ಜಿಯೋದ ಈ ದುಬಾರಿ ಪ್ಲ್ಯಾನ್ ರೀಚಾರ್ಜ್‌ ಮಾಡಿದ್ರೆ, ವರ್ಷಪೂರ್ತಿ ಭರ್ಜರಿ ಡೇಟಾ!

|

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಜಿಯೋ, ಚಂದಾದಾರರನ್ನು ಸೆಳೆಯಲು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುಂದೆ ಸಾಗಿರುವ ಜಿಯೋ ಇದೀಗ ಅಲ್ಪಾವಧಿಯ ಯೋಜನೆಗಳ ಜೊತೆಗೆ ಕೆಲವು ಆಕರ್ಷಕ ದೀರ್ಘಾವಧಿಯ ಪ್ಲ್ಯಾನ್‌ಗಳನ್ನು ಪಡೆದಿದೆ. ಆ ಪೈಕಿ ಜಿಯೋ 3,499ರೂ. ಪ್ರೀಪೇಯ್ಡ್ ಪ್ಲ್ಯಾನ್ ದುಬಾರಿ ಪ್ರೈಸ್‌ ಟ್ಯಾಗ್‌ ಅನಿಸಿದರೂ, ಆಕರ್ಷಕ ಪ್ರಯೋಜನಗಳನ್ನು ಪಡೆದಿದೆ. ಈ ಯೋಜನೆಯು ರೀಚಾರ್ಜ್‌ ಮಾಡಿಸಿದರೇ ವರ್ಷ ಪೂರ್ತಿ ಕರೆ, ಡೇಟಾ, ಎಸ್‌ಎಮ್‌ಎಸ್‌ ಪ್ರಯೋಜನ ಪಕ್ಕಾ.

ಜಿಯೋದ ಈ ದುಬಾರಿ ಪ್ಲ್ಯಾನ್ ರೀಚಾರ್ಜ್‌ ಮಾಡಿದ್ರೆ, ವರ್ಷಪೂರ್ತಿ ಭರ್ಜರಿ ಡೇಟಾ!

ಹೌದು, ಜಿಯೋ ಟೆಲಿಕಾಂನ 3,499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು ದೈನಂದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಹೊಂದಿದ್ದು, ವಾರ್ಷಿಕ ವ್ಯಾಲಿಡಿಟಿ ಸಹ ಪಡೆದಿದೆ. ಇದರೊಂದಿಗೆ ಜಿಯೋ ಆಪ್ಸ್‌ಗಳ ಪ್ರಯೋಜನಗಳು ಸಹ ಲಭ್ಯವಾಗಲಿವೆ. ಹಾಗಾದರೇ ಜಿಯೋ ಟೆಲಿಕಾಂನ 3,499ರೂ. ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಲು ಉತ್ತಮವೇ?..ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 3,499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಸೌಲಭ್ಯಗಳು
ರಿಲಾಯನ್ಸ್‌ ಜಿಯೋ ಟೆಲಿಕಾಂನ 3,499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 1095 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ 2,399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಸೌಲಭ್ಯಗಳು
ರಿಲಾಯನ್ಸ್‌ ಜಿಯೋ ಟೆಲಿಕಾಂನ 2399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್‌ ಪ್ರಯೋಜನ ಲಭ್ಯ.

Most Read Articles
Best Mobiles in India

English summary
Jio Telecom This Costly Plan Offers Daily 3GB Data With 365 Days Validity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X