ಜಿಯೋ ಉಚಿತ ಕರೆಗೆ ಬ್ರೇಕ್!..ಅಂಬಾನಿಯ ಪ್ಲ್ಯಾನ್ ಕೇಳಿ ಮೂರ್ಛೆ ಹೋಗದಿರಿ!

|

ಸೆಪ್ಟೆಂಬರ್ 2016ರಲ್ಲಿ ಲಾಂಚ್ ಆದಾಗಿನಿಂದಲೂ ಗ್ರಾಹಕರಿಗೆ ಉಚಿತ ವಾಯಿಸ್ ಕರೆಗಳ ಪ್ರಯೋಜನವನ್ನು ನೀಡುತ್ತಾ ಬಂದಿರುವ ಜಿಯೋ ಇದೀಗ ಉಲ್ಟಾ ಹೊಡೆದಿದೆ. ಜಿಯೋದಿಂದ ಬೇರೆ ನೆಟ್‌ವರ್ಕ್‌ಗೆ ವಾಯ್ಸ್‌ ಕಾಲ್‌ ಮಾಡಿದರೆ ಗ್ರಾಹಕರು ಇನ್ನು ಮುಂದೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ತೆರಬೇಕಾಗುತ್ತದೆ. ಬುಧವಾರದಿಂದ ರಿಚಾರ್ಜ್ ಮಾಡುವ ಗ್ರಾಹಕರಿಗೆ ಇದು ಅನ್ವಯವಾಗಲಿದೆ ಎಂದು ಜಿಯೋ ತಿಳಿಸಿದೆ. 01 ಜನವರಿ 2020ರ ವರೆಗೂ ಈ ನೂತನ ನಿಯಮ ಜಾರಿಯಲ್ಲಿರುತ್ತದೆ ಎಂದು ಜಿಯೋ ತತಿಳಿಸಿದ್ದು, ಆ ನಂತರದ ಬಗ್ಗೆ ತಿಳಿಸಿಲ್ಲ.

ಹೌದು, ಇಂತಹದೊಂದು ಶಾಕಿಂಗ್ ಸುದ್ದಿಯನ್ನು ನೆನ್ನೆಯಷ್ಟೇ ಜಿಯೋ ನೀಡಿದ್ದು, ಜಿಯೋ ಗ್ರಾಹಕರು ಇದೊಂದು ಬಹುದೊಡ್ಡ ಮೋಸ ಎಂದು ಹೇಳುತ್ತಿದ್ದಾರೆ. ಜಿಯೋ ಸಿಮ್ ಇರುವ ತನಕವೂ ವಾಯ್ಸ್‌ಕಾಲ್ ಉಚಿತವಾಗಿರುತ್ತದೆ ಎಂದು ಹೇಳಿದ್ದ ಅಂಬಾನಿ ಮೋಸ ಮಾಡಿರುವುದು ಇಲ್ಲಿ ಸ್ಪಷ್ಟವಾಗಿದೆ. ಆದರೆ, ಅಂಬಾನಿ ಇಂತಹದೊಂದು ನಿರ್ಧಾರ ಕೈಗೊಂಡಿದ್ದೇಕೆ?, ಉಚಿತ ಕರೆಗಳ ಸೌಲಭ್ಯಕ್ಕೆ ಬ್ರೇಕ್ ಹಾಕಿರಲು ಕಾರಣ ಏನು? ಮತ್ತು ಇದರಿಂದ ಆಗಬಹುದಾದ ಪರಿಣಾಮಗಳು ಯಾವುವು ಎಂಬ ವಿಷಯಗಳು ಜಿಯೋ ಬಳಕೆದಾರರ ತಲೆಕೆಡಿಸಿವೆ.

ಜಿಯೋ ಉಚಿತ ಕರೆಗೆ ಬ್ರೇಕ್!..ಅಂಬಾನಿಯ ಪ್ಲ್ಯಾನ್ ಕೇಳಿ ಮೂರ್ಛೆ ಹೋಗದಿರಿ!

ಜಿಯೋ ಉಚಿತ ಕರೆ ಬಂದ್ ಆಗಲು ಮುಖ್ಯ ಕಾರಣ ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜಸ್ ಕಾರಣವಾಗಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಮೊಬೈಲ್‌ ಅಂತರ್‌ಸಂಪರ್ಕ ಬಳಕೆ ಶುಲ್ಕವನ್ನು (ಜಿಯೊದಿಂದ ಏರ್‌ಟೆಲ್‌ ಅಥವಾ ಬೇರಾವುದೇ ನೆಟ್‌ವರ್ಕ್‌ಗೆ ಕರೆ ಮಾಡಿದಾಗ ವಿಧಿಸುವ ಶುಲ್ಕ) ವಿಧಿಸುತ್ತದೆ. ಹೀಗಾಗಿ ಕಂಪನಿಯು ಏರ್‌ಟೆಲ್‌ ಮತ್ತು ವೊಡಾಫೋನ್-ಐಡಿಯಾಗೆ ಶುಲ್ಕದ ರೂಪದಲ್ಲಿ 13,500 ಕೋಟಿ ಪಾವತಿಸಬೇಕಾಗಿದೆ. ಇದನ್ನು ತುಂಬಿಕೊಳ್ಳಲು ಪ್ರತಿಸ್ಪರ್ಧಿ ನೆಟ್‌ವರ್ಕ್‌ಗೆ ತನ್ನ ಗ್ರಾಹಕರು ಕರೆ ಮಾಡುವುದಕ್ಕೆ ಶುಲ್ಕ ವಿಧಿಸಲು ಆರಂಭಿಸಿದೆ.

ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜಸ್ ನಿಯಮವು ಹೇಳುವಂತೆ, ಒಂದು ಟೆಲಿಕಾಂ ಕಂಪೆನಿಯ ಗ್ರಾಹಕ ಇತರೆ ಯಾವುದೇ ಟೆಲಿಕಾಂ ಕಂಪೆನಿ ನಂಬರ್‌ಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆಯನ್ನು ಅಂತರ್‌ಸಂಪರ್ಕ ಬಳಕೆ ಶುಲ್ಕವಾಗಿ ಪಾವತಿಸಬೇಕು. ಅಂದರೆ, ಜಿಯೋ ಬಳಕೆದಾರ ಏರ್‌ಟೆಲ್‌ ನಂಬರ್‌ಗೆ ಒಂದು ನಿಮಿಷದ ಕರೆ ಮಾಡಿದರೆ ಅದಕ್ಕೆ ಜಿಯೋ 6 ಪೈಸೆಗಳನ್ನು ಏರ್‌ಟೆಲ್‌ಗೆ ಪಾವತಿಸಬೇಕು. ಇಲ್ಲಿ ಕರೆಗಳು ಜಿಯೋ ಗ್ರಾಹಕರಿಗೆ ಉಚಿತವಾಗಿ ಸಿಕ್ಕರೂ ಸಹ, ಜಿಯೋ ಮಾತ್ರ ಏರ್‌ಟೆಲ್‌ಗೆ ಪ್ರತಿ ನಿಮಿಷಕ್ಕೆ 6 ಪೈಸೆಯಂತೆ ಹಣವನ್ನು ಪಾವತಿಸಬೇಕು.

ಜಿಯೋ ಉಚಿತ ಕರೆಗೆ ಬ್ರೇಕ್!..ಅಂಬಾನಿಯ ಪ್ಲ್ಯಾನ್ ಕೇಳಿ ಮೂರ್ಛೆ ಹೋಗದಿರಿ!

ಇದೇ ಕಾರಣಕ್ಕೆ ಜಿಯೋ ಕರೆಗಳಿಗೆ ಹಣವನ್ನು ವಿಧಿಸಲು ಮುಂದಾಗಿದೆ. ಜಿಯೋವಿನಿಂದ ಇತರೆ ನೆಟ್‌ವರ್ಕ್‌ಗಳಿಗೆ ಕರೆಗಳು ಹೆಚ್ಚು ಹೋಗದಂತೆ ಮಾಡಲು ಜಿಯೋ ಮಾಡಿರುವ ಪ್ಲ್ಯಾನ್ ಇದಾಗಿದೆ. ತನ್ನ ಬಳಕೆದಾರರು ಜಿಯೋಯಿಂದ ಜಿಯೋ ನಂಬರ್‌ಗೆ ಹೆಚ್ಚು ಕರೆ ಮಾಡಲು ಪ್ರೇರೇಪಿಸಲು ಹಾಗೂ ತನ್ನ ಯೂಸೇಜ್ ಚಾರ್ಜಸ್ ಕಡಿಮೆ ಮಾಡಿಕೊಳ್ಳಲು ಜಿಯೋ ಹೀಗೆ ಮಾಡಿದೆ. ಇದರಿಂದ ಜನರು ಇತರೆ ಟೆಲಿಕಾಂ ನಂಬರ್‌ಗಳಿಗೆ ಕರೆ ಮಾಡುವುದನ್ನು ಕಡಿಮೆ ಮಾಡುತ್ತಾರೆ ಅಥವಾ ಹೆಚ್ಚು ಜಿಯೋಗೆ ಪೋರ್ಟ್ ಆಗುತ್ತಾರೆ ಎಂಬುದು ಅಂಬಾನಿ ಪ್ಲ್ಯಾನ್.!

ಒಂದು ವೇಳೆ ಅಂಬಾನಿ ಪ್ಲ್ಯಾನ್ ಸಕ್ಸಸ್ ಆದರೆ ಇತರೆ ನೆಟ್‌ವರ್ಕ್‌ಗಳಿಗೆ ಆಗುತ್ತಿರವ ಲಾಭದಲ್ಲಿ ಇಳಿಕೆಯಾಗಿ, ಜಿಯೋಗೆ ಸಾವಿರಾರು ಕೋಟಿ ಉಳಿತಾಯವಾಗಲಿದೆ. ಇನ್ನು ಜಿಯೋದಿಂದ ಬೇರೆ ನೆಟ್‌ವರ್ಕ್‌ಗೆ ವಾಯ್ಸ್‌ ಕಾಲ್‌ ಮಾಡಲು ರೀಚಾರ್ಜ್ ಮಾಡಿಸಬೇಕಾದ ಇದೇ ಮೊತ್ತದ ಉಚಿತ ಡೇಟಾ ನೀಡುವ ಮೂಲಕ ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳುವುದಾಗಿ ಜಿಯೋ ಹೇಳಿದೆ. ಅಂದರೆ, ನೀವು ಕರೆಗಾಗಿ ರೀಚಾರ್ಜ್ ಮಾಡುವುದು ನಿಮಗೆ ಲಾಸ್ ಅಲ್ಲ.! ಆದರೆ ಇದು ಜಿಯೋಗೆ ಲಾಭ.! ಆದರೂ ಇದನ್ನು ಅಂಬಾನಿಯ ಮೋಸ ಎಂದು ಹೇಳಬಹುದು.

ಜಿಯೋ ಉಚಿತ ಕರೆಗೆ ಬ್ರೇಕ್!..ಅಂಬಾನಿಯ ಪ್ಲ್ಯಾನ್ ಕೇಳಿ ಮೂರ್ಛೆ ಹೋಗದಿರಿ!

ಏಕೆಂದರೆ, ಅಂಬಾನಿ ಜನರಿಗೆ ನೀಡಿದ ಮಾತನ್ನು ತಪ್ಪಿದ್ದಾರೆ. ಭಾರತೀಯ ಟೆಲಿಕಾಂ ವಲಯದಲ್ಲಿ ಅಗ್ಗದ ದರದಲ್ಲಿ ಡೇಟಾ, ಉಚಿತ ಕರೆಗಳ ಸೌಲಭ್ಯಗಳನ್ನು ಪರಿಚಯಿಸಿ 'ರಿಲಾಯನ್ಸ್‌ ಜಿಯೋ' ಬಳಕೆದಾರರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಆದರೆ, ಏಕಾಏಕಿ ಈಗ ಜಿಯೋ ಬಳಕೆದಾರರಿಗೆ ಇನ್ಮುಂದೆ ಉಚಿತ ಕರೆಗಳು ಪ್ರಯೋಜನ ದೊರೆಯುವುದಿಲ್ಲ ಎಂದು ಹೇಳುವುದು ಸರಿಯಲ್ಲ. ತನ್ನ ಲಾಭಕ್ಕಾಗಿ ಏನಾದರೂ ಮಾಡುವ ಟೆಲಿಕಾಂ ಕಂಪೆನಿಯಾಗಿಯೇ ಜಿಯೋ ಕೂಡ ಬದಲಾದರೆ, ಗ್ರಾಹಕನು ಇಂಗುತಿಂದ ಮಂಗನಂತಾಗಬಹುದು.

Best Mobiles in India

English summary
Now, Jio customers will have to pay 6 paise per min for calling other companies' customers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X