ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್‌ ಪ್ಲ್ಯಾನ್‌ ಇದೀಗ 399 ರೂ.ಗಳಿಂದ ಪ್ರಾರಂಭ!

|

ದೇಶದ ಟೆಲಿಕಾಂ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಪ್ರೀಪೇಯ್ಡ್‌ ಯೋಜನೆಗಳ ಮಾದರಿಯಲ್ಲಿಯೇ ಪೋಸ್ಟ್‌ಪೇಯ್ಡ್‌ ಯೋಜನೆಗಳಲ್ಲಿಯೂ ಆಕರ್ಷಕ ಪ್ರಯೋಜನಗಳನ್ನು ನೀಡುತ್ತಾ ಬಂದಿವೆ. ಈ ನಿಟ್ಟಿನಲ್ಲಿ ರಿಲಾಯನ್ಸ್‌ ಜಿಯೋ ಟೆಲಿಕಾಂ ಕೂಡ ಸಾಕಷ್ಟು ಮುಂದಿದೆ. ಭಿನ್ನ ಪ್ರೈಸ್‌ನಲ್ಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಗ್ರಾಹಕರಿಗೆ ಪರಿಚಯಿಸಿದೆ. ಆ ಪೈಕಿ ಜಿಯೋ ಟೆಲಿಕಾಂನ 399ರೂ.ಗಳ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ ಸಾಕಷ್ಟು ಗಮನ ಸೆಳೆದಿದೆ.

ಜಿಯೋ

ಹೌದು, ರಿಲಾಯನ್ಸ್‌ ಜಿಯೋ ಟೆಲಿಕಾಂ ತನ್ನ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಲ್ಲೂ ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಇನ್ನು ಜಿಯೋ ಪೋಸ್ಟ್‌ಪೇಯ್ಡ್‌ ಪ್ಲಸ್‌ ಯೋಜನೆ 399 ರೂ. ನಿಂದ ಪ್ರಾರಂಭವಾಗಲಿದ್ದು, 1,499ರೂ.ಗಳ ವರೆಗೆ ದೊರೆಯಲಿದೆ. ಈ ಪ್ಲ್ಯಾನ್‌ಗಳು ನೆಟ್‌ಫ್ಲಿಕ್ಸ್, ಅಮೆಜಾನ್ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಿಂದ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಒಳಗೊಂಡಿದೆ. ಈ ಯೋಜನೆಗಳು ಅನಿಯಮಿತ ಡೇಟಾ ಪ್ರಯೋಜನದ ಜೊತೆಗೆ ಒಟಿಟಿ ಚಂದಾದಾರಿಕೆಯನ್ನು ಸಹ ಒಳಗೊಂಡಿವೆ. ಹಾಗಾದ್ರೆ ಜಿಯೋ ಪರಿಚಯಿಸಿರುವ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪೋಸ್ಟ್‌ಪೇಯ್ಡ್

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್‌ ಪ್ಲ್ಯಾನ್‌ಗಳು 399 ರೂ.ಗಳಿಂದ ಪ್ರಾರಂಭವಾಗಲಿದೆ. ಈ ಯೋಜನೆಗಳ ಮೂಲಕ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಸಹ ಪಡೆದುಕೊಳ್ಳಬಹುದು. ಆದಾಗ್ಯೂ ಜಿಯೋ 199 ರೂ. ಪೋಸ್ಟ್‌ಪೇಯ್ಡ್ ಯೋಜನೆಯನ್ನು ಸಹ ನೀಡುತ್ತದೆ. ಆದರೆ 199 ರೂ. ಪೋಸ್ಟ್‌ಪೇಯ್ಡ್ ಯೋಜನೆಯು ಬಳಕೆದಾರರಿಗೆ 25GB ಡೇಟಾವನ್ನು ನೀಡುತ್ತದೆ. ಹೆಚ್ಚುವರಿ ಡೇಟಾ ಬಳಕೆಗೆ ಅಂದರೆ ಪ್ರತಿ GBಗೆ 20ರೂ. ಶುಲ್ಕವನ್ನು ಗ್ರಾಹಕರಿಗೆ ವಿಧಿಸಲಾಗುತ್ತದೆ. ಇನ್ನು ಈ ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯೊಂದಿಗೆ ಅನಿಯಮಿತ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಸಹ ನೀಡುತ್ತದೆ. ಗ್ರಾಹಕರು ಈ ಯೋಜನೆಯೊಂದಿಗೆ ಪ್ರೈಮ್ ಚಂದಾದಾರಿಕೆಯನ್ನು ತೆಗೆದುಕೊಳ್ಳಲು ಬಯಸಿದರೆ, ಅವರು ಹೆಚ್ಚುವರಿ 99 ರೂಗಳನ್ನು ಪಾವತಿಸಬೇಕಾಗುತ್ತದೆ.

399 ರೂ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ

399 ರೂ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ

399 ರೂಗಳಿಂದ ಪ್ರಾರಂಭವಾಗುವ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಗಳು ವಿಭಿನ್ನ ಪ್ರಮಾಣದ ಡೇಟಾದೊಂದಿಗೆ ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡಲಿವೆ. ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಸಹ ಒಳಗೊಂಡಿವೆ. ಜಿಯೋ 399ರೂ ಪೋಸ್ಟ್‌ಪೇಯ್ಡ್ ಯೋಜನೆಯು 75GB ಡೇಟಾವನ್ನು ನೀಡುತ್ತದೆ, ನಂತರ ಗ್ರಾಹಕರಿಗೆ ಹೆಚ್ಚುವರಿ ಡೇಟಾ ಬಳಸಿದರೆ ಪ್ರತಿ GBಗೆ 10 ರೂ. ಶುಲ್ಕವನ್ನು ಸಹ ವಿಧಿಸಲಿದೆ. ಈ ಯೋಜನೆಯು 200GBಯ ರೋಲ್‌ಓವರ್ ಡೇಟಾವನ್ನು ತರುತ್ತದೆ. ಈ ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಗಳೊಂದಿಗೆ ಅನಿಯಮಿತ ಕರೆ ಮತ್ತು SMS ಪ್ರಯೋಜನಗಳನ್ನು ಸಹ ನೀಡುತ್ತದೆ. ಈ ಯೋಜನೆಯು ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ಗೆ ಚಂದಾದಾರಿಕೆಗಳಂತಹ ಇತರ ಒಟಿಟಿ ಪ್ರಯೋಜನಗಳನ್ನು ತರುತ್ತದೆ. ಈ ಯೋಜನೆಯು ವಿಮಾನ ಮತ್ತು ರೋಮಿಂಗ್ ಸೇವೆಗಳನ್ನು ಸಹ ತಂದಿದೆ.

599 ರೂ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ

599 ರೂ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ

ಈ ಯೋಜನೆಯು 100GB ಡೇಟಾವನ್ನು ನೀಡುತ್ತದೆ, ನಂತರ ಗ್ರಾಹಕರಿಗೆ ಪ್ರತಿ GBಗೆ 10 ರೂ. ಹೊಂದಿದೆ. ಇನ್ನು ಈ ಯೋಜನೆಯು 200 GBಯ ರೋಲ್‌ಓವರ್ ಡೇಟಾವನ್ನು ತರುತ್ತದೆ. ಈ ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯೊಂದಿಗೆ ಅನಿಯಮಿತ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಸಹ ನೀಡುತ್ತದೆ. ಇದು ಒಂದು ಹೆಚ್ಚುವರಿ ಕುಟುಂಬ ಯೋಜನೆ ಸಿಮ್ ಕಾರ್ಡ್ ಅನ್ನು ಸಹ ನೀಡಲಿದೆ. ಅಲ್ಲದೆ ಈ ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶದೊಂದಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್ ವಿಐಪಿಗೆ ಚಂದಾದಾರಿಕೆಯನ್ನು ನೀಡುತ್ತದೆ.

799 ರೂ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ

799 ರೂ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ

ಜಿಯೋ ಅವರ ಈ ಪೋಸ್ಟ್‌ಪೇಯ್ಡ್ ಯೋಜನೆ ಮಧ್ಯ ಶ್ರೇಣಿಯ ಯೋಜನೆಯಾಗಿದ್ದು, 150GB ಒಟ್ಟು ಡೇಟಾವನ್ನು ನೀಡುತ್ತದೆ. ನಂತರ ಅದನ್ನು ಪ್ರತಿ GBಗೆ 10 ರೂ.ಗೆ ಇಳಿಸಲಾಗುತ್ತದೆ. ಟೆಲ್ಕೊ 200GBಯ ರೋಲ್‌ಓವರ್ ಪ್ರಯೋಜನವನ್ನು ಸಹ ನೀಡುತ್ತದೆ. ಕುಟುಂಬ ಸದಸ್ಯರಿಗೆ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳಿವೆ. ಇದು ಅನಿಯಮಿತ ಧ್ವನಿ ಕರೆಗಳೊಂದಿಗೆ ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶದೊಂದಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್ ವಿಐಪಿಗೆ ಚಂದಾದಾರಿಕೆಯನ್ನು ನೀಡುತ್ತದೆ.

999 ರೂ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ

999 ರೂ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ

ಈ ಯೋಜನೆಯು 200GB ಡೇಟಾವನ್ನು ನೀಡುತ್ತದೆ, ನಂತರ ಗ್ರಾಹಕರಿಗೆ ಪ್ರತಿ GBಗೆ 10 ರೂ. ಈ ಯೋಜನೆಯು 500GBಯ ರೋಲ್‌ಓವರ್ ಡೇಟಾವನ್ನು ತರುತ್ತದೆ. ಈ ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯೊಂದಿಗೆ ಅನಿಯಮಿತ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಸಹ ನೀಡುತ್ತದೆ. ಯೋಜನೆಯು ಮೂರು ಹೆಚ್ಚುವರಿ ಕುಟುಂಬ ಯೋಜನೆ ಸಿಮ್ ಕಾರ್ಡ್‌ಗಳನ್ನು ತರುತ್ತದೆ.

ಜಿಯೋ

ಜಿಯೋ, ತನ್ನ ನಿಯಮಗಳು ಮತ್ತು ಷರತ್ತುಗಳ ಪುಟದಲ್ಲಿ ಗ್ರಾಹಕರು ಅಸ್ತಿತ್ವದಲ್ಲಿರುವ ನೆಟ್‌ಫ್ಲಿಕ್ಸ್ ಖಾತೆಯನ್ನು ಹೊಂದಿದ್ದರೆ, ಅದನ್ನು ಪೋಸ್ಟ್‌ಪೇಯ್ಡ್ ಯೋಜನೆಗಳಿಂದ ಉಚಿತ ಚಂದಾದಾರಿಕೆ ಕೊಡುಗೆಗೆ ಲಿಂಕ್ ಮಾಡಲಾಗುತ್ತದೆ ಎಂದು ಹೇಳಿದೆ. ಜಿಯೋ ಪೋಸ್ಟ್‌ಪೇಯ್ಡ್ ಯೋಜನೆ ಬಳಕೆದಾರರು ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ನೆಟ್‌ಫ್ಲಿಕ್ಸ್ ಖಾತೆಯನ್ನು ಪೋಸ್ಟ್‌ಪೇಯ್ಡ್ ಆಫರ್‌ಗೆ ಪ್ರತ್ಯೇಕವಾಗಿ ಲಿಂಕ್ ಮಾಡಬೇಕು. ಇಲ್ಲದಿದ್ದರೆ ನೆಟ್‌ಫ್ಲಿಕ್ಸ್ ಗ್ರಾಹಕರಿಗೆ ತಮ್ಮ ಅಸ್ತಿತ್ವದಲ್ಲಿರುವ ಖಾತೆಗೆ ಪ್ರತ್ಯೇಕವಾಗಿ ಶುಲ್ಕ ವಿಧಿಸುವುದನ್ನು ಮುಂದುವರಿಸುತ್ತದೆ.

Most Read Articles
Best Mobiles in India

English summary
Jio Postpaid Plans Now Start At Rs. 399: Here are the details.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X