ಜಿಯೋದಿಂದ 4 ಹೊಸ ಪ್ಲ್ಯಾನ್ ಬಿಡುಗಡೆ; ಕಂಗಾಲಾದ ವಿ, ಏರ್‌ಟೆಲ್‌!

|

ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಹೊಸ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ಆರಂಭಿಸಿದೆ. ಡಿಸ್ನಿ+ ಹಾಟ್‌ಸ್ಟಾರ್‌ ನಲ್ಲಿರುವ ಎಲ್ಲಾ ಕಂಟೆಂಟ್‌ಗಳನ್ನು ನೋಡುವ ಅವಕಾಶವನ್ನು ಈ ಪ್ಲಾನ್‌ಗಳು ಒಳಗೊಂಡಿರಲಿದೆ. ಇದರಿಂದ ಜಿಯೋ ಗ್ರಾಹಕರಿಗೆ ಮತ್ತಷ್ಟು ಲಾಭವಾಗಲಿದೆ.

ಜಿಯೋದಿಂದ 4 ಹೊಸ ಪ್ಲ್ಯಾನ್ ಬಿಡುಗಡೆ; ಕಂಗಾಲಾದ ವಿ, ಏರ್‌ಟೆಲ್‌!

ಹೌದು, ರಿಲಯನ್ಸ್ ಜಿಯೋ ನಾಲ್ಕು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಹೊಸ ಪ್ರಿಪೇಯ್ಡ್ ಯೋಜನೆಗಳು ಕ್ರಮವಾಗಿ 151ರೂ, 333ರೂ, 583ರೂ ಮತ್ತು 783ರೂ ಆಗಿದೆ. ಇನ್ನು ಈ ಯೋಜನೆಗಳು ಮೂರು ತಿಂಗಳ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತವೆ. ಇದು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 499ರೂ. ಮೌಲ್ಯದ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡುವ ಇತರ ಪ್ರಿಪೇಯ್ಡ್ ಯೋಜನೆಗಳಿಗಿಂತ ಭಿನ್ನವಾಗಿದೆ. ಈ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 151ರೂ. ಪ್ರಿಪೇಯ್ಡ್ ಯೋಜನೆ
ಜಿಯೋ 151ರೂ. ಯೋಜನೆಯು ಡೇಟಾ ಮಾತ್ರ ಯೋಜನೆಯಾಗಿದ್ದು ಅದು ಬಳಕೆದಾರರಿಗೆ 8ಜಿಬಿ ಡೇಟಾವನ್ನು ನೀಡುತ್ತದೆ. ಈ ಯೋಜನೆಯ ಲಾಭ ಪಡೆಯಲು, ಬಳಕೆದಾರರಿಗೆ ಸಕ್ರಿಯ ಬೇಸ್ ಪ್ಲಾನ್ ಕೂಡ ಅಗತ್ಯವಿದೆ. ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಸಹ ನೀಡುತ್ತದೆ.

ಜಿಯೋದಿಂದ 4 ಹೊಸ ಪ್ಲ್ಯಾನ್ ಬಿಡುಗಡೆ; ಕಂಗಾಲಾದ ವಿ, ಏರ್‌ಟೆಲ್‌!

ಜಿಯೋ 333ರೂ. ಪ್ರಿಪೇಯ್ಡ್ ಯೋಜನೆ
ರಿಲಯನ್ಸ್ ಜಿಯೋದ 333ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ, ಬಳಕೆದಾರರು ದಿನಕ್ಕೆ 1.5ಜಿಬಿ ಡೇಟಾ ಮತ್ತು 28 ದಿನಗಳವರೆಗೆ 100 ಫ್ರೀ ಎಸ್ಎಂಎಸ್/ದಿನದೊಂದಿಗೆ ಅನಿಯಮಿತ ಧ್ವನಿ ಕರೆಯನ್ನು ಪಡೆಯುತ್ತಾರೆ. ಜಿಯೋ ಅಪ್ಲಿಕೇಶನ್‌ಗಳನ್ನು ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್‌ಗೆ ಮೂರು ತಿಂಗಳ ಚಂದಾದಾರಿಕೆಯೊಂದಿಗೆ ಜೋಡಿಸಲಾಗುತ್ತದೆ. ಈ ಯೋಜನೆಯೊಂದಿಗೆ, ಹೊಸ ಗ್ರಾಹಕರಿಗೆ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ.

ಜಿಯೋ 583ರೂ. ಪ್ರಿಪೇಯ್ಡ್ ಯೋಜನೆ
ರಿಲಯನ್ಸ್ ಜಿಯೋದ 583ರೂ. ಪ್ಲಾನ್ ಮತ್ತು 783ರೂ. ಪ್ರಿಪೇಯ್ಡ್ ಯೋಜನೆಗಳು ಅವುಗಳ ಮಾನ್ಯತೆಯನ್ನು ಹೊರತುಪಡಿಸಿ 333ರೂ. ಪ್ಲಾನ್‌ನಂತೆಯೇ ಇರುತ್ತವೆ. ಇನ್ನು ಜಿಯೋದ ಈ ಯೋಜನೆಯಲ್ಲಿ ಬಳಕೆದಾರರು 56 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ.

ಜಿಯೋ 783ರೂ. ಪ್ರಿಪೇಯ್ಡ್ ಯೋಜನೆಗಳು
ಜಿಯೋ 783ರೂ. ಯೋಜನೆಯಲ್ಲಿ ಬಳಕೆದಾರರು 84 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಈ ಎರಡು ಯೋಜನೆಗಳೊಂದಿಗೆ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುವುದಿಲ್ಲ ಮತ್ತು ಹೊಸ ಬಳಕೆದಾರರಿಗೆ ಪ್ರೈಮ್ ಸದಸ್ಯತ್ವಕ್ಕಾಗಿ ರೂ 100 ಶುಲ್ಕ ವಿಧಿಸಲಾಗುತ್ತದೆ ಎಂಬುದು ಗಮನಾರ್ಹ ವಿಷಯವಾಗಿದೆ.

Most Read Articles
Best Mobiles in India

English summary
Jio launches Rs 333, Rs 583, Rs 783 Plans with 3 months Disney+ Hotstar subscription.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X