೋ ಚಂದಾದಾರರು ಫೋನ್ ಸೆಟ್ಟಿಂಗ್‌ನಲ್ಲಿ ಸುಲಭವಾಗಿ ವೈಫೈ ಕಾಲಿಂಗ್ ಸೇವೆಯನ್ನು ಸಕ್ರಿಯ ಮಾಡಿಕೊಳ್ಳಬಹುದಾಗಿದೆ.

Most Read Articles
Best Mobiles in India

English summary
Reliance Jio has launched a 10-second creative challenge called the Jio’s Got Talent. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X